ಎಸ್‌ಎಸ್ ರಾಜಮೌಳಿ ಅವರ ಸಿನಿಮಾ ಅಂದ್ಮೇಲೆ ಅಲ್ಲಿ ಕಿಚ್ಚು ಇರಲೇಬೇಕು. ಈಗಂತೂ ಇಡೀ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋದು ರಾಜಮೌಳಿ ಅವರ ‘ವಾರಣಾಸಿ’. ಪ್ರಿಯಾಂಕಾ ಚೋಪ್ರಾ ಅವರ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ, ಚಿತ್ರತಂಡ ಬಿಡುಗಡೆ ಮಾಡಿರುವ ‘ಮಂದಾಕಿನಿ’ ಲುಕ್ ನೋಡಿದ್ರೆ ನೀವು ನಿಜಕ್ಕೂ ಫಿದಾ ಆಗ್ತೀರಾ. ಆ ಗ್ರೇಸ್, ಆ ಫೈರ್ – ಮ್ಯಾಟರ್ ಏನು ಗೊತ್ತಾ?
- ಪ್ರಿಯಾಂಕಾ 44ನೇ ಬರ್ತ್ಡೇಗೆ ರಾಜಮೌಳಿ ಸರ್ಪ್ರೈಸ್
- ಗ್ರೇಸ್ ಅಂಡ್ ಫೈರ್ ಮಂದಾಕಿನಿ ಲುಕ್ ರಿವೀಲ್..!
- ರಾಜಮೌಳಿ ಬತ್ತಳಿಕೆಯ ಹೊಸ ಅಸ್ತ್ರ ಯಾವುದು ಗೊತ್ತಾ..?
- ವಾರಣಾಸಿಯಲ್ಲಿ ಅಬ್ಬರಿಸಲಿದೆ ಆ ‘ಫಿಯರ್ಲೆಸ್’ ಅವತಾರ
ರಾಜಮೌಳಿ ಅವರ ವಾರಣಾಸಿ ಸಿನಿಮಾದ ಹೈಪ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಳೆದ ನವೆಂಬರ್ 2025ರಲ್ಲಿ ‘ಗ್ಲೋಬ್‌ಟ್ರೋಟರ್’ ಇವೆಂಟ್ ಮೂಲಕ ಚಿತ್ರದ ಟೈಟಲ್ ಮತ್ತು ಕಾನ್ಸೆಪ್ಟ್ ರೀಲ್ ಬಿಡುಗಡೆಯಾದಾಗಿನಿಂದಲೂ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅದಕ್ಕೂ ಮುಂಚೆ ಆಗಸ್ಟ್ 2025ರಲ್ಲಿ ಮಹೇಶ್ ಬಾಬು ಅವರ ಜನ್ಮದಿನದಂದು ಬಿಡುಗಡೆಯಾದ ಪ್ರೀ-ಲುಕ್ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನ ಡಬಲ್ ಮಾಡಿತ್ತು. ಪ್ರಿಯಾಂಕಾ ಚೋಪ್ರಾ ಅವರ ಪಾತ್ರದ ಫಸ್ಟ್ ಲುಕ್ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಈ ಬೃಹತ್ ಸಾಹಸಗಾಥೆಯಲ್ಲಿನ ಸ್ಲೋ-ಮೋಷನ್ ಜಂಪ್ಸ್ ಮತ್ತು ಆಕ್ಷನ್ ದೃಶ್ಯಗಳ ಬಗ್ಗೆ ಸ್ವತಃ ಪ್ರಿಯಾಂಕಾ ಅಪ್‌ಡೇಟ್ ಕೊಟ್ಟಿದ್ದಾರೆ.
ಇಂದು ಪ್ರಿಯಾಂಕಾ ಚೋಪ್ರಾ ಹುಟ್ಟುಹಬ್ಬ.. ಬರ್ತ್ಡೇ ಗಿಫ್ಟ್ ಆಗಿ ವಾರಣಾಸಿ ಚಿತ್ರದಲ್ಲಿ ಪಿಗ್ಗಿ ಪಾತ್ರದ ಸ್ಟಿಲ್ಸ್ ಹಂಚಿಕೊಂಡಿದ್ದಾರೆ ಜಕ್ಕಣ್ಣ. ಎಸ್, ರಾಜಮೌಳಿ ಅವರೇ ಹೇಳಿದ ಹಾಗೆ, ಪ್ರಿಯಾಂಕಾ ಚೋಪ್ರಾ ಅವರ ಈ ಹೊಸ ಲುಕ್ ಅಂದ್ರೆ ‘ನಗುವಾಗ ಅನುಗ್ರಹ, ಇಲ್ಲದಿದ್ದರೆ ಬೆಂಕಿ’ ಒಂದು ಪೋಸ್ಟರ್‌ನಲ್ಲಿ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮಾಯಾಜಾಲ ಉದುರಿಸ್ತಿದ್ರೆ, ಇನ್ನೊಂದರಲ್ಲಿ ಕೀನ್ಯಾದ ಮಾಸಾಯಿ ಮಾರಾದ ಕಾಡಿನಲ್ಲಿ ಆಕಾಶಕ್ಕೆ ಹಾರುವಷ್ಟು ಖುಷಿಯಾಗಿ ಕಾಣಿಸ್ತಿದ್ದಾರೆ. ಈ ಫಸ್ಟ್ ಲುಕ್ ನೋಡಿದ್ರೆ, ಪ್ರಿಯಾಂಕಾ ಈ ಸಿನಿಮಾದಲ್ಲಿ ಎಷ್ಟೊಂದು ಪವರ್‌ಫುಲ್ ಕ್ಯಾರೆಕ್ಟರ್ ಮಾಡ್ತಿದ್ದಾರೆ ಅನ್ನೋದು ಸ್ಪಷ್ಟವಾಗುತ್ತೆ. ಬಾಲಿವುಡ್ ಗಡಿ ದಾಟಿ ಅಂತರಾಷ್ಟ್ರೀಯ ಮಟ್ಟದ ಗ್ಲಾಮರ್ ಮತ್ತು ರಫ್ ಲುಕ್ ಎರಡನ್ನೂ ಇಲ್ಲಿ ಬ್ಯಾಲೆನ್ಸ್ ಮಾಡಿದ್ದಾರೆ ಪ್ರಿಯಾಂಕಾ.
ಇನ್ನು ‘ಮಂದಾಕಿನಿ’ ಪಾತ್ರದ ಬಗ್ಗೆ ಮಾತಾಡೋದಾದ್ರೆ, ಇದು ಕೇವಲ ಬ್ಯೂಟಿಫುಲ್ ಪಾತ್ರ ಅಷ್ಟೇ ಅಲ್ಲ, ಫಿಯರ್ಲೆಸ್ ಆಗಿ ಸುತ್ತುವ ಲೋಕಸಂಚಾರಿ ಪಾತ್ರ. ಸ್ಟ್ರಾಂಗ್ ಆಗಿ, ಹಠಾತ್ತಾಗಿ ವಲ್ನರಬಲ್ ಆಗುವ ಈ ಕ್ಯಾರೆಕ್ಟರ್ ತೆರೆ ಮೇಲೆ ನೋಡೋದಕ್ಕೆ ಸಖತ್ ಥ್ರಿಲ್ಲಿಂಗ್ ಆಗಿರಲಿದೆ. ಮಹೇಶ್ ಬಾಬು ಅವರ ಜೊತೆ ಪ್ರಿಯಾಂಕಾ ಚೋಪ್ರಾ ಅವರ ಕೆಮಿಸ್ಟ್ರಿ ಈ ಸಿನಿಮಾದ ಹೈಲೈಟ್ ಆಗಿರೋದಂತೂ ಗ್ಯಾರಂಟಿ. ಸುಮಾರು 7 ವರ್ಷಗಳ ನಂತರ ಪ್ರಿಯಾಂಕಾ ನೇರವಾಗಿ ಇಂಡಿಯನ್ ಥಿಯೇಟರ್‌ಗೆ ಎಂಟ್ರಿ ಕೊಡ್ತಿರೋದು ಫ್ಯಾನ್ಸ್‌ಗೆ ಡಬಲ್ ಧಮಾಕಾ.
ಈ ಸಿನಿಮಾ ಕೇವಲ ಆಕ್ಷನ್ ಮಾತ್ರ ಅಲ್ಲ, ಟೈಮ್-ಟ್ರಾವೆಲ್ ಮತ್ತು ಸೈನ್ಸ್ ಫಿಕ್ಷನ್ ಮಿಶ್ರಿತ ಒಂದು ಭರ್ಜರಿ ಎಪಿಕಲ್ ಸಾಹಸಗಾಥೆ. ಆಫ್ರಿಕಾದ ಕಾಡುಗಳಿಂದ ಹಿಡಿದು ಇತಿಹಾಸದ ಪುಟಗಳವರೆಗೂ ಈ ಸಿನಿಮಾ ಹರಡಿಕೊಂಡಿದೆ. ರಾಜಮೌಳಿ ಅವರ ಮಾರ್ಗದರ್ಶನದಲ್ಲಿ ಈ ಸಿನಿಮಾ ಬರೋಬ್ಬರಿ 1,400 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗ್ತಿದೆ ಅಂದ್ರೆ, ನೀವು ಕಲ್ಪನೆ ಮಾಡ್ಕೋಬಹುದು ವಿಶುವಲ್ಸ್ ಹೇಗಿರಬಹುದು ಅಂತ. ಇದು ರಾಜಮೌಳಿ ಅವರ ‘ರಿಸ್ಕಿ’ ಅಲ್ಲ, ಮಾಸ್ಟರ್ ಪ್ಲಾನ್ ಅಂತಾನೆ ಹೇಳಬೇಕು.
ಏಪ್ರಿಲ್ 7, 2027ಕ್ಕೆ ವಾರಣಾಸಿ ತೆರೆ ಕಾಣಲಿದೆ. ಇದು ಕೇವಲ ಒಂದು ಸಿನಿಮಾ ಅಲ್ಲ, ಇಂಡಿಯನ್ ಸಿನಿಮಾ ರೇಂಜ್‌ನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ. ಆ ಸಾಂಗ್ ಸೀಕ್ವೆನ್ಸ್ ಇರಲಿ ಅಥವಾ ಆಕ್ಷನ್ ಸೀನ್ ಇರಲಿ, ಪ್ರಿಯಾಂಕಾ ಅವರ ಮಂದಾಕಿನಿ ಪಾತ್ರ ಪ್ರತಿಯೊಬ್ಬರಿಗೂ ನೆನಪಿನಲ್ಲಿ ಉಳಿಯುತ್ತೆ. ಒಟ್ಟಿನಲ್ಲಿ, ರಾಜಮೌಳಿ ಅವರ ಈ ಹೊಸ ಸೃಷ್ಟಿ ಗಲ್ಲಾಪೆಟ್ಟಿಗೆಯಲ್ಲಿ ಕ್ರಾಂತಿ ಮಾಡುತ್ತ..? ಕಾದು ನೋಡೋಣ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
