ಬಾಕ್ಸ್ ಆಫೀಸ್ ದಂತಕಥೆ ಕಾಂತಾರ-1 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸ್ತಿರೋ ರಿಷಬ್ ಶೆಟ್ಟಿ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಎಲ್ಲಿಲ್ಲದ ಕ್ಯೂರಿಯಾಸಿಟಿ. ಆದ್ರೆ ಸದ್ಯಕ್ಕಿಲ್ಲ ಕಾಂತಾರ ಚಾಪ್ಟರ್-2 ಎಂದಿರೋ ಶೆಟ್ರು ಮುಂದಿನ ಸಿನಿಮಾ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಅಲ್ಲದೆ, ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಮೋಹನ್‌ಲಾಲ್‌ಗೆ ನೀಡಿರೋ ಟ್ರಿಬ್ಯೂಟ್ ಬಗ್ಗೆ ನೆಟ್ಟಿಗರು ಏನಂದ್ರು ಅನ್ನೋದನ್ನ ಕೂಡ ಹೇಳ್ತೀವಿ ಈ ಸ್ಟೋರಿ ನೋಡಿ.
ಸದ್ಯಕ್ಕಿಲ್ಲ ಕಾಂತಾರ-2.. ನೆಕ್ಸ್ಟ್ ವೆಂಚರ್ ಜೈ ಹನುಮಾನ್
ಕಾಂತಾರ-1 ಕ್ಲೈಮ್ಯಾಕ್ಸ್‌ನಲ್ಲಿ ಎರಡನೇ ಅಧ್ಯಾಯ ಅನೌನ್ಸ್
ಕಾಂತಾರ.. ಕಾಂತಾರ.. ಕಾಂತಾರ.. ದೀಪಾವಳಿ ಪಟಾಕಿಗಳ ಸದ್ದಿನಂತೆ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಕನ್ನಡದ ಹೆಮ್ಮೆಯ ಸಿನಿಮಾ. ಇತಿಹಾಸದ ಪುಟಗಳಲ್ಲಿ ಹೊಸತೊಂದು ಅಧ್ಯಾಯ ಬರೆದು, ಬಾಕ್ಸ್ ಆಫೀಸ್‌ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ ಕಾಂತಾರ ಚಾಪ್ಟರ್-1. ರಿಷಬ್ ಶೆಟ್ಟಿ ಕರಿಯರ್‌ನಲ್ಲೇ ದಿ ಬೆಸ್ಟ್ ದೃಶ್ಯಕಾವ್ಯವಾಗಿ ಹೊರಹೊಮ್ಮಿದೆ.
ಸಿನಿಮಾ ಬಗ್ಗೆ ಇಡೀ ವಿಶ್ವ ಸಿನಿದುನಿಯಾ ಮಾತಾಡ್ತಿದೆ. ಕರ್ನಾಟಕದಲ್ಲಿ ವಿಜಯಯಾತ್ರೆ ಮಾಡೋಕೆ ಸಮಯದ ಅಭಾವವಿದ್ದ ಹಿನ್ನೆಲೆ ಎಲ್ಲೂ ಭೇಟಿ ನೀಡಿರಲಿಲ್ಲ ರಿಷಬ್ ಶೆಟ್ಟಿ ಅಂಡ್ ಟೀಂ. ಆದ್ರೀಗ ಅರಮನೆ ನಗರಿ ಮೈಸೂರಿಗೆ ವಿಸಿಟ್ ಮಾಡಿ, ದೈವ ಕೃಪೆಗೆ ಪಾತ್ರರಾಗಿದ್ದಾರೆ ಶೆಟ್ರು. ನಿನ್ನೆ ತಾಯಿ ಚಾಮುಂಡೇಶ್ವರಿ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದು, ಆಶೀರ್ವಾದ ಪಡೆದ ರಿಷಬ್, ನಂತ್ರ ಗಾಯತ್ರಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆ ಸಮಯ ಕಳೆದರು.
ಮೈಸೂರಲ್ಲಿ ಅದ್ಧೂರಿ ಸ್ವಾಗತ.. ದೈವಭಕ್ತ ರಿಷಬ್‌ಗೆ ದೈವಶಕ್ತಿ
ತಾಯಿ ಚಾಮುಂಡಿ, ಶ್ರೀಕಂಠೇಶ್ವರನ ದರ್ಶನ ಪಡೆದ ಶೆಟ್ರು
ಅಂದಹಾಗೆ ಕಾಂತಾರ ಚಾಪ್ಟರ್-1 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಾಂತಾರ ಚಾಪ್ಟರ್-2 ಹಿಂಟ್ ನೀಡಲಾಗಿದೆ. ಇದೀಗ ರಿಷಬ್ ಮುಂದಿನ ಚಿತ್ರದ ಅಪ್ಡೇಟ್ಸ್‌ಗಾಗಿ ಎಲ್ಲರೂ ಕುತೂಹಲದಿಂದ ಕಾಯ್ತಿದ್ದು, ಅದಕ್ಕೆ ಸ್ವತಃ ಶೆಟ್ರೇ ಉತ್ತರ ನೀಡಿದ್ದಾರೆ. ಹೌದು.. ತೆಲುಗಿನ ಡೈರೆಕ್ಟರ್ ಪ್ರಶಾಂತ್ ವರ್ಮಾ ಜೊತೆ ಜೈ ಹನುಮಾನ್ ಸಿನಿಮಾ ಮಾಡ್ತಿದ್ದು, ಅದರಲ್ಲಿ ರಾಮಭಂಟ ಹನುಮನಾಗಿ ಕಾಣಸಿಗಲಿದ್ದಾರೆ. ಈಗಾಗ್ಲೇ ಫಸ್ಟ್‌ಲುಕ್ ರಿವೀಲ್ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್, ಜೈ ಹನುಮಾನ್ ಶೂಟಿಂಗ್ ಶುರು ಮಾಡೋ ಧಾವಂತದಲ್ಲಿದೆ.
ಕಾಂತಾರದ ಇಷ್ಟು ದೊಡ್ಡದ ಕಹಳೆಯ ಮಧ್ಯೆ ಸಣ್ಣದೊಂದು ನೆಗೆಟೀವ್ ಅಲೆ ಎದ್ದಿದೆ. ಅದೇನಪ್ಪಾ ಅಂದ್ರೆ ರಿಷಬ್ ಶೆಟ್ಟಿ ಇತ್ತೀಚೆಗೆ ಕೌನ್ ಬನೇಗಾ ಕರೋಡ್‌ಪತಿ ಶೋಗೆ ಹೋಗಿದ್ದರು. ಅಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂದೆ, ಲಾಲೆಟ್ಟನ್ ಮೋಹನ್‌ಲಾಲ್‌ಗೆ ಟ್ರಿಬ್ಯೂಟ್ ರೀತಿ ಪಂಚೆ ಕಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನ ಕಂಡು ಮಲಯಾಳಿಗರು ಖುಷಿ ಪಟ್ರೆ, ಕನ್ನಡಿಗರು ಮಾತ್ರ ಬೇಸರ ವ್ಯಕ್ತಪಡಿಸ್ತಿದ್ದಾರೆ.
ಮೋಹನ್‌ಲಾಲ್‌ಗೆ ರಿಷಬ್ ಟ್ರಿಬ್ಯೂಟ್.. ನೆಟ್ಟಿಗರ ಕಿರಿಕ್
ಕನ್ನಡ ಲೆಜೆಂಡ್ಸ್ ಬಿಟ್ಟು ಲಾಲೆಟ್ಟನ್‌ಗೆ ಏಕೆ ಅನ್ನೋ ಅಲೆ..!
ಕನ್ನಡದಲ್ಲಿ ಇಷ್ಟೊಂದು ಮಂದಿ ಲೆಜೆಂಡ್‌ಗಳು ಇದ್ದಾಗ, ಪಕ್ಕದ ಮಲಯಾಳಂ ಸೂಪರ್ ಸ್ಟಾರ್‌ಗೆ ಟ್ರಿಬ್ಯೂಟ್ ನೀಡುವ ಅವಶ್ಯಕತೆ ಆದ್ರೂ ಏನಿತ್ತು ಅಂತಿದ್ದಾರೆ ನೆಟ್ಟಿಗರು. ಅಂದಹಾಗೆ ರಿಷಬ್ ಶೆಟ್ಟಿ-ಮೋಹನ್‌ಲಾಲ್ ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಕೂಡ ಇದೆ. ಅಲ್ಲದೆ, ಪಂಚೆ ಕಟ್ಟೋದನ್ನ ಕನ್ನಡದಲ್ಲಿ ಅಣ್ಣಾವ್ರ ನಂತ್ರ ಇತ್ತೀಚೆಗೆ ಟ್ರೆಂಡ್ ಮಾಡ್ತಿರೋದೇ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ. ಸೋ.. ಅವರು ಮೋಹನ್‌ಲಾಲ್ ರೀತಿ ಎಂಟ್ರಿ ಕೊಟ್ಟಿದ್ದು ತಪ್ಪೇನಿದೆ ಅಂತಿದ್ದಾರೆ ಕೆಲ ನೆಟಿಜನ್ಸ್.





