ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಾಮಭಂಟ ಹನುಮನಾಗೋಕೆ ಸಜ್ಜಾಗಿ ಬಹಳ ದಿನಗಳೇ ಆಯ್ತು. ರೀಸೆಂಟ್ ಆಗಿ ಜೈ ಹನುಮಾನ್ ಚಿತ್ರದ ಮುಹೂರ್ತ ಕೂಡ ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ನೆರವೇರಿತ್ತು. ಆದ್ರೆ ಶೂಟಿಂಗ್ ಯಾವಾಗಿಂದ..? ಎಲ್ಲಿ..? ಅನ್ನೋದ್ರ ಡಿಟೈಲ್ಸ್ ರಿವೀಲ್ ಆಗಿರಲಿಲ್ಲ. ಆದರೆ ಈ ಬಗ್ಗೆ ರಾಮನವಮಿ ವಿಶೇಷವಾಗಿ ಗ್ಯಾರಂಟಿ ಪಿಚ್ಚರ್ ಬಿಚ್ಚಿಡ್ತಿದೆ ಎಕ್ಸ್‌ಕ್ಲೂಸಿವ್ ಇನ್‌ಸೈಡ್ ಸ್ಟೋರಿ.
ಜೈ ಹನುಮಾನ್.. ನಮ್ಮ ಕರಾವಳಿ ಸಂಸ್ಕೃತಿಯನ್ನ ಇಡೀ ವಿಶ್ವಕ್ಕೆ ಪರಿಚಯಿಸಿದ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿಯ ನೆಕ್ಸ್ಟ್ ವೆಂಚರ್. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಮಹೋತ್ಸವ ಹಂಪಿಯ ಬಳಿ ಇರೋ ಅಂಜನಾದ್ರಿ ಬೆಟ್ಟದಲ್ಲಿ ನೆರವೇರಿತ್ತು. ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯಲ್ಲಿ ಸಿನಿಮಾ ಪೂಜಾ ಮುಹೂರ್ತ ಕಂಡಿದ್ದು ಸಖತ್ ಪಾಸಿಟಿವ್ ವೈಬ್ಸ್ ನೀಡಿದೆ.
ರಾಮಭಂಟನಾದ ರಿಷಬ್.. ಹೈದ್ರಾಬಾದ್‌ನಲ್ಲಿ ಶೂಟಿಂಗ್..!
ಬೃಹತ್ ಸೆಟ್‌ಗಳ ನಿರ್ಮಾಣ.. ಏಪ್ರಿಲ್‌ನಿಂದ ಕಿಕ್‌ಸ್ಟಾರ್ಟ್
ರಿಷಬ್ ಶೆಟ್ಟಿ ಇಲ್ಲಿ ರಾಮ ಭಂಟ ಹನುಮನ ಪಾತ್ರದಲ್ಲಿ ಕಾಣಸಿಗಲಿದ್ದು, ಬಾಲ ಇರುವ ಆಂಜನೇಯನಂತೆ ಫಸ್ಟ್‌ಲುಕ್‌ನಲ್ಲಿ ಕಾಣಿಸಿಕೊಂಡು, ನೋಡುಗರ ನಾಡಿ ಮಿಡಿತ ಹೆಚ್ಚಿಸಿದ್ದರು. ಅದ್ರಲ್ಲೂ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಇದಾಗಿದ್ದು, ಈ ಹಿಂದಿನ ಹನು ಮ್ಯಾನ್‌ಗೂ ಇದಕ್ಕೂ ಲಿಂಕ್ ಇರಲಿದೆಯಂತೆ. ಅಲ್ಲದೆ ಹನು ಮ್ಯಾನ್ ಹೀರೋ ತೇಜಾ ಸಜ್ಜಾ ಸಹ ಜೈ ಹನುಮಾನ್‌ನಲ್ಲಿ ಕಾಣಸಿಗಲಿದ್ದಾರಂತೆ. ಇನ್ನೂ ರಿಷಬ್ ಜೊತೆ ರಾಣಾ ದಗ್ಗುಬಾಟಿ ಗಮನ ಸೆಳೆಯುವ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಡಿವೈನ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ರಿಷಬ್ ಶೆಟ್ಟಿ, ಈ ಸಿನಿಮಾದ ಮೂಲಕ ಮತ್ತಷ್ಟು ಸನಾತನಿ ಫ್ಯಾನ್ಸ್‌ನ ಹೆಚ್ಚಿಸಿಕೊಳ್ಳಲಿದ್ದಾರೆ. ಕರಾವಳಿ ದೈವಗಳಿಂದ ಹಿಡಿದು, ಇದೀಗ ಶ್ರೀರಾಮ, ಹನುಮನ ಭಕ್ತರೆಲ್ಲಾ ರಿಷಬ್‌ನ ಫ್ಯಾನ್ಸ್ ಆಗೋ ಸಾಧ್ಯತೆಯಿದೆ. ಅದಕ್ಕಾಗಿ ದೇಹವನ್ನ ಜಿಮ್‌ನಲ್ಲಿ ಸಾಕಷ್ಟು ಹುರಿಗೊಳಿಸಿ, ಸಿಕ್ಕಾಪಟ್ಟೆ ಬೆವರಿಳಿಸುತ್ತಿದ್ದಾರಂತೆ. ಸ್ಟಂಟ್ಸ್‌ಗಾಗಿ ಒಂದಷ್ಟು ಪಟ್ಟುಗಳನ್ನ ಕೂಡ ಕರಗತ ಮಾಡಿಕೊಳ್ತಿದ್ದಾರಂತೆ ರಿಷಬ್.
ರಿಷಬ್ ಶೆಟ್ಟಿ ಜೊತೆ ರಾಣಾ ದಗ್ಗುಬಾಟಿ, ತೇಜಾ ಸಜ್ಜಾ ನಟನೆ
ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ.. ಕೀರವಾಣಿ ಮ್ಯೂಸಿಕ್
ಹೈದ್ರಾಬಾದ್‌ನಲ್ಲಿ ಇಡೀ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಏಪ್ರಿಲ್‌ನಲ್ಲಿ ಚಿತ್ರೀಕರಣ ಆರಂಭ ಆಗಲಿದೆಯಂತೆ. ಈಗಾಗ್ಲೇ ಬೃಹತ್ ಸೆಟ್‌ಗಳು ಸಿನಿಮಾಗಾಗಿ ತಲೆ ಎತ್ತುತ್ತಿದ್ದು, ಸಾವಿರಾರು ಮಂದಿ ಸಹ ಕಲಾವಿದರು, ಜೂನಿಯರ್ ಆರ್ಟಿಸ್ಟ್‌ಗಳು, ತಂತ್ರಜ್ಞರು ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರಂತೆ. ಮೊದಲಿಗೆ ಇತರೇ ಆರ್ಟಿಸ್ಟ್‌ಗಳ ಪೋರ್ಷನ್ಸ್ ಶುರುವಾಗಲಿದ್ದು, ರಿಷಬ್ ಕೊಂಚ ತಡವಾಗಿ ಸೆಟ್‌ಗೆ ಎಂಟ್ರಿ ಕೊಡಲಿದ್ದಾರಂತೆ.
ರಾಜಮೌಳಿ ಚಿತ್ರಗಳ ಹಿಂದಿನ ಬಿಗ್ ಮ್ಯೂಸಿಕ್ ಮಾಸ್ಟರ್‌ಮೈಂಡ್ ಎಂ ಎಂ ಕೀರವಾಣಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈಗಾಗ್ಲೇ ಜೈ ಹನುಮಾನ್ ಚಿತ್ರದ ಒಂದು ಆಡಿಯೋ ಬಿಟ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಇದೊಂದು ಬಹುದೊಡ್ಡ ಮೈಥಲಾಜಿಕಲ್ ಪ್ಯಾನ್ ಇಂಡಿಯಾ ಮೂವಿ ಆಗಿ ಮೂಡಿಬರಲಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಶೂಟಿಂಗ್ ನಡೆಸೋ ಧಾವಂತದಲ್ಲಿದೆ ಟೀಂ.
