• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, January 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸಲ್ಮಾನ್‌ ಖಾನ್‌ ಮದುವೆಯಾದ್ರಾ..? ವೈರಲ್ ಫೋಟೋ ಹಿಂದಿನ ಸತ್ಯ ಏನು..?

ಯಶಸ್ವಿನಿ ಎಂ by ಯಶಸ್ವಿನಿ ಎಂ
January 24, 2026 - 8:44 pm
in Flash News, ಬಾಲಿವುಡ್, ಸಿನಿಮಾ
0 0
0
Untitled design 2026 01 24T203358.009

RelatedPosts

ಮಲಗುವ ಮುನ್ನ ನೀರು ಕುಡಿಯುವುದು ಎಷ್ಟು ಸರಿ ?

30 ದಾಟಿದ ನಂತರ ದಿಡೀರನೆ ತೂಕ ಹೆಚ್ಚಾಗುತ್ತದೆ, ಇದಕ್ಕೆ ನಿಖರ ಕಾರಣ ಇಲ್ಲಿದೆ ನೋಡಿ

ಸಣ್ಣ ಪುಟ್ಟ ವಿಷಯಗಳು ಮರೆತು ಹೋಗುತ್ತಿದೆಯೇ ? ಹಾಗಿದ್ರೆ ಇದು ಬ್ರೈನ್ ಫಾಗ್ ಇರಬಹುದು, ಎಚ್ಚರ !

ಅತ್ಯುತ್ತಮ ಚುನಾವಣಾ ಅಭ್ಯಾಸ ರಾಜ್ಯ ಪ್ರಶಸ್ತಿಗೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆಯ್ಕೆ

ADVERTISEMENT
ADVERTISEMENT

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ಮದುವೆಯಾಗಿದ್ದಾರಾ..? ಎಂಬುದು ದಶಕಗಳಿಂದಲೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ. ಸಲ್ಲು ಮದುವೆಯ ಸುದ್ದಿಗಳು ಆಗಾಗ ಬಂದು ಹೋಗುತ್ತಿರುತ್ತವೆ, ಆದರೆ ಈ ಬಾರಿ ಹರಿದಾಡುತ್ತಿರುವ ಗಾಸಿಪ್ ಮತ್ತು ಫೋಟೋಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ. ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ಯುವತಿಯೊಬ್ಬಳ ಜೊತೆ ಸಲ್ಲು ಕಾಣಿಸಿಕೊಂಡಿರುವ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ.

ಯಾರು ಈ ಕರಿಷ್ಮಾ ಹಜಾರಿಕಾ ?

ಸಲ್ಮಾನ್ ಖಾನ್ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿರುವ ಈ ಯುವತಿಯ ಹೆಸರು ಕರಿಷ್ಮಾ ಹಜಾರಿಕಾ. ಪನ್ವೇಲ್‌ನಲ್ಲಿರುವ ಸಲ್ಮಾನ್ ಅವರ ಫಾರ್ಮ್‌ಹೌಸ್‌ನಲ್ಲಿ ಕರಿಷ್ಮಾ ಹೆಚ್ಚು ಸಮಯ ಕಳೆಯುತ್ತಿರುವುದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಸಲ್ಲು ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕರಿಷ್ಮಾ, ಸಲ್ಮಾನ್ ಅವರ ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ.

ಮದುವೆ ಅಥವಾ ಲಿವಿಂಗ್ ರಿಲೇಶನ್‌ಶಿಪ್ ?

ಈ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಕಾಡ್ಗಿಚ್ಚಿನಂತೆ ಹಬ್ಬಿವೆ. ಸಲ್ಮಾನ್ ಖಾನ್ ರಹಸ್ಯವಾಗಿ ಮದುವೆಯಾಗಿದ್ದಾರಾ ? ಅಥವಾ ಇಬ್ಬರೂ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದಾರಾ ? ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಕಳೆದ ಕೆಲವು ಸಮಯದಿಂದ ಸಲ್ಮಾನ್ ಸಾರ್ವಜನಿಕವಾಗಿ ಯಾರೊಂದಿಗೂ ಕಾಣಿಸಿಕೊಳ್ಳದಿದ್ದರೂ, ಫಾರ್ಮ್‌ಹೌಸ್‌ನಲ್ಲಿ ಕರಿಷ್ಮಾ ಜೊತೆಗಿರುವ ಆಪ್ತ ಕ್ಷಣಗಳು ಹೊಸ ಸಂಶಯಕ್ಕೆ ಎಡೆಮಾಡಿಕೊಟ್ಟಿವೆ.

ಸಲ್ಮಾನ್ ಖಾನ್ ಅವರಿಗೆ ಈಗ 60ರ ಸಮೀಪ ವಯಸ್ಸಾಗಿದ್ದರೂ, ಅವರ ಮದುವೆ ಬಗ್ಗೆ ಇರುವ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಐಶ್ವರ್ಯಾ ರೈ, ಕತ್ರಿನಾ ಕೈಫ್ ಸೇರಿದಂತೆ ಅನೇಕ ನಟಿಯರ ಜೊತೆ ಹೆಸರು ಕೇಳಿಬಂದಿದ್ದ ಸಲ್ಮಾನ್, ಸದ್ಯಕ್ಕೆ ಕರಿಷ್ಮಾ ಹಜಾರಿಕಾ ಅವರೊಂದಿಗೆ ಇರುವ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸಲ್ಮಾನ್‌‌ ಖಾನ್‌ಗೆ ಮೂರು ಮಾರಣಾಂತಿಕ ಕಾಯಿಲೆ..ಫ್ಯಾನ್ಸ್ ಶಾಕ್..!

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‌ಗೆ ಒಂದಲ್ಲ ಎರಡಲ್ಲ ಮೂರು ಮಾರಣಾಂತಿಕ ಕಾಯಿಲೆಗಳಿವೆ. ಈ ಶಾಕಿಂಗ್ ನ್ಯೂಸ್‌‌ನ ಸ್ವತಃ ಸಲ್ಲುನೇ ಬಹಿರಂಗಪಡಿಸಿದ್ದಾರೆ. ಇದನ್ನ ಕೇಳ್ತಿದ್ದಂತೆ ಇಡೀ ಅಭಿಮಾನಿ ಬಳಗ ಆತಂಕಕ್ಕೆ ಈಡಾಗಿದೆ. ಇಷ್ಟಕ್ಕೂ ಅಂಥದ್ದೇನಾಗಿದೆ ಸಲ್ಮಾನ್ ಖಾನ್‌ಗೆ ಅಂತೀರಾ..? ಈ ಡಿಟೈಲ್ಡ್ ಸ್ಟೋರಿ ಒಮ್ಮೆ ನೋಡಿ.

59ರ ಹರೆಯದಲ್ಲೂ ಸಲ್ಮಾನ್ ಖಾನ್ ಸಿನಿಮೋತ್ಸಾಹವನ್ನು ಮೆಚ್ಚಲೇಬೇಕು. ಜಿಮ್‌‌ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುವ ಮೂಲಕ ಚಿತ್ರದ ಪಾತ್ರಕ್ಕೆ ತಕ್ಕನಾಗಿ ದೇಹವನ್ನು ಸಿದ್ದಗೊಳಿಸ್ತಾರೆ. ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿರೋ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಮೂವಿ ಇತ್ತೀಚೆಗೆ ಫ್ಲಾಪ್ ಆಯ್ತು. ಅದಕ್ಕೆ ಕಾರಣ ಹತ್ತು, ಹಲವು

ಹೌದು.. ಈದ್ ಪ್ರಯುಕ್ತ ಭಾನುವಾರವೇ ಸಿನಿಮಾನ ರಿಲೀಸ್ ಮಾಡಿದ್ದು. ಬಿಡುಗಡೆಗೂ ಮೊದಲೇ ಕನಿಷ್ಠ 200 ಕೋಟಿ ಬ್ಯುಸಿನೆಸ್ ಮಾಡುತ್ತೆ ಅಂದಿದ್ದು, ಸೇರಿದಂತೆ ಸಾಕಷ್ಟು ಕಾರಣಗಳನ್ನ ಪಂಡಿತರು ನೀಡ್ತಾರೆ. ಆದ್ರೆ ಸ್ವತಃ ಸಲ್ಮಾನ್ ಖಾನ್ ನೀಡಿದ ಕಾರಣಗಳನ್ನ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ. ಇತ್ತೀಚೆಗೆ ಫೇಮಸ್ ಕಪಿಲ್ ಶರ್ಮಾ ಶೋಗೆ ತೆರಳಿದ್ದ ಸಲ್ಲು, ತನಗಿರೋ ಕಾಯಿಲೆಗಳ ಲಿಸ್ಟ್ ರಿವೀಲ್ ಮಾಡಿದ್ದಾರೆ.

ಸಲ್ಮಾನ್‌‌ ಖಾನ್‌ಗೆ ಇರೋದು ಒಂದಲ್ಲ, ಎರಡಲ್ಲ. ಬರೋಬ್ಬರಿ ಮೂರು ಮಾರಣಾಂತಿಕ ಕಾಯಿಲೆಗಳು. ಬ್ರೈನ್ ಅನ್ಯೂರಿಸಂ, ಟ್ರೈಜಿಮಿನಲ್ ನ್ಯೂರಾಲ್ಜಿಯಾ ಹಾಗೂ ಅಪಧಮನಿಯ ವಿರೂಪ(AVM).. ಹೀಗೆ ಮೆದುಳು ಹಾಗೂ ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರೋ ಸಲ್ಲು, ಇಂತಹ ಸಮಸ್ಯೆಗಳ ನಡುವೆ ಕೂಡ ನಾನು ಕೆಲಸ ಮಾಡ್ತಿದ್ದೀನಿ. ಡ್ಯಾನ್ಸ್ ಮಾಡ್ತಿದ್ದೀನಿ ಎಂದಿದ್ದಾರೆ.

ಬ್ರೈನ್ ಅನ್ಯೂರಿಸಂ- ಮೆದುಳಿನಲ್ಲಿ ಅಥ್ವಾ ಅದರ ಸುತ್ತಲಿನ ರಕ್ತನಾಳದ ದುರ್ಬಲ ಪ್ರದೇಶದಲ್ಲಿ ಉಬ್ಬುವುದು. ಸಾಮಾನ್ಯವಾಗಿ ಅನ್ಯೂರಿಸಂಗಳು ಚಿಕ್ಕದಾಗಿರುತ್ತವೆ. ಅವು ಸಮಸ್ಯೆ ಉಂಟುಮಾಡಲ್ಲ. ಆದ್ರೆ ಛಿದ್ರಗೊಂಡ ಮೆದುಳಿನ ಅನ್ಯೂರಿಸಂ ಜೀವಕ್ಕೆ ಅಪಾಯಕಾರಿ. ತೀವ್ರ ತಲೆ ನೋವು, ಅತ್ಯಂತ ಕೆಟ್ಟ ತಲೆನೋವು ಇದರ ಲಕ್ಷಣ ಆಗಿರುತ್ತದೆ. ಗುಳ್ಳೆಯಂತಹ ಉಬ್ಬು ಬಂದು, ಅದರೊಳಕ್ಕೆ ರಕ್ತ ನುಗ್ಗಿದಾಗ ರಕ್ತನಾಳ ಇನ್ನೂ ಹೆಚ್ಚು ದೂರ ವಿಸ್ತರಿಸುತ್ತದೆ. ಬಲೂನ್ ತೆಳುವಾದಂತೆ ಅಥ್ವಾ ಗಾಳಿಯಿಂದ ತುಂಬಿದ ಬಲೂನ್ ಸಿಡಿಯುವಂತೆ ಇದು ಒಡೆಯುವ ಸಾಧ್ಯತೆಯಿದೆ.

ಟ್ರೈಜಿಮಿನಲ್ ನ್ಯೂರಾಲ್ಜಿಯಾ- ಇದಕ್ಕೆ ಟ್ರೈಜಿಮಿನಲ್ ನರಶೂಲೆ ಎನ್ನಲಾಗುತ್ತೆ. ಮುಖದ ಒಂದು ಬದಿಯಲ್ಲಿ ತೀವ್ರವಾದ, ಹಠಾತ್, ಆಘಾತ ತರಹದ ನೋವು ಕೆಲ ಸೆಕೆಂಡ್‌‌ಗಳಿಂದ ನಿಮಿಷಗಳ ವರೆಗೂ ಇರಲಿದೆ. ಇದು ಮುಖದಿಂದ ಮೆದುಳಿಗೆ ಸಂಕೇತ ಸಾಗಿಸುವ ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ. ಹಲ್ಲುಜ್ಜುವಾಗ ಅಥ್ವಾ ಮೇಕಪ್ ಹಾಕುವಾಗ ಸ್ವಲ್ಪ ಸ್ಪರ್ಶವಾದ್ರೂ ಸಿಕ್ಕಾಪಟ್ಟೆ ನೋವಾಗುತ್ತದಂತೆ

ಅಪಧಮನಿಯ ವಿರೂಪ(AVM)- ಇದು ರಕ್ತನಾಳಗಳ ಗೋಜಲು ಆಗಿದ್ದು, ಅಪಧಮನಿಗಳು ಮತ್ತು ರಕ್ತನಾಳಗಳ ನಡುವೆ ಅನಿಯಮಿತ ಸಂಪರ್ಕಗಳನ್ನು ಸೃಷ್ಠಿಸುತ್ತದೆ. ಇದು ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ಅಲ್ಲದೆ ಅಂಗಾಂಶಗಳು ಆಮ್ಲಜನಕ ಪಡೆಯುವುದನ್ನು ತಡೆಯುತ್ತದೆ. ಮೆದುಳು ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಎವಿಎಂ ಸಂಭವಿಸಬಹುದು. ಮೆದುಳಿನಲ್ಲಿರೋ ಎವಿಎಂ ಸಿಡಿದರೆ, ಅದು ಮೆದುಳಿನ ರಕ್ತಸ್ರಾವಕ್ಕೆ ಕಾರಣ ಆಗಬಹಹುದು. ಇದರಿಂದ ಪಾರ್ಶ್ವವಾಯು ಅಥ್ವಾ ಬ್ರೈನ್‌ಗೆ ಡ್ಯಾಮೇಜ್ ಆಗಬಹುದು.

ಇಷ್ಟೆಲ್ಲಾ ಸಮಸ್ಯೆಗಳಿರೋ ಸಲ್ಮಾನ್ ಖಾನ್‌ಗೆ ಎಷ್ಟು ಸಾವಿರ ಕೋಟಿ ಇದ್ದು ಏನು ಪ್ರಯೋಜನ..? ಸುಖದ ಸುಪೊತ್ತಿಗೆಯಲ್ಲಿದ್ದರೂ ಸಹ ನೆಮ್ಮದಿಯ ಜೀವನವಿಲ್ಲದಂತಾಗಿದೆ. ಅದೇ ಕಾರಣಕ್ಕೆ ಮದ್ವೆ ಕೂಡ ಆಗದೆ ಏಕಾಂಗಿಯಾಗೇ ಉಳಿದುಬಿಟ್ಟಿದ್ದಾರೆ. ಒಂದ್ಕಡೆ ಲಾರೆನ್ಸ್ ಬಿಷ್ಣೋಯ್‌ನಿಂದ ಜೀವ ಭಯ, ಮತ್ತೊಂದೆಡೆ ತನಗಿರೋ ಮಾರಣಾಂತಿಕ ವ್ಯಾದಿಗಳು. ಈ ಮಧ್ಯೆ ಆತನ ಜೀವನ ನಿಜಕ್ಕೂ ನೀರಿನ ಮೇಲಿನ ಗುಳ್ಳೆಯಂತೆ. ಸದ್ಯ ಫ್ಯಾನ್ಸ್ ಆತಂಕಗೊಂಡಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಅಂತ ನೆಚ್ಚಿನ ನಾಯಕನಟನ ಅನಾರೋಗ್ಯಕ್ಕೆ ಮರುಗುತ್ತಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 01 25T064522.591

ನಿಮ್ಮ ರಾಶಿಭವಿಷ್ಯ ತಿಳಿಯಿರಿ: ಜನವರಿ 25ರ ಭಾನುವಾರ ಯಾರಿಗೆ ಲಾಭ ? ಯಾರಿಗೆ ನಷ್ಟ ?

by ಯಶಸ್ವಿನಿ ಎಂ
January 25, 2026 - 6:48 am
0

Weight gain and fatigue after 30 vitamin deficiency remedies (3)

ಓವರ್ ಥಿಂಕಿಂಗ್‌ ಮಾಡ್ತೀರಾ..? ಇದರಿಂದ ಮುಕ್ತಿ ಪಡೆಯಲು ಇಲ್ಲಿದೆ ವೈಜ್ಞಾನಿಕ ಮಾರ್ಗ

by ಯಶಸ್ವಿನಿ ಎಂ
January 24, 2026 - 11:38 pm
0

Weight gain and fatigue after 30 vitamin deficiency remedies (1)

ಮಲಗುವ ಮುನ್ನ ನೀರು ಕುಡಿಯುವುದು ಎಷ್ಟು ಸರಿ ?

by ಯಶಸ್ವಿನಿ ಎಂ
January 24, 2026 - 11:13 pm
0

Weight gain and fatigue after 30 vitamin deficiency remedies

30 ದಾಟಿದ ನಂತರ ದಿಡೀರನೆ ತೂಕ ಹೆಚ್ಚಾಗುತ್ತದೆ, ಇದಕ್ಕೆ ನಿಖರ ಕಾರಣ ಇಲ್ಲಿದೆ ನೋಡಿ

by ಯಶಸ್ವಿನಿ ಎಂ
January 24, 2026 - 10:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Weight gain and fatigue after 30 vitamin deficiency remedies (1)
    ಮಲಗುವ ಮುನ್ನ ನೀರು ಕುಡಿಯುವುದು ಎಷ್ಟು ಸರಿ ?
    January 24, 2026 | 0
  • Weight gain and fatigue after 30 vitamin deficiency remedies
    30 ದಾಟಿದ ನಂತರ ದಿಡೀರನೆ ತೂಕ ಹೆಚ್ಚಾಗುತ್ತದೆ, ಇದಕ್ಕೆ ನಿಖರ ಕಾರಣ ಇಲ್ಲಿದೆ ನೋಡಿ
    January 24, 2026 | 0
  • Untitled design 2026 01 24T223052.636
    ಸಣ್ಣ ಪುಟ್ಟ ವಿಷಯಗಳು ಮರೆತು ಹೋಗುತ್ತಿದೆಯೇ ? ಹಾಗಿದ್ರೆ ಇದು ಬ್ರೈನ್ ಫಾಗ್ ಇರಬಹುದು, ಎಚ್ಚರ !
    January 24, 2026 | 0
  • Untitled design 2026 01 24T220148.890
    ಅತ್ಯುತ್ತಮ ಚುನಾವಣಾ ಅಭ್ಯಾಸ ರಾಜ್ಯ ಪ್ರಶಸ್ತಿಗೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆಯ್ಕೆ
    January 24, 2026 | 0
  • Untitled design 2026 01 24T201659.099
    ಸಚಿವರಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್: ಅಧಿವೇಶನಕ್ಕೆ ಕಡ್ಡಾಯ ಹಾಜರಾಗುವಂತೆ ಖಡಕ್ ಸೂಚನೆ
    January 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version