ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

ಇದು ನವ ನಾಯಕನಟನ ಪ್ರಮಾಣವಚನ ಸಮಾರಂಭ ಗುರು

Untitled design 2026 06 15T191430.324

ಇತ್ತೀಚೆಗೆ ತಮಿಳು ಸೂಪರ್ ಸ್ಟಾರ್, ದಳಪತಿ ವಿಜಯ್ ತಮಿಳುನಾಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲರಿಗೂ ಗೊತ್ತೇಯಿದೆ. ಅಂದು ಏನೆಲ್ಲಾ ಆಯ್ತು ಅನ್ನೋದು ಕೂಡ ಇಡೀ ದೇಶವೇ ಕಂಡಿದೆ. ಆದ್ರೀಗ ಅದೇ ಶೈಲಿಯಲ್ಲಿ ಕ್ರಿಯೇಟಿವಿಟಿಗೆ ಕೇರ್ ಆಫ್ ಆಡ್ರೆಸ್ ಆಗಿರೋ ನಮ್ಮ ಸ್ಯಾಂಡಲ್‌ವುಡ್‌ನ ಡೈರೆಕ್ಟರ್ ಸಿಂಪಲ್ ಸುನಿ, ಅದನ್ನ ರೀ-ಕ್ರಿಯೇಟ್ ಮಾಡಿದ್ದಾರೆ. ಆ ಫನ್ನಿ & ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ..

ತಮಿಳುನಾಡು ಸಿಎಂ ಆಗಿ ನಟ ದಳಪತಿ ವಿಜಯ್, ಇದೇ ಮೇ 10ರಂದು ತಮಿಳುನಾಡಿನ ನೆಹರೂ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರಿಗೆ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರತಿಜ್ಞಾವಿಧಿಯನ್ನ ಬೋಧಿಸಿದರು. ಅಂದು ಏನೆಲ್ಲಾ ಆಯ್ತು ಅನ್ನೋದು ಎಲ್ಲರಿಗೂ ಗೊತ್ತೇಯಿದೆ. ಎಕ್ಸೈಟ್‌‌ಮೆಂಟ್‌‌ನಲ್ಲಿ ವಿಜಯ್ ತಮಗೆ ಬರವಣಿಗೆ ಮೂಲಕ ನೀಡಿದ್ದನ ಹೊರತುಪಡಿಸಿ ಬೇರೇನನ್ನೋ ಹೇಳಲು ಹೊರಟಿದ್ರು. ಅದರಲ್ಲಿ ಇದ್ದಂತೆ ಮೊದಲು ಓದಿ ಅಂದಿದ್ರು ರಾಜ್ಯಪಾಲರು.

ಅಷ್ಟೇ ಅಲ್ಲ.. ಸಿಎಂ ವಿಜಯ್‌‌‌ಗೆ ನಟಿ ತ್ರಿಶಾ ಜೊತೆ ಅಕ್ರಮ ಸಂಬಂಧವಿದೆ ಎನ್ನಲಾಗ್ತಿದ್ದು, ದಳಪತಿ ಪತ್ನಿ ಬದಲಿಗೆ ಆ ಪ್ರಮಾಣವಚನ ಕಾರ್ಯಕ್ರಮದಲ್ಲಿ ತ್ರಿಶಾ ಹಸಿರು ಸೀರೆಯುಟ್ಟು ಗ್ರೀನ್ ಸಿಗ್ನಲ್ ನೀಡಿದ್ದಾದ್ರೂ ಏನು ಅನ್ನೋದು ಇಂದಿಗೂ ನಿಗೂಢ. ಆ ಸುದ್ದಿ ನ್ಯಾಷನಲ್, ಇಂಟರ್‌‌ನ್ಯಾಷನಲ್ ಲೆವೆಲ್‌‌ನಲ್ಲಿ ಸದ್ದು ಮಾಡಿದ್ದು ಹೈಲೈಟ್. ಇದೀಗ ವಿಜಯ್ ಪ್ರಮಾಣ ವಚನ, ರಾಜ್ಯಪಾಲರು, ಬೇರೆ ನಟಿಯರೊಂದಿಗೆ ಅಕ್ರಮ ಸಂಬಂಧ ಸೇರಿದಂತೆ ಸಾಕಷ್ಟು ವಿಷಯಗಳ ಕುರಿತ ಆ ಸೀಕ್ವೆನ್ಸ್‌‌ನ ರೀ-ಕ್ರಿಯೇಟ್ ಮಾಡಿದ್ದಾರೆ ನಮ್ಮ ಸ್ಯಾಂಡಲ್‌ವುಡ್ ಡೈರೆಕ್ಟರ್ ಸಿಂಪಲ್ ಸುನಿ.

ಯೆಸ್.. ಕ್ರಿಯೇಟಿವಿಟಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಸಿಂಪಲ್ ಸುನಿ, ಸದ್ಯ ಮೋಡ ಕವಿದ ವಾತಾವರಣ ಅನ್ನೋ ಚಿತ್ರ ನಿರ್ದೇಶಿಸಿದ್ದು, ಅದ್ರ ಹೀರೋ ಇಂಟ್ರಡಕ್ಷನ್ ಟೀಸರ್ ಇದೇ ಜೂನ್ 16ಕ್ಕೆ ಬಿಡುಗಡೆ ಆಗ್ತಿದೆ. ಸಿನಿಮಾ ಕೂಡ ಜೂನ್ 26ಕ್ಕೆ ಥಿಯೇಟರ್‌ಗಳಿಗೆ ಬರ್ತಿದ್ದು, ಪ್ರಮೋಷನ್ಸ್‌ಗೆ ಅಂತಲೇ ಈ ಸ್ಪೆಷಲ್ ವಿಡಿಯೋನ ಚಿತ್ರಿಸಿದ್ದಾರೆ ಸಿಂಪಲ್ ಸುನಿ. ಇಂಟರೆಸ್ಟಿಂಗ್ ಅಂದ್ರೆ ಇದು ನವ ನಾಯಕನಟನ ಪ್ರಮಾಣವಚನ ಸಮಾರಂಭದಂತಿದೆ. ಇಲ್ಲಿ ಸಿಂಪಲ್ ಸುನಿ ರಾಜ್ಯಪಾಲರ ಸ್ಥಾನದಲ್ಲಿದ್ರೆ, ನವ ನಾಯಕನಟ ಶೀಲಮ್ ಎಂ ಸ್ವಾಮಿ ತಮಿಳುನಾಡು ಸಿಎಂ ವಿಜಯ್ ಸ್ಥಾನದಲ್ಲಿದ್ದಂತಿದೆ.

ವಿಜಯ್ ತ್ರಿಶಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಂತೆ, ಶೀಲಮ್ ಬೇರೆ ಯಾವುದೇ ನಟಿಯೊಂದಿಗೆ ಸಂಬಂಧ ಇಟ್ಟುಕೊಳ್ಳಲ್ಲ, ನಿರ್ಮಾಪಕರಿಗೆ ತೊಂದರೆ ಕೊಡಲ್ಲ ಅಂತೆಲ್ಲಾ ಈ ವಿಡಿಯೋದಲ್ಲಿ ಡೈಲಾಗ್ಸ್ ಇರೋದು ಅಚ್ಚರಿ ಮೂಡಿಸಿದೆ. ಹೀರೋ ರೆಮ್ಯುನರೇಷನ್, ಪ್ರಮೋಷನ್ಸ್‌‌ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಇದು ಬೆಳಕು ಚೆಲ್ಲಿದ್ದು, ಥೇಟ್ ಅಂದು ರಾಜ್ಯಪಾಲರು ಹೇಳಿದಂತೆ, ಇಲ್ಲಿ ಸುನಿ ಕೂಡ ಅವ್ರ ಹೀರೋಗೆ ಅದರಲ್ಲಿ ಇದ್ದಂತೆ ಓದಿ ಸಾಕು ಅಂತಾರೆ.

ಅಂದಹಾಗೆ ನಟ ಶೀಲಮ್, ಡೈರೆಕ್ಟರ್ ಸುನಿ ಗರಡಿಯಲ್ಲೇ ಬೆಳೆದುಬಂದ ಪ್ರತಿಭೆ ಆಗಿದ್ದು, ಇಲ್ಲಿಯ ತನಕ ಆಫ್‌‌ಸ್ಕ್ರೀನ್ ಕೆಲಸ ಮಾಡ್ತಿದ್ದ ಶೀಲಮ್ ಇದೇ ಮೊದಲ ಬಾರಿಗೆ ಆನ್‌‌ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿದ್ದಾರೆ. ವಿಶೇಷ ಅಂದ್ರೆ ಆ ಕಡೆ ಸಿಎಂ ವಿಜಯ್‌ರದ್ದು ಕಟ್ಟ ಕಡೆಯ ಸಿನಿಮಾ. ಈ ಕಡೆ ಶೀಲಮ್ ಅವರಿಗೆ ಮೊಟ್ಟ ಮೊದಲ ಚಿತ್ರ. ಮೋಕ್ಷಾ ಕುಶಾಲ್ ಹಾಗೂ ಸಾತ್ವಿಕಾ ಡಬಲ್ ಹೀರೋಯಿನ್ಸ್ ಈ ಮೋಡ ಕವಿದ ವಾತಾವರಣ ಚಿತ್ರದಲ್ಲಿ ನಟ ಶೀಲಮ್‌ಗೆ ಜೊತೆಯಾಗಿದ್ದಾರೆ. ಸುನಿ ಅಂದ್ರೆ ಅಲ್ಲಿ ಮನರಂಜನೆಗೆ ಕೊರತೆ ಇರಲ್ಲ. ಈ ಚಿತ್ರ ಹೇಗೆಲ್ಲಾ ಎಂಟರ್‌ಟೈನ್ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version