ಡೈರೆಕ್ಟರ್ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು

Untitled design 2025 12 01T140345.444

ತೆಲುಗು ಸಿನಿಮಾ ರಂಗದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಮತ್ತು ಖ್ಯಾತ ನಿರ್ದೇಶಕ–ನಿರ್ಮಾಪಕ ರಾಜ್ ನಿಡಿಮೋರು ಅವರ ಜೊತೆ ಎರಡನೇ ಮದುವೆ ಆಗಿದ್ದಾರೆ. ಕೊಯಂಬತ್ತೂರು ಈಶಾ ಫೌಂಡೇಷನ್‌ ನಲ್ಲಿ ಮದ್ವೆ ಆಗಿದ್ದು, ಈ ಬಗ್ಗೆ ಸಮಂತಾ ಅವರು ಸ್ವತಃ ತಾವೇ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮದ್ವೆ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲಾ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.

2017ರಲ್ಲಿ ನಟ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾಗಿದ್ದರು. ಆದರೆ 2021ರಲ್ಲಿ ನಾಗ ಚೈತನ್ಯ ಅವರಿಂದ ವಿಚ್ಚೇದನ‌ ಪಡೆದು ಅವರ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದರು. ವಿಚ್ಛೇದನದ ನಂತರ ಸಮಂತಾ ತಮ್ಮ ಚಲನಚಿತ್ರ ವೃತ್ತಿ ಹಾಗೂ ಪ್ರವಾಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದೇ ಸಮಯದಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 2 ಚಿತ್ರಿಕರಣದ ಸಂದರ್ಭದಲ್ಲಿ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಸಮಂತಾ ಅವರ ಪರಿಚಯವಾಗಿತ್ತು. ಈ ಪರಿಚಯವು ನಿಧಾನವಾಗಿ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿತ್ತು.

ರಾಜ್ ನಿಡಿಮೋರು ಅವರು ಭಾರತೀಯ ನಿರ್ಮಾಪಕ ಹಾಗೂ ನಿರ್ದೇಶಕ. ಕೃಷ್ಣ ಡಿಕೆ ಅವರೊಂದಿಗೆ ಜತೆಗೂಡಿ ‘ರಾಜ್ & ಡಿಕೆ’ ಎಂಬ ಅತ್ಯಂತ ಯಶಸ್ವಿ ಸೃಜನಾತ್ಮಕ ಜೋಡಿಯನ್ನು ರಚಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ಸಿಟಾಡೆಲ್ ಇಂಡಿಯಾ’ ಮೊದಲಾದ ವೆಬ್‌ ಸರಣಿಗಳನ್ನು ನಿರ್ದೇಶಿಸಿದ್ದಾರೆ. ಸಮಂತಾ ಅಭಿನಯಿಸಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’ ಯಶಸ್ಸಿನ ನಂತರ, ಇವರಿಬ್ಬರ ಬಗ್ಗೆ ಗಾಸಿಪ್ ಜೋರಾಗಿತ್ತು.

ಇತ್ತೀಚೆಗೆ ಖಾಸಗಿ ಪಾರ್ಟಿಯೊಂದರಲ್ಲಿ ಸಮಂತಾ ಹಾಗೂ ರಾಜ್ ನಿಧಿಮೋರ ಅವರ ಒಟ್ಟಿನ ಫೋಟೋಗಳು ವೈರಲ್ ಆಗಿದ್ದವು. ಫೋಟೋಗಳಲ್ಲಿ ಸಮಂತಾಳ ಸುತ್ತ ರಾಜ್ ಕೈ ಹಾಕಿಕೊಂಡಿದ್ದ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿತ್ತು. ಇದರಿಂದ ಇಬ್ಬರ ಸಂಬಂಧ ‘ಕನ್ಫರ್ಮ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಸಮಂತಾ ಡೇಟಿಂಗ್ ಪೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌

 

ಕಳೆದ ಕೆಲವು ತಿಂಗಳಿಂದ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ಖಾಸಗಿ ಜೀವನದ ಬಗ್ಗೆ ಗಾಸಿಪ್‌ಗಳು ಸಖತ್ ಚರ್ಚೆಯಲ್ಲಿವೆ. ವಿಶೇಷವಾಗಿ, ನಿರ್ದೇಶಕ ರಾಜ್ ನಿಧಿಮೋರು ಜೊತೆ ಅವರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿವೆ. ಈ ಗಾಸಿಪ್‌ಗಳಿಗೆ ಬಲವಾದ ಸಾಕ್ಷಿಯಂತೆ, ಸಮಂತಾ ಮತ್ತು ರಾಜ್ ಒಟ್ಟಿಗೆ ಕಾಣಿಸಿಕೊಂಡಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇತ್ತೀಚೆಗೆ ತಿರುಪತಿ ದೇವಾಲಯಕ್ಕೆ ಒಟ್ಟಿಗೆ ಭೇಟಿ ನೀಡಿದ್ದು, ಇದೀಗ ಸಮಂತಾ ಶೇರ್ ಮಾಡಿರುವ ರಾಜ್ ಜೊತೆಗಿನ ಫೋಟೋಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. “ಹಾಗಾದರೆ, ಇವರಿಬ್ಬರ ಲವ್ ಖಚಿತವಾಯಿತೇ?” ಎಂದು ಫ್ಯಾನ್ಸ್ ಕಾಮೆಂಟ್‌ಗಳ ಮೂಲಕ ಪ್ರಶ್ನಿಸುತ್ತಿದ್ದಾರೆ.

‘ಫ್ಯಾಮಿಲಿ ಮ್ಯಾನ್ 2’ ಮತ್ತು ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗಳಲ್ಲಿ ಸಮಂತಾ ಮತ್ತು ರಾಜ್ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಹಯೋಗದಿಂದ ಆರಂಭವಾದ ಅವರ ಆತ್ಮೀಯತೆ, ಈಗ ಡೇಟಿಂಗ್ ಗಾಸಿಪ್‌ಗೆ ಕಾರಣವಾಗಿದೆ. ಆದರೆ, ಈ ವದಂತಿಗಳ ಬಗ್ಗೆ ಸಮಂತಾ ಇಲ್ಲವೇ ರಾಜ್ ಇಬ್ಬರೂ ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ ಅಥವಾ ತಿರಸ್ಕರಿಸಿಲ್ಲ. ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ರಾಜ್ ಜೊತೆಗಿನ ಸೆಲ್ಫಿಗಳು ಮತ್ತು ಆಪ್ತ ಕ್ಷಣಗಳನ್ನು ಹಂಚಿಕೊಂಡಿರುವುದು, ಅವರ ಸಂಬಂಧದ ಬಗ್ಗೆ ಖಚಿತತೆಯನ್ನು ಜನರಿಗೆ ನೀಡಿದಂತಿದೆ.

ಸಮಂತಾ ಈಗ ಕೇವಲ ನಟಿಯಾಗಿ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಮೊದಲ ನಿರ್ಮಾಣದ ಸಿನಿಮಾ ‘ಶುಭಂ’ ಮೇ 9, 2025ರಂದು ತೆರೆಕಾಣಲಿದೆ. ಈ ಸಿನಿಮಾದ ಪ್ರಮೋಷನ್‌ಗಾಗಿ ಸಮಂತಾ ತುಂಬ ಉತ್ಸುಕರಾಗಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಅವರು ಶೇರ್ ಮಾಡಿದ ಫೋಟೋಗಳಲ್ಲಿ ರಾಜ್ ನಿಧಿಮೋರು ಕಾಣಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ರಾಜ್, ಸಮಂತಾ ಅವರ ಮುದ್ದಿನ ಶ್ವಾನದ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ, ಇದು ಅವರ ನಡುವಿನ ಆಪ್ತತೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿದೆ. ಈ ಫೋಟೋಗಳನ್ನು ಗಮನಿಸಿದ ಅಭಿಮಾನಿಗಳು, “ಇವರಿಬ್ಬರ ನಡುವೆ ಏನೋ ಖಾಸಗಿ ಬಾಂಧವ್ಯ ಇದೆ” ಎಂದು ಖಾತ್ರಿಗೊಂಡಿದ್ದಾರೆ.

ನಾಗ ಚೈತನ್ಯ ಅವರಿಂದ 2021ರಲ್ಲಿ ವಿಚ್ಛೇದನ ಪಡೆದ ಬಳಿಕ ಸಮಂತಾ ಸಿಂಗಲ್ ಆಗಿದ್ದರು. ಆದರೆ, ಈಗ ಅವರ ಜೀವನದಲ್ಲಿ ಪ್ರೀತಿಯ ಚಿಗುರು ಮೊಳಕೆಯೊಡೆದಿರುವಂತೆ ಕಾಣುತ್ತಿದೆ. 2025ರ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕೆಲವು ಸೂಚನೆಗಳು, ಅವರ ಲವ್ ಲೈಫ್ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು. ಈಗ ರಾಜ್ ಜೊತೆಗಿನ ಫೋಟೋಗಳು ಆ ಊಹಾಪೋಹಗಳಿಗೆ ಬಲ ತುಂಬಿವೆ.

ರಾಜ್ ನಿಧಿಮೋರು ಸಮಂತಾ ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಬೆಂಬಲವಾಗಿ ನಿಂತಿದ್ದಾರೆ ಎಂಬುದು ಫೋಟೋಗಳಿಂದ ಸ್ಪಷ್ಟವಾಗಿದೆ. ‘ಶುಭಂ’ ಸಿನಿಮಾದ ನಿರ್ಮಾಣದಲ್ಲಿ ರಾಜ್ ಕೂಡ ಸಮಂತಾ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಎಲ್ಲ ಬೆಳವಣಿಗೆಗಳಿಂದ ಅಭಿಮಾನಿಗಳು ಶೀಘ್ರದಲ್ಲೇ ಸಮಂತಾ ಮತ್ತು ರಾಜ್ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.

Exit mobile version