ಎಂಜಿಆರ್, ಜಯಲಲಿತಾ ಹಾದಿಯಲ್ಲಿ ತಮಿಳುನಾಡು ಸಿಎಂ ವಿಜಯ್ ಕೂಡ ಹೆಜ್ಜೆ ಹಾಕ್ತಿರೋದು ಇಂಟರೆಸ್ಟಿಂಗ್ ಅನಿಸಿದೆ. ಮುಖ್ಯಮಂತ್ರಿಯಾಗ್ತಿದ್ದಂತೆ ಮೊದಲ ಬಾರಿಗೆ ನಮ್ಮ ಕರುನಾಡಿಗೆ ಕಾಲಿಡ್ತಿರೋ ದಳಪತಿ, ಕೊಲ್ಲೂರಿನ ಮೂಕಾಂಬಿಕಾ ತಾಯಿಯ ಹರಕೆ ತೋರಿಸುತ್ತಿದ್ದಾರೆ. ಇಷ್ಟಕ್ಕೂ ಯಾವಾಗ ಬರ್ತಿದ್ದಾರೆ..? ಯಾಕೆ ಬರ್ತಿದ್ದಾರೆ..? ಅಲ್ಲಿನ ಮಹಿಮೆ ಎಂಥದ್ದು..? ಇಲ್ಲಿದೆ ನೋಡಿ..
- ಕೊಲ್ಲೂರಿನತ್ತ CM ವಿಜಯ್.. ಹರಕೆ ತೀರಿಸ್ತಿರೋ ದಳಪತಿ
- MGR, ಜಯ ಹಾದಿಯಲ್ಲಿ ವಿಜಯ್ ಮೂಕಾಂಬಿಕೆ ಮೊರೆ
- ರಾಜಕೀಯ, ವೈಯಕ್ತಿಕ ಜೀವನದ ಏಳಿಗೆಗೆ ವಿಶೇಷ ಹೋಮ
- ತಮಿಳುನಾಡಿನಿಂದ ಸಿಎಂ ತರ್ತಿರೋ ಗಿಫ್ಟ್ ಏನು ಗೊತ್ತಾ..?!
ಕರುನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ ಬಹುದೊಡ್ಡ ಇತಿಹಾಸ ಹೊಂದಿದೆ. ಶತಮಾನಗಳಿಂದಲೂ ಸಾಕಷ್ಟು ಸುಪ್ರಸಿದ್ಧವಾಗಿರೋ ಈ ಕೊಲ್ಲೂರು ಮೂಕಾಂಬಿಕೆ ತಾಯಿಯ ದರ್ಶನಕ್ಕೆ ವಿಶ್ವದ ಮೂಲೆ ಮೂಲೆಯಿಂದ ಭಕ್ತಾದಿಗಳು ಆಗಮಿಸ್ತಾರೆ. ಅದ್ರಲ್ಲೂ ಸೆಲೆಬ್ರಿಟಿಗಳ ಇಷ್ಟ ದೇವತೆಯೂ ಹೌದು ಮೂಕಾಂಬಿಕೆ. ರಿಷಬ್ ಶೆಟ್ಟಿ, ಮೋಹನ್‌ಲಾಲ್, ಇಳಯರಾಜ ಸೇರಿದಂತೆ ಸಾಕಷ್ಟು ಮಂದಿ ಇಲ್ಲಿಗೆ ಬರ್ತಾನೇ ಇರ್ತಾರೆ.
ಸದ್ಯ ತಮಿಳುನಾಡು ಸಿಎಂ ವಿಜಯ್ ಇದೇ ಜೂನ್ 12ರ ಶುಕ್ರವಾರದಂದು ಕೊಲ್ಲೂರಿಗೆ ಆಗಮಿಸ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಂಗಳೂರಿನ ಏರ್‌ಪೋರ್ಟ್‌ಗೆ ಫ್ಲೈಟ್ ಮೂಲಕ ಬರಲಿದ್ದು, ಅಲ್ಲಿಂದ ರಸ್ತೆ ಪಯಣದ ಮೂಲಕ ಕಾರ್‌ನಲ್ಲಿ ಝೆಡ್ ಪ್ಲಸ್ ಸೆಕ್ಯೂರಿಟಿಯೊಂದಿಗೆ ಕೊಲ್ಲೂರಿಗೆ ತೆರಳಲಿದ್ದಾರೆ. ಸಿಎಂ ಆಗೋಕೆ ಮುನ್ನ ಹೊತ್ತಿದ್ದ ಆ ಮಹತ್ವದ ಹರಕೆಯನ್ನ ತೀರಿಸಲಿದ್ದಾರೆ. ಹಾಗಾದ್ರೆ ವಿಜಯ್ ತಾಯಿ ಮೂಕಾಂಬಿಕೆಗೆ ಏನು ಉಡುಗೊರೆ ಕೊಡ್ತಾರೆ ಅನ್ನೋದೇ ಸಸ್ಪೆನ್ಸ್.
ತಮಿಳುನಾಡಿನ ಮಾಜಿ ಸಿಎಂಗಳಾದ ಎಂಜಿಆರ್ ಹಾಗೂ ಜಯಲಲಿತಾ ಹಾದಿಯಲ್ಲಿ ಸಿಎಂ ವಿಜಯ್ ಕೂಡ ಹೆಜ್ಜೆ ಹಾಕುತ್ತಿದ್ದು, ಎಂಜಿಆರ್ ಮುಖ್ಯಮಂತ್ರಿ ಆದ ಬಳಿಕ ಜಯಲಲಿತಾ ಸಮೇತ ಕೊಲ್ಲೂರಿಗೆ ಭೇಟಿ ಮಾಡಿದ್ರು. ಆಗ ಆ ತಾಯಿಗೆ ಚಿನ್ನದ ಖಡ್ಗವನ್ನ ಗಿಫ್ಟ್ ಆಗಿ ನೀಡಿದ್ರು. ಜಯಲಲಿತಾ ಸಿಎಂ ಆದ ಬಳಿಕ ಆಕೆಯೂ ಆಗಮಿಸಿ, ತುಪ್ಪದ ಅಭಿಷೇಕ ಮಾಡಿಸಿ, ಚಂಡಿಕಾ ಹೋಮ ಮಾಡಿಸಿದ್ರು. ಅಷ್ಟೇ ಅಲ್ಲ, ಮಾಜಿ ಸಿಎಂ ಸ್ಟಾಲಿನ್ ನಾಸ್ತಿಕನೇ ಇರಬಹುದು. ಆದ್ರೆ ಆತನ ಪತ್ನಿ ದುರ್ಗಾ ಮಹಾನ್ ದೈವಭಕ್ತೆ. ಹಾಗಾಗಿ ಆಕೆ ಆಗಾಗ ಕೊಲ್ಲೂರಿಗೆ ಬರ್ತಿರ್ತಾರೆ. ಒಮ್ಮೆ ಚಿನ್ನದ ಕಿರೀಟ ಕೂಡ ಮೂಕಾಂಬಿಕೆಗೆ ಗಿಫ್ಟ್ ನೀಡಿದ್ರು ಸ್ಟಾಲಿನ್ ಪತ್ನಿ. ಇದೀಗ ವಿಜಯ್ ಸರದಿ.
ಆದಿಶಕ್ತಿ ಮೂಕಾಂಬಿಕೆಯ ಪೀಠ, ಸ್ವಯಂಭೂ ಶಿವಲಿಂಗ ಮತ್ತು ಶ್ರೀಚಕ್ರ ಈ ಮೂರೂ ಒಂದೇ ಸರಳ ರೇಖೆಗೆ ಬರೋದು ಕೊಲ್ಲೂರಿನಲ್ಲಿ ಮಾತ್ರ. ಅಷ್ಟೇ ಅಲ್ಲ, ಪ್ರತಿ ಶುಕ್ರವಾರ ಅಲ್ಲೊಂದು ವಿಶೇಷ ಉತ್ಸವ ನಡೆಯುತ್ತೆ. ಅದು ಸಾಪ್ತಾಹಿಕ ರಥೋತ್ಸವ. ಆ ದಿನದ ಪೂಜೆ, ಉತ್ಸವಕ್ಕೆ ಯಾರಾದ್ರೂ ಸಾಕ್ಷಿಯಾದರೆ, ಅವರ ಸಕಲ ದೋಷಗಳೂ ನಿವಾರಣೆ ಆಗುತ್ತವೆ ಅನ್ನೋ ಬಲವಾದ ನಂಬಿಕೆಯಿದೆ. ವಿಜಯ್ ಆಗಮನಕ್ಕೂ ಅದೇ ಕಾರಣವಾಗ್ತಿದೆ. ರಾಜಕೀಯ ಹಾಗೂ ವೈಯಕ್ತಿಕ ಜೀವನದ ದೋಷಗಳ ನಿವಾರಣೆಗೆ ಸಿಎಂ ವಿಜಯ್ ಬರ್ತಿದ್ದು, ಯಾವ ಹೋಮ ಮಾಡಿಸ್ತಾರೆ..? ಏನು ಗಿಫ್ಟ್ ತರ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
