ಜೈಲ್ to ಕೋರ್ಟ್..ಡಿಬಾಸ್ ದರ್ಶನ್ ವಾಯುವಿಹಾರ?

ವಾರಕ್ಕೆ 4 ದಿನ ವಿಚಾರಣೆಗೆ ಕೋರ್ಟ್‌ನಿಂದಲೇ‌ ಸಮ್ಮತಿ

Untitled design 2026 06 16T162723.628

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ ಬಾಸ್ ದರ್ಶನ್ & ಗ್ಯಾಂಗ್‌ಗೆ ಕೋರ್ಟ್ ಟ್ರಯಲ್ಸ್ ಶುರುವಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ದಾಸನ ಪರವಾಗಿ ಕೋರ್ಟ್ ಕೆಲ ತೀರ್ಪುಗಳನ್ನ ನೀಡ್ತಿರೋದು ಅವ್ರ ಕುಟುಂಬ ಹಾಗೂ ಫ್ಯಾನ್ಸ್‌ಗೆ ಖುಷಿ ತಂದಿದೆ. ಜೈಲಿಂದ ಕೋರ್ಟ್‌‌ಗೆ ಬರೋಕೆ ಅನುಮತಿ ಸಿಗಲಿದ್ದು, ಹಾಗಾದಲ್ಲಿ ವಾಯುವಿಹಾರ ಗ್ಯಾರಂಟಿ. ಇದರ ಡಿಟೇಲ್ಸ್‌ ಇಲ್ಲಿದೆ ನೋಡಿ…

ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಡಿ ಗ್ಯಾಂಗ್‌ ಜೈಲಿಗೆ ಹೋಗಿ ಬರೋಬ್ಬರಿ ಎರಡು ವರ್ಷಗಳಾಯ್ತು. ಸುಪ್ರೀಂ ಕೋರ್ಟ್ ಬೇಲ್ ಕ್ಯಾನ್ಸಲ್ ಮಾಡಿದ ಮೇಲೆ ಇಂದಿಗೂ ಅವರಿಗೆ ಬೇಲ್ ಸಿಗಲೇ ಇಲ್ಲ. ಇನ್ನೊಂದು ವರ್ಷದ ಕಾಲ ಸಿಗುವುದೂ ಇಲ್ಲ. ಆದ್ರೆ ಒಂದು ಖುಷಿ ವಿಚಾರ ಏನಪ್ಪಾಂದ್ರೆ ಕುಟುಂಬದವವರ ಒಳ ಸಂದರ್ಶನಕ್ಕೆ ಕೋರ್ಟ್ ಹಾಗೂ ಜೈಲಾಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಅದು ನಟ ದರ್ಶನ್‌ಗೆ ಸಿಕ್ಕ ಬಹುದೊಡ್ಡ ಮೊದಲ ಜಯ. ಇತ್ತೀಚೆಗೆ ವೆಡ್ಡಿಂಗ್ ಆ್ಯನಿವರ್ಸರಿ ವಿಶೇಷ ವಿಜಯಲಕ್ಷ್ಮೀ ದರ್ಶನ್ ಮಗ ವಿನೀಶ್ ಸಮೇತ ಜೈಲಿಗೆ ಹೋಗಿ ದರ್ಶನ್‌ನ ಫಸ್ಟ್ ಟೈಂ ನೇರಾ ನೇರ ಭೇಟಿ ಮಾಡಿ ಬಂದರು.

ಇದೀಗ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ತ್ವರಿತಗತಿಯಲ್ಲಿ ಮುಗಿಸಬೇಕಿದೆ ಎಸ್‌‌ಪಿಪಿ ಪ್ರಸನ್ನ ಕುಮಾರ್. ನೂರಾರು ಸಾಕ್ಷಿಗಳಿದ್ದು, ಆ ಪೈಕಿ 60 ಮುಖ್ಯ ಸಾಕ್ಷಿಗಳ ವಿಚಾರಣೆ ಒಂದು ವರ್ಷದಲ್ಲಿ ಅಂತ್ಯ ಆಗಬೇಕಿದೆ. ಹಾಗಾಗಿಯೇ ವಾರಕ್ಕೆ 4 ದಿನಗಳ ಕಾಲ ವಿಚಾರಣೆ ನಡೆಸಬೇಕು ಅಂತ ಕೋರ್ಟ್ ಸಮ್ಮತಿ ನೀಡಿದೆ. ಅಗತ್ಯವಿದ್ದರೆ 5ನೇ ದಿನವೂ ನಡೆಸಲಾಗುವುದು. ಸಿದ್ಧರಿರಿ ಎಂದಿದೆ.

ವಾರಕ್ಕೆ ಎರಡು ಸಾಕ್ಷಿಗಳಂತೆ ತಿಂಗಳಿಗೆ ಕನಿಷ್ಟ 8 ಸಾಕ್ಷಿಗಳ ವಿಚಾರಣೆ ಅತ್ಯಗತ್ಯವಾಗಿ ನಡೆಯಬೇಕಿದೆ. ಅದ್ರಂತೆ ಕೋರ್ಟ್ ಟ್ರಯಲ್ಸ್ ತೀವ್ರಗೊಂಡಿದ್ದು, ದರ್ಶನ್ ಪರ ವಕೀಲರು ನಟ ದರ್ಶನ್‌‌ರನ್ನ ಕೋರ್ಟ್‌ಗೆ ನೇರವಾಗಿ ಬಂದು ಅಟೆಂಡ್ ಆಗಲು ಅನುಮತಿ ಕೋರಿದ್ದಾರೆ. ಆದ್ರೆ ಕೋರ್ಟ್ ಅದಕ್ಕೆ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಒಂದು ವೇಳೆ ಅನುಮತಿ ನೀಡಿದ್ರೆ, ಒಂಥರಾ ಜೈಲಿನ ನಾಲ್ಕು ಗೋಡೆಗಳನ್ನ ಬಿಟ್ಟು ವಾಯುವಿಹಾರಕ್ಕೆ ಬಂದಂತೆ ಬಂದು ಹೋಗಬಹುದಾಗಿದೆ ದರ್ಶನ್. ಹಾಗಾದಲ್ಲಿ ಪಂಜರದ ಪಕ್ಷಿಗೆ ಕೊಂಚ ಸ್ವಾತಂತ್ರ ಸಿಕ್ಕಂತಾಗಲಿದೆ.

ಒಂದು ವೇಳೆ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅಲ್ಲದೆ ನೇರವಾಗಿ ಕೋರ್ಟ್‌ಗೆ ಹಾಜರಾಗಲು ಕೋರ್ಟ್ ಅನುಮತಿ ನೀಡಿದ್ರೆ ದಾಸನಿಗೆ ಇದು ಮತ್ತೊಂದು ಗೆಲುವಾಗಲಿದೆ. ಇಲ್ಲವಾದಲ್ಲಿ ನಾಲ್ಕು ಗೋಡೆಗಳ ನಡುವೆ, ಯಾರ ಸಂಪರ್ಕ, ಸಂದರ್ಶನ ಇಲ್ಲದೆ ಬೇಸರ ಹಾಗೂ ಬೇಜಾರಿನಲ್ಲೇ ಕಾಲ ಕಳೆಯಬೇಕಾಗುತ್ತದೆ. ತಮ್ಮ ನೆಚ್ಚಿನ ನಾಯಕನಟ ಯಾವಾಗ ಹೊರ ಬರ್ತಾನೆ ಅಂತ ಬಕ ಪಕ್ಷಿಗಳಂತೆ ಕಾಯ್ತಿರೋ ಅಭಿಮಾನಿಗಳಿಗಂತೂ ಭಾರೀ ನಿರಾಸೆ ಆಗ್ತಿದೆ. ಚಿತ್ರರಂಗ ಕೂಡ ದರ್ಶನ್ ಹೊರಬರಲಿ ಅನ್ನೋ ಆಶಯದಿಂದ ಎದುರು ನೋಡ್ತಿದೆ. ಎಲ್ಲಕ್ಕೂ ಕಾಲವೇ ಉತ್ತರಿಸಬೇಕಿದೆ. ಕಾನೂನಿನಡಿ ಏನೆಲ್ಲಾ ಆಗ್ಬೇಕೋ ಆ ಎಲ್ಲಾ ಪ್ರಕ್ರಿಯೆಗಳನ್ನ ಮುಗಿಸಿಯೇ ಸಂಕೋಲೆಗಳಿಂದ ಹೊರಬರಬೇಕಿದೆ ದಾಸ ದರ್ಶನ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version