ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಟಾಲಿವುಡ್ ಅಂಗಳದಿಂದ ಮತ್ತೊಂದು ಮೆಗಾ ಹಿಟ್ ಕೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಆಯ್ತು. ಈಗ ಸ್ಟಾರ್ ಬಾಯ್ ಸಿದ್ದು ಸರದಿ. ಯೆಸ್.. ಮತ್ತೆ ಗೆಲುವಿನ ಲಯ ಕಂಡುಕೊಂಡಿರೋ ಶ್ರೀನಿಧಿ ಈ ವಾರ ತೆಲುಸು ಕದಾ ಮೂವಿಯಿಂದ ಎಲ್ಲರ ಮನಸ್ಸುಗಳಿಗೆ ಲಗ್ಗೆ ಇಡ್ತಿದ್ದಾರೆ.
ಮತ್ತೊಂದು ಹಿಟ್‌ಗೆ KGF ಕ್ವೀನ್ ರೆಡಿ.. ಸಿದ್ದು ಜೊತೆ ಶ್ರೀನಿಧಿ
ಸ್ಟಾರ್ ಬಾಯ್ ಸಿದ್ದು ಡಬಲ್ ಡೋಸ್‌ಗೆ ಪ್ರೇಕ್ಷಕ ವೆಯ್ಟಿಂಗ್
ಇದು ಇದೇ ಶುಕ್ರವಾರ ಅಂದ್ರೆ ಅಕ್ಟೋಬರ್ 17ರಂದು ತೆರೆಗೆ ಬರೋಕೆ ಸಜ್ಜಾಗಿರೋ ತೆಲುಗಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಯ ಟ್ರೈಲರ್ ಝಲಕ್. ತೆಲುಸು ಕದಾ ಅನ್ನೋ ಬ್ಯೂಟಿಫುಲ್ ಟೈಟಲ್‌ನೊಂದಿಗೆ ಒಬ್ಬ ಹುಡ್ಗ ಇಬ್ಬರು ಹುಡ್ಗಿಯರ ಜೊತೆ ಪ್ರೀತಿ, ಪ್ರೇಮ, ಪ್ರಣಯದಾಟ ಆಡುವ ಕಾಂಪ್ಲಿಕೇಟೆಡ್ ಕಥಾನಕದ ಸಿನಿಮಾ. ಈ ಚಿತ್ರದ ಅಸಲಿಯತ್ತೇನು ಅನ್ನೋದನ್ನ ಸ್ಯಾಂಪಲ್ಸ್ ನೋಡಿದ್ರೆ ಗೊತ್ತಾಗ್ತಿದೆ.
ಡಿಜ ಟಿಲ್ಲು, ಟಿಲ್ಲು ಸ್ಕ್ವೇರ್ ಸಿನಿಮಾಗಳ ಮೂಲಕ ಪ್ರೇಕ್ಷಕರ ದಿಲ್ ದೋಚಿದ ಸ್ಟಾರ್ ಬಾಯ್ ಖ್ಯಾತಿಯ ಸಿದ್ದು ಜೊನ್ನಲಗಡ್ಡ ಲೀಡ್‌ನಲ್ಲಿ ನಟಿಸಿರೋ ಈ ಸಿನಿಮಾಗೆ ನಮ್ಮ ಕನ್ನಡತಿ, ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಒನ್ ಆಫ್ ದಿ ಹೀರೋಯಿನ್. ಹೌದು.. ರಾಶಿ ಖನ್ನಾ ಕೂಡ ನಟಿಸಿರೋ ಈ ಚಿತ್ರದಲ್ಲಿ ನಮ್ಮ ಕೆಜಿಎಫ್ ಸಿನಿಮಾ ಖ್ಯಾತಿಯ ಕರಾವಳಿ ಚೆಲುವೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಚಿತ್ರಕ್ಕಾಗಿ ಹೇರ್‌ಸ್ಟೈಲ್ ಕೂಡ ಬದಲಿಸಿರೋ ಶ್ರೀನಿಧಿ, ನೋಡುಗರ ಎದೆಗೆ ಬಾಣ ಬಿಡೋದು ಪಕ್ಕಾ ಆಗಿದೆ.
ಯೂತ್‌ಫುಲ್ ಸಬ್ಜೆಕ್ಟ್.. ಟ್ರಯಾಂಗಲ್ ಲವ್.. ಮಸ್ತ್ ಮಜಾ
ಈ ಚಿತ್ರದ ಬಳಿಕ ಮತ್ತಷ್ಟು ಬ್ಯುಸಿ ಆಗ್ತಾರೆ ನಮ್ಮ ಕರಾವಳಿ ನಿಧಿ
ಇತ್ತೀಚೆಗೆ ನಾನಿ ಜೊತೆ ಹಿಟ್-3 ಸಿನಿಮಾದಲ್ಲಿ ನಟಿಸೋ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ರು ಶ್ರೀನಿಧಿ. ಆ ಚಿತ್ರ ಸೂಪರ್ ಹಿಟ್ ಆಗಿ, ಇದೀಗ ತೆಲುಸು ಕದಾ ಚಿತ್ರ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗೋ ಸೂಚನೆ ನೀಡಿದೆ. ಇದಾದ ಬಳಿಕ ಶ್ರೀನಿಧಿ ಮತ್ತಷ್ಟು ಬ್ಯುಸಿ ಆಗೋ ಲಕ್ಷಣಗಳು ಕಾಣ್ತಿವೆ. ಯೂತ್‌ಫುಲ್ ಸಬ್ಜೆಕ್ಟ್, ಟ್ರಯಾಂಗಲ್ ಹಾಟ್, ಲವ್, ರೊಮ್ಯಾಂಟಿಕ್ ರೈಡ್ ಆಗಿರೋ ಈ ಸಿನಿಮಾ ಶ್ರೀನಿಧಿ ಕರಿಯರ್‌ಗೆ ಪ್ಲಸ್ ಆಗಲಿದೆ. ಈಕೆ ಮತ್ತಷ್ಟು ಮಂದಿ ಯೂತ್ ಆಡಿಯೆನ್ಸ್ ಗೆ ಹತ್ತಿರ ಆಗಲಿದ್ದಾರೆ.