ತನ್ನ ರೆಕಾರ್ಡ್ಸ್‌ನ ತಾನೇ ಮುರಿಯುವುದರಲ್ಲಿ ಸಿಗೋ ಆನಂದವೇ ಬೇರೆ. ಅದ್ರಲ್ಲಿ ವಿರಾಟ್ ಕೊಹ್ಲಿ ಆ ರೀತಿ ಅದೆಷ್ಟು ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೋ ಲೆಕ್ಕವೇ ಇಲ್ಲ. ಆದ್ರೀಗ ಮಲಯಾಳಂ ಇಂಡಸ್ಟ್ರಿಯ ನಂಬರ್ ಒನ್ ಸ್ಟಾರ್ ಯಾರು ಅಂದ್ರೆ ಅದು ಒನ್ & ಓನ್ಲಿ ಮೋಹನ್‌ಲಾಲ್ ಅಂತಾರೆ. ಅದಕ್ಕೆ ಕಾರಣ ಆಗಿರೋದು ಇತ್ತೀಚೆಗೆ ತೆರೆಕಂಡ ದೃಶ್ಯಂ-3 ಹಾಗೂ ಅದ್ರ ಬಾಕ್ಸ್ ಆಫೀಸ್ ಕಲೆಕ್ಷನ್. ಈ ಕುರಿತ ಒಂದು ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ..
- ಮತ್ತೆ ನಂ.1 ಪಟ್ಟಕ್ಕೇರಿದ ಮೋಹನ್‌ಲಾಲ್.. ದೃಶ್ಯಂ ಧಮಾಕ
- 304 ಕೋಟಿ ಲೋಕ್ಹಾ ರೆಕಾರ್ಡ್ ಬ್ರೇಕ್ ಮಾಡಿದ ದೃಶ್ಯಂ-3
- ಟಾಪ್-3ನಲ್ಲಿದ್ದ ಲಾಲೆಟ್ಟನ್ ಅಗ್ರಸ್ಥಾನಕ್ಕೆ.. ಫ್ಯಾನ್ಸ್ ದಿಲ್ಖುಷ್
- 330 ಕೋಟಿ ಗಳಿಸಿದ ದೃಶ್ಯಂ ಸೀರೀಸ್‌ನ ಸಸ್ಪೆನ್ಸ್ ಕ್ರೈಂ ಡ್ರಾಮಾ
ಮಲಯಾಳಂ ಇಂಡಸ್ಟ್ರಿ ಅಂದಾಕ್ಷಣ ಥಟ್ ಅಂತ ಮೈಂಡ್‌ಗೆ ಬರ್ತಾರೆ ಮೋಹಲ್‌ಲಾಲ್ ಮತ್ತು ಮಮ್ಮುಟ್ಟಿ. ಅದ್ರಲ್ಲೂ 400ಕ್ಕೂ ಅಧಿಕ ಸಿನಿಮಾಗಳಿಂದ ಸತತ 46 ವರ್ಷಗಳಿಂದ ಚಿತ್ರರಂಗದಲ್ಲಿ ಅದೇ ಡಿಮ್ಯಾಂಡ್ ಉಳಿಸಿಕೊಂಡಿರೋ ಲಾಲೆಟ್ಟನ್ ಮೋಹಲ್‌ಲಾಲ್‌ಗೆ ವಿಶೇಷವಾದ ಫ್ಯಾನ್ ಬೇಸ್ ಇದೆ. 66ರ ಹರೆಯದಲ್ಲೂ ಲಾಲ್ ಸಿನಿಮಾಗಳು ಮಾಡೋ ಕಮಾಲ್ ಅಷ್ಟಿಷ್ಟಲ್ಲ.
ಪದ್ಮ ಶ್ರೀ, ಪದ್ಮ ಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮೋಹನ್‌ಲಾಲ್, ಟೆರಿಟೋರಿಯಲ್ ಆರ್ಮಿ ಆಫೀಸರ್ ಕೂಡ ಹೌದು. ಮಲಯಾಳಂ ಚಿತ್ರರಂಗ ನೂರು ಕೋಟಿ ಬಾಕ್ಸ್ ಆಫೀಸ್ ಹಂತ ತಲುಪಲು ಇದೇ ವ್ಯಕ್ತಿ ಕಾರಣಕರ್ತರು. ಆದ್ರೆ ತಂತ್ರಜ್ಞಾನ ಬೆಳೆದಂತೆ, ಸಿನಿಮಾ ಮೇಕಿಂಗ್ ಪ್ಯಾಟ್ರನ್ ಬದಲಾದಂತೆ ಸಾಕಷ್ಟು ಮಂದಿ ಹೊಸ ಪ್ರತಿಭೆಗಳು ಬಂದು ಮೋಹನ್‌ಲಾಲ್ ಹಾಗೂ ಅವ್ರ ಸಿನಿಮಾಗಳಿಗೇ ಸ್ಪರ್ಧೆ ಒಡ್ಡುವಂತಾಯ್ತು.
ಹಾಗಾಗಿಯೇ ಲೂಸಿಫರ್, ಪುಲಿ ಮುರುಗನ್, ಥುಡರುಮ್ ಚಿತ್ರಗಳಿಂದ ಬಾಕ್ಸ್ ಆಫೀಸ್ ಅಗ್ರಸ್ಥಾನದಲ್ಲಿದ್ದ ಲಾಲೆಟ್ಟನ್, ಇತ್ತೀಚೆಗೆ ದಿಢೀರ್ ಅಂತ ಱಂಕಿಂಗ್‌ನಲ್ಲಿ ಕೆಳಕ್ಕೆ ಕುಸಿದಿದ್ದರು. ಆದ್ರೆ ಅವ್ರ ಲೂಸಿಫರ್ ಚಿತ್ರದ ಸೀಕ್ವೆಲ್ ಎಂಪುರಾನ್, ಮತ್ತೆ ಅವ್ರನ್ನ ಟಾಪ್-3ಗೆ ಏರಿಸಿತ್ತು. ಹಾಗಾದ್ರೆ ಮೊದಲ ಸ್ಥಾನದಲ್ಲಿ ಯಾವ ಸಿನಿಮಾ ಇತ್ತು ಅಂದ್ರೆ ಲೋಕ್ಹಾ. ಹೌದು.. 304 ಕೋಟಿ ಗಳಿಕೆಯಿಂದ ದುಲ್ಕರ್ ಸಲ್ಮಾನ್ ನಿರ್ಮಾಣದ ಹಾಗೂ ಕಲ್ಯಾಣಿ ಪ್ರಿಯದರ್ಶನ್ ನಟನೆಯ ಸೂಪರ್ ಹೀರೋ ಫ್ಯಾಂಟಸಿ ಸಿನಿಮಾ ನಂಬರ್ 1 ಅನಿಸಿಕೊಂಡಿತ್ತು.
ಎರಡನೇ ಸ್ಥಾನದಲ್ಲಿ ಎಂಪುರಾನ್, ಮೂರನೇ ಸ್ಥಾನದಲ್ಲಿ 242ಕೋಟಿ ಗಳಿಕೆಯ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ರಾರಾಜಿಸ್ತಿತ್ತು. ಆದ್ರೀಗ ಇತ್ತೀಚೆಗೆ ತೆರೆಕಂಡ ದೃಶ್ಯಂ ಸೀರೀಸ್‌ನ 3ನೇ ಸಿನಿಮಾ ಎಲ್ಲಾ ದಾಖಲೆಗಳನ್ನ ಸರಿಗಟ್ಟಿ, ಗಲ್ಲಾ ಪೆಟ್ಟಿಗೆಯಲ್ಲಿ ಅಗ್ರಸ್ಥಾನಕ್ಕೇರಿದೆ. ಚಿತ್ರತಂಡ ಹಾಗೂ ನಟ ಮೋಹನ್‌ಲಾಲ್ ಅಧಿಕೃತವಾಗಿ ತಮ್ಮ ಪೇಜ್‌ಗಳಲ್ಲಿ ಪೋಸ್ಟ್ ಮಾಡಿರೋ ಪೋಸ್ಟರ್ ಆಧರಿಸಿ, ದೃಶ್ಯಂ-3 ಬರೋಬ್ಬರಿ 330 ಕೋಟಿ ಗ್ರಾಸ್ ಗಳಿಸಿದೆ. ಸೋ.. ಇದೇ ಮಲಯಾಳಂ ಚಿತ್ರರಂಗದ ನಂ.1 ಸಿನಿಮಾ. ಅಲ್ಲಿಗೆ ದೃಶ್ಯಂ-3 ಚಿತ್ರದ ಸ್ಟಾರ್ ಮೋಹನ್‌ಲಾಲ್ ಅವ್ರೇ ಮಾಲಿವುಡ್ ಬಾಕ್ಸ್ ಆಫೀಸ್‌ಗೆ ಕಿಂಗ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
