ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಒಮ್ಮೆ ಬದುಕಿಗಾಗಿ ವಾಟರ್ ಬಾಟಲ್ ಮಾರಾಟ ಮಾಡುತ್ತಿದ್ದ ಅದೇ ಹುಡುಗ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗರ್ಜಿಸುತ್ತಿರುವ ಹೆಸರು ರಿಷಬ್ ಶೆಟ್ಟಿ. ಕಾಂತಾರ ನಂತರ ಈಗ ‘ಜೈ ಹನುಮಾನ್’ ಚಿತ್ರದೊಂದಿಗೆ ಮತ್ತೊಂದು ಭರ್ಜರಿ ಅಧ್ಯಾಯಕ್ಕೆ ರಿಷಬ್ ಸಜ್ಜಾಗಿದ್ದು, ಡಿವೈನ್ ಸ್ಟಾರ್ ಚಿತ್ರಕ್ಕೆ ಆಸ್ಕರ್ ವಿನ್ನರ್ ಎಂ.ಎಂ.ಕೀರವಾಣಿ ಮ್ಯೂಸಿಕ್ ನೀಡಲಿದ್ದಾರೆ.
ಜೀವನದ ಮೊದಲ ಹಂತದಲ್ಲಿ ಸ್ಟಾರ್ ಅಲ್ಲ ಸ್ಟ್ರಗ್ಲರ್. ಕನಸಿಗಾಗಿ ಬೆವರು ಸುರಿಸಿದ ಹೀರೋ ಇವತ್ತು ಪ್ಯಾನ್ ಇಂಡಿಯಾ ಡಿವೈನ್ ಸ್ಟಾರ್ ಆಗಿದ್ದಾರೆ. ವಾಟರ್ ಬಾಟಲ್ ಮಾರಾಟ ಮಾಡಿದ ಕೈಯಲ್ಲೇ ಒಮ್ಮೆ ಕ್ಲಾಪ್‌ಬೋರ್ಡ್ ಹಿಡಿದವರು ಇಂದು ಬಾಕ್ಸ್ ಆಫೀಸ್‌ಗೆ ಬೆಂಕಿ ಹಚ್ಚುವ ಹೆಸರು ರಿಷಬ್ ಶೆಟ್ಟಿ. ಇದು ಸಕ್ಸಸ್ ಸ್ಟೋರಿ ಅಲ್ಲ, ಇದು ಸರ್ವೈವಲ್‌ನಿಂದ ಸ್ಟಾರ್ಡಮ್‌ವರೆಗಿನ ಫೈರ್ ಜರ್ನಿ.
ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್
ವಾಟರ್ ಬಾಟಲ್ ಮಾರ್ತಿದ್ದ ವ್ಯಕ್ತಿಯ ಸಂಭಾವನೆ 80Cr
ಕಾಂತಾರ ನಂತರ ಈಗ ಮತ್ತೊಂದು ಭರ್ಜರಿ ಅಧ್ಯಾಯ ‘ಜೈ ಹನುಮಾನ್’. ಮಹತ್ತರ ಬಜೆಟ್‌ನಲ್ಲಿ ರೂಪುಗೊಳ್ಳುತ್ತಿರುವ ಈ ಚಿತ್ರದಲ್ಲಿ ರಿಷಬ್ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲಿ ರಾಣಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಚಿತ್ರದ ಕ್ರೇಜ್‌ನ್ನು ಮತ್ತಷ್ಟು ಹೆಚ್ಚಿಸಿದೆ. ಡಿವೈನ್ ಬ್ಯಾಕ್ಡ್ರಾಪ್, ಭಕ್ತಿ-ಶಕ್ತಿ ಮಿಶ್ರಣ ಮತ್ತು ಪ್ಯಾನ್ ಇಂಡಿಯಾ ಕ್ಯಾಂವಾಸ್… ಇದು ಸಾದಾ ಸಿನಿಮಾ ಅಲ್ಲ, ಗ್ರ್ಯಾಂಡ್ ಸಿನೆಮ್ಯಾಟಿಕ್ ಅನುಭವದ ಸುಳಿವು.
ಈಗಾಗಲೇ ಈ ಸಿನಿಮಾ ಸೆಟ್ ಏರೋಕೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 22 ರಂದು ಹಂಪಿಯಲ್ಲಿ ಜೈ ಹನುಮಾನ್ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಲಿದ್ದು, ಐತಿಹಾಸಿಕ ನೆಲೆಯಲ್ಲೇ ಈ ಭವ್ಯ ಯಾತ್ರೆ ಆರಂಭವಾಗುತ್ತಿದೆ. ಪ್ರಸಾಂತ್ ವರ್ಮಾ ನಿರ್ದೇಶನ, ‘ಪುಷ್ಪ’, ‘ಪುಷ್ಪ 2’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ದುಬಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ.
ಹನುಮಾನ್ ಯೂನಿವರ್ಸ್‌ಗೆ ರಾಣಾ ಎಂಟ್ರಿ
ಜೈ ಹನುಮಾನ್ ಹೈಪ್ ಜೊತೆ ರಿಷಬ್ ಸಂಭಾವನೆ ಏರಿಕೆ
ಸದ್ಯದ ಅಪ್ಡೇಟ್ ಏನಂದ್ರೆ ಜೈ ಹನುಮಾನ್ ಚಿತ್ರಕ್ಕೆ ಆಸ್ಕರ್ ವಿನ್ನರ್ ಎಂ. ಎಂ. ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಕೀರವಾಣಿ ಅವರ ಮ್ಯೂಸಿಕ್ ಅಂದ್ರೆ ಆತ್ಮಸ್ಪರ್ಶಿ ಮೆಲೋಡಿ ಮತ್ತು ಎಪಿಕ್ ಬ್ಯಾಕ್‌ಗ್ರೌಂಡ್ ಸ್ಕೋರ್ ಖಚಿತ. ‘ಜೈ ಹನುಮಾನ್’ ಚಿತ್ರಕ್ಕೆ ಅವರ ಸಂಗೀತ ಸೇರ್ಪಡೆಯಾಗಿರುವುದು ಚಿತ್ರದ ಹೈಪ್ ಅನ್ನು ಡಬಲ್ ಮಾಡಿದೆ. ದೇವತ್ವ ಮತ್ತು ದೈವಿಕ ಶಕ್ತಿಯ ಕಥೆಗೆ ಕೀರವಾಣಿ ಸೌಂಡ್ ಹೇಗಿರಬಹುದು ಎಂಬ ಕುತೂಹಲ ಈಗಲೇ ಗರಿಗೆದರಿದೆ.
ರಿಷಬ್ ‘ಜೈ ಹನುಮಾನ್’ಗಾಗಿ 80 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಟಾಕ್ ಸಕತ್ ಹೈಪ್ ಕ್ರಿಯೇಟ್ ಮಾಡಿದೆ. ‘ಕಾಂತಾರ’ ಬಳಿಕ ಏರಿದ ಸ್ಟಾರ್ ಪವರ್ ಮತ್ತು ಪ್ಯಾನ್ ಇಂಡಿಯಾ ಮಾರ್ಕೆಟ್ ವ್ಯಾಲ್ಯೂ ರಿಷಬ್ ಶೆಟ್ಟಿ ಈಗ ಬಾಕ್ಸ್ ಆಫೀಸ್‌ನ ಬ್ರ್ಯಾಂಡ್ ಅನ್ನೋ ಮಾತು ಗಟ್ಟಿಯಾಗುತ್ತಿದೆ. ಒಟ್ಟಾರೆ ಒಂದು ಕಾಲದಲ್ಲಿ ವಾಟರ್ ಬಾಟಲ್ ಮಾರ್ತಿದ್ದ ರಿಷಬ್ ಇಂದು 80ಕೋಟಿ ಚೆಕ್ ಪಡೆಯೋ ಲೆವೆಲ್ ಗೆ ಬೆಳೆದಿದ್ದಾರೆ ಅಂದ್ರೆ ಇದು ಟ್ರೂ ಇನ್ಸ್ಪಿರೇಷನ್.
