ಸಿಂಗಲ್ ಸಾಂಗ್‌..1 ಸಿನಿಮಾದಷ್ಟು ಎಫರ್ಟ್..ʻ45ʼ ಸೀಕ್ರೆಟ್

ಚಿತ್ರದಲ್ಲಿ CG ಇದೆ.. ಆದ್ರೆ ಹಾಡು 100% ನ್ಯಾಚುರಲ್ ಗುರು..!

Untitled design 2025 12 01T144747.444

ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತಹ ಪ್ರಯೋಗಗಳು ನಮ್ಮ ಸ್ಯಾಂಡಲ್‌ವುಡ್‌‌‌ನಲ್ಲಿ ಆಗ್ತಿವೆ. ಕೆಜಿಎಫ್, ಕಾಂತಾರ ಬಳಿಕ ಮತ್ತೊಂದು ಅಂಥದ್ದೇ ವಿನೂತನ ಎಕ್ಸ್‌‌ಪೆರಿಮೆಂಟ್ 45 ಸಿನಿಮಾ. ಶಿವಣ್ಣ-ಉಪೇಂದ್ರ-ರಾಜ್ ಶೇಟ್ಟಿ ಟ್ರಯೋ ಕಾಂಬೋನ ಈ ಸಿನಿಮಾನ ಇಡೀ ಇಂಡಿಯಾದಲ್ಲೇ ಯಾರೂ ಟ್ರೈ ಮಾಡಿಲ್ಲ. ಅದಕ್ಕೆ ಸಾಂಗ್ ಮೇಕಿಂಗ್‌ಗೆ ಹಾಕಿರೋ ಇನ್‌‌‌ಕ್ರೆಡಿಬಲ್ ಎಫರ್ಟ್‌‌ಗಳೇ ಸಾಕ್ಷಿ.

ಸಿನಿಮಾ ಮಾಡೋಕೆ ದುಡ್ಡು ಮಾತ್ರ ಇದ್ರೆ ಸಾಕಾಗಲ್ಲ. ಬೆಲೆ ಕಟ್ಟಲಾಗದ ಸಿನಿಮಾ ಕಲೆಯನ್ನ ಕೋಟ್ಯಂತರ ಮಂದಿ ಚಿತ್ರಪ್ರೇಮಿಗಳಿಗೆ ಉಣಬಡಿಸೋಕೆ ವಿಶೇಷ ಸಂಕಲ್ಪ ಮಾಡಬೇಕಾಗುತ್ತೆ. ಗುರಿ ಜೊತೆ ಅದಕ್ಕಾಗಿ ತಕ್ಕ ಸಂಶೋಧನೆ, ಶ್ರಮ, ಪ್ರಮಾಣಿಕ ಪ್ರಯತ್ನಗಳು ಮಾಡಬೇಕಾಗುತ್ತೆ. ಸದ್ಯ ಈ ವರ್ಷದ ಸ್ಯಾಂಡಲ್‌ವುಡ್‌‌ನ ಸೆನ್ಸೇಷನಲ್ ಮಲ್ಟಿಸ್ಟಾರ್ ಕಾಂಬೋ ಮೂವಿ 45 ಅಂಥದ್ದೊಂದು ವಿಭಿನ್ನ, ವಿಶೇಷ ಪ್ರಯತ್ನಕ್ಕೆ ನಾಂದಿ ಹಾಡ್ತಿದೆ.

45 ಸಿನಿಮಾದ ಟೀಸರ್ ನೋಡಿದ್ರೆ ಗೊತ್ತಾಗುತ್ತೆ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಸುಮ್ ಸುಮ್ನೆ ಡೈರೆಕ್ಟರ್ ಆಗ್ತಿಲ್ಲ. ಅದಕ್ಕಾಗಿ ಅವ್ರ ಹಾನೆಸ್ಟ್ ಎಫರ್ಟ್ಸ್‌ ಎದ್ದು ಕಾಣ್ತಿವೆ. ಸಕ್ಸಸ್‌‌ಫುಲ್ ಚಿತ್ರಗಳ ಮೋಸ್ಟ್ ಪ್ಯಾಷನೇಟ್ ಹಾಗೂ ಹಂಬಲ್ ಪ್ರೊಡ್ಯೂಸರ್ ರಮೇಶ್ ರೆಡ್ಡಿ ನಿರ್ದೇಶಕರ ಕನಸುಗಳಿಗೆ ನೀರೆರೆದು ಕೋಟ್ಯಂತರ ರೂಪಾಯಿ ಹಣ ಸುರಿದಿದ್ದಾರೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿಯಂತಹ ಅತ್ಯದ್ಭುತ ಕಲಾವಿದರ ಮಹಾಸಂಗಮಕ್ಕೆ ಈ ಚಿತ್ರ ಸಾಕ್ಷಿ ಆಗ್ತಿದೆ.

ಆಫ್ರಿಕಾದಿಂದ ಘೆಟ್ಟೋ ಕಿಡ್ಸ್‌‌‌ನ ಫ್ಲೈಟ್ ಮೂಲಕ ಕರೆಸಿ, ಒಂದಷ್ಟು ಟ್ರೈನ್ಡ್ ಡಾಗ್ಸ್ ಜೊತೆ ದಟ್ಟವಾದ ಕಾಡಲ್ಲಿ ಸೆಟ್ ಹಾಕಿ ಈ ಪ್ರಮೋಷನಲ್ ಸಾಂಗ್‌ನ ಚಿತ್ರಿಸಲಾಗಿದೆ. ಈ ಹಾಡು ಸಿನಿಮಾದಲ್ಲಿ ಇರಲ್ಲ ಅಂದ್ರೂ, ಜಸ್ಟ್ ಪ್ರಮೋಷನ್‌‌ಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚಿತ್ರಿಸಲಾಗಿತ್ತು. ಅದಕ್ಕೆ ಪ್ರತಿಫಲವಾಗಿ ಬರೋಬ್ಬರಿ ಒಂದೂವರೆ ಕೋಟಿ ವೀವ್ಸ್‌‌ನಿಂದ ಸಾಂಗ್ಸ್ ಎಲ್ಲರ ಹುಬ್ಬೇರಿಸಿತ್ತು. ಇದೀಗ ಅದ್ರ ಮೇಕಿಂಗ್ ಝಲಕ್ ರಿವೀಲ್ ಆಗಿದೆ.

ಈ ಮೇಕಿಂಗ್‌‌ ರಿವೀಲ್ ಆಗೋಕೂ ಮುನ್ನ ಈ ನಾಯಿಗಳೆಲ್ಲಾ ಸಿಜಿ ಇರಬಹುದಾ ಅನಿಸಿತ್ತು. ರಾಜ್ ಬಿ ಶೆಟ್ಟಿ ಓಡಿದ್ದು ಗ್ರೀನ್ ಮ್ಯಾಟ್ ಸ್ಟುಡಿಯೋದಲ್ಲಿರಬಹುದಾ ಅನಿಸಿತ್ತು. ಆದ್ರೆ ಅಸಲಿ ಕಥೆ ಮೇಕಿಂಗ್‌‌ನಲ್ಲಿ ರಿವೀಲ್ ಆಗಿದೆ. ರಿಯಲ್ ಟ್ರೈನ್ಡ್ ಡಾಗ್ಸ್ ಜೊತೆ ದಟ್ಟವಾದ ಕಾಡಿನಲ್ಲಿ ಕ್ಯಾಮೆರಾಗೆ ಕೇಬಲ್ ಹಾಕಿ ಚಿತ್ರಿಸಲಾಗಿದೆ. ಅದಕ್ಕಾಗಿ ಅರ್ಜುನ್ ಜನ್ಯ ಹಾಕಿರೋ ಎಫರ್ಟ್‌‌ಗಳನ್ನ ನೋಡಿದ್ರೆ ಎಂಥವರೂ ಹುಬ್ಬೇರಿಸ್ತಾರೆ. ಇದು ನಿಜಕ್ಕೂ ಅವ್ರಿಗಿರೋ ಸಿನಿಮಾ ಪ್ಯಾಷನ್‌‌ ಎಂಥದ್ದು ಅನ್ನೋದನ್ನ ಎತ್ತಿ ಹಿಡಿಯುತ್ತದೆ.

ಕಲರ್‌‌ಫುಲ್ ಬಟ್ಟೆಗಳು, ಸ್ಪ್ರಿಂಗ್ ತರಹ ಕುಣಿಯೋ ಘೆಟ್ಟೋ ಕಿಡ್ಸ್ ಜೊತೆ ಮೂವರು ಸ್ಟಾರ್‌‌ಗಳು ಕುಣಿದಿರೋ ಪರಿ ಅನನ್ಯ. ಶಿವಣ್ಣ ಹಾಗೂ ಉಪೇಂದ್ರ ಡ್ಯಾನ್ಸ್‌‌‌ನ ಎಲ್ಲರೂ ನೋಡೇ ಇರ್ತೀವಿ. ಆದ್ರೆ ರಾಜ್ ಬಿ ಶೆಟ್ಟಿ ಬಳಿ ಕೂಡ ವ್ಹಾವ್ ಫೀಲ್ ತರಿಸೋ ಡ್ಯಾನ್ಸ್ ಮಾಡಿಸಿರೋದು ಇಂಟರೆಸ್ಟಿಂಗ್. ಅಂದಹಾಗೆ 45 ಸಿನಿಮಾ ಇದೇ ಡಿಸೆಂಬರ್ 25ಕ್ಕೆ ಬರ್ತಿದ್ದು, ಟ್ರೆಂಡ್‌ ಸೆಟ್ ಮಾಡುವಂತಹ ಎಲ್ಲಾ ಸೂಚನೆ ನೀಡ್ತಿದೆ. ಟ್ರೈಲರ್ ರಿವೀಲ್ ಆಗೋವರೆಗೂ ಚಿತ್ರದ ಅಸಲಿ ಕಥೆ ಏನು ಎತ್ತ ಅನ್ನೋದ್ರ ಕ್ಯೂರಿಯಾಸಿಟಿ ಹಾಗೆಯೇ ಉಳಿಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version