ನ್ಯಾಷನಲ್ ಕ್ರಶ್ ರಶ್ಮಿಕಾನೇ ಅದೃಷ್ಠವಂತೆ ಅಂದ್ಕೊಳ್ತಿದ್ರೆ, ಆಕೆಯನ್ನ ಮೀರಿಸೋ ಮತ್ತೊಬ್ಬ ಕನ್ನಡತಿ ಕೂಡ ಇದ್ದಾರೆ. ಆಕೆಯಂತೆ ಈಕೆಗೂ ಅಂದ ಹಾಗೂ ಅದೃಷ್ಠ ಎರಡೂ ಒಟ್ಟೊಟ್ಟಿಗೆ ಕೈಗೂಡಿವೆ. ಯೆಸ್.. ಆರೇ ವರ್ಷದಲ್ಲಿ ಪರಭಾಷಿಗರು ಕೂಡ ರೆಡ್ ಕಾರ್ಪೆಟ್ ಹಾಸುವಂತೆ ಮಾಡಿದ್ದಾರೆ ರುಕ್ಮಿಣಿ ವಸಂತ್. ಇದೀಗ ರುಕ್ಕು ಕಾಂತಾರ, ಟಾಕ್ಸಿಕ್‌ನಂತಹ ಮಾಸ್ಟರ್‌ಪೀಸ್‌ಗಳ ಕ್ವೀನ್.
- ರಾಕಿಭಾಯ್ ‘ಟಾಕ್ಸಿಕ್’ ಅಡ್ಡಾಗೆ ರುಕ್ಕು.. ಮುಂಬೈ ರೌಂಡ್ಸ್
- ಆರೇ ವರ್ಷದಲ್ಲಿ ಪರಭಾಷಿಗರ ದಿಲ್ ದೋಚಿದ ಕನ್ನಡತಿ..!
- ಕಾಂತಾರ-1 ಮುಗಿಸಿ ಯಶ್ ಟಾಕ್ಸಿಕ್‌ಗೆ ಬಣ್ಣ ಹಚ್ಚಿದ ನಟಿ..!
- Jr NTR, ಶಿವಕಾರ್ತಿಕೇಯನ್‌ಗೂ ರುಕ್ಕಮ್ಮನೇ ಫೇವರಿಟ್
ಬೀರ್‌ಬಲ್ ಚಿತ್ರದ ಮೂಲಕ ಬಣ್ಣ ಹಚ್ಚಿದ ರುಕ್ಮಿಣಿ ವಸಂತ್, ರಕ್ಷಿತ್ ಶೆಟ್ಟಿ, ಗಣೇಶ್, ಶ್ರೀಮುರಳಿ, ಶಿವಣ್ಣ.. ಹೀಗೆ ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲೇ ಅವಕಾಶಗಳನ್ನ ಪಡೆದರು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರುಕ್ಕು, ಕನ್ನಡಿಗರ ಅಚ್ಚುಮೆಚ್ಚಿನ ನಟಿ ಜೊತೆ ನಿರ್ದೇಶಕ, ನಿರ್ಮಾಪಕರ ಹಾಗೂ ಸ್ಟಾರ್‌ಗಳ ಫೇವರಿಟ್ ಅನಿಸಿಕೊಂಡ್ರು. ಹಿಂದಿಯ ಅಪ್‌ಸ್ಟಾರ್ಟ್ಸ್, ತೆಲುಗಿನ ಅಪ್ಪುಡೋ ಇಪ್ಪುಡೋ ಎಪ್ಪುಡೋ ಹಾಗೂ ತಮಿಳಿನ ಏಸ್ ಚಿತ್ರದಿಂದ ಮೂರು ಪರಭಾಷಾ ಚಿತ್ರರಂಗಗಳಿಗೂ ಕಾಲಿಟ್ಟರು.
ನಿಖಿಲ್ ಸಿದ್ಧಾರ್ಥ್ ಹಾಗೂ ವಿಜಯ್ ಸೇತುಪತಿ ಜೊತೆ ಮಿಂಚಿದ ಈಕೆ ಸದ್ಯ ತಮಿಳಿನ ಶಿವಕಾರ್ತಿಕೇಯನ್ ಜೊತೆ ಮದರಾಸಿ ಹಾಗೂ ಜೂನಿಯರ್ ಎನ್‌ಟಿಆರ್ ಜೊತೆ ಡ್ರ್ಯಾಗನ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಕನ್ನಡದ ಮಾಸ್ಟರ್‌ಪೀಸ್ ಸಿನಿಮಾ ಕಾಂತಾರ ಪ್ರೀಕ್ವೆಲ್ ಕಾಂತಾರ-1 ಶೂಟಿಂಗ್ ಮುಗಿಸಿ, ಮುಂಬೈಗೆ ಹಾರಿದ್ದಾರೆ. ಅಲ್ಲಿ ಕೂಡ ಕಡಲನ್ನು ಹುಡುಕಿ ಹೊರಟ ಈ ಪೋರಿ, ತಮಗಿಷ್ಟ ಬಂದ ಕಡೆ ಸುತ್ತಾಡ್ತಾ ಎಂಜಾಯ್ ಮಾಡಿದ್ದಾರೆ.
ಅಲ್ಲದೆ ಸೈಲೆಂಟ್ ಆಗಿ ರಾಕಿಭಾಯ್ ಯಶ್ ನಟಿಸಿ, ನಿರ್ಮಿಸ್ತಿರೋ ಟಾಕ್ಸಿಕ್ ಸಿನಿಮಾಗೂ ಎಂಟ್ರಿ ಕೊಟ್ಟಿದ್ದಾರೆ. ಹೌದು.. ಈಗಾಗ್ಲೇ ಒಂದು ಶೆಡ್ಯೂಲ್ ಮಾಡಿ, ಮುಗಿಸಿರೋ ರುಕ್ಮಿಣಿ ವಸಂತ್, ಮುಂಬೈನಲ್ಲೇ ಬೀಡು ಬಿಟ್ಟಿದ್ದಾರೆ. ಅಂದಹಾಗೆ ಈಗಾಗ್ಲೇ ಟಾಕ್ಸಿಕ್ ಅಡ್ಡಾಗೆ ಬಾಲಿವುಡ್‌ನ ಕಿಯಾರಾ, ಸೌತ್‌ನ ನಯನತಾರಾ ಅಂತಹ ಚೆಲುವೆಯರು ಬಂದಾಗಿದೆ. ಈಗ ರುಕ್ಕಮ್ಮನ ಎಂಟ್ರಿಯಿಂದ ಟಾಕ್ಸಿಕ್ ಅಡ್ಡಾ ಕಂಪ್ಲೀಟ್ ಗ್ಲಾಮರ್ ದುನಿಯಾ ಆಗಿ ಬದಲಾಗಿದೆ. ಒಂದ್ಕಡೆ ಯಶ್ ಸ್ವ್ಯಾಗ್, ಮತ್ತೊಂದ್ಕಡೆ ಚೆಂದುಳ್ಳಿ ಚೆಲುವೆಯರ ಬೆಡಗು-ಬಿನ್ನಾಣ ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಿಸ್ತಿದೆ.
ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಆಗಲಿ, ಯಶ್ ಆಗಲಿ ಅಥ್ವಾ ರುಕ್ಮಿಣಿ ವಸಂತ್ ಆಗಲಿ ಈ ವಿಚಾರವನ್ನು ಎಲ್ಲೂ ಅಫಿಶಿಯಲ್ ಆಗಿ ರಿವೀಲ್ ಮಾಡಿಲ್ಲ. ಆದ್ರೆ ರುಕ್ಮಿಣಿ ವಸಂತ್ ವಿಕಿಪೀಡಿಯಾದಲ್ಲಿ ಟಾಕ್ಸಿಕ್ ಸಿನಿಮಾ ಅಪ್ಡೇಟ್ ಆಗಿದೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಒಟ್ಟೊಟ್ಟಿಗೆ ತಯಾರಾಗ್ತಿರೋ ಈ ಸಿನಿಮಾ, ವಿಶ್ವ ಸಿನಿದುನಿಯಾದಲ್ಲಿ ಪ್ರೇಕ್ಷಕರ ನಿರೀಕ್ಷೆಗೂ ಮೀರಿದಷ್ಟು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ, ಯಶ್ ಕಥೆ ಬರೆದ ಟಾಕ್ಸಿಕ್ ಸಿನಿಮಾ ಈಗಾಗ್ಲೇ ರಿಲೀಸ್ ಡೇಟ್ ಕನ್ಫರ್ಮ್ ಮಾಡಿದೆ. ಇದೇ 2026ರ ಮಾರ್ಚ್ 19ರಂದು ತೆರೆಗಪ್ಪಳಿಸುವುದು ಪಕ್ಕಾ ಆಗಿದೆ. ಕೆಜಿಎಫ್ ಸಿನಿಮಾಗಳನ್ನ ಮೀರಿಸೋ ರೇಂಜ್‌ಗೆ ಟಾಕ್ಸಿಕ್ ತಯಾರಾಗ್ತಿದ್ದು, ಈ ಬಾರಿ ಹಾಲಿವುಡ್ ಮೇಕರ್ಸ್ ಕೂಡ ಹುಬ್ಬೇರಿಸೋದು ಗ್ಯಾರಂಟಿ ಎನ್ನಲಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್