ರಚಿತಾ ರಾಮ್ ಅನುಪಸ್ಥಿತಿಯಲ್ಲೇ ಸಂಜು ವೆಡ್ಸ್ ಗೀತಾ-2 ಗ್ರ್ಯಾಂಡ್ ಸಕ್ಸಸ್ ಇವೆಂಟ್ ಮಾಡಿದೆ ಚಿತ್ರತಂಡ. ರಿಯಲ್ ಸ್ಟಾರ್ ಉಪೇಂದ್ರ ಬಂದು ತಂಡಕ್ಕೆ ಶುಭಕೋರಿ, ಕಲಾವಿದರು ಹಾಗೂ ತಂತ್ರಜ್ಞರಿಗೆ ಮೊಮೆಂಟೋಸ್ ನೀಡಿದ್ದು ಇಂಟರೆಸ್ಟಿಂಗ್. ಈ ಕುರಿತ ಸ್ಪೆಷಲ್ ಸ್ಟೋರಿ ಇಲ್ಲಿದೆ.
- ರಚ್ಚು ರಚ್ಚಾಟದ ನಡುವೆಯೇ ಸಂಜು ಸಿಲ್ವರ್ ಜ್ಯುಬಿಲಿ
- ಉಪ್ಪಿಯಿಂದ ಶುಭಾಶಯ.. ಮೊಮೆಂಟೋ ವಿತರಣೆ
ಸಂಜು ವೆಡ್ಸ್ ಗೀತಾ-2, ಒಮ್ಮೆ ಅಲ್ಲ, ಎರಡೆರಡು ಬಾರಿ ತೆರೆಕಂಡು ಪ್ರೇಕ್ಷಕರನ್ನ ಭಿನ್ನ, ವಿಭಿನ್ನವಾಗಿ ರಂಜಿಸಿದ ಸಿನಿಮಾ. ರೀ-ರಿಲೀಸ್ ಬಳಿಕ ಯಶಸ್ವೀ 25 ದಿನ ಪೂರೈಸಿರೋ ಸಿನಿಮಾ, ಈಗಲೂ ಒಂದಷ್ಟು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣ್ತಿರೋದು ಇಂಟರೆಸ್ಟಿಂಗ್. ರಚಿತಾ ರಾಮ್- ಶ್ರೀನಗರ ಕಿಟ್ಟಿ ನಟನೆಯ ಫೀಲ್ ಗುಡ್ ಮೂವಿಗೆ ಮೈನಾ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದು, ಛಲವಾದಿ ಕುಮಾರ್ ಬಂಡವಾಳ ಹೂಡಿದ್ದಾರೆ.
ನಾಯಕನಟಿ ರಚಿತಾ ರಾಮ್ ಪ್ರಮೋಷನ್ಸ್‌ಗೆ ಬರ್ತಿಲ್ಲ ಅಂತ ಚಿತ್ರತಂಡ ದೂರಿತ್ತು. ಆದ್ರೆ ಅದಕ್ಕೆ ತಕ್ಕ ಉತ್ತರ ನೀಡಿದ್ರು ರಚ್ಚು. ಆದ್ರೀಗ ಡಿಂಪಲ್ ಕ್ವೀನ್ ಅನುಪಸ್ಥಿತಿಯಲ್ಲೇ ಚಿತ್ರತಂಡ ಗ್ರ್ಯಾಂಡ್ ಸಕ್ಸಸ್ ಸೆಲೆಬ್ರೇಷನ್ ಮಾಡಿದೆ. ರಚಿತಾ ಹೊರತು ಪಡಿಸಿ, ಉಳಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರೊಂದಿಗೆ ಚಿತ್ರತಂಡ ಸಿಲ್ವರ್ ಜ್ಯುಬಿಲಿ ಸಂಭ್ರಮಿಸಿದೆ. ರಿಯಲ್ ಸ್ಟಾರ್ ಉಪೇಂದ್ರ ಬಂದು ಶುಭ ಕೋರುವ ಮೂಲಕ ಮೊಮೆಂಟೋಗಳನ್ನ ವಿತರಿಸಿದ್ದು ವಿಶೇಷ.
ಇದು ಇತ್ತೀಚೆಗೆ ಬಿಡುಗಡೆಗೊಂಡ ಆ್ಯಕ್ಷನ್ ಥ್ರಿಲ್ಲರ್ ಫೀನಿಕ್ಸ್ ಚಿತ್ರದ ಟ್ರೈಲರ್ ಝಲಕ್. ಫೀನಿಕ್ಸ್ ಅಂದ್ರೆ ಗ್ರೀಕ್ ಮೂಲದ ಒಂದು ಕಾಲ್ಪನಿಕ ಪಕ್ಷಿ. ಅದು ಭಸ್ಮವಾದ್ರೂ ಮತ್ತೆ ಎದ್ದು ಬರಲಿದೆ. ಅಂಥದ್ದೇ ಕಂಟೆಂಟ್‌ನಿಂದ ಈ ಸಿನಿಮಾ ತಯಾರಾಗಿದ್ದು, ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರೂ ಇರ್ತಾರೆ ಅನ್ನೋದು ಈ ಚಿತ್ರದ ಒನ್ ಲೈನ್ ಸ್ಟೋರಿ ಆಗಿದೆ. ಹೊಸೂರು ವೆಂಕಟ್ ಕಥೆ ಬರೆದು ನಿರ್ದೇಶನ ಮಾಡಿರೋ ಈ ಸಿನಿಮಾನ ಗೋಕುಲ್ ಕೃಷ್ಣ ಫಿಲಂ ಬ್ಯಾನರ್‌ನಡಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು, ಮಂಗಳೂರು, ಉಡುಪಿ, ಗೋವಾದ ಸುಂದರ ತಾಣಗಳಲ್ಲಿ ಚಿತ್ರ ಸೆರೆಹಿಡಿಯಲಾಗಿದೆ. ನಾಯಕನಟ ಪ್ರತಾಪ್ ಸಿಂಹ ನಟನೆಯ 6ನೇ ಸಿನಿಮಾ ಇದಾಗಿದ್ದು, ರಕ್ಷಿತಾ ನಾಯಕಿಯಾಗಿ ಮಿಂಚಿದ್ದಾರೆ. ಯಶಸ್ವಿನಿ ಗೌಡ ಡೇರಿಂಗ್ ವಿಲನ್ ಆಗಿ ಆರ್ಭಟಿಸಲಿದ್ದಾರಂತೆ.
ಸಂಗೀತ ಸಂಯೋಜಕ ಎ.ಟಿ.ರವೀಶ್ ರ 50ನೇ ಸಿನಿಮಾ ಇದಾಗಿದ್ದು, ಐದು ಹಾಡುಗಳು ಈ ಚಿತ್ರದಲ್ಲಿರಲಿವೆಯಂತೆ.