ಸರಿಗಮಪ ಖ್ಯಾತಿಯಿಂದ ಪ್ರಸಿದ್ಧರಾದ ಪೃಥ್ವಿ ಭಟ್ ಅವರು ತಮ್ಮ ಕುಟುಂಬದ ಅನುಮತಿಯಿಲ್ಲದೆ ಲವ್ ಮ್ಯಾರೇಜ್ ಮಾಡಿಕೊಂಡಿರುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪೃಥ್ವಿ ಭಟ್ ಅವರು ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬುವವರೊಂದಿಗೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಈ ಕುರಿತು ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅವರು ಆಳಲು ತೋಡಿಕೊಂಡಿದ್ದಾರೆ.
ಶಿವಪ್ರಸಾದ್ ಅವರು ಬಿಡುಗಡೆ ಮಾಡಿದ ಆಡಿಯೋದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನನ್ನ ಮಗಳು ಅವನ ಜೊತೆ ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಳು. ಆದರೆ ಈಗ ನೋಡಿದರೆ, ಆಕೆಗೆ ವಶೀಕರಣ ಮಾಡಲಾಗಿದೆ. ನಾವು ಅವಳಿಗೆ ಗಂಡು ಹುಡುಕುತ್ತಿದ್ದೆವು. ಆದರೆ ಈಗ ಆಕೆ ಕುಟುಂಬದವರನ್ನು ಮರೆತು, ಜಾತಿ ಧರ್ಮವನ್ನೂ ಬಿಟ್ಟು ಓಡಿಹೋಗಿದ್ದಾಳೆ. ಇದು ನಮಗೆ ನೋವು ತಂದಿದೆ,” ಎಂದು ಅವರು ಅಳುತ್ತಾ ಹೇಳಿದ್ದಾರೆ.
ಪೃಥ್ವಿ ಭಟ್ ಮನೆ ಬಿಟ್ಟು ಹೋಗಿ ಈಗ 20 ದಿನಗಳಾದರೂ, ಅವರಿಂದ ಯಾವುದೇ ಸಂಪರ್ಕವಾಗಿಲ್ಲವೆಂದು ತಂದೆ ದೂರಿದ್ದಾರೆ. ಅವರ ಪ್ರಕಾರ, ಈ ಎಲ್ಲದಕ್ಕೂ ಕಾರಣ ಜೀ ಕನ್ನಡ ವಾಹಿನಿಯ ನಿರ್ಮಾಪಕರಾಗಿರುವ ನರಹರಿ ದೀಕ್ಷಿತ್ ಎಂದು ಆರೋಪಿಸಿದ್ದಾರೆ. “ನಾನು ಅವರಿಗೆ ನನ್ನ ಮಗಳ ಮದುವೆ ಬಗ್ಗೆ ಹೇಳಿದ್ದೆ. ಜೀ ಕನ್ನಡ ಶೋನಲ್ಲಿ ಯಾರಾದರೂ ಉತ್ತಮ ಆರ್ಟಿಸ್ಟ್ ಇದ್ದರೆ ನೋಡಿ ಎಂದು ಕೇಳಿದ್ದೆ. ಆದರೆ ಅವರು ನನ್ನ ಮಗಳು ಹಾಗೂ ಅಭಿಷೇಕ್ ನಡುವಿನ ಸಂಬಂಧದ ಬಗ್ಗೆ ಗೊತ್ತಿದ್ದರೂ ನಮಗೆ ತಿಳಿಸಲೇ ಇಲ್ಲ,” ಎಂದು ಅವರು ಹೇಳಿದ್ದಾರೆ.
“ನಾವು ಬೆಳೆಸಿದ ಮಗಳು ಇಂತಹ ನಿರ್ಧಾರ ತೆಗೆದುಕೊಳ್ಳುವುದೆಂದು ಕನಸುಲೂ ಅಂದುಕೊಂಡಿರಲಿಲ್ಲ. ಇದು ನಮ್ಮ ಕುಟುಂಬಕ್ಕೆ ದೊಡ್ಡ ನೋವಾಗಿದೆ,” ಎಂದು ಹೇಳಿದರು.
