ದೀಪಾವಳಿ.. ಅಂಧಕಾರವನ್ನು ಹೊರದೋಡಿಸಿ, ಬೆಳಕು ಮೂಡಿಸುವ ಹಬ್ಬ. ಯೆಸ್.. ಈ ಬೆಳಕಿನ ಹಬ್ಬವನ್ನು ಶ್ರೀಸಾಮಾನ್ಯರೇ ಬಹಳ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡ್ತಾರೆ. ಇನ್ನು ಸೆಲೆಬ್ರಿಟಿಗಳ ಕಥೆ ಹೇಳ್ಬೇಕಾ..? ರಾಕಿಂಗ್ ಸ್ಟಾರ್ ಯಶ್ ದಂಪತಿಯಿಂದ ಹಿಡಿದು, ರಜನೀಕಾಂತ್, ಚಿರಂಜೀವಿ, ಆಲಿಯಾ-ರಣ್‌ಬೀರ್, ಶಿಲ್ಪಾ ಶೆಟ್ಟಿ, ದೀಪಿಕಾ ಎಲ್ಲಾ ಹೇಗೆ ಸೆಲೆಬ್ರೇಟ್ ಮಾಡಿದ್ರು ಅನ್ನೋದ್ರ ಸ್ಟೋರಿ ಇಲ್ಲಿದೆ ನೋಡಿ.
ಹಬ್ಬ ಅಂದ್ರೆ ಸಂಭ್ರಮ, ಸಡಗರ. ಅದ್ರಲ್ಲೂ ದೀಪಾವಳಿ ಹಬ್ಬವನ್ನು ಇಡೀ ಇಂಡಿಯಾ ಒಂದು ದಿನ ಅಲ್ಲ, ಬರೋಬ್ಬರಿ ಮೂರ್ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡ್ತಾರೆ. ಶ್ರೀಸಾಮಾನ್ಯರು ಕೂಡ ಸಾಲ ಸೋಲ ಮಾಡಿ ಈ ಬೆಳಕಿನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸ್ತಾರೆ. ಇನ್ನು ಸೆಲೆಬ್ರಿಟಿಗಳು ಹಬ್ಬವನ್ನು ಹೇಗೆ ಆಚರಿಸಿದ್ರು ಅನ್ನೋದನ್ನ ನೋಡೋಣ ಅವ್ರ ಅಭಿಮಾನಿಗಳು ಕಾತರದಿಂದ ಕಾಯ್ತಿರ್ತಾರೆ.
ಸ್ಟಾರ್ಸ್ ಮನೆಯಲ್ಲಿ ದೀಪಾವಳಿ.. ಇಲ್ಲಿದೆ ಸಖತ್ ಸೆಲೆಬ್ರೇಷನ್
ಮಕ್ಕಳ ಸಮೇತ ಕನ್ನಡದಲ್ಲೇ ಶುಭ ಕೋರಿದ ಯಶ್ ದಂಪತಿ..!
ಮೊದಲಿಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಎಷ್ಟೇ ಬ್ಯುಸಿ ಇದ್ರೂ ಸಹ, ಹಬ್ಬ ಹರಿದಿನ ಅಂದಾಗ, ಎಲ್ಲವನ್ನೂ ಪಕ್ಕಕ್ಕಿಟ್ಟು ಕುಟುಂಬದ ಜೊತೆ ಆ ಸಂಭ್ರಮಾಚರಣೆಗೆ ಸಾಕ್ಷಿ ಆಗ್ತಾರೆ. ಈ ಬಾರಿ ತನ್ನ ಮಗಳು ಐರಾ ಹಾಗೂ ಯಥರ್ವ್ ಜೊತೆ ಯಶ್ ಹಾಗೂ ರಾಧಿಕಾ ಪಂಡಿತ್ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದ್ದಾರೆ. ಅದ್ರಲ್ಲೂ ಕನ್ನಡದಲ್ಲೇ ವಿಶ್ ಮಾಡಿರೋದು ಇಂಟ್ರೆಸ್ಟಿಂಗ್.
ಈ ಹಿಂದೆ ಮಗಳು ಐರಾ ಪರಭಾಷಾ ಸಾಂಗ್ ಹಾಡಿದ್ಲು ಅಂತ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆದಿದ್ರು. ಆದ್ರೀಗ ಅಂದು ಗೊಣಗಕೊಂಡವರ ಬಾಯಿ ಮುಚ್ಚಿಸೋ ಕಾರ್ಯ ಮಾಡಿದ್ದಾರೆ ರಾಕಿಭಾಯ್ ದಂಪತಿ. ಯಶ್ ಮಕ್ಕಳು ಕ್ಯೂಟ್ ಆಗಿ ಸ್ವಚ್ಚ ಕನ್ನಡದಲ್ಲಿ ಹಬ್ಬಕ್ಕೆ ಶುಭ ಕೋರಿರೋದು ಕನ್ನಡಿಗರಿಂದ ಅವ್ರಿಗೆ ಮತ್ತಷ್ಟು ಪ್ರೀತಿ ಸಿಗುವಂತಾಗಿದೆ.
ಮಗಳ ಮುಖ ರಿವೀಲ್ ಮಾಡಿದ ದೀಪಿಕಾ- ರಣ್‌ವೀರ್ ಸಿಂಗ್
ದೀಪಾವಳಿ ಸಂಭ್ರಮದಲ್ಲಿ ರಜನಿ, ಚಿರು, ಆಲಿಯಾ, ಸ್ಯಾಮ್, ಶಿಲ್ಪಾ
ಸಾಮಾನ್ಯವಾಗಿ ಎಲ್ಲರೂ ಹ್ಯಾಪಿ ದಿವಾಳಿ ಅಂತಾರೆ. ಆದ್ರೆ ನಮ್ಮ ಕನ್ನಡತಿ, ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ದೀಪಾವಳಿ ಅಂತ ಹಿಂದಿಯಲ್ಲಿ ಎಲ್ಲರಿಗೂ ಹಬ್ಬಕ್ಕೆ ಶುಭ ಕೋರಿದ್ದಾರೆ. ಅಲ್ಲದೆ, ಪತಿ ರಣ್‌ವೀರ್ ಸಿಂಗ್ ಜೊತೆ ನಿಂತು ಮಗಳ ಫೇಸ್ ಕೂಡ ರಿವೀಲ್ ಮಾಡಿದ್ದಾರೆ. ಟ್ರೆಡಿಷನಲ್ ಡ್ರೆಸ್‌ನಲ್ಲಿ ಜೂನಿಯರ್ ದೀಪಿಕಾ ಮಿರ ಮಿರ ಮಿಂಚುತ್ತಿದ್ದು, ಎಲ್ಲರೂ ವ್ಹಾವ್.. ಸಖತ್ ಮುದ್ದಾಗಿದ್ದಾಳೆ ಮಗಳು ಅಂತ ರಿಟರ್ನ್ ಅವರಿಗೇ ಶುಭ ಕೋರುತ್ತಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ, ಈ ಬಾರಿಯ ದೀಪಾವಳಿಯನ್ನ ಕಿಂಗ್ ನಾಗಾರ್ಜುನ್ ಹಾಗೂ ವಿಕ್ಟರಿ ವೆಂಕಟೇಶ್ ಕುಟುಂಬಗಳ ಜೊತೆ ಆಚರಿಸಿದ್ದಾರೆ. ಅವರಿಗೆ ವಿಶ್ವಂಭರ ನಾಯಕನಟಿ ನಯನತಾರಾ ಕೂಡ ಸಾಥ್ ನೀಡಿರೋದು ವಿಶೇಷ. ಇನ್ನು ಲೇಡಿ ಸೂಪರ್ ಸ್ಟಾರ್ ನಯನತಾರಾ, ತನ್ನ ಪತಿ ಹಾಗೂ ಅವಳಿ ಮಕ್ಕಳ ಜೊತೆ ಹಿಂದೂ ಸಂಪ್ರದಾಯದಂತೆ ಅರ್ಥಪೂರ್ಣ ಹಾಗೂ ಅವಿಸ್ಮರಣೀಯ ದೀಪಾವಳಿ ಆಚರಿಸಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್, ಸಮಂತಾ, ಆಲಿಯಾ ಭಟ್- ರಣ್‌ಬೀರ್ ಕಪೂರ್ ದಂಪತಿ, ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಉಪೇಂದ್ರ, ಅಲ್ಲು ಅರ್ಜುನ್, ನಮ್ಮ ಕನ್ನಡದ ತುಪ್ಪದ ಬೆಡಗಿ ರಾಗಿಣಿ, ಸಂಗೀತಾ ಭಟ್ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಹಬ್ಬ ಆಚರಿಸಿರೋ ಫೋಟೋ ಹಾಗೂ ವಿಡಿಯೋಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ, ಫ್ಯಾನ್ಸ್‌ಗೂ ಹಬ್ಬಕ್ಕೆ ಶುಭ ಕೋರಿದ್ದಾರೆ.