ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಓಡ್ತಿಲ್ಲ, ಓಟಿಟಿಗೆ ಸೇಲ್ ಆಗ್ತಿಲ್ಲ. ಟಿವಿ ರೈಟ್ಸ್ ಕೂಡ ಬರ್ತಿಲ್ಲ. ಹೊಸ ನಿರ್ಮಾಪಕರು ಬರ್ತಿಲ್ಲ ಎನ್ನುವಾಗಲೇ ಸ್ಯಾಂಡಲ್‌ವುಡ್ ಗೆ ಖುಷಿ ಖಬರ್ ಸಿಕ್ಕಿದೆ. ಅದೂ ಕ್ರೇಜಿ ಕಂಡಿಷನ್ಸ್ ಮೇಲೆ. ಅದು ಏನಂತ ಹೇಳ್ತೀವಿ ಈ ಸ್ಟೋರಿ ಒಮ್ಮೆ ನೀವು ಓದಲೇಬೇಕು.
- ಸ್ಯಾಂಡಲ್‌ವುಡ್‌ಗೆ ಖುಷಿ ಖಬರ್.. ಸ್ಟಾರ್ಸ್ ಸಮಾಗಮ
- ಆರ್. ಚಂದ್ರು ನಂತರ ಒಟ್ಟೊಟ್ಟಿಗೆ 6 ಸಿನಿಮಾ ಅನೌನ್ಸ್ !
- 1 ಬ್ಯಾನರ್.. 6 ಸಿನಿಮಾ.. ಕ್ರೇಜಿಸ್ಟಾರ್ ಖಡಕ್ ಕಂಡಿಷನ್ಸ್
ಹೌದು, ಕನ್ನಡ ಸಿನಿಮಾ ರಂಗ ಕಷ್ಟಕಾಲದಲ್ಲಿದೆ. ಈ ಸಮಯದಲ್ಲಿ ಹೊಸಬರು ಸಿನಿಮಾ ಮಾಡೋಕೆ ಹರಸಾಹಸ ಪಡಬೇಕಿದೆ. ಒಂದೊಳ್ಳೆಯ ಕಂಟೆಂಟ್ ಇದ್ರೂ ಸಹ ಅದಕ್ಕೆ ಹಣ ಹಾಕೋ ಧೈರ್ಯ ತೋರಿಸೋ ನಿರ್ಮಾಪಕರು ಸಿಗೋದು ಕಡಿಮೆ ಆಗಿದೆ. ಹೀಗಿರುವಾಗ ಇಲ್ಲೊಬ್ರು ನಿರ್ಮಾಪಕರು ಒಟ್ಟೊಟ್ಟಿಗೆ 6 ಸಿನಿಮಾ ಅನೌನ್ಸ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಪಾಲಿನ ಆಶಾಕಿರಣವಾಗಿ ಕಂಡಿದ್ದಾರೆ. ಅವರೇ ರೂಪದರ್ಶಿ ಅಮ್ರಿತಾ ತಾತಾ.
- ವಿಕ್ರಮ್ ರವಿಚಂದ್ರನ್ ಹೊಸ ಸಿನಿಮಾ ಅನೌನ್ಸ್
- ಮಗನ ಡೈರೆಕ್ಟರ್ಗೆ ಕ್ರೇಜಿಸ್ಟಾರ್ ಸಣ್ಣ ಕಿವಿಮಾತು
ಈ ಚಿತ್ರದ ನಿರ್ಮಾಪಕಿ ರವಿಚಂದ್ರನ್ ಅವರ ದೊಡ್ಡ ಫ್ಯಾನ್ ಅಂತೆ. ಮುಂದಿನ ದಿನಗಳಲ್ಲಿ ರವಿಚಂದ್ರನ್ ಅವರ ಜೊತೆಗೂ ಸಿನಿಮಾ ಮಾಡೋ ಹೆಬ್ಬಯಕೆ ತೋಡಿಕೊಂಡರು. ಸದ್ಯ ಅನೌನ್ಸ್ ಆಗಿರೋ ಆರು ಸಿನಿಮಾಗಳಲ್ಲಿ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಗೆ ರಿಷಬ್ ಆರ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಯಾವ ಜಾನರ್ ಸಿನಿಮಾ ? ನಾಯಕಿ ಯಾರು ? ಶೂಟಿಂಗ್ ಯಾವಾಗ ಆರಂಭ..? ಎಲ್ಲದಕ್ಕೂ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
