ಬಂಗಾರದಿಂದ ಬಣ್ಣಾನ ತಂದ.. ಎಂಥಾ ಸಾಹಿತ್ಯ.. ಎಂಥಾ ಸಂಗೀತಾ ಅಲ್ವಾ..? ಈ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಿದ್ದು ಸೂಪರ್ ಹಿಟ್ ಜೋಡಿ ಶಿಲ್ಪಾ ಶೆಟ್ಟಿ ಹಾಗು ಕ್ರೇಜಿಸ್ಟಾರ್. ಇಂದಿಗೂ ಈ ಜೋಡಿ ಮೇಲಿನ ಕ್ರೇಜ್ ಕಡಿಮೆ ಆಗಿಲ್ಲ. 18 ವರ್ಷಗಳ ಬಳಿಕ ಮತ್ತೆ ಒಂದಾದ ‘ಒಂದಾಗೋಣ ಬಾ’ ಜೋಡಿ ಮೋಡಿ ಮಾಡಿದ್ದು ಮಾತ್ರ ‘ಪ್ರೀತ್ಸೋದ್ ತಪ್ಪಾ’ ಹಾಡಿಗೆ. ಹೇಗಿತ್ತು ಬಂಗಾರ ಜೋಡಿಯ ಕಮಾಲ್ ಕಿ ಡಾನ್ಸ್..? ಜಸ್ಟ್ ವಾಚ್.
- 18 ವರ್ಷಗಳ ಬಳಿಕ ‘ಒಂದಾಗೋಣ ಬಾ’ ಎಂದ ಜೋಡಿ
- ಬಂಗಾರ ಜೋಡಿಯ ಕಮಾಲ್ ಕಿ ಡಾನ್ಸ್ಗೆ ಫ್ಯಾನ್ಸ್ ಫಿದಾ
- ಕ್ರೇಜಿಸ್ಟಾರ್‌ನ ಅಪ್ಪಿಕೊಂಡು, ಡ್ಯಾನ್ಸ್ ಮಾಡಿದ ಶಿಲ್ಪಾ ಶೆಟ್ಟಿ..!
ಮಂಗಳೂರು ಬ್ಯೂಟಿ ಶಿಲ್ಪಾ ಶೆಟ್ಟಿನ ಸ್ಯಾಂಡಲ್ ವುಡ್ ಗೆ ಪರಿಚಯ ಮಾಡಿದ್ದೆ ಕ್ರೇಜಿ ಸ್ಟಾರ್ ರವಿಚಂದ್ರನ್. 1998 ರಲ್ಲಿ ಬಿಡುಗಡೆಯಾದ ಪ್ರೀತ್ಸೋದ್ ತಪ್ಪಾ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿಯ ಮೊದಲ ಕನ್ನಡ ಸಿನಿಮಾ ಇದಾಗಿತ್ತು. ಇಂದಿಗೂ ಈ ಚಿತ್ರದ ರಾಜ ರಾಜ.. ಚೋರಿಯಾಗಿದೆ ನನ್ನ ದಿಲ್..ಬಂಗಾರದಿಂದ ಬಣ್ಣನ ತಂದ.. ಸೋನೆ ಸೋನೆ ಹಾಡುಗಳು ಎವರ್ ಗ್ರೀನ್.
ರವಿಚಂದ್ರನ್ ಹಾಗು ಶಿಲ್ಪಾ ಶೆಟ್ಟಿ ಕಾಂಬಿನೇಶನ್ ನ ಎಲ್ಲಾ ಹಾಡುಗಳು ಸೂಪರ್ ಹಿಟ್. 18 ವರ್ಷಗಳ ಹಿಂದೆ ಒಂದಾಗೋಣ ಬಾ ಸಿನಿಮಾದ ಮೂಲಕ ಕಮಾಲ್ ಮಾಡಿದ್ದ ಈ ಜೋಡಿ ಇದೀಗ ಬಹಳ ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದು ವಿಶೇಷ.ಈ ಜೋಡಿಯ ಫ್ಯಾನ್ಸ್ ಗೆ ಹಬ್ಬದೂಟ ಅಂತಾನೇ ಹೇಳ್ಬೋದು. ಅಂದಹಾಗೆ, ರವಿಚಂದ್ರನ್ ಹಾಗು ಶಿಲ್ಪಾ ಶೆಟ್ಟಿ ಒಟ್ಟಿಗೆ ವೇದಿಕೆ ಹಂಚಿಕೊಳ್ಳುವುದಕ್ಕೆ ಕಾರಣ ಆಗಿದ್ದು ಧ್ರುವ ಸರ್ಜಾ ಅಭಿನಯಿಸಿ, ಜೋಗಿ ಪ್ರೇಮ್ ನಿರ್ದೇಶಿಸಿರುವ ಬಹುನಿರೀಕ್ಷಿತ ಕೆಡಿ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮ.
ಬೆಂಗಳೂರಿನ ಮಾಲ್ವೊಂದರಲ್ಲಿ ಕನ್ನಡ ವರ್ಷನ್ ಟೀಸರ್ ಅನಾವರಣ ಆಗಿದೆ. ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ಪ್ರೇಮ್, ರೀಷ್ಮಾ ನಾಣಯ್ಯ, ನಿರ್ಮಾಪಕ ವೆಂಕಟ್ ನಾರಾಯಣ್ ಸೇರಿದಂತೆ ಇಡೀ ಚಿತ್ರತಂಡ ಸೇರಿತ್ತು. ಈ ಮೂಲಕ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ತಾವು ಅಭಿನಯಿಸಿದ ಪ್ರಿತ್ಸೋದ್ ತಪ್ಪಾ ಚಿತ್ರದ ನೆನಪುಗಳನ್ನು ಹಂಚಿಕೊಂಡರು
ಒಂದು ಕಾಲದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಹವಾ ಸೃಷ್ಟಿಸಿದ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಅದೆ ವೇದಿಕೆ ಮೇಲೆ ಪ್ರಿತ್ಸೋದ್ ತಪ್ಪಾ ಚಿತ್ರದ ಬಂಗಾರದಿಂದಾ.. ಹಾಡಿಗೆ ಹೆಜ್ಜೆ ಹಾಕಿದ್ದೆ ತಡ ಅಲ್ಲಿದ ಧ್ರುವ ಅಭಿಮಾನಿಗಳು ಚಪ್ಪಾಳೆ.. ಶಿಳ್ಳೆ ಹೊಡೆದು ಚೀರ್ ಅಪ್ ಮಾಡ್ತಿದ್ರು. ಪ್ರೀತ್ಸೋದ್ ತಪ್ಪಾ ಪಾರ್ಟ್ 2 ಮಾಡಿ ಅನ್ನೋ ಡಿಮ್ಯಾಂಡ್ ಕೂಗಿ ಬಂತು.
ಇನ್ನು ಇದೆ ವೇಳೆ ಮಾತನಾಡಿದ ಸಂಜಯ್ ದತ್ ಧ್ರುವ ಗೆ ನನ್ನ ಛೋಟಾ ಭಾಯ್ ಎಂದು ಹೇಳಿದ್ರು. ಅಲ್ಲದೆ ರವಿಚಂದ್ರನ್ ಬಗ್ಗೆ ಗುಣಗಾನ ಮಾಡಿದ್ರು.ನನಗೆ 386 ಜನ ಗರ್ಲ್ ಫ್ರೆಂಡ್ಸ್ ಇದ್ದರು. ಆದರೆ, ಈ ವಿಚಾರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನನ್ನನ್ನು ಮೀರಿಸ್ತಾರೆ ಎಂದು ಸಂಜು ಬಾಬಾ ಹೇಳಿದ್ದಾರೆ.
ಒಟ್ಟಾರೆ 18ವರ್ಷಗಳ ಬಳಿಕ ಎವರ್ ಗ್ರೀನ್ ಜೋಡಿ ಮತ್ತೆ ಒಂದಾಗಿ ಹೆಜ್ಜೆ ಹಾಕಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಲ್ಪಾ ಶೆಟ್ಟಿ -ರವಿಚಂದ್ರನ್ ಕಾಂಬಿನೇಶನ್ ನಲ್ಲಿ ರೋಮ್ಯಾಂಟಿಕ್ ಸಿನಿಮಾ ಬರ್ಬೇಕು ಅದಕ್ಕೆ ಕ್ರೇಜಿ ಸ್ಟಾರ್ ಡೈರೆಕ್ಷನ್ ಮಾಡಬೇಕು ಎಂದು ಫ್ಯಾನ್ಸ್ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಫ್ಯಾನ್ಸ್ ಕೂಗು ರವಿಮಾಮ ಕಿವಿ ಮುಟ್ಟಲಿ ಎಂದು ಆಶೀಸೋಣ
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
