ಕನ್ನಡ ಟಿವಿ ಲೋಕದಲ್ಲಿ ಪ್ರತಿನಿತ್ಯ ಸೀರಿಯಲ್‌ಗಳು ತಮ್ಮ ಕಂಟೆಂಟ್ ನಿಂದಾಗಿ, ಜನರನ್ನು ಸೆಳೆಯೋದ್ರಲ್ಲಿ ಆ ಮೂಲಕ ಟಿಆರ್ಪಿಯಲ್ಲಿ ಮೇಲೆ ಹೋಗೋದು ಕೆಳಗೆ ಬರೋದು ಆಗ್ತಾನೇ ಇರುತ್ತೆ, ಈ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರ ಇದ್ದೇ ಇರುತ್ತೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್‌ಪಿ ಮೂಲಕ ಗೊತ್ತಾಗುತ್ತೆ. ಪ್ರತಿ ದಿನ ಹೊಸತನ ನೀಡಬೇಕು. ಮನರಂಜನೆಯ ಜೊತೆಗೆ ವಿಭಿನ್ನತೆಯನ್ನು ಅಳವಡಿಸಿಕೊಳ್ಳಬೇಕು. ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಬೇಕು ಅನ್ನೋದು ಪ್ರತಿ ಸೀರಿಯಲ್ ತಂಡದ ಕನಸು. ಅವ್ರ ಕನಸುಗಳು ನನಸಾಗೋದೇ ಟಿಆರ್‌ಪಿ ಚೆನ್ನಾಗಿ ಬಂದಾಗ.
ನಾ ನಿನ್ನ ಬಿಡಲಾರೆ ನಂ.1 ಸೀರಿಯಲ್
ಈ ವಾರದ ಬಾರ್ಕ್ ರೇಟಿಂಗ್ ಅಂದ್ರೆ ಟಿಆರ್‌ಪಿ ಲಿಸ್ಟ್ ಬಿಡುಗಡೆಯಾಗಿದೆ. ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಅಣ್ಣಯ್ಯ ಸೀರಿಯಲ್ ಈ ವಾರ 2ನೇ ಸ್ಥಾನಕ್ಕೆ ಮರಳಿದೆ. ಈ ವಾರ ಲೆಕ್ಕಚಾರ ಉಲ್ಟಾ ಆಗಿದೆ. ಇತ್ತೀಚೆಗೆ ಟೆಲಿಕಾಸ್ಟ್ ಶುರು ಮಾಡಿದ, ನಾ ನಿನ್ನ ಬಿಡಲಾರೆ ಧಾರವಾಹಿ ಈ ವಾರ ಮತ್ತೆ ನಂಬರ್ ಒನ್ ಪಟ್ಟಕೇರಿದೆ. ಅದೇ ರೀತಿ ಕಳೆದ ವಾರ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಲಾಂಚ್ ಆಗಿರೋ ಭಾರ್ಗವಿ LLB ಭರವಸೆ ಮೂಡಿಸಿದೆ. ಭಾರ್ಗವಿಗೆ ಮೊದಲ ವಾರವೇ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಟಾಪ್ 5 ಸೀರಿಯಲ್‌ಗಳು ಜೀ ಕನ್ನಡದ್ದು
ಕನ್ನಡ ಸೀರಿಯಲ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 8.5ರ ರೇಟಿಂಗ್ ಜೊತೆ ಮೊದಲ ಸ್ಥಾನದಲ್ಲಿದ್ರೆ, ಎರಡನೇ ಸ್ಥಾನದಲ್ಲಿ ಅಣ್ಣಯ್ಯ 7.7, ಮೂರನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯಕ್ಕೆ 7.6 ರೇಟಿಂಗ್ ಬಂದಿದ್ರೆ, ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.4ಟಿವಿಆರ್ ಗಳಿಸಿದೆ, ಇನ್ನೂ ಐದನೇ ಸ್ಥಾನದಲ್ಲಿ ಐದನೇ ಸ್ಥಾನದಲ್ಲಿ ರಾತ್ರಿ 10ಕ್ಕೆ ಪ್ರಸಾರವಾಗೋ ಬ್ರಹ್ಮಗಂಟು 6.4ಟಿವಿಆರ್ ಗಳಿಸಿದೆ, ಇನ್ನೂ ಕಥೆಯಲ್ಲಿ ನಿರಂತರ ಟ್ವಿಸ್ಟ್‌ಗಳ ಮೂಲಕ ಆರನೇ ಸ್ಥಾನದಲ್ಲಿರೋ ಅಮೃತಧಾರೆ 6 ಟಿವಿಆರ್ ಪಡೆದುಕೊಂಡಿದೆ.
ಟಾಪ್ 10 ಪಟ್ಟಿಯಲ್ಲಿ ಭಾರ್ಗವಿ LLB
ಇನ್ನೂ, ಏಳನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ 5.6 ಗಳಿಸಿದ್ರೆ, ಏಂಟನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 5.4, ಒಂಭತ್ತನೇ ಸ್ಥಾನದಲ್ಲಿ ರಾಮಾಚಾರಿ 5 ಟಿವಿಆರ್ ಪಡೆದು ಕೊಂಡಿದೆ. ಇನ್ನೂ ಟಾಪ್ 10 ಸೀರಿಯಲ್ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿ ಕಳೆದ ವಾರ ಲಾಂಚ್ ಆದ ಭಾರ್ಗವಿ LLB ಫಿಕ್ಸ್ ಆಗಿದೆ. ನಿನಗಾಗಿ ಸೀರಿಯಲ್ ಕೂಡ 10ನೇ ಸ್ಥಾನವನ್ನು ಹಂಚಿಕೊಂಡಿದ್ದು 4.9 ಟಿಆರ್‌ಪಿಗಳಿಸಿವೆ.
ಮಜಾ ಟಾಕೀಸ್ ಮಜಾ ಇಲ್ಲ, ಸರಿಗಮಪ ನಂ.1
ಇನ್ನೂ ಕನ್ನಡದ ಟಾಪ್ ರಿಯಾಲಿಟಿ ಶೋಗಳ ಪಟ್ಟಿ ಮಾಡಿದ್ರೆ, ಜೀ ಕನ್ನಡ ವಾಹಿನಿಯ ಸರಿಗಮಪ 9.5ಟಿವಿಆರ್‌ಗಳಿಸಿ ಮೊದಲ ಸ್ಥಾನದಲ್ಲಿದ್ರೆ, ಭರ್ಜರಿ ಬ್ಯಾಚುಲರ್ಸ್ 7.6 ಮೂಲಕ 2ನೇ ಸ್ಥಾನದಲ್ಲಿದೆ, ಆದ್ರೆ ಕಲರ್ಸ್ ಕನ್ನಡದಲ್ಲಿ ಮಜಾ ಟಾಕಿಸ್ ಶೋನ ಹಿಂದಿಕ್ಕಿ ಬಾಯ್ಸ್ ವರ್ಸಸ್ ಗರ್ಲ್ಸ್ 4 ಟಿವಿಆರ್ ಪಡೆದಿದ್ರೆ, ಮಜಾ ಟಾಕೀಸ್ 3.5 ಪಡೆದುಕೊಂಡಿವೆ.