ಡಿಸೆಂಬರ್ 5ಕ್ಕೆ ಟ್ರೈಲರ್, 11ಕ್ಕೆ ದರ್ಶನ..ನಾಳೆ ಡೆವಿಲ್ 1st ಮೀಟ್..!

ಡಿ ಅಂದ್ರೆ ಬರೀ ಡಿಬಾಸ್ ಅಲ್ಲ.. ಡೆವಿಲ್, ಡಿಸೆಂಬರ್ ಬಾಸ್

Untitled design 2025 12 01T131550.594

ಡಿ ಅಂದ್ರೆ ಬರೀ ಡಿ ಬಾಸ್ ಅಲ್ಲ.. ಡಿಸೆಂಬರ್ ಬಾಸ್. ಡೆವಿಲ್ ಬಾಸ್. ಯೆಸ್.. ತುಂಬಾ ಇಷ್ಟ ಪಟ್ಟು, ಅದರ ಮಧ್ಯೆ ಸಿಕ್ಕಾಪಟ್ಟೆ ಕಷ್ಟಪಟ್ಟು ಶೂಟಿಂಗ್ ಕಂಪ್ಲೀಟ್ ಮಾಡಿರೋ ಸಿನಿಮಾ ಡೆವಿಲ್. ಫೈನಲಿ ಇದೇ ಡಿಸೆಂಬರ್ 11ಕ್ಕೆ ತೆರೆಗೆ ಬರ್ತಿದ್ದು, ಟ್ರೈಲರ್ ಲಾಂಚ್‌‌ಗೆ ಡೇಟ್ ಕೂಡ ಫಿಕ್ಸ್ ಮಾಡಿದೆ. ಆದ್ರೆ ಇಲ್ಲಿಯವರೆಗೂ ಸಿಂಗಲ್ ಪ್ರೆಸ್ ಮೀಟ್ ಮಾಡಿಲ್ಲ ಅನ್ನೋದೇ ಪರಮ ಅಚ್ಚರಿ.

ಡೆವಿಲ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರಿಯರ್‌ನ ಬಿಗ್ಗೆಸ್ಟ್ ವೆಂಚರ್. ದಚ್ಚು ಇಲ್ಲಿಯವೆಗೆ ಮಾಡಿದ್ದ ಸಿನಿಮಾಗಳ ಲೆಕ್ಕ ಬೇರೆ ಇದ್ರ ಲೆಕ್ಕ ಬೇರೆ. ಹೌದು.. ಮೇಕಿಂಗ್, ತಾರಾಗಣ, ಬಜೆಟ್, ಕಥೆ, ಲೊಕೇಷನ್ಸ್ ಹೀಗೆ ಎಲ್ಲಾ ಆ್ಯಂಗಲ್‌‌ನಿಂದ ಡೆವಿಲ್ ಈ ವರ್ಷದ ಮೋಸ್ಟ್ ಎಕ್ಸ್‌‌ಪೆಕ್ಟೆಡ್ ಮೂವಿ ಆಗಿದೆ. ಅದ್ರಲ್ಲೂ ದರ್ಶನ್ ಅನುಪಸ್ಥಿತಿಯಲ್ಲಿ ರಿಲೀಸ್ ಆಗ್ತಿರೋ ಸಿನಿಮಾ ಆಗಿರೋದ್ರಿಂದ ಸಹಜವಾಗಿಯೇ ಜನಕ್ಕೆ ಸಹಾನುಭೂತಿ ಹೆಚ್ಚಾಗಲಿದೆ.

ಅಂದಹಾಗೆ ಡೆವಿಲ್ ಸಿನಿಮಾದ ಟೀಸರ್, ಸಾಂಗ್ಸ್ ಹಾಗೂ ಅದ್ರ ಮೇಕಿಂಗ್ ಝಲಕ್‌‌ಗಳನ್ನ ನೋಡಿದ್ರೆ ಗೊತ್ತಾಗುತ್ತೆ ಸಿನಿಮಾ ಯಾವ ಲೆವೆಲ್‌ಗೆ ಇರಲಿದೆ ಅಂತ. ಅದ್ರಲ್ಲೂ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ಡಿಬಾಸ್‌‌ ಗತ್ತು, ಗಮ್ಮತ್ತಿಗೆ ತಕ್ಕನಾದ ಚಿತ್ರ ಇದಾಗಲಿದೆ. ಈ ಹಿಂದೆ ತಾರಕ್ ಚಿತ್ರ ಮಾಡಿದ್ದ ಡೈರೆಕ್ಟರ್ ಮಿಲನ ಪ್ರಕಾಶ್ ಅವರೇ ಈ ಬಾರಿಯೂ ದಚ್ಚುಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಗಾಗಿ ಬಹುದೊಡ್ಡ ನಿರೀಕ್ಷೆಯ ಬೆಟ್ಟ ಪ್ರೇಕ್ಷಕರ ಮುಂದೆ ಕಾಣ್ತಿದೆ.

ಎಲ್ಲಾ ಓಕೆ.. ಡೆವಿಲ್ ಇದೇ ಡಿಸೆಂಬರ್ 11ಕ್ಕೆ ತೆರೆಗೆ ಬರ್ತಿದೆ. ಹಾಗಾದ್ರೆ ಟ್ರೈಲರ್ ಯಾವಾಗ ರಿಲೀಸ್..? ಪ್ರೀ ರಿಲೀಸ್ ಇವೆಂಟ್ ಯಾವಾಗ ಅನ್ನೋ ಮಾತುಗಳು ಕೇಳಿಬರ್ತಿವೆ. ಅದಕ್ಕೆ ಚಿತ್ರತಂಡ ಉತ್ತರ ನೀಡಿದೆ. ಹೌದು.. ಇದೇ ಡಿಸೆಂಬರ್ 5ರ ಬೆಳಗ್ಗೆ 10.05ಕ್ಕೆ ಡೆವಿಲ್ ಚಿತ್ರದ ಧಮಾಕೇದಾರ್ ಟ್ರೈಲರ್ ಲಾಂಚ್ ಆಗಲಿದೆ. ಇನ್ನು ಸಿನಿಮಾ ಸೆಟ್ಟೇರಿದ ದಿನದಿಂದ ಸಿಂಗಲ್ ಪ್ರೆಸ್ ಕಾನ್ಫರೆನ್ಸ್ ಮಾಡಿಲ್ಲ ಟೀಂ ಅನ್ನೋದು ಅಚ್ಚರಿ.

ಅದೇ ಕಾರಣದಿಂದ ಇದೇ ಡಿಸೆಂಬರ್ 2ರಂದು ಅಂದ್ರೆ ಮಂಗಳವಾರ ಡೆವಿಲ್ ಚಿತ್ರದ ಮೊದಲ ಸುದ್ದಿಗೋಷ್ಠಿ ನಡೆಯಲಿದೆ. ಅಲ್ಲಿ ಕಲಾವಿದರು, ತಂತ್ರಜ್ಞರು, ದರ್ಶನ್ ಕಷ್ಟದಲ್ಲೂ ಈ ಸಿನಿಮಾನ ಮುಗಿಸಿಕೊಟ್ಟ ಪರಿ, ನಿರ್ಮಾಪಕರು ಪಟ್ಟ ಪಾಡು ಎಂಥದ್ದು ಅನ್ನೋದು ಸೇರಿದಂತೆ ರಿಲೀಸ್ ಸ್ಟ್ರ್ಯಾಟಜಿ ಕೂಡ ಬಯಲಾಗಲಿದೆ. ಮಾಧ್ಯಮಗಳಿಗೂ ಮುನ್ನ ಫ್ಯಾನ್ಸ್‌ನ ಭೇಟಿ ಆಗಿರೋ ಡೈರೆಕ್ಟರ್ ಪ್ರಕಾಶ್, ಫಸ್ಟ್ ಟೈಂ ಈ ಡೆವಿಲ್‌‌ಗಾಗಿ ಮಾಧ್ಯಮಗಳನ್ನ ಫೇಸ್ ಮಾಡಲಿದ್ದಾರೆ.

ಅಂದಹಾಗೆ ಒರಾಯನ್ ಮಾಲ್‌‌ನಲ್ಲಿ ಡೆವಿಲ್‌‌‌ನ ಅಲೋಹೋಮೊರಾ ಸಾಂಗ್‌‌ನಲ್ಲಿ ಡಿಬಾಸ್‌‌ ದರ್ಶನ್‌ಗಾಗಿಯೇ ಸ್ಪೆಷಲ್ ಆಗಿ ಡಿಸೈನ್ ಮಾಡಿದ್ದ ಡೆವಿಲ್ ದುಬಾರಿ ಚೇರ್‌ನ ಪ್ರೇಕ್ಷಕರಿಗಾಗಿ ಪ್ರದರ್ಶನಕ್ಕೆ ಇಡಲಾಗಿದೆ. ಅದ್ರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವವರು ಕ್ಲಿಕ್ಕಿಸಿಕೊಳ್ಳಬಹುದು ಅಂತ ಸ್ವತಃ ನಾಯಕನಟಿ ರಚನಾ ರೈ ಕೂಡ ವಿಡಿಯೋ ಮೂಲಕ ಹೇಳಿದ್ರು. ಇದೀಗ ಮಾಲ್‌ನ ಸ್ಪೆಷಲ್ ಅಟ್ರ್ಯಾಕ್ಷನ್ ಅದೇ ಆಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕೂಡ ಆ ಬಗ್ಗೆ ವಿವರಿಸಿದ್ದಾರೆ.

ಹೀರೋ ಜೈಲಲ್ಲಿರೋದ್ರಿಂದ ಹೀರೋಯಿನ್ ರಚನಾ ರೈ ಹಾಗೂ ಟೆಕ್ನಿಷಿಯನ್ಸ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಅದೇ ಕಾರಣದಿಂದ ಎಲ್ಲರೂ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ. ಇನ್ನು ಫ್ಯಾನ್ಸ್ ಈ ಸಿನಿಮಾದ ಹಬ್ಬದ ರೀತಿ ಸೆಲೆಬ್ರೇಟ್ ಮಾಡೋಕೆ ಸಜ್ಜಾಗಿದ್ದಾರೆ. ಈಗಾಗ್ಲೇ ಕೆಲ ಥಿಯೇಟರ್‌‌ಗಳ ಮುಂದೆ ದರ್ಶನ್ ಕಟೌಟ್‌‌ಗಳು ಎದ್ದು ನಿಂತಿದ್ದು, ಉತ್ಸವ ಮೂರ್ತಿಯಂತೆ ಹೆಗಲ ಮೇಲೆ ಹೊತ್ತು ಮೆರೆಸೋಕೆ ಸಜ್ಜಾಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version