ಶ್ರೀಲೀಲಾ ಹಿಸ್ಟಾರಿಕ್ ರೆಕಾರ್ಡ್‌.. ಕಲ್ಯಾಣ್ ಕೊನೆ ಚಿತ್ರ..!

ವೀರಮಲ್ಲು, ಓಜಿ ಕಂಪ್ಲೀಟ್.. ‘ಉಸ್ತಾದ್‌’ಗೆ ಫುಲ್‌ಸ್ಟಾಪ್

1425 (33)

ಬರ್ತ್ ಡೇ ಸಂಭ್ರಮದಲ್ಲಿರೋ ಕ್ಯೂಟ್ ಕ್ವೀನ್ ಶ್ರೀಲೀಲಾ ಇತಿಹಾಸದ ಪುಟಗಳು ಸೇರಲಿರುವ ಸಿನಿಮಾವೊಂದರ ನಾಯಕಿ. ಹೌದು.. ಗೇಮ್ ಚೇಂಜರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾದಲ್ಲಿ ಮಿಂಚುತ್ತಿರೋ ಈ ಕನ್ನಡತಿ ಒಂಥರಾ ಲಕ್ಕಿ ಬ್ಯೂಟಿ. ಡಿಸಿಎಂ ಪವನ್ ಜೊತೆ ಸಿಎಂ ರೇಸ್‌‌ನಲ್ಲಿರೋ ದಳಪತಿಯದ್ದೂ ಇದೇ ಕಥೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಯಾರಾದ್ರೂ ಏನಾದ್ರು ಹೇಳಿದಾಗ ದೇವರು ತಥಾಸ್ತು ಅಂದುಬಿಡ್ತಾರಂತೆ. ಅದು ಶ್ರೀಲೀಲಾ ವಿಚಾರದಲ್ಲಿ ನಿಜ ಆಗಿದೆ. ಹೌದು, ಅಪ್ಪಟ ಕನ್ನಡ ಚೆಲುವೆ ಶ್ರೀಲೀಲಾ ಕಿಸ್ ಸಿನಿಮಾದ ಪ್ರಮೋಷನ್ಸ್ ವೇಳೆ ನಮ್ಮ ರಾಕಿಭಾಯ್ ಯಶ್ ಒಂದು ಮಾತು ಹೇಳಿದ್ರು. ಈಕೆ ಇಡೀ ಇಂಡಿಯಾ ಒಂದು ರೌಂಡ್ ಬರ್ತಾರೆ ನೋಡ್ತಾ ಇರಿ ಎಂದಿದ್ರು. ಅದೀಗ ನಿಜವಾಗಿದೆ.

ದಂತದ ಬೊಂಬೆಯಂತಿರೋ ಶ್ರೀಲೀಲಾ ಕನ್ನಡದಿಂದ ಟಾಲಿವುಡ್‌ಗೆ ಹಾರಿದ್ರು. ಅಲ್ಲಿಂದ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಯಾಕೆ ಸೌತ್ ಸಿನಿದುನಿಯಾದ ಬಿಗ್ ಸ್ಟಾರ್ಸ್‌ಗೆ ತಮ್ಮ ಚಿತ್ರಗಳಲ್ಲಿ ಈ ಕಿಸಿಕ್ ಬ್ಯೂಟಿ ಇರಲೇಬೇಕು. ಪುಷ್ಪ-2, ರಾಬಿನ್‌ಹುಡ್ ಬಳಿಕ ನಾಲ್ಕೈದು ತೆಲುಗು, ಆಶಿಕಿ-3 ಅನ್ನೋ ಹಿಂದಿ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

ಈಕೆಯ ಅಂದ, ಚೆಂದ, ಅಭಿನಯ, ಆಂಗಿಕ ಭಾಷೆ ವ್ಹಾವ್ ಫೀಲ್ ತರಿಸುತ್ತೆ. ಅದ್ರಲ್ಲೂ ಡ್ಯಾನ್ಸ್ ನಲ್ಲಿ ಪಂಟರ್. ಎಕ್ಸ್‌‌ಪ್ರೆಷನ್ಸ್‌ ಕೊಡೋದ್ರಲ್ಲಿ ಕ್ವೀನ್. ಹಾಗಾಗಿಯೇ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾಗೂ ಇದೇ ಶ್ರೀಲೀಲಾ ನಾಯಕನಟಿ. ಇಂದು ಆಕೆಯ ಬರ್ತ್ ಡೇ ವಿಶೇಷ, ಚಿತ್ರತಂಡ ಹೊಚ್ಚ ಹೊಸ ಪೋಸ್ಟರ್ ರಿವೀಲ್ ಮಾಡಿದೆ. ಹರಿಹರ ವೀರಮಲ್ಲು ಹಾಗೂ ಓಜಿ ಸಿನಿಮಾಗಳನ್ನ ಕಂಪ್ಲೀಟ್ ಮಾಡಿರೋ ಪವರ್ ಸ್ಟಾರ್, ಉಸ್ತಾದ್ ಭಗತ್ ಸಿಂಗ್‌ ಸೆಟ್‌ಗೂ ಎಂಟ್ರಿ ಕೊಟ್ಟಿದ್ದಾರೆ.

ಆಂಧ್ರ ಪಾಲಿಟಿಕ್ಸ್‌‌ನ ಗೇಮ್ ಚೇಂಜರ್ ಆಗಿರೋ ಪವನ್ ಕಲ್ಯಾಣ್ ಸದ್ಯ ಡಿಸಿಎಂ, ಮುಂದೆ ಸಿಎಂ ಆದ್ರೂ ಅಚ್ಚ  ರಿಯಿಲ್ಲ. ಪಿಎಂ ಮೋದಿ ನೆಚ್ಚಿನ ಪವನ್ ಮೊದಲೇ ಹೇಳಿದಂತೆ ಇದೇ ಅವ್ರ ಕಟ್ಟಕಡೆಯ ಚಿತ್ರವಾಗಲಿದೆ. ಆ ನಂತ್ರ ಕಂಪ್ಲೀಟ್ ಆಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ತಾರಂತೆ. ಇನ್ನು ಇವ್ರ ಜಾಗಕ್ಕೆ ಮಗ ಅಕಿರಾ ನಂದನ್‌‌ನ ಹೀರೋ ಆಗಿ ಲಾಂಚ್ ಮಾಡೋ ಪ್ಲಾನ್‌‌ನಲ್ಲಿದ್ದಾರೆ. ಹಾಗಾಗಿ ಪವನ್ ಕೊನೆ ಚಿತ್ರ ಇತಿಹಾಸದ ಪುಟಗಳು ಸೇರಲಿದ್ದು, ಶ್ರೀಲೀಲಾ ಅದ್ರ ನಾಯಕಿ ಅನ್ನೋದು ಕೂಡ ಗ್ರೇಟ್ ಥಿಂಗ್.

ಇನ್ನು ಇದು ಆಂಧ್ರ ಕಥೆಯಾದ್ರೆ, ತಮಿಳುನಾಡಿನಲ್ಲೂ ಒಬ್ಬ ಸೂಪರ್ ಸ್ಟಾರ್ ಬಣ್ಣದ ಬದುಕಿಗೆ ಗುಡ್ ಬೈ ಹೇಳ್ತಿದ್ದಾರೆ. ಹೌದು, ಜನ ನಾಯಗನ್ ಅನ್ನೋ ಸಿನಿಮಾ ಮಾಡ್ತಿರೋ ದಳಪತಿ ವಿಜಯ್, ಇದೇ ಅವರ ಕಟ್ಟ ಕಡೆಯ ಸಿನಿಮಾ ಎಂದಿದ್ದಾರೆ. ಟಿವಿಕೆ ಅನ್ನೋ ಪಕ್ಷ ಕಟ್ಟಿರೋ ವಿಜಯ್, ತಮಿಳುನಾಡು ರಾಜಕಾರಣದಲ್ಲಿ ಹೊಸ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗುವ ಕನಸು ಹೊತ್ತು, ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.

ಇಂಟರೆಸ್ಟಿಂಗ್ ಅಂದ್ರೆ ಮಾಸ್ ಫ್ಯಾನ್ ಫಾಲೋಯಿಂಗ್ ಇರೋ ದಳಪತಿ ವಿಜಯ್‌ರ ಜನ ನಾಯಗನ್‌‌ನಲ್ಲಿ ಒನ್ಸ್ ಅಗೈನ್ ನಮ್ಮ ಕನ್ನಡತಿ ಹೀರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ. ಹೌದು, ಪೂಜಾ ಹೆಗ್ಡೆ ಲೀಡ್‌‌ನಲ್ಲಿ ನಟಿಸ್ತಿದ್ದು, ಈ ಸಿನಿಮಾಗೆ ಕನ್ನಡ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿರುವುದು ಮತ್ತೊಂದು ವಿಶೇಷ.

Exit mobile version