ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್

ಮುಗಿಲೆತ್ತರ ಕಟೌಟ್ಸ್.. ಫ್ಯಾನ್ಸ್‌ಗೆ ಊಟ.. ಅಭಿಮಾನ ಸಾಗರ..!

Your paragraph text 2026 10 03T162457.388

ಇಲ್ಲಿಯ ತನಕ ಲೇಡಿ ಸೂಪರ್ ಸ್ಟಾರ್ ಅಂದ್ರೆ ಬರೀ ನಯನತಾರಾ ಹೆಸರು ಮಾತ್ರ ಕೇಳಿಬರ್ತಿತ್ತು. ಆದ್ರೀಗ ನಮ್ಮ ಕನ್ನಡದ ಚೆಂದುಳ್ಳಿ ಚೆಲುವೆ ರಚಿತಾ ರಾಮ್ ಹೆಸ್ರು ಎಲ್ಲೆಡೆ ರಾರಾಜಿಸ್ತಿದೆ. ಕೋಟ್ಯಂತರ ರೂಪಾಯಿ ರೆಮ್ಯುನರೇಷನ್ ಪಡೆಯುವ ರಚ್ಚು ಸಂಪಾದಿಸಿರೋದು ಬರೀ ಹಣ, ಆಸ್ತಿ, ಅಂತಸ್ತು ಅಲ್ಲ. ಕೋಟ್ಯಂತರ ಕನ್ನಡಿಗರ ಅಭಿಮಾನ, ಪ್ರೀತಿ, ಗೌರವ. ಅದಕ್ಕೆ ಸಾಕ್ಷಿಯಾಗಿದ್ದು ಎರಡು ದಿನ ಆಕೆ ಸೆಲೆಬ್ರೇಟ್ ಮಾಡಿಕೊಂಡ ಅವಿಸ್ಮರಣೀಯ, ಅರ್ಥಪೂರ್ಣ ಜನುಮ ದಿನ.

ಬುಲ್ ಬುಲ್ ಬೆಡಗಿ.. ಡಿಂಪಲ್ ಕ್ವೀನ್.. ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ಅಂತೆಲ್ಲಾ ಕರೆಯಲ್ಪಡುವ ಅಪ್ಪಟ ಕನ್ನಡತಿ, ಸತತ ಒಂದೂವರೆ ದಶಕದಿಂದ ನಂ.1 ನಟಿಮಣಿಯಾಗಿ ರಾರಾಜಿಸ್ತಿರೋ ಚೆಂದುಳ್ಳಿ ಚೆಲುವೆ ಅಂದ್ರೆ ಅದು ಒನ್ & ಓನ್ಲಿ ರಚಿತಾ ರಾಮ್. ಯೆಸ್.. 33 ವರ್ಷಗಳನ್ನ ಪೂರೈಸಿರೋ ರಚ್ಚು ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆ ಮೂಲಕ ನಿನ್ನೆಯಿಂದ ಎರಡು ದಿನಗಳ ಕಾಲ ಆರ್ ಆರ್ ನಗರದ ತಮ್ಮ ನಿವಾಸದ ಬಳಿ ಅದ್ಧೂರಿ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದಾರೆ.

ಕನ್ನಡದ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡಿರೋ ಈ ಕನ್ನಡತಿ ನಟಿಸಿದ ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್. ಅಲ್ಲದೆ ತಲೈವಾ ರಜನಿಕಾಂತ್, ಲೋಕೇಶ್ ಕನಕರಾಜ್, ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆಗೂ ಪಾತ್ರವಾಗಿರೋ ರಚಿತಾ, ಅವ್ರೊಟ್ಟಿಗೆ ಕೂಡ ನಟಿಸೋ ಮುಖೇನ ದಾಖಲೆ ಬರೆದ ಗ್ಲಾಮರ್ ಡಾಲ್ ಕೂಡ ಹೌದು. ಈಕೆಗೆ ಅಂದದ ಜೊತೆ ಅದೃಷ್ಟವೂ ಇದೆ. ಅಲ್ಲದೆ.. ಮನೋಜ್ಞ ಅಭಿನಯದಿಂದ ಕನ್ನಡಿಗರ ಹೃದಯ ಸಿಂಹಾಸನದ ರಾಣಿಯಾಗಿರೋ ರಚ್ಚು ಮಕ್ಕಳಿಂದ ಮುದುಕರ ವರೆಗೆ ಎಲ್ಲರಿಗೆ ಅಚ್ಚುಮೆಚ್ಚು.

ಈ ಬಾರಿಯ ರಚಿತಾ ಬರ್ತ್ ಡೇ ಒಂಥರಾ ಐತಿಹಾಸಕ. ಯಾಕಂದ್ರೆ ಯಾವ ಸೂಪರ್ ಸ್ಟಾರ್ ಬರ್ತ್ ಡೇಗೂ ಕಮ್ಮಿ ಇಲ್ಲ ಕ್ವೀನ್ ಜನುಮ ದಿನ. ಅಷ್ಟರ ಮಟ್ಟಿಗೆ ಧೂಮ್ ಧಾಮ್ ಅಂತ ನಡೆದಿದೆ. ಆರ್ ಆರ್ ನಗರದ ಆರ್ಚ್ ಪಕ್ಕದಲ್ಲೇ ಆರ್ಚ್ ಮಾಲ್‌‌ನಷ್ಟು ಎತ್ತರಕ್ಕೆ ಬಿಗ್ ಕಟೌಟ್ ತಲೆ ಎತ್ತಿತ್ತು. ಅದು ಜಸ್ಟ್ ಆರ್ ಆರ್ ಬಾಸ್ ಬರ್ತ್ ಡೇ ಆಹ್ವಾನಕ್ಕೆ ಇನ್ವಿಟೇಷನ್ ರೀತಿ ಇತ್ತು. ಆದ್ರೆ ಕುಬೇರನ ಮೂಲೆ ಅಂತಲೇ ಫೇಮಸ್ ಆಗಿರೋ ರಾಜರಾಜೇಶ್ವರಿ ನಗರದ ರಚ್ಚು ನಿವಾಸದ ಬಳಿ ಜಾತ್ರೆಯ ರೀತಿ ಉತ್ಸವವೇ ನಡೆಯಿತು.

ನಿನ್ನೆ ಮಧ್ಯೆರಾತ್ರಿಯಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಅಭಿಮಾನಿಗಳು ಆಗಮಿಸಿ, ನೆಚ್ಚಿನ ನಾಯಕನಟಿಗೆ ಶುಭ ಕೋರಿದ್ದಾರೆ. ಮಿಡ್ ನೈಟ್ ಫ್ಯಾಮಿಲಿ ಜೊತೆ ಹೊರಬಂದ ರಚ್ಚು, ಕೇಕ್ ಕಟ್ ಮಾಡಿ, ಫ್ಯಾನ್ಸ್‌ಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದು ವಿಶೇಷ. ಅಲ್ಲದೆ.. ರಚಿತಾ ಮನೆಯ ಮುಂದೆ ನರ್ತಕಿ ಥಿಯೇಟರ್ ದ್ವಾರದಂತೆ ಬಹುದೊಡ್ಡ ದ್ವಾರವೊಂದು ತಯಾರಾಗಿತ್ತು. ಅಲ್ಲಿ ರಚಿತಾರ ಹತ್ತಾರು ಕಟೌಟ್‌‌ಗಳು ಮುಗಿಲೆತ್ತರಕ್ಕೆ ತಲೆ ಎತ್ತಿದ್ದವು. ಅವುಗಳಿಗೆ ಲಕ್ಷಾಂತರ ಮೌಲ್ಯದ ಹೂಮಾಲೆಗಳನ್ನ ಹಾಕಿ, ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ, ಕರ್ಪೂರದ ಜೊತೆ ದೀಪಗಳನ್ನ ಬೆಳಗಿದ್ರು ಅಭಿಮಾನಿ ದೇವರುಗಳು.

ಡಿಬಾಸ್ ದರ್ಶನ್‌‌ ಅಭಿಮಾನಿಗಳು ಕೂಡ ರಚಿತಾಗೆ ಡೈ ಹಾರ್ಡ್ ಫ್ಯಾನ್ಸ್. ಹಾಗಾಗಿಯೇ ರಚ್ಚು ಮನೆ ಮುಂದೆ ದರ್ಶನ್-ರಚ್ಚು ಜೊತೆಗಿನ ಫ್ಲೆಕ್ಸ್‌‌ಗಳು ರಾರಾಜಿಸಿದವು. ಅದ್ರಲ್ಲೂ ಬುಲ್ ಬುಲ್ ಸಿನಿಮಾದಿಂದ ರಚ್ಚುನ ಚಿತ್ರರಂಗಕ್ಕೆ ಹೀರೋಯಿನ್ ಆಗಿ ಲಾಂಚ್ ಮಾಡಿದ್ದೇ ಡಿಬಾಸ್ ದರ್ಶನ್ ಆಗಿರೋದ್ರಿಂದ ಡಿಂಪಲ್ ಕ್ವೀನ್‌ಗೂ ದಚ್ಚು ಮೇಲೆ ಅದೇ ಗೌರವ, ಅಭಿಮಾನ ಹಾಗೂ ಪ್ರೀತಿ. ಮೊನ್ನೆ ಪರಪ್ಪನ ಅಗ್ರಹಾರ ಬಳಿ ಹೋಗಿ ಕಾದು ವಾಪಸ್ ಆಗಿದ್ದ ರಚಿತಾ, ಅದಕ್ಕೆ ಸ್ಪಷ್ಟನೆ ಕೂಡ ನೀಡಿದ್ರು. ಜೊತೆಗೆ ಅವ್ರ ಆಶೀರ್ವಾದ ನನ್ನ ಮೇಲೆ ಸದಾ ಇರಲಿದೆ. ಆದಷ್ಟು ಬೇಗ ಹೊರಬರ್ತಾರೆ ಅನ್ನೋ ಭರವಸೆ ಕೂಡ ನೀಡಿದ್ರು ರಚ್ಚು.

ದರ್ಶನ್ ಡಿ ಬಾಸ್ ಆದ್ರೆ ರಚಿತಾ ಆರ್ ಆರ್ ಬಾಸ್. ಹೌದು.. ಆರ್ ಆರ್ ಬಾಸ್ ಅಂದ್ರೆ ರಾಜರಾಜೇಶ್ವರಿ ನಗರದ ಬಾಸ್ ಅಂದ್ರೂ ಅಂದುಕೊಳ್ಳಬಹುದು ಅಥ್ವಾ ರಚಿತಾ ರಾಮ್ ಅಂತಲೂ ಅಂದ್ಕೋಬಹುದು. ಅಂಥದ್ದೇ ಬೃಹತ್ ಕೇಕ್ ಕೂಡ ತಯಾರಿಸಿ ಕಟ್ ಮಾಡಿಸಿದ್ರು ಫ್ಯಾನ್ಸ್. ಇನ್ನೂ ರಾತ್ರಿಯಿಂದ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳು ರಚಿತಾಗೆ ವಿಶ್ ಮಾಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು, ತರಹೇವಾರಿ ಗಿಫ್ಟ್‌‌ಗಳನ್ನ ನೀಡಿದ್ದು ವಿಶೇಷ.

ಆ ಎಲ್ಲಾ ಅಭಿಮಾನಿಗಳ ಪೈಕಿ ಒಬ್ಬ ಸೆಲ್ಫಿ ಸೋಗಿನಲ್ಲಿ ರಚಿತಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ ಮೆಲ್ಲಗೆ ಹತ್ತಿರ ಹೋಗಿ ಕೆನ್ನೆ ಕೂಡ ಗಿಂಡಿ ಹೋಗಿಬಿಟ್ಟರು. ಅದನ್ನ ಕಂಡು ರಚಿತಾ ಕೋಪಿಸಿಕೊಳ್ಳದೆ, ಆತನಿಗೆ ತನ್ನ ಮೇಲೆ ಇರೋ ಅಭಿಮಾನ ಎಂಥದ್ದು ನೋಡಿ ಅಂತ ಖುಷಿ ಪಟ್ಟಿದ್ದೇ ಹೆಚ್ಚು. ಅಂತಹ ಅಭಿಮಾನಿಗಳನ್ನ ಪಡೆದ ರಚ್ಚು ಜೀವನ ಪಾವನ.

ಇಂಟರೆಸ್ಟಿಂಗ್ ಅಂದ್ರೆ ಮನೆಯ ಬಳಿ ಬಂದಂತಹ ಪ್ರತಿಯೊಬ್ಬ ಅಭಿಮಾನಿಗೂ ರಚಿತಾ ಊಟ, ತಿಂಡಿಯ ವ್ಯವಸ್ಥೆ ಮಾಡಿಸಿದ್ರು. ಇದು ಆಕೆ ತನ್ನ ಫ್ಯಾನ್ಸ್ ಮೇಲೆ ಇಟ್ಟಿರೋ ಪ್ರೀತಿ ಎಂಥದ್ದು ಅನ್ನೋದಕ್ಕೆ ಸಾಕ್ಷಿಯಾಯ್ತು.

ಮಕ್ಕಳಿಂದ ಮುದುಕರ ತನಕ ಸಾಕಷ್ಟು ಮಂದಿ ಅಭಿಮಾನಿಗಳು ಬಂದು ರಚ್ಚು ಬರ್ತ್ ಡೇಗೆ ಶುಭ ಕೋರಿದ್ದಾರೆ. ಮಂಗಳಮುಖಿಯರು ಕೂಡ ದೃಷ್ಠಿ ತೆಗೆದು ಶುಭ ಕೋರಿದ್ದು ವಿಶೇಷ. ಇನ್ನೂ ಪ್ರತೀ ಭಾನುವಾರ ಆರ್ ಆರ್ ನಗರದ ತಮ್ಮ ನಿವಾಸದ ಬಳಿ ದೊಡ್ಡ ಪ್ರಮಾಣದಲ್ಲಿ ಫ್ಯಾನ್ಸ್ ಬರ್ತಾರೆ. ಈ ಅಭಿಮಾನ ಕಂಡು ಮೂಕವಿಸ್ಮಿತಳಾಗಿರೋ ರಚ್ಚು, ಮೊದಲಿಗೆ ಮಾತಾಡದೆ ಮೌನಕ್ಕೆ ಜಾರಿದ್ರು. ಸಿಕ್ಕಾಪಟ್ಟೆ ಎಮೋಷನಲ್ ಆದಂತಹ ರಚಿತಾ, ಇದು ಯಾವ ಜನ್ಮದ ಪುಣ್ಯವೋ ಏನೋ ಅಂತ ಖುಷಿ ಹೊರಹಾಕಿದ್ರು.

ಇದು ನನ್ನ ತಾಯಿ ಮಾಡಿದ ಪೂಜೆಯ ಫಲವೋ ಅಥ್ವಾ ನನ್ನ ತಂದೆ ಮಾಡಿದ ಒಳ್ಳೆಯ ಕೆಲಸಗಳ ಕರ್ಮದ ಫಲವೋ ಗೊತ್ತಿಲ್ಲ. ಎಷ್ಟು ದುಡ್ಡು ಕೊಟ್ಟರೂ ಸಿಗಲ್ಲ ಇಂತಹ ಪ್ರೀತಿ ಎಂದ ರಚಿತಾ, ಇದೆಲ್ಲಾ ಪಡೆದ ನನ್ನ ಜನ್ಮ ಧನ್ಯ ಅನ್ನೋ ಅರ್ಥದಲ್ಲಿ ಮನದಾಳದ ಭಾವನೆಗಳನ್ನ ಮುಕ್ತವಾಗಿ ಕ್ಯಾಮೆರಾ ಮುಂದೆ ಹಂಚಿಕೊಂಡರು.

ಒಟ್ಟಾರೆ ಸೂಪರ್ ಸ್ಟಾರ್‌‌ಗಳ ಬರ್ತ್ ಡೇ ಸೆಲೆಬ್ರೇಷನ್‌ನ ಮೀರಿಸೋ ರೇಂಜ್‌ಗೆ ನಟಿಮಣಿ ಹೀಗೆ ಸೆಲೆಬ್ರೇಟ್ ಮಾಡಿಕೊಂಡಿದ್ದು ಮಾತ್ರ ಇತಿಹಾಸವೇ ಸರಿ. ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಈ ರೀತಿ ಮಾಸ್ ಫ್ಯಾನ್ ಫಾಲೋಯಿಂಗ್ ಇರೋ ಏಕೈಕ ನಟಿ ಅಂದ್ರೆ ರಚ್ಚು ಅನಿಸಿಕೊಂಡಿದ್ದಾರೆ. ರಚ್ಚು ಸಿನಿಮಾ ಜರ್ನಿ ಮತ್ತಷ್ಟು ಮಗದಷ್ಟು ಉತ್ತುಂಗಕ್ಕೇರಲಿ.. ಅವ್ರ ಬತ್ತಳಿಕೆಯಿಂದ ಸದಭಿರುಚಿಯ ಹಿಟ್ ಸಿನಿಮಾಗಳು ಕನ್ನಡಿಗರನ್ನ ಸದಾ ರಂಜಿಸುತ್ತಾ ಹೊರಹೊಮ್ಮಲಿ.. ಹೀತಂತ ಹೇಳ್ತಾ ನಮ್ಮ ಗ್ಯಾರಂಟಿ ನ್ಯೂಸ್ ಕಡೆಯಿಂದಲೂ ಕ್ವೀನ್‌ಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version