ಬ್ಯಾಕ್ ಟು ಬ್ಯಾಕ್ ಸೋಲಿನ ಕಹಿ ಉಂಡಂತಹ ಗೀತಾ ಶಿವರಾಜ್‌ಕುಮಾರ್ ಇತ್ತೀಚೆಗೆ ರಾಜಕಾರಣಕ್ಕೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ರು. ಆದ್ರೀಗ ಧರ್ಮ ಪತ್ನಿ ಪಾಲಿಟಿಕ್ಸ್‌ಗೆ ಬೈ ಹೇಳ್ತಿದ್ದಂತೆ ಇತ್ತ ಶಿವರಾಜ್‌ಕುಮಾರ್ ರಾಜಕಾರಣದತ್ತ ಒಲವು ತೋರಿದ್ದಾರೆ. ಅದೂ ಕಮ್ಯುನಿಸ್ಟ್ ಪಕ್ಷದ ಮೂಲಕ ಜನನಾಯಕನಾಗಲು ಸಜ್ಜಾಗಿದ್ದಾರೆ ಶಿವಣ್ಣ. ದೊಡ್ಮನೆಯ ರಾಜಕುಮಾರ ಈಗ್ಯಾಕೆ ಇಂತಹ ನಿರ್ಧಾರ ತಗೊಂಡ್ರು ಅಂತೀರಾ..? ಜಸ್ಟ್ ವಾಚ್.
ಗೀತಾ ಶಿವರಾಜ್‌ಕುಮಾರ್ ತಮ್ಮ ತಂದೆ ಮಾಜಿ ಸಿಎಂ ಬಂಗಾರಪ್ಪ ಹಾಗೂ ಸಹೋದರರಾದ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ರೀತಿ ರಾಜಕಾರಣಿ ಆಗುವ ಕನಸು ಕಂಡರು. ಗೀತಾ ಪಿಕ್ಚರ್ಸ್ ಬ್ಯಾನರ್ ಹುಟ್ಟಿಹಾಕಿ ಅತ್ತೆ ಪಾರ್ವತಮ್ಮ ರಾಜ್‌ಕುಮಾರ್ ರೀತಿ ಅನ್ನದಾತೆ ಅನಿಸಿಕೊಂಡರೂ ಸಹ, ರಾಜಕಾರಣದ ಸೆಳೆತ ಅವ್ರನ್ನ ಎರಡು ಬಾರಿ ಎಲೆಕ್ಷನ್‌ಗೆ ನಿಲ್ಲುವಂತೆ ಮಾಡಿತು. ಆದ್ರೆ ಲೋಕಸಭಾ ಚುನಾವಣೆಗಳಲ್ಲಿ ಎರಡು ಬಾರಿಯೂ ಸೇಲಿನ ಕಹಿ ನೀಡಿತು. ಹಾಗಾಗಿ ಇತ್ತೀಚೆಗೆ ರಾಜಕಾರಣಕ್ಕೆ ಅಫಿಶಿಯಲಿ ಗುಡ್ ಬೈ ಹೇಳಿದ್ರು ಗೀತಕ್ಕ.
ಪಾಲಿಟಿಕ್ಸ್‌ನತ್ತ ಶಿವಣ್ಣ.. ಕಮ್ಯುನಿಸ್ಟ್ ಪಕ್ಷ ಆರಿಸಿಕೊಂಡಿದ್ಯಾಕೆ?
ರಾಜಕಾರಣದಿಂದ ಪತ್ನಿ ಗೀತಾ ಔಟ್.. ಶಿವಣ್ಣ ನ್ಯೂ ಚಾಪ್ಟರ್!
ಆದ್ರೀಗ ಡಾ. ಶಿವರಾಜ್‌ಕುಮಾರ್‌ರಲ್ಲಿ ಆ ರಾಜಕಾರಣದ ಆಶಯದ ಚಿಗುರೊಡೆದಿದೆ. ಸ್ವತಃ ಅಣ್ಣಾವ್ರೇ ರಾಜಕೀಯ ಬೇಡ ಅಂತ ದೂರ ಇದ್ರು. ಆದ್ರೀಗ ಕರುನಾಡ ಚಕ್ರವರ್ತಿ, ಲಿವಿಂಗ್ ಲೆಜೆಂಡ್, ಸಾವನ್ನು ಗೆದ್ದು ಬಂದಂತಹ ಮಿಸ್ಟರ್ ಮೃತ್ಯುಂಜಯ ಶಿವಣ್ಣ ಜನನಾಯಕರಾಗುವ ಕನಸು ಕಂಡಿದ್ದಾರೆ. ಅದಕ್ಕಾಗಿ ಪಕ್ಷ ಕೂಡ ಆರಿಸಿಕೊಂಡಿದ್ದಾರೆ. ಜನ ಸೇವೆ ಮಾಡೋಕೆ ಇವರಿಗೆ ಈ ವಯಸ್ಸಲ್ಲಿ ಯಾಕೆ ಉತ್ಸಾಹ ಹುಟ್ಟಿತು ಅನ್ನೋ ಅಚ್ಚರಿ ಸದ್ಯ ಎಲ್ಲರಲ್ಲಿ ಮೂಡಿದೆ. ಆದ್ರೆ ಅದು ರಿಯಲ್ ಆಗಿ ಅಲ್ಲ. ತೆರೆಮೇಲೆ ರೀಲ್‌ಗಾಗಿ ಅನ್ನೋದು ಇಂಟರೆಸ್ಟಿಂಗ್.
ಅಖಂಡ ಆಂಧ್ರದ ಜನ ನಾಯಕ, ಆದಿವಾಸಿಗಳ ಆತ್ಮಬಂಧು ಆಗಿ ಮಿಂಚಿದ ರಿಯಲ್ ಹೀರೋ ಗುಮ್ಮಡಿ ನರಸಯ್ಯ. ಯೆಸ್.. ವೈ.ಎಸ್.ರಾಜಶೇಖರರೆಡ್ಡಿ, ಚಂದ್ರಬಾಬು ನಾಯ್ಡು ಅಂತಹ ಘಟಾನುಘಟಿ ಜನನಾಯಕರ ಪಕ್ಷಗಳಿಂದ ನಿಂತ ಅಭ್ಯರ್ಥಿಗಳಿಗೇ ಪ್ರಬಲ ಪೈಪೋಟಿ ನೀಡಿ, ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಬಾರಿ ಶಾಸಕರಾಗಿ ಪ್ರಜಾಸೇವೆ ಮಾಡಿದಂತಹ ಜನಪ್ರಿಯ ಶಾಸಕರು ಗುಮ್ಮಡಿ ನರಸಯ್ಯ. ಈಗಿನ ತೆಲಂಗಾಣದ ಯೆಲ್ಲಾಂಡು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಎಂಎಲ್‌ಎ ಆಗಿ ಮಿಂಚಿದವರ ಜೀವನಗಾಥೆ ಸದ್ಯ ಸಿನಿಮಾ ಆಗ್ತಿದೆ. ಗುಮ್ಮಡಿ ನರಸಯ್ಯ ಹೆಸರಲ್ಲೇ ಸಿನಿಮಾ ಆಗ್ತಿದ್ದು, ಆ ಟೈಟಲ್ ರೋಲ್‌ಗೆ ಜೀವ ತುಂಬುತ್ತಿದ್ದಾರೆ ನಮ್ಮ ಶಿವಣ್ಣ.
ಜನ ನಾಯಕ ಗುಮ್ಮಡಿ ನರಸಯ್ಯನ ಬಯೋಪಿಕ್‌ನಲ್ಲಿ ಶಿವಣ್ಣ
5ಬಾರಿ MLA ಆಗಿ ಜನಸೇವೆ ಮಾಡಿದ ರಿಯಲ್ ಹೀರೋ ಕಥೆ
ಶ್ರೀಸಾಮಾನ್ಯನಾಗಿದ್ದುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅವರ ಹೋರಾಟಗಳಲ್ಲಿ ತಾನೂ ಪಾಲ್ಗೊಂಡು, ಜನರ ಧ್ವನಿಗೆ ಶಕ್ತಿಯಾಗಿ ನಿಂತವರು ಗುಮ್ಮಡಿ ನರಸಯ್ಯ. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಇವರು, ಎಂದೂ ತಮ್ಮ ಸಿದ್ಧಾಂತಗಳನ್ನ ಬಿಟ್ಟು ರಾಜಕಾರಣ ಮಾಡಿದವರಲ್ಲ. ಸೈಕಲ್‌ನೇ ಬೆಂಜ್, ಆಡಿ ಕಾರ್‌ನಂತೆ ಫೀಲ್ ಮಾಡಿದ ಇವರು, ಆಂಧ್ರ ಪ್ರದೇಶ್ ಪಾರ್ಲಿಮೆಂಟ್‌ನಲ್ಲಿ ತನ್ನದೇ ಆದ ಛಾಪನ್ನು ಒತ್ತಿದ್ದಾರೆ. ಸದ್ಯ ಅವ್ರ ಬಯೋಗ್ರಫಿಗೆ ಶಿವಣ್ಣ ನಾಯಕನಟನಾಗಿ ಬಣ್ಣ ಹಚ್ಚುತ್ತಿದ್ದು, ಥೇಟ್ ಗುಮ್ಮಡಿ ನರಸಯ್ಯನಂತೆ ಕಾಣಸಿಗುತ್ತಿದ್ದಾರೆ ಸ್ಯಾಂಡಲ್‌ವುಡ್ ಲೀಡರ್.
ಚಿರು ಗೋಡವಾಲು, ಲಾವಣ್ಯ ವಿತ್ ಲವ್ ಬಾಯ್ಸ್ ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿರೋ ಪರಮೇಶ್ವರ್ ಹಿವ್ರಲೆ ಈ ಗುಮ್ಮಡಿ ನರಸಯ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಕೂಡ ಹೌದು. ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಹಾಕಿಕೊಂಡ ಸರ್ಕಾರಿ ಕಚೇರಿ ಮುಂದೆ ಶಿವಣ್ಣ ಕಾಣಿಸಿಕೊಂಡಿರೋ ಫಸ್ಟ್‌ಲುಕ್ ಕಿಕ್ ಕೊಡ್ತಿದೆ. ಈ ಚಿತ್ರಕ್ಕೆ ಎನ್ ಸುರೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಶುರು ಆಗಲಿದೆ. ಐದು ಬಾರಿ ಶಾಸಕರಾಗಿದ್ದರೂ ಸಹ ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡ್ತಿರೋ ಗುಮ್ಮಡಿ ನರಸಯ್ಯನ ಸಾಧನೆ ನಿಜಕ್ಕೂ ಬೆಳ್ಳಿತೆರೆ ಬೆಳಗುತ್ತಿರೋದು ಖುಷಿಯ ವಿಚಾರ.