ದಕ್ಷಿಣ ಭಾರತೀಯ ಚಿತ್ರರಂಗದ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಆದರೆ, ಕಳೆದ ಬಾರಿ ಕನ್ನಡಿಗರಿಗೆ ಆದ ಅವಮಾನದ ಕಿಚ್ಚು ಇನ್ನೂ ಆರಿಲ್ಲವೇ? ಈ ಬಾರಿ ಸೈಮಾ ಅಂಗಳಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್‌ವುಡ್ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಕಳೆದ ಕಾಂಟ್ರವರ್ಸಿಗೆ ಕೊಟ್ಟ ರಿಯಾಕ್ಷನ್ ಏನು? ಅವಮಾನದ ಆರೋಪಗಳ ಬೆನ್ನಲ್ಲೇ ಸೈಮಾ ಆಯೋಜಕರು ಕ್ಷಮೆ ಕೋರಿ ನೀಡಿದ ಆ ಬಿಗ್ ಸ್ಪಷ್ಟನೆ ಏನು..? ಇಲ್ಲಿದೆ ನೋಡಿ ಈ ಬಾರಿಯ ಸೈಮಾ ಹಂಗಾಮಾದ ಕಂಪ್ಲೀಟ್ ರಿಪೋರ್ಟ್
- ಸೈಮಾ 14ನೇ ಆವೃತ್ತಿಗೆ ಬೆಂಗಳೂರಿನಲ್ಲಿ ಗ್ರ್ಯಾಂಡ್ ಕಿಕ್ಆಫ್
- ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ
- ಕನ್ನಡಿಗರ ಅವಮಾನಕ್ಕೆ ಸೈಮಾ ಆಯೋಜಕರ ಕ್ಲಾರಿಟಿ
- ಅಪ್ಪು ಶಿವಣ್ಣ ನೆನೆದ ರೋರಿಂಗ್ ಸ್ಟಾರ್ ಶ್ರೀಮುರಳಿ..!
ದಕ್ಷಿಣ ಭಾರತೀಯ ಚಿತ್ರರಂಗದ ಅತಿ ದೊಡ್ಡ ಗ್ಲಾಮರಸ್ ಅವಾರ್ಡ್ ಶೋ ಸೈಮಾ-2026 14ನೇ ಆವೃತ್ತಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಅದ್ಧೂರಿ ಚಾಲನೆ ಸಿಕ್ಕಿದೆ. ಸೆಪ್ಟೆಂಬರ್ ೧೨ ಮತ್ತು ೧೩ ರಂದು ನಡೆಯಲಿರುವ ಈ ಮೆಗಾ ಇವೆಂಟ್‌ನ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಲ್‌ವುಡ್‌ನ ‘ರೋರಿಂಗ್ ಸ್ಟಾರ್’ ಶ್ರೀಮುರಳಿ, ಗ್ಲಾಮರಸ್ ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ್ ಹಾಗೂ ತೆಲುಗಿನ ಹಾಟ್ ಬ್ಯೂಟಿ ಫಾರಿಯಾ ಅಬ್ದುಲ್ಲಾ ಭಾಗವಹಿಸಿ ಕಾರ್ಯಕ್ರಮದ ಜೋಶ್ ಹೆಚ್ಚಿಸಿದರು. ಈ ಬಾರಿ ಇಡೀ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವ ಬೃಹತ್ ಜವಾಬ್ದಾರಿಯನ್ನು ಶ್ರೀಮುರಳಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಕೂಡ ಉಪಸ್ಥಿತರಿದ್ದು, ಈ ಬಾರಿಯ ಶೋ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದು ಹೇಳಿದ್ದಾರೆ.
ಆದರೆ, ಈ ಪತ್ರಿಕಾಗೋಷ್ಠಿಯಲ್ಲಿ ಕಳೆದ ಬಾರಿ ಕನ್ನಡ ಕಲಾವಿದರಿಗಾದ ಕಡೆಗಣನೆ ಮತ್ತು ಅವಮಾನದ ಬಗ್ಗೆ ವಿಜಯ್ ಧ್ವನಿ ಎತ್ತಿದ ಘಟನೆಯನ್ನು ಮಾಧ್ಯಮದವರು ಪ್ರಶ್ನಿಸಿದಾಗ ರೋರಿಂಗ್ ಸ್ಟಾರ್ ಶ್ರೀಮುರಳಿ ಅತ್ಯಂತ ಜಾಣ್ಮೆಯಿಂದ ಏನು ಪ್ರತಿಕ್ರಿಯಿಸಿದರು ಅಂತ ನೀವೇ ನೋಡಿ.
ಇನ್ನು ಶ್ರೀಮುರಳಿ ತಮ್ಮ ಕುಟುಂಬಕ್ಕೂ ಸೈಮಾಗೂ ಇರುವ ೧೪ ವರ್ಷಗಳ ಆತ್ಮೀಯ ನಂಟನ್ನು ಸ್ಮರಿಸಿದರು “ಅಪ್ಪು ಮಾಮ ೪ ಬಾರಿ, ಶಿವಣ್ಣ ಮಾಮ ೩ ಬಾರಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ. ಈ ಸೀಸನ್ ೧೪ ಕನ್ನಡಿಗರಿಗೆ ನಿಜಕ್ಕೂ ಸ್ಪೆಷಲ್ ಆಗಿರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕನ್ನಡಿಗರಿಗೆ ಆದ ಅವಮಾನದ ಬಗ್ಗೆ ಸ್ಪಷ್ಟನೆ ಸಿಗದಿದ್ದಕ್ಕೆ ಸೈಮಾ ಸಂಸ್ಥೆಯ ಆಯೋಜಕರಿಗೆ ಈ ಪ್ರಶ್ನೆ ಕೇಳಲಾಯಿತು. ಹಾಗೆ SIIMA ಅನ್ನುವುದು ಯಾಕೆ ಕನ್ನಡಲ್ಲಿ ಇಲ್ಲ ಪ್ರಚಾರಕ್ಕೆ ಮಾತ್ರ ಬೆಂಗಳೂರು ಬೇಕಾ ಎಂದು ಮಾಧ್ಯಮದವರು ಕೇಳಿದಕ್ಕೆ ವೇದಿಕೆಯಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಕಳೆದ ಬಾರಿ ಆಗಿರುವ ಲೋಪದೋಷಗಳಿಗೆ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ರು. ಈ ಬಾರಿ ಸ್ಯಾಂಡಲ್‌ವುಡ್‌ಗೆ ಯಾವುದೇ ರೀತಿಯ ಕೊರತೆ ಅಥವಾ ಅಸಮಾಧಾನವಾಗದಂತೆ ಅತ್ಯಂತ ಗೌರವಪೂರ್ವಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಭರವಸೆ ಕೊಟ್ಟರು
ಒಟ್ಟಿನಲ್ಲಿ, ಸೈಮಾ-2026 ರೇಸ್ ಈಗಿನಿಂದಲೇ ಕಾವು ಪಡೆದುಕೊಂಡಿದ್ದು, ಕಳೆದ ಬಾರಿಯ ವಿವಾದಗಳಿಗೆ ಸ್ವತಃ ಆಯೋಜಕರೇ ಸ್ಪಷ್ಟನೆ ನೀಡಿ ಮತ್ತೊಂದೆಡೆ ರೋರಿಂಗ್ ಸ್ಟಾರ್ ಶ್ರೀಮುರಳಿ ಕನ್ನಡ ಚಿತ್ರರಂಗದ ಪರವಾಗಿ ದಿಟ್ಟವಾಗಿ ನಿಂತು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ಕನ್ನಡಿಗರ ಹಿರಿಮೆ-ಗೆಲುವಿಗೆ ಈ ಬಾರಿಯ ‘ಸೈಮಾ’ ವೇದಿಕೆ ಸೂಕ್ತ ಗೌರವ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
