ಸು ಫ್ರಮ್ ಸೋ ಸ್ಟ್ರ್ಯಾಟಜಿ.. 5 ಸಿಟಿಗಳಲ್ಲಿ ‘ಕರಾವಳಿ’ ಕೇಕೆ

ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್‌ಗೆ ಭಾರೀ ಡಿಮ್ಯಾಂಡ್..!

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (12)

ಕರಾವಳಿ ಚಿತ್ರ ರಿಲೀಸ್‌ಗೂ ಮೊದಲೇ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ. ರಾಜ್ ಬಿ ಶೆಟ್ರ ಸು ಫ್ರಮ್ ಸೋ ಸ್ಟ್ರ್ಯಾಟಜಿಯನ್ನೇ ಕರಾವಳಿಗೂ ಅಪ್ಲೈ ಮಾಡಲಾಗಿದ್ದು, ಚಿತ್ರಪ್ರೇಮಿಗಳು ಅಕ್ಷರಶಃ ಥ್ರಿಲ್ ಆಗ್ತಿದ್ದಾರೆ.

ಸು ಫ್ರಮ್ ಸೋ ಸ್ಟ್ರ್ಯಾಟಜಿ.. 5 ಸಿಟಿಗಳಲ್ಲಿ ‘ಕರಾವಳಿ’ ಕೇಕೆ

ಮಂಗಳೂರು, ಶಿವಮೊಗ್ಗ ಬಹುಪರಾಕ್.. ಪ್ರೇಕ್ಷಕರು ಥ್ರಿಲ್

ದಾವಣಗೆರೆ, ಮೈಸೂರು, ಬೆಂಗಳೂರಿಗರಿಗೂ ಸ್ಪೆಷಲ್ ಶೋ

ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್‌ಗೆ ಭಾರೀ ಡಿಮ್ಯಾಂಡ್..!

ಕರಾವಳಿ.. ಇದೇ ಜುಲೈ 24ಕ್ಕೆ ಅದ್ಧೂರಿಯಾಗಿ ಬಿಡುಗಡೆ ಆಗ್ತಿರೋ ಕನ್ನಡದ ಬಹುನಿರೀಕ್ಷಿತ ಸಿನಿಮಾ. ಗುರುದತ್ ಗಾಣಿಗ ನಿರ್ದೇಶಿಸಿ, ನಿರ್ಮಿಸಿರೋ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ರಮೇಶ್ ಇಂದಿರಾ, ಮಿತ್ರ, ಸಂಪದ.. ಹೀಗೆ ದೊಡ್ಡ ತಾರಾಗಣವಿದೆ. ಸ್ಯಾಂಪಲ್ಸ್‌ನಿಂದ ಸಖತ್ ಸದ್ದು ಮಾಡ್ತಿದ್ದ ಈ ಚಿತ್ರ, ಇದೀಗ ರಿಲೀಸ್‌ಗೂ ಮೊದಲೇ ಚಿತ್ರಪ್ರೇಮಿಗಳಿಂದ ಶಹಬ್ಬಾಶ್ ಅನಿಸಿಕೊಳ್ತಿದೆ.

ಅರೇ ಬಿಡುಗಡೆಗೂ ಮೊದ್ಲೇ ಇದು ಹೇಗೆ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಐದು ದಿನಗಳ ಕಾಲ ಐದು ಸಿಟಿಗಳಲ್ಲಿ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಶೋಗಳನ್ನ ಆಯೋಜಿಸಿದೆ ಚಿತ್ರತಂಡ. ಈಗಾಗ್ಲೇ ನಿನ್ನ ಮಂಗಳೂರಲ್ಲಿ ಚಿತ್ರ ಮೊದಲು ಪ್ರೀಮಿಯರ್ ಕಂಡಿದ್ದು, ಇಂದು ಶಿವಮೊಗ್ಗದಲ್ಲೂ ಪ್ರದರ್ಶನ ಕಂಡಿದೆ. ನಾಳೆ ದಾವಣಗೆರೆ, ಜುಲೈ 22ಕ್ಕೆ ಮೈಸೂರು, ಜುಲೈ 23ಕ್ಕೆ ಬೆಂಗಳೂರಲ್ಲಿ ಸಹ ಕರಾವಳಿ ಪ್ರೀಮಿಯರ್ ನಡೆಯಲಿದೆ.

ನಿರ್ದೇಶಕ ಗುರುದತ್ ಜೊತೆ ರಾಜ್ ಬಿ ಶೆಟ್ಟಿ ಹಾಗೂ ಮಿತ್ರ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಪ್ರೀಮಿಯರ್ ಶೋಗಳಲ್ಲಿ ಭಾಗಿಯಾಗಿದ್ದು, ಎಲ್ಲೆಡೆ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಕಂಟೆಂಟ್ ಜೊತೆ ಮೇಕಿಂಗ್, ಪಾತ್ರಗಳು, ಪ್ರೆಸೆಂಟೇಷನ್ ವೇ ಅದ್ಭುತ ಅಂತಿದ್ದಾರೆ. ಕಾಂತಾರ ಒಂದು ರೇಂಜ್‌ಗೆ ಕರಾವಳಿಯ ಆಚಾರ ವಿಚಾರಗಳನ್ನ ಸಾರಿತ್ತು. ಆದ್ರೆ ಕರಾವಳಿ ಚಿತ್ರ ಅಲ್ಲಿನ ಕಂಬಳ, ಅದಕ್ಕಾಗಿ ಕೋಣಗಳನ್ನ ಪಳಗಿಸಿ, ಸಿದ್ಧಗೊಳಿಸೋ ಪರಿ, ಅದರ ನಡುವೆ ಪ್ರತಿಷ್ಠೆಗಾಗಿ ನಡೆಯೋ ಯುದ್ಧಗಳನ್ನ ಅಚ್ಚುಕಟ್ಟಾಗಿ ಅನಾವರಣಗೊಳಿಸಲಾಗಿದೆಯಂತೆ.

ಅಂದಹಾಗೆ ಈ ಪೇಯ್ಡ್ ಪ್ರೀಮಿಯರ್ ಶೋಗಳ ಐಡಿಯಾ ರಾಜ್ ಬಿ ಶೆಟ್ರದ್ದು. ಈ ಹಿಂದೆ ಸು ಫ್ರಮ್ ಸೋ ಚಿತ್ರಕ್ಕೆ ಅವರು ಮಾಡಿದ್ದ ಅದೇ ಮಾಸ್ಟರ್‌‌ಪ್ಲ್ಯಾನ್ ಸ್ಟ್ರ್ಯಾಟಜಿಯನ್ನ ಇಲ್ಲಿಗೂ ಅಪ್ಲೈ ಮಾಡಿದ್ದಾರೆ. ಅದು ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸಕ್ಸಸ್ ಆಗ್ತಿರೋದು ಚಿತ್ರತಂಡದ ಖುಷಿಯನ್ನ ಇಮ್ಮಡಿಗೊಳಿಸ್ತಿದೆ. ಇದಲ್ಲದೆ, ಸ್ಯಾಟಲೈಟ್ ಹಾಗೂ ಓಟಿಟಿ ರೈಟ್ಸ್‌‌ಗೆ ಒಂದ್ಕಡೆ ಕೆವಿಎನ್ ಹಾಗೂ ಮತ್ತೊಂದ್ಕಡೆ ಕ್ಯಾಪ್ಟನ್ ಗುರುದತ್ ಗಾಣಿಗ ಇಬ್ಬರ ಬಳಿಯೂ ದೊಡ್ಡ ಮೊತ್ತ ನೀಡಿ, ಖರೀದಿಸೋಕೆ ಮಾತುಕಥೆ ನಡೆಸ್ತಿವೆಯಂತೆ ಪ್ರತಿಷ್ಠಿತ ಕಂಪನಿಗಳು. ಆದ್ರೆ ಇದು ಯಾರ ಪಾಲಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

Exit mobile version