ಟಾಲಿವುಡ್‌ನ ಅಕ್ಕಿನೇನಿ ಫ್ಯಾಮಿಲಿ ಭಾರತೀಯ ಚಿತ್ರರಂಗದಲ್ಲಿ ಇದೀಗ ಮತ್ತೆ ಸದ್ದು ಗದ್ದಲ ಮಾಡ್ತಿದೆ. ಅದಕ್ಕೆ ಕಾರಣ ಆಗಿರೋದು ವಿವಾದಗಳಲ್ಲ. ಬದಲಿಗೆ ಸಿನಿಮಾಗಳ ಸಕ್ಸಸ್. ಯೆಸ್.. ಮಾಜಿ ಅತ್ತಿಗೆ ಸಮಂತಾ ಮಾ ಇಂಟಿ ಬಂಗಾರಂ ಒಂದ್ಕಡೆ ಆದ್ರೆ.. ಮೈದುನ ಅಖಿಲ್ ಅಕ್ಕಿನೇನಿಯ ಲೆನಿನ್ ಮತ್ತೊಂದ್ಕಡೆ. ಬಾಕ್ಸ್ ಆಫೀಸ್ ಬ್ಯಾಂಗ್ ಮಾಡ್ತಿರೋ ಆ ಚಿತ್ರಗಳ ವಿಜಯೋತ್ಸವದಲ್ಲಿ ಪ್ರಮೋಷನ್ ಪಡೆದ ಕನ್ನಡಿಗ ಪ್ರಮೋದ್ ಕುರಿತ ಖಬರ್ ಇಲ್ಲಿದೆ.
- 100 ಕೋಟಿ ಕ್ಲಬ್ ಸೇರಿದ ಸಮಂತಾ ‘ಮಾ ಇಂಟಿ ಬಂಗಾರಂ’
- ಜು-17ಕ್ಕೆ OTTಗೆ.. ಅತಿ ಹೆಚ್ಚು ಗಳಿಸಿದ ಮಹಿಳಾ ಪ್ರಧಾನ ಚಿತ್ರ
ಮಾ ಇಂಟಿ ಬಂಗಾರಂ.. ಜೂನ್ 19ರಂದು ತೆರೆಕಂಡ ಸಮಂತಾ ನಟನೆಯ ಸಿನಿಮಾ. ನಂದಿನಿ ರೆಡ್ಡಿ ನಿರ್ದೇಶನದ ಹಾಗೂ ಸಮಂತಾ ಪತ್ನಿ ರಾಜ್ ಬರೆದ ಕಥೆ ಇದಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 25 ದಿನಕ್ಕೆ ಮೊದಲೇ 100 ಕೋಟಿ ಪೈಸಾ ವಸೂಲ್ ಮಾಡಿ ಅಚ್ಚರಿ ಮೂಡಿಸಿದೆ. ಯೆಸ್.. ಸ್ಯಾಮ್ ಇಲ್ಲಿ ಕ್ಲಾಸ್ & ಮಾಸ್ ಅವತಾರದಲ್ಲಿ ಮಿಂಚು ಹರಿಸುತ್ತಿದ್ದು, ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಸಿದ ಮಹಿಳಾ ಪ್ರಧಾನ ಸಿನಿಮಾ ಅನಿಸಿಕೊಂಡಿದೆ.
ಸಮಂತಾ ತಮ್ಮ ಟ್ಯಾಬ್‌ನಲ್ಲಿ 100 ಕೋಟಿ ಕಲೆಕ್ಷನ್ ಪೋಸ್ಟರ್‌ನ ತೋರಿಸೋ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋ ಮಾ ಇಂಟಿ ಬಂಗಾರಂ, ಇದೇ ಜುಲೈ 17ಕ್ಕೆ ಓಟಿಟಿಗೂ ಎಂಟ್ರಿ ಕೊಡ್ತಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಅನ್ನೋ ಸುದ್ದಿ ಕೂಡ ಹೊರಬಿದ್ದಿದೆ.
- ಅತ್ತಿಗೆ-ಮೈದುನ ಧಮಾಕ.. ಕನ್ನಡಿಗ ಪ್ರಮೋದ್‌ಗೆ ಪ್ರಮೋಷನ್
- ಮಂಡ್ಯದ ಗಂಡು ನಟನೆಗೆ ಕಿಂಗ್ ನಾಗಾರ್ಜುನ್ ಕ್ಲೀನ್ ಬೋಲ್ಡ್
ಮೂರು ದಿನದ ಹಿಂದೆ ತೆರೆಕಂಡ ಚಿತ್ರ ಲೆನಿನ್ ನಟ ಅಕ್ಕಿನೇನಿ ಅಖಿಲ್ ಸಿನಿಮಾ ಕರಿಯರ್‌ಗೆ ಹೊಸ ಆಯಾಮ ತಂದುಕೊಟ್ಟಿದೆ. ಮೂರೇ ದಿನಕ್ಕೆ 50 ಕೋಟಿ ಬಾಕ್ಸ್ ಅಫೀಸ್ ಕ್ಲಬ್ ಸೇರಿರೋ ಲೆನಿನ್, ತೆಲುಗಿನ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ಅಂದಹಾಗೆ ಈ ಚಿತ್ರದಲ್ಲಿ ನಮ್ಮ ಕನ್ನಡದ ಸಾಲು ಸಾಲು ಕಲಾವಿದರು ಬಣ್ಣ ಹಚ್ಚಿರೋದು ವಿಶೇಷ. ಹೌದು.. ರಮೇಶ್ ಇಂದಿರಾ, ಯಶ್ ಶೆಟ್ಟಿ ಹಾಗೂ ಸಲಾರ್ ಫೇಮ್ ಪ್ರಮೋದ್ ಪಂಜು ನಟಿಸಿದ್ದಾರೆ. ಆ ಪೈಕಿ ಮಂಡ್ಯದ ಗಂಡು ಪ್ರಮೋದ್ ಕೊಂಚ ಜಾಸ್ತಿನೇ ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಅದನ್ನ ಕಿಂಗ್ ನಾಗಾರ್ಜುನ ಬಾಯಿಂದಲೇ ಒಮ್ಮೆ ಕೇಳಿ.
ಅಕ್ಕಿನೇನಿ ಕುಟುಂಬದ ಆಧಾರಸ್ತಂಭವಾಗಿರೋ ಕಿಂಗ್ ನಾಗಾರ್ಜುನ್ ಬಾಯಿಂದ ಭೇಷ್ ಅನಿಸಿಕೊಳ್ಳೋದು ತಮಾಷೆಯ ಮಾತಲ್ಲ. ಆದ್ರೆ ವಸಂತ ಅನ್ನೋ ಖಳನಾಯಕನಟ ಪಾತ್ರ ಮಾಡಿರೋ ಪ್ರಮೋದ್ ಪರ್ಫಾಮೆನ್ಸ್‌ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ನಾಗಾರ್ಜುನ್. ಅಷ್ಟೇ ಅಲ್ಲ.. ವಾಟ್ ಎ ಪರ್ಫಾಮರ್ ಅಂದಿರೋ ನಾಗ್, ಮಗನಿಗೆ ಇಂತಹ ಕಲಾವಿದರ ಬಳಿ ಹುಷಾರಾಗಿರೋ ನಿನ್ನಂತವ್ರನ್ನ ಸುತ್ತಿ ಕಂಕಳಲ್ಲಿ ಇಟ್ಕೊಂಡು ಹೋಗಿಬಿಡ್ತಾರೆ ಅಂತ ಜಾಗ್ರತೆ ಮೂಡಿಸೋ ಕಿವಿ ಮಾತು ಕೂಡ ಹೇಳಿರೋದು ಅಚ್ಚರಿ. ಅಂತಹ ಔಟ್‌ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ ಪ್ರಮೋದ್. ಸದ್ಯ ಎಲ್ಲೆಡೆ ಈ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದ್ದು, ಅಖಿಲ್‌ಗೆ ತನ್ನ ಮಾಜಿ ಅತ್ತಿಗೆ ಜೊತೆ ತನಗೂ ಸಕ್ಸಸ್ ಸಿಕ್ಕಿರೋದು ಎಲ್ಲಿಲ್ಲದ ಖುಷಿ ತಂದಿದೆ. ಇತ್ತ ಪ್ರಮೋದ್ ಕೂಡ ಟಾಲಿವುಡ್‌ನಲ್ಲಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋದು ಸುಳ್ಳಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
