ಹನುಮನ ಗದೆ ಹಿಡಿದು ನಿಂತಿದ್ದಾರೆ ಗ್ಲೋಬಲ್ ಸ್ಟಾರ್ ರಾಮ್‌ಚರಣ್. ಅರೇ ಬರ್ತ್ ಡೇ ದಿನ ಚಿರು ತನಯ ಗದೆ ಹಿಡಿದಿದ್ಯಾಕೆ..? ಯಾರಿಗಾಗಿ..? ಅನ್ನೋದ್ರ ಜೊತೆಗೆ ಕುಸ್ತಿ ಕಾಳಗದಲ್ಲಿರೋ ಪೆದ್ದಿ ಸ್ಟಾರ್‌ಗಾಗಿ ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮಾಡಿದ್ದೇನು ಅಂತೀರಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಪೆದ್ದಿ.. ಬಹುಶಃ ರಾಮ್ ಚರಣ್ ಕರಿಯರ್‌ನಲ್ಲಿ ಮಗಧೀರ, ರಂಗಸ್ಥಳಂ, ತ್ರಿಬಲ್ ಆರ್ ಸಿನಿಮಾಗಳ ಬಳಿಕ ಆ ರೇಂಜ್‌ಗೆ ಸೌಂಡ್ ಮಾಡೋ ಮುನ್ಸೂಚನೆ ನೀಡಿರೋ ಚಿತ್ರವಿದು. ಇಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾರ್ಡ್ ವರ್ಕ್, ಡೆಡಿಕೇಷನ್, ವರ್ಕ್ ಡಿಟರ್ಮಿನೇಷನ್ ನೆಕ್ಸ್ಟ್ ಲೆವೆಲ್‌ಗಿದೆ. ಅದಕ್ಕೆ ಇಲ್ಲಿಯ ತನಕ ರಿವೀಲ್ ಆಗಿರೋ ಸ್ಯಾಂಪಲ್ ಝಲಕ್‌ಗಳೇ ಸಾಕ್ಷಿ.
‘ಪೆದ್ದಿ’ ಪೆಹಲ್ವಾನ್ ಚರಣ್ ಕೈಯಲ್ಲಿ ಆಂಜನೇಯನ ಗದೆ..!
ಶಿವಣ್ಣ ಕಂಠದಲ್ಲಿ ಬಿಲ್ಡಪ್.. ಕುಸ್ತಿ ಕಾಳಗದಲ್ಲಿ ಚಿರು ತನಯ
ಬುಚ್ಚಿಬಾಬು ನಿರ್ದೇಶನದಲ್ಲಿ ತಯಾರಾಗ್ತಿರೋ ಈ ಸಿನಿಮಾ, ಇದೇ ಏಪ್ರಿಲ್ 30ಕ್ಕೆ ತೆರೆಗಪ್ಪಳಿಸಲಿದ್ದು, ರಂಗಸ್ಥಳಂ ಬಳಿಕ ಒನ್ಸ್ ಅಗೈನ್ ರಾಮ್ ಚರಣ್ ರಾ & ರಗಡ್ ರೋಲ್‌ನಲ್ಲಿ ಹಳ್ಳಿ ಸೊಗಡಿನಲ್ಲಿ ಮಿಂಚು ಹರಿಸಲಿದ್ದಾರೆ. ಚರಣ್‌ಗೆ ಜೋಡಿಯಾಗಿ ಜಾಹ್ನವಿ ಕಪೂರ್ ಬಣ್ಣ ಹಚ್ಚಿದ್ದು, ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ಕೂಡ ವೆರಿ ವೆರಿ ಇಂಟರೆಸ್ಟಿಂಗ್ ರೋಲ್ ಪ್ಲೇ ಮಾಡಿದ್ದಾರೆ.
ಈಗಾಗ್ಲೇ ಚಿಕರಿ ಚಿಕರಿ ಸಾಂಗ್ ಹಾಗೂ ರೇಯ್ ರೇಯ್ ರಾ ರಾ ಸಾಂಗ್ಸ್ ಫೆಂಟಾಬ್ಯುಲಸ್ ಆಗಿ ಮೂಡಿಬಂದಿವೆ. ಯೂಟ್ಯೂಬ್‌ನಲ್ಲಿ ಕೋಟಿಗಟ್ಟಲೆ ವೀವ್ಸ್ ಪಡೆದಿರೋ ಸಾಂಗ್ಸ್, ಹುಕ್ ಸ್ಟೆಪ್‌ಗಳಿಂದ ರೀಲ್ಸ್ ಟ್ರೆಂಡ್ ಗೂ ಕಾರಣವಾಗಿವೆ. ಆದ್ರೀಗ ರಾಮ ನವಮಿ ಹಬ್ಬ ಹಾಗೂ ರಾಮ್ ಚರಣ್ ಬರ್ತ್ ಡೇ ವಿಶೇಷ ಪೆದ್ದಿಯ ಮತ್ತೊಂದು ಸ್ಪೆಷಲ್ ಟೀಸರ್ ಬಿಡುಗಡೆ ಆಗಿದೆ. ಇಲ್ಲಿಯ ತನಕ ಚರಣ್ ಈ ಚಿತ್ರದಲ್ಲಿ ಕ್ರಿಕೆಟರ್ ಅಂದುಕೊಂಡಿದ್ದವ್ರಿಗೆ ಇಲ್ಲಿ ಟ್ವಿಸ್ಟ್ ನೀಡಲಾಗಿದೆ.
ಗ್ಲೋಬಲ್ ಸ್ಟಾರ್ ಸಿಕ್ಸ್ ಪ್ಯಾಕ್ ನೋಡಿದ್ರೆ ಶಾಕ್ ಆಗ್ತೀರಾ
ಏ- 30ಕ್ಕೆ ಬಿಗ್‌ಸ್ಕ್ರೀನ್ ಮೇಲೆ ಪೆದ್ದಿ ಆಟ ಬಲು ಜೋರು..!
ಇದು ಚರಣ್ ಜನುಮ ದಿನದ ಪ್ರಯುಕ್ತ ಫ್ಯಾನ್ಸ್‌ಗೆ ನೀಡಿರೋ ಟೀಸರ್ ಗಿಫ್ಟ್. ಇಲ್ಲಿ ಚಿರು ತನಯ ಕುಸ್ತಿ ಪೆಹಲ್ವಾನ್ ಆಗಿ ನೋಡುಗರನ್ನ ಇಂಪ್ರೆಸ್ ಮಾಡ್ತಿದ್ದಾರೆ. ಕುಸ್ತಿ ಅಂದ್ರೆ ಬ್ಯಾಟ್‌ನಿಂದ ಬಾಲ್‌ನ ಹೊಡೆಯೋ ಆಟ ಅಲ್ಲ ಕಣೋ.. ಸಾವಿದೆ ಎದೆ ಒಡ್ಡುವಂತಹ ಆಟ. ಈಗ ಹೇಳು.. ಇರ್ತಿಯೋ ಹೋಗ್ತಿಯೋ.. ಅನ್ನೋ ಶಿವಣ್ಣನ ಡೈಲಾಗ್ ಟೀಸರ್‌ನಲ್ಲಿ ಮಸ್ತ್ ಕಿಕ್ ಕೊಡ್ತಿದೆ. ಅದಕ್ಕೆ ಪ್ರತ್ಯುತ್ತರವಾಗಿ ರಾಮ್ ಚರಣ್.. ನೋಡಪ್ಪಿ ಆ ಅಡ್ಡಾನೇ ನಿನ್ನ ಪೊಗರು ಅನ್ನೋ ಡೈಲಾಗ್ ಡಬಲ್ ಕಿಕ್ ಕೊಡ್ತಿದೆ.
ಈ ಟೀಸರ್ ನೋಡಿದ ಬಳಿಕ ಒಂದು ಸ್ಪಷ್ಟವಾಗ್ತಿದೆ.. ನಮ್ಮ ಶಿವಣ್ಣನ ರೋಲ್ ಇದ್ರಲ್ಲಿ ಕುಸ್ತಿಪಟುಗಳ ಟ್ರೈನರ್. ಕ್ರಿಕೆಟ್ ಆಡಿಕೊಂಡಿದ್ದಂತಹ ನಾಯಕನಟನನ್ನ ಕುಸ್ತಿ ಕಟ್ಟಾಳು ಆಗಿಸೋದ್ರ ಹಿಂದಿನ ಮಾಸ್ಟರ್. ಎ ಆರ್ ರೆಹಮಾನ್ ಮ್ಯೂಸಿಕ್ ಮ್ಯಾಜಿಕ್ ಮಾಡ್ತಿದ್ದು, ಬುಚ್ಚಿಬಾಬು ಕಥೆ ಲಾಜಿಕ್‌ನಿಂದ ಕೂಡಿರಲಿದೆ. ಹಾಗಾಗಿ ಪೆದ್ದಿ ಪ್ರಪಂಚ ಬಯಲಾಗೋಕೆ ಬಹಳ ದಿನಗಳು ಉಳಿದಿಲ್ಲ.
