ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ ದೋಷಾರೋಪಣೆ, ನವೆಂಬರ್ 10ಕ್ಕೆ ವಿಚಾರಣೆ ಮುಂದೂಡಿಕೆ

Web (17)

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ದಿನವಾಗಿತ್ತು. ಬೆಂಗಳೂರಿನ 64ನೇ ಅಧಿವೇಶನ ನ್ಯಾಯಾಲಯದಲ್ಲಿ 17 ಮಂದಿ ಆರೋಪಿಗಳ ಮೇಲಿನ ದೋಷಾರೋಪಣೆ  ನಿಗದಿಯಾಗಿತ್ತು. ಆದರೆ, ಕೋರ್ಟ್ ಹಾಲ್‌ನಲ್ಲಿ ವಕೀಲರ ದಟ್ಟಣೆಯಿಂದಾಗಿ ವಿಚಾರಣೆಯನ್ನು ಮುಚ್ಚಿದ ಕೊಠಡಿಯಲ್ಲಿ ನಡೆಸಲಾಯಿತು. ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಹಾಜರಿದ್ದರು. ಆದರೆ, ದೋಷಾರೋಪಣೆ ಓದಿ ಮುಗಿಸಿದ ನಂತರ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.

ಕೋರ್ಟ್‌ನಲ್ಲಿ ನಡೆದದ್ದೇನು?

ನವೆಂಬರ್ 10 ರಂದು ದೋಷಾರೋಪಣೆ ಅಂತಿಮಗೊಂಡರೆ, ಸಾಕ್ಷಿಗಳ ವಿಚಾರಣೆ ಆರಂಭ. ಆರೋಪಿಗಳು ದೋಷವನ್ನು ನಿರಾಕರಿಸಿದ್ದರಿಂದ ಪೂರ್ಣ ಟ್ರಯಲ್ ಆರಂಭವಾಗಲಿದೆ.

ಕೋರ್ಟ್‌ನಲ್ಲಿ ಹಿಂದೆ ಮುಂದೆ ನಿಂತಿದ್ದ ದರ್ಶನ್ ಪವಿತ್ರಾ..!

2 ತಿಂಗಳ ಬಳಿಕ ಮುಖಾಮುಖಿಯಾಗಿ ಮಾತಾನಾಡಿದ ಸುಬ್ಬ-ಸುಬ್ಬಿ. ಕೋರ್ಟ್ ಹಾಲ್‌ನಲ್ಲಿ ಪವಿತ್ರಾ ಗೌಡ ಮುಂದೆ ನಿಂತಿದ್ದರೆ, ದರ್ಶನ್ ಹಿಂದೆ ನಿಂತಿದ್ದರು. ಆಗ ಮುಂದೆ ಬಾ ಹಿಂದೆ ಯಾಕೆ ನಿಂತಿದಿಯಾ ಎಂದು ಪವಿತ್ರಾ ಗೌಡ ಹೇಳಿದರು. ಆಯ್ತು ಬರ್ತೀನಿ ಎಂದು ಮುಂದೆ ಬಂದ ದರ್ಶನ್. ಜೈಲಿನಿಂದ ಬರಬೇಕಾದ್ರೆ ಬೇರೆ ಬೇರೆ ವಾಹನದಲ್ಲಿ ಬಂದಿದ್ದ ದರ್ಶನ್-ಪವಿತ್ರಾ ಗೌಡ. ಜೈಲಿನಲ್ಲಿ ಇಬ್ಬರು ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ.

Exit mobile version