ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಓಡ್ತಿಲ್ಲ, ಓಟಿಟಿಗೆ ಸೇಲ್ ಆಗ್ತಿಲ್ಲ. ಟಿವಿ ರೈಟ್ಸ್ ಕೂಡ ಬರ್ತಿಲ್ಲ. ಹೊಸ ನಿರ್ಮಾಪಕರು ಬರ್ತಿಲ್ಲ ಎನ್ನುವಾಗಲೇ ಸ್ಯಾಂಡಲ್‌ವುಡ್ ಗೆ ಖುಷಿ ಖಬರ್ ಸಿಕ್ಕಿದೆ. ಅದೂ ಕ್ರೇಜಿ ಕಂಡಿಷನ್ಸ್ ಮೇಲೆ. ಅದು ಏನಂತ ಹೇಳ್ತೀವಿ ಈ ಸ್ಟೋರಿ ಒಮ್ಮೆ ನೀವು ಓದಲೇಬೇಕು.
- ಸ್ಯಾಂಡಲ್‌ವುಡ್‌ಗೆ ಖುಷಿ ಖಬರ್.. ಸ್ಟಾರ್ಸ್ ಸಮಾಗಮ
- ಆರ್. ಚಂದ್ರು ನಂತರ ಒಟ್ಟೊಟ್ಟಿಗೆ 6 ಸಿನಿಮಾ ಅನೌನ್ಸ್ !
- 1 ಬ್ಯಾನರ್.. 6 ಸಿನಿಮಾ.. ಕ್ರೇಜಿಸ್ಟಾರ್ ಖಡಕ್ ಕಂಡಿಷನ್ಸ್
ಹೌದು, ಕನ್ನಡ ಸಿನಿಮಾ ರಂಗ ಕಷ್ಟಕಾಲದಲ್ಲಿದೆ. ಈ ಸಮಯದಲ್ಲಿ ಹೊಸಬರು ಸಿನಿಮಾ ಮಾಡೋಕೆ ಹರಸಾಹಸ ಪಡಬೇಕಿದೆ. ಒಂದೊಳ್ಳೆಯ ಕಂಟೆಂಟ್ ಇದ್ರೂ ಸಹ ಅದಕ್ಕೆ ಹಣ ಹಾಕೋ ಧೈರ್ಯ ತೋರಿಸೋ ನಿರ್ಮಾಪಕರು ಸಿಗೋದು ಕಡಿಮೆ ಆಗಿದೆ. ಹೀಗಿರುವಾಗ ಇಲ್ಲೊಬ್ರು ನಿರ್ಮಾಪಕರು ಒಟ್ಟೊಟ್ಟಿಗೆ 6 ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಪಾಲಿನ ಆಶಾಕಿರಣವಾಗಿ ಕಂಡಿದ್ದಾರೆ. ಅವರೇ ರೂಪದರ್ಶಿ ಅಮ್ರಿತಾ ತಾತಾ.
ಕಲರ್‌ಫುಲ್ ಕಾರ್ಯಕ್ರಮದಲ್ಲಿ ಕನ್ನಡದ ಆರು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಯಾವುದಕ್ಕೂ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ವಿಕ್ರಮ್ ರವಿಚಂದ್ರನ್, ವಿಕ್ಕಿ ವರುಣ್, ಅಜಯ್ ರಾವ್, ವಿನಯ್ ರಾಜ್ ಕುಮಾರ್ ನಟನೆಯಲ್ಲಿ ಚಿತ್ರಗಳು ಅನೌನ್ಸ್ ಆಗಿವೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮುರಳಿ, ರವಿಚಂದ್ರನ್, ಹಂಸಲೇಖ, ಶರಣ್, ಕೆ ಮಂಜು, ಉದಯ್ ಕೆ ಮೆಹ್ತಾ, ರಾಗಿಣಿ, ಕಾರುಣ್ಯ ರಾಮ್ ಸೇರಿದಂತೆ ರಾಜಕೀಯ ವಲಯದಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಹಾಗೂ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ರು. ಅಮ್ರಿತಾ ತಾತಾ ಕನಸಿಗೆ ಶುಭ ಕೋರಿದ್ರು.
ಇನ್ನು ಇದೇ ವೇಳೆ ಮಾತನಾಡಿದ ರವಿಮಾಮ, ಸಖತ್ ಸೀರಿಯಸ್ ಆಗಿ ಕನ್ನಡದ ನಿರ್ದೇಶಕರಿಗೆ ಖಡಕ್ ಕಂಡಿಷನ್ಸ್ ಹಾಕಿದ್ದಾರೆ. ಸಿನಿಮಾ ಮಾಡೋಕೆ ಮೊದಲು ಈ ಕ್ವಾಲಿಟೀಸ್ ಇರ್ಲೇಬೇಕು. ಇಲ್ಲವಾದ್ರೆ ಸಿನಿಮಾ ಮಾಡ್ಲೇಬೇಡಿ ಅಂದಿದ್ದಾರೆ. ಒಂದು ವರ್ಷ ಕೂತು ಕಥೆ ಬರೀರಿ. ಆದ್ರೆ ಸಿನಿಮಾ 6 ತಿಂಗಳೊಳಗೆ ಚಿತ್ರೀಕರಣ, ಡಬ್ಬಿಂಗ್, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ರಿಲೀಸ್ ಮಾಡಬೇಕು. ಸಿನಿಮಾ ಮಾಡೋಕೆ ಮೂರು ವರ್ಷ ನಾಲ್ಕು ವರ್ಷ ಸಮಯ ತೆಗೆದುಕೊಳ್ಳಬೇಡಿ. ಆರು ತಿಂಗಳಲ್ಲಿ ಸಿನಿಮಾ ಮಾಡಿ ಮುಗಿಸಿ ಅಂತ ಕಂಡಿಷನ್ಸ್ ಹಾಕಿದ್ರು.
- ವಿಕ್ರಮ್ ರವಿಚಂದ್ರನ್ ಹೊಸ ಸಿನಿಮಾ ಅನೌನ್ಸ್
- ಮಗನ ಡೈರೆಕ್ಟರ್‌ಗೆ ಕ್ರೇಜಿಸ್ಟಾರ್ ಸಣ್ಣ ಕಿವಿಮಾತು
ಈ ಚಿತ್ರದ ನಿರ್ಮಾಪಕಿ ರವಿಚಂದ್ರನ್ ಅವರ ದೊಡ್ಡ ಫ್ಯಾನ್ ಅಂತೆ. ಮುಂದಿನ ದಿನಗಳಲ್ಲಿ ರವಿಚಂದ್ರನ್ ಅವರ ಜೊತೆಗೂ ಸಿನಿಮಾ ಮಾಡೋ ಹೆಬ್ಬಯಕೆ ತೋಡಿಕೊಂಡರು. ಸದ್ಯ ಅನೌನ್ಸ್ ಆಗಿರೋ ಆರು ಸಿನಿಮಾಗಳಲ್ಲಿ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಗೆ ರಿಷಬ್ ಆರ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಯಾವ ಜಾನರ್ ಸಿನಿಮಾ ? ನಾಯಕಿ ಯಾರು ? ಶೂಟಿಂಗ್ ಯಾವಾಗ ಆರಂಭ..? ಎಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.
ಅಂದಹಾಗೆ ಕಳೆದ ವರ್ಷ ಆರ್.ಚಂದ್ರು ಸಹ ಒಂದೇ ಸಮಯಕ್ಕೆ ಐದು ಸಿನಿಮಾ ಅನೌನ್ಸ್ ಮಾಡಿದ್ರು. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿದ್ರು. ಈಗ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲೊಂದು ಭರವಸೆಯ ಮಳೆ ಸುರಿದಂತೆ ಆಗಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್