ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

ಬುಕ್‌ ಮೈ ಶೋನಲ್ಲಿ 9.6 ರೇಟಿಂಗ್.. ಎಲ್ಲೆಡೆ ಹೌಸ್‌‌ಫುಲ್ ಶೋ

Your paragraph text 2026 10 03T173336.568

ಮರುಭೂಮಿಯಲ್ಲಿನ ಓಯಾಸಿಸ್‌‌ನಂತೆ ಕೊನೆಗೂ ಕೆವಿಎನ್ ಪ್ರೊಡಕ್ಷನ್ಸ್‌ಗೆ ಬೇಲ್ ಬಿಗ್ಗೆಸ್ಟ್ ಹಿಟ್ ತಂದುಕೊಟ್ಟಿದೆ. ಇನ್ಸ್‌ಪೆಕ್ಟರ್ ವಿಜಯ್ ಥಿಯೇಟರ್ ಡ್ಯೂಟಿ ಕೂಡ ಶುರುವಾಗಿದ್ದು, ಎಲ್ಲೆಡೆ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರ್ತಿದೆ. ಫ್ಯಾಮಿಲಿ ಬ್ಲಾಕ್‌‌ಬಸ್ಟರ್ ಹಿಟ್ ಆಗಿರೋ ಬೇಲ್‌‌‌ಗೆ ಬುಕ್ ಮೈ ಶೋ ರೇಟಿಂಗ್ ಜೊತೆ ಎಲ್ಲೆಲ್ಲಿ ವಿಜಯಯಾತ್ರೆ ಅಂತೀರಾ..? ಈ ಸ್ಪೆಷಲ್ ಇಲ್ಲಿದೆ ನೋಡಿ…

ಹೀರೋಗಿಂತ ಕಥೆಯೇ ದೊಡ್ಡದು ಅನ್ನೋದು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾಗಳಿಂದ ಸಾಬೀತಾಯ್ತು. ಯೆಸ್.. ರಾಕಿಂಗ್ ಸ್ಟಾರ್ ಯಶ್, ದಳಪತಿ ವಿಜಯ್, ಅಕ್ಷಯ್ ಕುಮಾರ್‌ನಿಂದ ಕೊಡಲಾಗದ ಬ್ಲಾಕ್ ಬಸ್ಟರ್ ಹಿಟ್‌‌ ಪವನ್ ಒಡೆಯರ್ ಕೊಡೋ ಮೂಲಕ ಸಿನಿಮಾಗೆ ಕಥೆ ಮುಖ್ಯ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ನಿನ್ನೆ ತೆರೆಕಂಡ ಬೇಲ್ ಸಿನಿಮಾಗೆ ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಎಲ್ಲೆಡೆ ಸಿನಿಮಾ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದ್ದು, ಪ್ರೇಕ್ಷಕರಂತೂ ಸಿನಿಮಾನ ಮನಸಾರೆ ಕೊಂಡಾಡ್ತಿದ್ದಾರೆ.

ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್‌‌ಗೂ ಕರಿಯರ್‌ಗೂ ಇದು ಬಿಗ್ ಹಿಟ್. ಅದ್ರಲ್ಲೂ ಸಾಲು ಸಾಲು ಸಿನಿಮಾಗಳಿಂದ ಸಾವಿರಾರು ಕೋಟಿ ಕಳೆದುಕೊಂಡಿದ್ದ ಪ್ರಯಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್‌ಗಂತೂ ಈ ಚಿತ್ರ ಮೊದಲ ಬ್ಲಾಕ್ ಬಸ್ಟರ್ ಹಿಟ್ ಅಂದ್ರೆ ತಪ್ಪಾಗಲ್ಲ. ಹೌದು.. ಬುಕ್ ಮೈ ಶೋನಲ್ಲಿ ಬರೋಬ್ಬರಿ 9.6 ರೇಟಿಂಗ್‌‌ನಿಂದ ದಾಖಲೆ ಮಟ್ಟದ ಟಿಕೆಟ್ಸ್ ಸೋಲ್ಡ್ ಔಟ್ ಆಗ್ತಿವೆ. ಇದು ಗಟ್ಟಿ ಕಥೆ, ಅದ್ಭುತ ಮೇಕಿಂಗ್ ಹಾಗೂ ಬೆಸ್ಟ್ ಕಾಂಬಿನೇಷನ್ ಕಲಾವಿದರಿಂದ ಆದಂತಹ ಸಕ್ಸಸ್.

ಇನ್ಸ್‌ಪೆಕ್ಟರ್ ವಿಜಯ್ ಆನ್ ಥಿಯೇಟರ್ ಡ್ಯೂಟಿ ಅಂತ ಪೋಸ್ಟ್ ಹಾಕಿಕೊಂಡಿರೋ ಚಿತ್ರತಂಡ, ಇಂದಿನಿಂದಲೇ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ತೆರಳುವ ಮೂಲಕ ವಿಜಯಯಾತ್ರೆಗೆ ಚಾಲನೆ ನೀಡಿದೆ. ಇಂದು ಶಿವಣ್ಣ, ಪವನ್ ಒಡೆಯರ್ & ಟೀಂ ಮೊದಲಿಗೆ ತುಮಕೂರು, ನಂತ್ರ ಚಿತ್ರದುರ್ಗ ಅದಾದ ಬಳಿಕ ಬಳ್ಳಾರಿ ಹಾಗೂ ಹೊಸಪೇಟೆಗೆ ಭೇಟಿ ನೀಡುವ ಮೂಲಕ ಚಿತ್ರಪ್ರೇಮಿಗಳಿಗೆ ಹಾಗೂ ಡೈಹಾರ್ಡ್ ಫ್ಯಾನ್ಸ್ ಗೆ ಧನ್ಯವಾದ ಅರ್ಪಿಸಿದ್ದಾರೆ.

ಥಿಯೇಟರ್‌‌ಗಳಲ್ಲಿ ಒಳ್ಳೆಯ ಸಿನಿಮಾಗಳಿಲ್ಲದೆ ಬಣಗುಡುತ್ತಿದ್ದ ಸಂದರ್ಭದಲ್ಲಿ ಈ ರೀತಿ ಹೌಸ್‌‌ಫುಲ್ ಆಗ್ತಿರೋದು ನೋಡೋಕೆ ನಿಜಕ್ಕೂ ಖುಷಿ ಆಗುತ್ತೆ. ಅದ್ರಲ್ಲೂ ಪವನ್ ಒಡೆಯರ್ ಶಿವಣ್ಣ ಜೊತೆಗೂಡಿ ದೊಡ್ಡ ಮಟ್ಟದಲ್ಲೇ ಗೂಗ್ಲಿ ಮಾಡಿದ್ದಾರೆ. ಈ ಚಿತ್ರ ಮಕ್ಕಳಿಂದ ಮುದುಕರ ವರೆಗೆ ಎಲ್ಲಾ ವರ್ಗಗಳ ಜನಕ್ಕೆ ಇಷ್ಟವಾಗುವಂತಹ ಕಂಟೆಂಟ್ ಹೊಂದಿದೆ. ಅದ್ರಲ್ಲೂ ಪಾಲಿಟಿಕ್ಸ್, ಮೀಡಿಯಾ, ಲಾ & ಆರ್ಡರ್, ಜ್ಯುಡಿಷಿಯಲ್ ಸಿಸ್ಟಮ್, ಸಮಾಜ, ಟೆರರಿಸಂ.. ಹೀಗೆ ಎಲ್ಲವೂ ಅದ್ಭುತ.

ಶಿವಣ್ಣ ಜೊತೆ ಬಹುಭಾಷಾ ನಟರುಗಳಾದ ಮಲಯಾಳಂನ ಜಯರಾಮ್, ತೆಲುಗಿನ ಡೈಲಾಗ್ ಕಿಂಗ್ ಸಾಯಿಕುಮಾರ್, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ನಲ್ಲ ಖ್ಯಾತಿಯ ನಟಿ ಸಂಗೀತಾ, ನಿವೇದಿತಾ ಗೌಡ, ರಮೇಶ್ ಇಂದಿರ, ಗೋಪಾಲಕೃಷ್ಣ ದೇಶಪಾಂಡೆ.. ಹೀಗೆ ದೊಡ್ಡ ತಾರಾಗಣವಿದೆ. ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ತಮ್ಮ ಪಾತ್ರಗಳನ್ನ ನಿಭಾಯಿಸಿದ್ದು, ಒಂದೊಳ್ಳೆ ಕಮರ್ಷಿಯಲ್ ಪ್ಯಾಕ್ಡ್ ಮೂವಿಯಾಗಿ ಇದು ಹೊರಹೊಮ್ಮಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

Exit mobile version