ಗ್ರಾಮೀಣ ಪ್ರದೇಶದ ರಂಗಭೂಮಿ ಪ್ರತಿಭೆಗಳೇ ಕೂಡಿ ಮಾಡಿರೋ ರೋಣ ಚಿತ್ರದ ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದೆ. ಸಿಎಂ ಸಿದ್ದರಾಮಯ್ಯ ಟ್ರೈಲರ್ ನೋಡಿ ತಂಡಕ್ಕೆ ಭೇಷ್ ಅಂತ ಬೆನ್ನು ತಟ್ಟಿದ್ದು, ಅವ್ರ ಮಾಧ್ಯಮ ಸಲಹೆಗಾರ ಕೆ ಪ್ರಭಾಕರ್, ಟ್ರೈಲರ್ ಲಾಂಚ್ ಮಾಡಿದ್ದು ಇಂಟರೆಸ್ಟಿಂಗ್. ಹಾಗಾದ್ರೆ ಟ್ರೈಲರ್‌ನಲ್ಲಿ ಅಂಥದ್ದೇನಿದೆ..? ಸಿಎಂ ಸಾಹೇಬ್ರು ಏನಂದ್ರು ಅಂತೀರಾ..? ನೀವೇ ಒಮ್ಮೆ ನೋಡಿ.
- ರೋಣಗೆ CM ಸಿದ್ದು ಬಲ.. ದೈವದ ಸುತ್ತ ರಘು ರಾಜ ನಂದ
- ನ-7ಕ್ಕೆ ತೆರೆಮೇಲೆ ರೋಣ.. ಯುವ ಸಿನಿಮೋತ್ಸಾಹಿ ಟೀಂ..!
- ಹಳ್ಳಿ ಸೊಗಡಿನ ಚಿತ್ರಕ್ಕೆ ಸೈನ್ಸ್, ಪೊಲಿಟಿಕಲ್ & ಡಿವೈನ್ ಟಚ್
- ಗಮನ ಸೆಳೆಯುವ ಪಾತ್ರದಲ್ಲಿ ಶರತ್ ಲೋಹಿತಾಶ್ವ ಕಮಾಲ್
ಇದು ಕನ್ನಡದಲ್ಲಿ ರಿಲೀಸ್‌ಗೆ ಸಜ್ಜಾಗಿರೋ ರೋಣ ಚಿತ್ರದ ಟ್ರೈಲರ್ ಝಲಕ್. ಇದೇ ನವೆಂಬರ್ 7ರಂದು ತೆರೆಗೆ ಬರ್ತಿರೋ ರೋಣ ಸಿನಿಮಾ ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ತಯಾರಾಗಿದ್ದು, ಇದಕ್ಕೆ ಸೈನ್ಸ್, ಪೊಲಿಟಿಕಲ್ ಹಾಗೂ ಡಿವೈನ್ ಟಚ್ ಕೂಡ ನೀಡಲಾಗಿದೆ. ಗ್ರಾಮೀಣ ಪ್ರದೇಶದ ರಂಗಭೂಮಿ ಕಲಾವಿದರ ತಂಡವೇ ಕೂಡಿ ಮಾಡಿರೋ ಈ ಚಿತ್ರಕ್ಕೆ ಸಿಎಂ ಸಿದ್ದರಾಮಯ್ಯ ಸಾಥ್ ಸಿಕ್ಕಿರೋದು ಗ್ರೇಟ್.
ಯೆಸ್.. ಇತ್ತೀಚೆಗೆ ಟ್ರೈಲರ್ ನೋಡಿರೋ ಸಿಎಂ ಸಿದ್ದರಾಮಯ್ಯನವರು, ಚಿತ್ರತಂಡಕ್ಕೆ ಭೇಷ್ ಅಂತ ಹೇಳಿ ಬೆನ್ನು ತಟ್ಟಿದ್ದಾರೆ. ಅಲ್ಲದೆ, ಸಿಎಂ ಮಾಧ್ಯಮ ಸಲಹೆಗಾರರಾದ ಕೆ ಪ್ರಭಾಕರ್, ಎಂಎಂಬಿ ಲೆಗಸಿಯಲ್ಲಿ ನಡೆದ ಟ್ರೈಲರ್ ಲಾಂಚ್ ಇವೆಂಟ್‌ಗೆ ಆಗಮಿಸಿ, ಟ್ರೈಲರ್ ಬಿಡುಗಡೆ ಮಾಡಿಕೊಟ್ಟು, ತಂಡಕ್ಕೆ ಹಾರೈಸಿದ್ದಾರೆ. ಗ್ರಾಮೀಣ ಭಾಗದ ರಂಗಭೂಮಿ ಪ್ರತಿಭೆಗಳು ಬಹಳ ಆಸಕ್ತಿಯಿಂದ ಒಂದು ಉತ್ತಮ ಚಿತ್ರವನ್ನ ಮಾಡಿದ್ದಾರೆ ಎಂದರು.
ಬಿ. ಆರ್. ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ರೋಣ ಚಿತ್ರವನ್ನ ನಟ, ನಿರ್ಮಾಪಕ ರಘು ರಾಜ ನಂದ ನಿರ್ಮಿಸಿದ್ದು, ಯುವ ನಿರ್ದೇಶಕ ಸತೀಶ್ ಕುಮಾರ್ ಸಾರಥ್ಯ ವಹಿಸಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಇದೊಂದು ಹಳ್ಳಿ ಸೊಗಡಿನಲ್ಲಿ ಸಾಗುವ ಸಂಬಂಧಗಳ ಬೆಸುಗೆ, ಧಾರ್ಮಿಕ, ರಾಜಕೀಯ ಹಾಗೂ ವೈಜ್ಞಾನಿಕ ವಿಚಾರಗಳ ಸಂಗಮದ ಕಥೆಯಾಗಿದೆ. ನಿರ್ಮಾಪಕ ರಘು ರಾಜ ನಂದ ಅವರೇ ಲೀಡ್‌ನಲ್ಲಿ ನಟಿಸಿದ್ದು, ಮೇಕಿಂಗ್ ಇಂಪ್ರೆಸ್ಸೀವ್ ಆಗಿದೆ. 65 ದಿನಗಳ ಕಾಲ ಹೊಸಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಕಿರುತೆರೆ ನಟಿ ಪ್ರಕೃತಿ ಪ್ರಸಾದ್ ಈ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಬೇರೂರುವ ಭರವಸೆ ನೀಡಿದ್ದಾರೆ. ನಾನು ಸೀರಿಯಲ್‌ಗಳನ್ನ ಮಾಡ್ತಾ ಬಂದೆ. ಇದು ನನ್ನ ಎರಡನೇ ಚಿತ್ರ. ಈ ಚಿತ್ರದಲ್ಲಿ ಅಪ್ಪ ಮಗಳ ಬಾಂಧವ್ಯದ ಕುರಿತು ಹೇಳುವುದರ ಜೊತೆಗೆ ಧಾರ್ಮಿಕ, ವೈಜ್ಞಾನಿಕ ವಿಚಾರವೂ ಇದೆ ಎಂದರು.
ಚಿತ್ರದಲ್ಲಿ ಶರತ್ ಲೋಹಿತಾಶ್ವ ನಾಯಕನ ತಂದೆಯ ಪಾತ್ರದಲ್ಲಿ ಕಾಣಸಿಗಲಿದ್ದು, ಮಾಲೂರು ವಿಜಯ್, ಚಿಲ್ಲರ್ ಮಂಜು, ಬಲರಾಜವಾಡಿ, ಸಂಗೀತ ಅನಿಲ್, ರಂಗಭೂಮಿ ಪ್ರತಿಭೆ ಗೀತಾ, ಹಿತೇಶ್ ಅಭಿಷೇಕ್ ಆರ್ಯ, ವಿನೋದ್, ದರ್ಶನ್ ಶೆಟ್ಟಿ , ಮನೋಜ್ ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕನ್ನಡ ಪಿಚ್ಚರ್ ಪ್ರೆಸೆಂಟ್ ಮಾಡ್ತಿರೋ ರೋಣ ಚಿತ್ರಕ್ಕೆ ಅರುಣ್ ಕುಮಾರ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಗಗನ್ ಬದೇರಿಯ ಸಂಗೀತವಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
 
			
 
					




 
                             
                            