ಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಮಿಂಚು ಹರಿಸುತ್ತಿರೋ ಕನ್ನಡದ ರುಕ್ಕಮ್ಮನಿಗೆ ಡಿಮ್ಯಾಂಡೋ ಡಿಮ್ಯಾಂಡ್. ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ ದಿಲ್ ದೋಚಿರೋ ಈ ಚೆಂದುಳ್ಳಿ ಚೆಲುವೆ, ಅವ್ರ ನೆಕ್ಸ್ಟ್ ಪ್ರಾಜೆಕ್ಟ್ಗೆ ಆಫರ್ ಪಡೆದಿದ್ದಾರೆ. ಇಷ್ಟಕ್ಕೂ ಅ ಸಿನಿಮಾ ಯಾವುದು..? ಹೀರೋ ಯಾರು..? ಯಾವ ಜಾನರ್ ಅನ್ನೋದಕ್ಕೆ ಈ ಸ್ಪೆಷಲ್ ಸ್ಟೋರಿ ಒಮ್ಮೆ ನೋಡಿ.
- ಮಣಿರತ್ನಂ ದಿಲ್ ಗೆದ್ದ ಕನ್ನಡತಿ.. ರುಕ್ಕುಗೆ ಸಖತ್ ಡಿಮ್ಯಾಂಡ್
- ಥಗ್ ಲೈಫ್ ಬಳಿಕ ಸೆಟ್ಟೇರಲಿದೆ ಮಣಿರತ್ನಂ ನ್ಯೂ ಲವ್ ಸ್ಟೋರಿ
- ಸೇತುಪತಿ ಸಿನಿಮಾದಲ್ಲಿ ಸಖತ್ ಸ್ಕೋರ್ ಮಾಡಿದ ರುಕ್ಮಿಣಿ..!
- ಸಪ್ತಸಾಗರದ ಪುಟ್ಟಿ ಜೊತೆ ನವೀನ್ ಪೋಲಿಶೆಟ್ಟಿ ರೊಮ್ಯಾನ್ಸ್
ಅಂದ ಹಾಗೂ ಅದೃಷ್ಠ ಎರಡೂ ಕೈ ಹಿಡಿದ್ರೆ ಸಾಕು ನಟಿಮಣಿಯರು ನಿರೀಕ್ಷೆಗೂ ಮೀರಿ ಬೆಳೆಯುತ್ತಾರೆ. ಸದ್ಯ ನಮ್ಮ ಕನ್ನಡದ ಚೆಂದುಳ್ಳಿ ಚೆಲುವೆ ರುಕ್ಮಿಣಿ ವಸಂತ್ ಪರಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ಹೌದು.. ಕನ್ನಡದಿಂದ ತೆಲುಗಿಗೆ ಕಾಲಿಟ್ಟಿದ್ದ ರುಕ್ಕಮ್ಮನಿಗೆ ಕಾಲಿವುಡ್ ಕೂಡ ರೆಡ್ ಕಾರ್ಪೆಟ್ ಹಾಸಿತ್ತು. ಒಂದಲ್ಲ ಎರಡೆರಡು ತಮಿಳು ಸಿನಿಮಾ ಮಾಡಿದ್ದಾರೆ ಈ ಕನ್ನಡತಿ.
ಇಂದು ವಿಜಯ್ ಸೇತುಪತಿ ಜೊತೆ ರುಕ್ಮಿಣಿ ಸ್ಕ್ರೀನ್ ಶೇರ್ ಮಾಡಿರೋ ಏಸ್ ಚಿತ್ರ ವಿಶ್ವದಾದ್ಯಂತ ತೆರೆಕಂಡಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ ಸಹ, ರುಕ್ಕಮ್ಮನ ನಟನೆಗೆ ತಮಿಳು ಮಂದಿ ಫಿದಾ ಆಗಿದ್ದಾರೆ. ಅದರಲ್ಲೂ ಮಣಿರತ್ನಂ ಅಂತಹ ಲೆಜೆಂಡರಿ ಡೈರೆಕ್ಟರ್ ರುಕ್ಮಿಣಿ ವಸಂತ್ನ ತಮ್ಮ ಮುಂದಿನ ಸಿನಿಮಾಗೆ ನಾಯಕಿಯನ್ನ ಮಾಡೋಕೆ ಸಜ್ಜಾಗಿದ್ದಾರೆ.
ಹೌದು.. ಸದ್ಯ ಶಿವಕಾರ್ತಿಕೇಯನ್ ಜೊತೆ ಮದ್ರಾಸಿ ಸಿನಿಮಾ ಮಾಡ್ತಿರೋ ರುಕ್ಮಿಣಿ ವಸಂತ್, ಪ್ರಶಾಂತ್ ನೀಲ್-ಎನ್ಟಿಆರ್ ಸಿನಿಮಾಗೂ ನಾಯಕಿ ಆಗಿದ್ದಾರೆ. ಈ ಮಧ್ಯೆ ಏಳು ಬಾರಿ ನ್ಯಾಷನಲ್ ಅವಾರ್ಡ್ ಪಡೆದ ಪಲ್ಲವಿ ಅನುಪಲ್ಲವಿ, ರೋಜಾ, ಬಾಂಬೆ, ದಿಲ್ ಸೆ, ಗೀತಾಂಜಲಿ ಫೇಮ್ ಡೈರೆಕ್ಟರ್ ಮಣಿರತ್ನಂ ಹೊಚ್ಚ ಹೊಸ ಸಿನಿಮಾಗೆ ಇವರೇ ನಾಯಕನಟಿ. ನವೀನ್ ಪೋಲಿಶೆಟ್ಟಿ ಲೀಡ್ನಲ್ಲಿ ಕಾಣಸಿಗಲಿರೋ ಈ ಸಿನಿಮಾದಲ್ಲಿ ರುಕ್ಮಿಣಿ ಹೀರೋಯಿನ್ ಆಗಲಿದ್ದು, ಔಟ್ ಅಂಡ್ ಔಟ್ ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದೆಯಂತೆ.
ಪೊನ್ನಿಯಿನ್ ಸೆಲ್ವನ್ ಹಿಸ್ಟಾರಿಕಲ್ ಮೂವಿಯನ್ನ ಎರಡೆರಡು ಭಾಗಗಳಲ್ಲಿ ಚಿತ್ರಿಸಿದ ಮಣಿರತ್ನಂ, ಅದಾದ ಬಳಿಕ ಸದ್ಯ ಥಗ್ ಲೈಫ್ ಸಿನಿಮಾದ ರಿಲೀಸ್ನಲ್ಲಿ ಬ್ಯುಸಿ ಆಗಿದ್ದಾರೆ. ಇದೇ ಜೂನ್ 5ಕ್ಕೆ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ತೆರೆಗೆ ಬರ್ತಿದ್ದು, ಈ ಗ್ಯಾಂಗ್ಸ್ಟರ್ ಮೂವಿ ಬೆನ್ನಲ್ಲೇ ಲವ್ ಸ್ಟೋರಿ ಅನೌನ್ಸ್ ಮಾಡಿದ್ದಾರೆ ಮಣಿರತ್ನಂ. ಅದಕ್ಕೆ ಕನ್ನಡತಿಯನ್ನ ಆರಿಸಿಕೊಂಡಿರೋದು ಇಂಟರೆಸ್ಟಿಂಗ್.
ಕನ್ನಡದ ಜೊತೆ ಜೊತೆಗೆ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಬಹುಬೇಡಿಕೆಯ ಗ್ಲಾಮರ್ ಡಾಲ್ ಅನಿಸಿಕೊಳ್ತಿರೋ ಸಪ್ತ ಸಾಗರದ ಪುಟ್ಟಿ ರುಕ್ಮಿಣಿ ವಸಂತ್, ಫಾಸ್ಟ್ ಆಗಿ ಶೈನ್ ಆಗ್ತಿದ್ದಾರೆ. ನಮ್ಮ ಕನ್ನಡತಿ ಹೀಗೆ ದೊಡ್ಡ ದೊಡ್ಡ ಪರಭಾಷಾ ಸ್ಟಾರ್ಸ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ಸ್ ಜೊತೆ ಕೆಲಸ ಮಾಡ್ತಿರೋದು ಖುಷಿಯ ವಿಚಾರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್