ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಇಡೀ ಸೌತ್ ಇಂಡಿಯಾ ಮಾತ್ರವಲ್ಲ, ಬಾಲಿವುಡ್ ಕೂಡ ಎದೆಯುಸಿರು ಬಿಗಿಹಿಡಿದು ಕಾಯ್ತಿರೋ ಸಿನಿಮಾ ಅಂದ್ರೆ ಅದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್-2’. ಮೊದಲ ಭಾಗದಲ್ಲಿ ಶಿವಣ್ಣ, ಮೋಹನ್ ಲಾಲ್ ಅಬ್ಬರಿಸಿದ ಮೇಲೆ, ಪಾರ್ಟ್ 2 ನಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಎಂಟ್ರಿ ಕೊಡ್ತಾರೆ ಅನ್ನೋ ಗುಸುಗುಸು ಕೇಳಿಬರ್ತಿತ್ತು. ಆದ್ರೆ ಈಗ ಸಿಕ್ಕಿರೋ ಲೇಟೆಸ್ಟ್ ನ್ಯೂಸ್ ಏನಪ್ಪಾ ಅಂದ್ರೆ, ಕಿಂಗ್ ಖಾನ್ ಜಾಗಕ್ಕೆ ಈಗ ಟಾಲಿವುಡ್ ಪವರ್ ಸ್ಟಾರ್ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಇಂದಿನ ಲೇಟೆಸ್ಟ್ ಸಮಾಚಾರ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..
- ಜೈಲರ್-2 ಲೇಟೆಸ್ಟ್ ಅಪ್ಡೇಟ್..ಕಿಂಗ್ ಖಾನ್ ಜಾಗಕ್ಕೆ ಯಾರು?
- ಶಾರೂಖ್ ಔಟ್.. DCM ಪವನ್ ಇನ್..ಮಾಸ್ ಕಾಂಬಿನೇಷನ್..!
- ನೆಲ್ಸನ್ ಪ್ಲಾನ್ ಬಿ..ಸೌತ್ ಸೂಪರ್ ಸ್ಟಾರ್ಗಳ ಮಹಾ ಸಂಗಮ
- ಸಿನಿರಂಗದ ಬಿಗ್ ಬ್ರದರ್, ರಾಜಕೀಯದ ತೂಫಾನ್ ಜುಗಲ್ಬಂದಿ
ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ ಬಾಕ್ಸ್ ಆಫೀಸ್ ಧೂಳಿಪಟವಾಗಲೇಬೇಕು. ‘ಜೈಲರ್’ ಮೊದಲ ಭಾಗ ಸೃಷ್ಟಿಸಿದ ಸುನಾಮಿ ನಮಗೆಲ್ಲ ಗೊತ್ತೇ ಇದೆ. ಈಗ ‘ಜೈಲರ್-2’ ಶೂಟಿಂಗ್ ಹಂತ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಗೆ ರೆಡಿಯಾಗ್ತಿದೆ. ಇತ್ತೀಚೆಗಷ್ಟೇ ಸ್ವತಃ ತಲೈವಾ ಅವರೇ ಬಿಗ್ ಅಪ್ಡೇಟ್ ಕೊಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ್ರು. ಚಿತ್ರತಂಡ ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡೋ ಪ್ಲಾನ್ನಲ್ಲಿದೆ. ಆದ್ರೆ ಈ ಸಂಭ್ರಮದ ನಡುವೆಯೇ ಕಿಂಗ್ ಖಾನ್ ಶಾರುಖ್ ಈ ಚಿತ್ರದಲ್ಲಿ ಇಲ್ಲ ಅನ್ನೋ ಕಹಿ ಸುದ್ದಿ ಫ್ಯಾನ್ಸ್ಗೆ ಶಾಕ್ ಕೊಟ್ಟಿತ್ತು.
ಹೌದು, ಶಾರುಖ್ ಖಾನ್ ಈ ಸಿನಿಮಾಗೆ ‘ನೋ’ ಅನ್ನೋದಕ್ಕೆ ಬಲವಾದ ಕಾರಣವೇ ಇದೆ. ಸದ್ಯ ಶಾರುಖ್ ತಮ್ಮ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಈ ಚಿತ್ರಕ್ಕಾಗಿ ಅವರು ತಮ್ಮ ಫಿಸಿಕಲ್ ಲುಕ್ ಅನ್ನ ಕಂಪ್ಲೀಟ್ ಆಗಿ ಬದಲಿಸಿಕೊಂಡಿದ್ದಾರೆ. ನಿರ್ದೇಶಕ ನೆಲ್ಸನ್ ಕೇವಲ 5 ದಿನಗಳ ಶೂಟಿಂಗ್ ಕೇಳಿದ್ರು ನಿಜ, ಆದ್ರೆ ಆ 5 ದಿನಕ್ಕಾಗಿ ತಮ್ಮ ‘ಕಿಂಗ್’ ಸಿನಿಮಾದ ಸೀಕ್ರೆಟ್ ಲುಕ್ ಬಿಟ್ಟುಕೊಡಲು ಶಾರುಖ್ ರೆಡಿಯಿಲ್ಲ. ಸ್ವತಃ ಶಾರುಖ್ ಅವರೇ ರಜನಿಕಾಂತ್ ಅವರಿಗೆ ಫೋನ್ ಮಾಡಿ ಈ ಕಾರಣ ವಿವರಿಸಿ ಕ್ಷಮೆ ಕೇಳಿದ್ದಾರಂತೆ.
ಶಾರುಖ್ ಹಿಂದೆ ಸರಿದಿದ್ದೇ ತಡ, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈಗ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಶಾರುಖ್ ಮಾಡಬೇಕಿದ್ದ ಆ ಪವರ್ಫುಲ್ ಕ್ಯಾಮಿಯೋ ರೋಲ್ಗೆ ಈಗ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನ ಕರೆತರಲು ಸಿದ್ಧತೆ ನಡೆದಿದೆ. ಸದ್ಯಕ್ಕೆ ಸಿಕ್ಕಿರೋ ಅಪ್ಡೇಟ್ ಪ್ರಕಾರ, ಪವನ್ ಕಲ್ಯಾಣ್ ಈ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ರಜನಿ ಮತ್ತು ಪವನ್ ಕಲ್ಯಾಣ್ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡ್ರೆ ಥಿಯೇಟರ್ಗಳು ಅಕ್ಷರಶಃ ಶೇಕ್ ಆಗೋದ್ರಲ್ಲಿ ಡೌಟೇ ಇಲ್ಲ.
ಪವನ್ ಕಲ್ಯಾಣ್ ಅವರ ಕ್ರೇಜ್ ಕೇವಲ ಸಿನಿಮಾಗೆ ಸೀಮಿತವಾಗಿಲ್ಲ, ಆಂಧ್ರ ಮತ್ತು ತೆಲಂಗಾಣದಲ್ಲಿ ‘ಪವನಿಸಂ’ ಎಂಬ ಮಟ್ಟಕ್ಕೆ ಬೆಳೆದಿದೆ, ಅಲ್ಲಿನ ಅಭಿಮಾನಿಗಳು ಅವರನ್ನು ಕೇವಲ ನಟನಾಗಿ ನೋಡದೆ ಪೊಲಿಟಿಕಲ್ ಲೀಡರ್ ಆಗಿ ಆರಾಧಿಸುತ್ತಾರೆ. ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದರೆ, ಶಾರುಖ್ ಖಾನ್ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡಬಲ್ಲ ಶಕ್ತಿ ಹೊಂದಿದ್ದರೆ, ಪವನ್ ಕಲ್ಯಾಣ್ ದಕ್ಷಿಣ ಭಾರತದಲ್ಲಿ, ಅದರಲ್ಲೂ ತೆಲುಗು ರಾಜ್ಯಗಳಲ್ಲಿ ಶಾರುಖ್ ಅವರ ಆರಂಭಿಕ ದಿನದ ದಾಖಲೆಗಳನ್ನು ಮುರಿಯುವಷ್ಟು ಪ್ರಬಲವಾದ ಮಾಸ್ ಫಾಲೋಯಿಂಗ್ ಹೊಂದಿದ್ದಾರೆ.
ಇನ್ನು ದಶಕಗಳಿಂದಲೂ ರಜನಿಕಾಂತ್ ಮತ್ತು ಪವನ್ ಕಲ್ಯಾಣ್ ನಡುವೆ ಗುರು-ಶಿಷ್ಯರ ನಂಟಿದೆ. ಪವನ್ ಕಲ್ಯಾಣ್ ತಲೈವಾರನ್ನು ಸಾರ್ವಜನಿಕವಾಗಿಯೇ ‘ಬಿಗ್ ಬ್ರದರ್’ ಎಂದು ಕರೆದು ಗೌರವಿಸಿದರೆ, ರಜನಿಕಾಂತ್ ಅವರು ಪವನ್ ಕಲ್ಯಾಣ್ ಅವರ ರಾಜಕೀಯ ಏಳಿಗೆಯನ್ನು ಕಂಡು ಬೆರಗಾಗಿ ‘ಪೊಲಿಟಿಕಲ್ ತೂಫಾನ್’ ಎಂದು ಬಣ್ಣಿಸಿದ್ದರು. ಆಂಧ್ರದ ಉಪಮುಖ್ಯಮಂತ್ರಿಯಾಗಿ ಪವನ್ ಅಧಿಕಾರ ಸ್ವೀಕರಿಸಿದಾಗ ಸ್ವತಃ ರಜನಿ ಕರೆ ಮಾಡಿ ಶುಭ ಹಾರೈಸಿದ್ದು ಇಬ್ಬರ ಸ್ನೇಹದ ಆಳಕ್ಕೆ ಸಾಕ್ಷಿ. ಸಿನಿಮಾ ರಂಗದ ಇಬ್ಬರು ಮಾಸ್ ಲೀಡರ್ಗಳು ಹೀಗೆ ಪರಸ್ಪರ ಬೆಂಬಲಕ್ಕೆ ನಿಂತಿರುವುದು ಈಗ ‘ಜೈಲರ್-2’ ವಿಚಾರದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ, ಇದು ಕೇವಲ ಸ್ನೇಹವಲ್ಲ, ಭಾರತೀಯ ಸಿನಿಮಾದ ಶಕ್ತಿ ಪ್ರದರ್ಶನ.
ಶಾರುಖ್ ಇಲ್ಲದಿದ್ರೆ ಏನಂತೆ ಈಗ ಪವನ್ ಕಲ್ಯಾಣ್ ಎಂಟ್ರಿ ಸುದ್ದಿ ಕೇಳಿ ಸಿನಿರಸಿಕರು ಫುಲ್ ಖುಷ್ ಆಗಿದ್ದಾರೆ. ತಲೈವಾ ಅಖಾಡಕ್ಕೆ ಈ ಪವರ್ ಫುಲ್ ಸುಲ್ತಾನ್ ಎಂಟ್ರಿ ಕೊಟ್ಟರೆ ಇಂಡಿಯನ್ ಸಿನಿಮಾ ಹಿಸ್ಟರಿಯೇ ಬದಲಾಗುತ್ತೆ ಅನ್ನೋದು ಸದ್ಯದ ಲೆಕ್ಕಾಚಾರ.ಒಟ್ಟಿನಲ್ಲಿ, ಶಾರುಖ್ ಇಲ್ಲದ ಕೊರತೆಯನ್ನ ಪವನ್ ಕಲ್ಯಾಣ್ ತುಂಬ್ತಾರಾ? ಈ ಕಾಂಬಿನೇಷನ್ ಹೇಗಿರಲಿದೆ ಅನ್ನೋದನ್ನ ಕಾದು ನೋಡೋಣ.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





