ತಮಿಳು, ತೆಲುಗು ಸಿನಿಮಾರಂಗದ ಪ್ರಮುಖ ನಟಿ ಸಮಂತಾ ರುತ್ ಪ್ರಭು, ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ದ್ವಿತೀಯ ವಿವಾಹವಾಗಿದ್ದಾರೆ. ಹಿಂದೆ ನಟ ನಾಗಚೈತನ್ಯ ಅವರೊಂದಿಗೆ ವಿವಾಹವಾಗಿದ್ದ ಸಮಂತಾ, ಈಗ ತಮ್ಮ ಜೀವನದ ಹೊಸ ಅಧ್ಯಾಯವನ್ನು ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಆರಂಭಿಸಿದ್ದಾರೆ. ಬಹಳ ಸರಳವಾಗಿ ನಡೆದ ಈ ವಿವಾಹ ಸಮಾರಂಭದ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಸಮಂತಾ ಅವರ ಮುಖದ ಮಂದಹಾಸವೇ ಅವರು ಹೊಸ ದಾಂಪತ್ಯ ಜೀವನದಲ್ಲಿ ಸಂಪೂರ್ಣವಾಗಿ ತೃಪ್ತಿ ಹೊಂದಿದ್ದಾರೆ ಎಂಬುದನ್ನು ತಿಳಿಸುತ್ತಿದೆ. ಈ ದೃಶ್ಯಗಳನ್ನು ಕಂಡು ಅವರ ಅಭಿಮಾನಿಗಳು ಮತ್ತು ಆಪ್ತರು ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಜ್ ನಿಡಿಮೋರು ಅವರು ಬಾಲಿವುಡ್‌ನಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ಸೇರಿದಂತೆ ಮುಂತಾದ ಜನಪ್ರಿಯ ವೆಬ್ ಸರಣಿಗಳ ನಿರ್ದೇಶನದ ಮೂಲಕ ಹೆಸರು ಗಳಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಸಮಂತಾ ಮತ್ತು ರಾಜ್ ಒಟ್ಟಿಗೆ ಕೆಲಸ ಮಾಡಿದ್ದು, ತಮ್ಮಿಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಈಗ ಇಬ್ಬರು ಮದುವೆಯಾಗಿ ಹೊಸ ಜೀವನ ಆರಭಿಸಿದ್ದಾರೆ.
ವಿವಾಹದ ಮೆಹೆಂದಿ ಸಮಾರಂಭದ ಫೋಟೋಗಳನ್ನು ಸಮಂತಾ ಅವರ ಸ್ನೇಹಿತಿ ಮೇಘನಾ ವಿನೋದ್ ಅವರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ, ಮೆಹೆಂದಿ ಹಚ್ಚಿಸಿಕೊಂಡು ಸೊಗಸಾಗಿ ಕುಳಿತಿರುವ ಸಮಂತಾ ಅವರನ್ನು ರಾಜ್ ನಿಡಿಮೋರು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸುವ ದೃಶ್ಯ ಕಾಣಸಿಗುತ್ತದೆ. ಇದರ ಜೊತೆಗೆ, ಸಮಂತಾ ಅವರು ರಾಜ್ ಅವರ ಕುಟುಂಬದೊಂದಿಗೆ ಮೊದಲ ಬಾರಿಗೆ ಒಂದಾಗಿದ್ದ ದೃಶ್ಯಗಳ ಫೋಟೋಗಳನ್ನೂ ರಾಜ್ ಅವರ ಸಹೋದರಿ ಶೀತಲ್ ನಿಡಿಮೋರು ಹಂಚಿಕೊಂಡಿದ್ದಾರೆ. ಇದರ ಮೂಲಕ ಹೊಸ ಸೊಸೆಯನ್ನು ರಾಜ್ ಮನೆಯವರೂ ಸಹ ಸೊಸೆಯಾನ್ನ ಅತ್ಯಂತ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ ಎಂದು ತಿಳಿದುಬರುತ್ತದೆ.
ಕಳೆದ ಕೆಲವು ವರ್ಷಗಳಿಂದಲೇ ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸಂಬಂಧದ ಬಗ್ಗೆ ವದಂತಿಗಳು ಹಬ್ಬಿದ್ದರೂ, ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಆದರೆ, ಇಬ್ಬರೂ ಒಟ್ಟಿಗೆ ಕಾಣಸಿಗುವ ಫೋಟೋಗಳು ಆಗಾಗ್ಗೆ ವೈರಲ್ ಆಗುತ್ತಿದ್ದವು. ಈಗ, ಅವರ ವಿವಾಹವೇ ಆ ಎಲ್ಲಾ ಊಹಾಪೋಹಗಳಿಗೆ ವಿರಾಮ ಹಾಕಿದೆ. 38 ವರ್ಷ ವಯಸ್ಸಿನ ಸಮಂತಾ ರುತ್ ಪ್ರಭು ಮತ್ತು 46 ವರ್ಷ ವಯಸ್ಸಿನ ರಾಜ್ ನಿಡಿಮೋರು ಅವರ ಈ ಹೊಸ ಪ್ರಯಾಣವನ್ನು ಕನ್ನಡಿಗರೂ ಸಹ ಆಶೀರ್ವದಿಸುತ್ತಿದ್ದಾರೆ.





