ಆ್ಯಕ್ಟರ್ ತಲೈವಾ ಡಾಕ್ಟರ್ ರಜನಿ..ಆಲ್‌‌ಟೈಂ ನ್ಯೂ ರೆಕಾರ್ಡ್

ರಜನಿ-ಕಮಲ್ ತಲೈವಾರ್ 173 ಚಿತ್ರದಲ್ಲಿ ಡಾಕ್ಟರ್ ರೋಲ್

Untitled design 2026 06 11T174324.556

75 ವರ್ಷದ ಸೂಪರ್ ಸ್ಟಾರ್ ರಜನಿಕಾಂತ್, ಇಲ್ಲಿಯ ತನಕ ಬರೋಬ್ಬರಿ 172 ಸಿನಿಮಾಗಳನ್ನ ಮಾಡಿದ್ದಾರೆ. ಆದ್ರೆ ಒಮ್ಮೆಯೂ ಡಾಕ್ಟರ್ ರೋಲ್‌ಗೆ ಬಣ್ಣ ಹಚ್ಚಿಲ್ಲ ಅನ್ನೋದು ಅಚ್ಚರಿ. ಇದೀಗ ಆ ಆಲ್‌ಟೈಂ ರೆಕಾರ್ಡ್ ಬ್ರೇಕ್ ಮಾಡಿ ಆ್ಯಕ್ಟರ್ ತಲೈವಾ ಡಾಕ್ಟರ್ ಆಗ್ತಿದ್ದಾರೆ. ಅದ್ಯಾವ ಮೂವಿ..? ಯಾರೊಟ್ಟಿಗೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.

ತಲೈವಾ ರಜನೀಕಾಂತ್ ವಯಸ್ಸು 75 ವರ್ಷ ಅಂದ್ರೆ ನೀವು ನಂಬಲೇಬೇಕು. ಆದ್ರೆ ಅವರು ಮಾತ್ರ ಏಜ್ ಈಸ್ ಜಸ್ಟ್ ಎ ನಂಬರ್ ಅಂತ ಸದಾ ಲವಲವಿಕೆಯಿಂದ ಸಿನಿಮೋತ್ಸಾಹಿ, ಜೀವನೋತ್ಸಾಹಿಯಾಗಿಯೇ ಎಲ್ಲರನ್ನ ಇನ್ಸ್‌‌ಪಯರ್ ಮಾಡ್ತಿರ್ತಾರೆ. ಹೌದು.. ತಮ್ಮ 50 ವರ್ಷಗಳ ಸಿನಿಮಾ ಜರ್ನಿಯಲ್ಲಿ ಸುಮಾರು 172 ಸಿನಿಮಾಗಳನ್ನ ಮಾಡಿರೋ ರಜನಿಕಾಂತ್, 173ನೇ ಚಿತ್ರಕ್ಕೆ ಬಣ್ಣ ಹಚ್ಚಲು ತುದಿಗಾಲಲ್ಲಿ ನಿಂತಿದ್ದಾರೆ.

ಯೆಸ್.. ಈಗಾಗ್ಲೇ ತಲೈವಾರ್-173 ಮೂವಿಗೆ ಕಮಲ್ ಹಾಸನ್ ಬಂಡವಾಳ ಹೂಡುತ್ತಿದ್ದು, 34 ವರ್ಷಗಳ ಬಳಿಕ ರಜನಿಕಾಂತ್-ಕಮಲ್ ಹಾಸನ್ ಜೋಡಿ ಮೋಡಿ ಮಾಡೋಕೆ ಒಂದಾಗ್ತಿದೆ. ಔಟ್ ಅಂಡ್ ಔಟ್ ಗ್ಯಾಂಗ್‌ಸ್ಟರ್ ಮೂವಿ ಇದಾಗಲಿದ್ದು, ಇಬ್ಬರು ಸೂಪರ್ ಸ್ಟಾರ್‌‌ಗಳ ಸಮಾಗಮಕ್ಕೆ ಡೈರೆಕ್ಟರ್ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳ್ತಾರೆ ಎನ್ನಲಾಗಿತ್ತು. ಫಸ್ಟ್‌ಲುಕ್ ಟೀಸರ್ ಕೂಡ ಲಾಂಚ್ ಆಗಿತ್ತು. ಆದ್ರೀಗ ಡೈರೆಕ್ಟರ್ ಬದಲಾಗಿದ್ದಾರೆ. ನೆಲ್ಸನ್ ಟೀಂನಿಂದ ಔಟ್ ಆಗಿದ್ದು, ಆ ಜಾಗಕ್ಕೆ ಓ ಮೈ ಕಡವುಲೇ ಚಿತ್ರದ ಡೈರೆಕ್ಟರ್ ಅಶ್ವತ್ ಮಾರಿಮುತ್ತು ಎಂಟ್ರಿ ಕೊಟ್ಟಿದ್ದಾರೆ.

ಇಂಟರೆಸ್ಟಿಂಗ್‌ ಅಂದ್ರೆ ರಜನಿಕಾಂತ್ ತಮ್ಮ ಇಡೀ ಜೀವಮಾನದಲ್ಲಿ ಮಾಡದೇ ಇರೋ ಹೊಚ್ಚ ಹೊಸ ರೋಲ್‌ವೊಂದನ್ನ ಈ ಚಿತ್ರದಲ್ಲಿ ಮಾಡೋಕೆ ಸೈ ಅಂದಿದ್ದಾರೆ. ಅದೇ ಡಾಕ್ಟರ್ ಪಾತ್ರ. ಅರೇ.. ಇಲ್ಲಿಯ ತನಕ 172 ಚಿತ್ರಗಳ ಪೈಕಿ ಒಂದರಲ್ಲೂ ವೈದ್ಯರ ಪಾತ್ರ ನಿರ್ವಹಿಸಲ್ವಾ ತಲೈವಾ ರಜನಿ ಅಂದ್ರೆ.. ಇಲ್ಲ. ಹಾಗಾಗಿಯೇ ಹೊಸ ಪಾತ್ರದ ಮೂಲಕ ಪ್ರೇಕ್ಷಕರಿಗೆ ಫ್ರೆಶ್ ಫೀಲ್ ಕೊಡೋಕೆ ಸಜ್ಜಾಗಿದ್ದಾರೆ ರಜನಿ. ಲುಕ್ ಟೆಸ್ಟ್ ಕೂಡ ಆಗಿದ್ದು, ಸ್ಟೆಥೊಸ್ಕೋಪ್ ಕೊರಳಿಗೆ ಹಾಕಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ ತಲೈವಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version