ಗುರು ರಾಘವೇಂದ್ರ ಸ್ವಾಮಿಗಳ ಪವಿತ್ರ ಸನ್ನಿಧಿ ಮಂತ್ರಾಲಯದಲ್ಲಿ ಜೂನ್ 26ರಂದು ಸ್ಯಾಂಡಲ್‌ವುಡ್ ತಾರೆಯರ ಸಮ್ಮುಖದಲ್ಲಿ ಹೈ-ವೋಲ್ಟೇಜ್ ಸಂಗೀತ ಸಂಜೆ ಕಾರ್ಯಕ್ರಮ ನಡೆದಿದೆ. ಇದೇ ಅದ್ದೂರಿ ವೇದಿಕೆಯಲ್ಲಿ ಮಂತ್ರಾಲಯ ಶ್ರೀಗಳು, ಗುರು ರಾಯರು ಮತ್ತು ಮಠದ ವೈಭವ ಸಾರೋ ‘ರಾಯರ ದರ್ಶನ’ ಆಲ್ಬಂ ಸಾಂಗ್ ಅದ್ಧೂರಿಯಾಗಿ ಲಾಂಚ್ ಆಗಿದೆ. ವಿಶೇಷ ಅಂದ್ರೆ, ಈ ಸಾಂಗ್‌ಗೆ ಬಿಗ್ ಬಜೆಟ್ ಖರ್ಚು ಮಾಡಿದ್ರೂ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲ. ಸ್ಯಾಂಡಲ್‌ವುಡ್ ಸ್ಟಾರ್ಸ್ ಭಾಗಿ ಆಗಿರೋ ಈ ಡಿವೈನ್ ಈವೆಂಟ್‌ನ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ…
- ಮಂತ್ರಾಲಯದಲ್ಲಿ ಸ್ಯಾಂಡಲ್‌ವುಡ್ ತಾರೆಯರ ಮಹಾ ಸಂಗಮ..!
- ಭಾರತದ ಮೊದಲ ಭವ್ಯ ಟೆಂಪಲ್ ವಿಡಿಯೋ ಸಾಂಗ್‌ಗೆ ಮೆಗಾ ಲಾಂಚ್..!
- ಸುಬುಧೇಂದ್ರ ತೀರ್ಥ ಶ್ರೀಗಳಿಂದಲೇ ಆಲ್ಬಂ ಸಾಂಗ್ ಬಿಡುಗಡೆ
- ರಾಯರ ಭಕ್ತಿಗೆ ಅಜನೀಶ್ ನಿಸ್ವಾರ್ಥ ಸಂಗೀತ ಸೇವೆ..!
ಗಣೇಶ ಪ್ರೊಡಕ್ಷನ್ ಸಹಯೋಗದಲ್ಲಿ ‘ದಿ ನ್ಯೂ ಇಂಡಿಯನ್ ಟೈಮ್ಸ್ ಅಕಾಡೆಮಿ’ ಅರ್ಪಿಸಿರೋ ‘ರಾಯರ ದರ್ಶನ’ ಆಲ್ಬಂ ಸಾಂಗ್ ಅನ್ನು ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಬಿಡುಗಡೆ ಮಾಡಿದ್ದಾರೆ. ಜಾತ್ಯತೀತವಾಗಿ ಮೂಡಿಬಂದಿರೋ ಈ ಹಾಡಿನ ಬಗ್ಗೆ ಡೈರೆಕ್ಟರ್ ರಘು ಭಟ್ ಮತ್ತು ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಬಿಗ್ ಸೀಕ್ರೆಟ್ ಒಂದನ್ನ ಬಿಚ್ಚಿಟ್ಟಿದ್ದಾರೆ. ನೈಜತೆಗೆ ಹತ್ತಿರವಾಗಿ, ಬರೋಬ್ಬರಿ 8 ತಿಂಗಳು ಶ್ರಮಪಟ್ಟು ಶೂಟ್ ಮಾಡಲಾಗಿದ್ದು, ಮಠದಲ್ಲಿ ನಡೆಯೋ ದೈನಂದಿನ ಪೂಜೆ, ವಾರ್ಷಿಕ ಉತ್ಸವಗಳ ಕಂಪ್ಲೀಟ್ ವೈಭವ ಇಲ್ಲಿದೆ. ಇಡೀ ಇಂಡಿಯಾದಲ್ಲೇ ಇಂಥದ್ದೊಂದು ಭವ್ಯ ಟೆಂಪಲ್ ವಿಡಿಯೋ ಸಾಂಗ್ ಮಾಡಿರೋದು ಇದೇ ಮೊದಲು ಅನ್ನೋದು ಚಿತ್ರತಂಡದ ಹೆಮ್ಮೆ.
ಇನ್ನು ಸಂಜೆ ನಡೆದ ಅದ್ದೂರಿ ವೇದಿಕೆಯಲ್ಲಿ ಮತ್ತೊಂದು ಇಂಟರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಡೀತಿದ್ದ ಪ್ರತಿಷ್ಠಿತ ‘TNIT ಮೀಡಿಯಾ ಅವಾರ್ಡ್ಸ್’ ಕಾರ್ಯಕ್ರಮವನ್ನು ಈ ಬಾರಿ ಸಾಂಗ್ ರಿಲೀಸ್ ಇದ್ದಿದ್ದರಿಂದ ಸೆಪ್ಟೆಂಬರ್‌ಗೆ ಪೋಸ್ಟ್‌ಪೋನ್ ಮಾಡಲಾಗಿದೆ. ಆದರೆ, ಈ ವರ್ಷದ ಮೊದಲ ‘ಟಿ.ಎನ್.ಐ.ಟಿ ಮೀಡಿಯಾ ಪ್ರಶಸ್ತಿ’ಯನ್ನು ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರಿಗೇ ನೀಡಿ ಗೌರವಿಸಲಾಯಿತು. ವಿಶೇಷ ಅಂದ್ರೆ, ಶ್ರೀಗಳು ಪೀಠಾಧಿಪತಿಗಳಾಗುವುದಕ್ಕೂ ಮುನ್ನ ಪೂರ್ವಾಶ್ರಮದಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರಂತೆ. ಹಾಗಾಗಿಯೇ ಅವರಿಗೆ ಈ ಮೊದಲ ಮೀಡಿಯಾ ಪ್ರಶಸ್ತಿಯನ್ನು ಸ್ಯಾಂಡಲ್‌ವುಡ್ ಸ್ಟಾರ್ಸ್ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಈ ಅದ್ದೂರಿ ಸಮಾರಂಭಕ್ಕೆ ಹಿರಿಯ ಪತ್ರಕರ್ತ ರವಿ ಹೆಗಡೆ, ಪ್ರಣಯರಾಜ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ನೆನಪಿರಲಿ ಪ್ರೇಮ್, ಹಿರಿಯ ನಟಿಯರಾದ ಗಿರಿಜಾ ಲೋಕೇಶ್, ತಾರಾ ಅನುರಾಧ, ಸುಧಾರಾಣಿ, ಮಾನ್ವಿತಾ ಹರೀಶ್, ಭಾವನಾ ರಾವ್, ಸಿ.ಆರ್. ಬಾಬಿ ಹಾಗೂ ಕಾಂತಾರ ಗಾಯಕ ಅಬ್ಬಿ ವಿ ಸೇರಿದಂತೆ ದೊಡ್ಡ ತಾರಾಬಳಗವೇ ಸಾಕ್ಷಿಯಾಗಿತ್ತು. ನಾಗೇಶ್ ಆಚಾರ್ಯ ಅವರ ಅದ್ಭುತ ಛಾಯಾಗ್ರಹಣ ಇರೋ ಈ ಭಕ್ತಿಗೀತೆ ಪ್ರಸ್ತುತ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಧೂಳೆಬ್ಬಿಸ್ತಾ ಇದ್ದು, ಭಕ್ತರ ಮನಸ್ಸು ಗೆಲ್ಲುವಲ್ಲಿ ನೂರಕ್ಕೆ ನೂರರಷ್ಟು ಸಕ್ಸಸ್ ಆಗಿದೆ.
ರಾಯರ ದರ್ಶನ ಆಲ್ಬಂ ಸಾಂಗ್ ಭಾರತೀಯ ಚಿತ್ರರಂಗದಲ್ಲೇ ಮೂಡಿಬಂದಿರುವ ಮೊದಲ ಭವ್ಯ ‘ಟೆಂಪಲ್ ವಿಡಿಯೋ ಸಾಂಗ್’ ಆಗಿದ್ದು, ಮಂತ್ರಾಲಯದ ವಾರ್ಷಿಕ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಸೆರೆಹಿಡಿಯಲು ಚಿತ್ರತಂಡ ಬರೋಬ್ಬರಿ 8 ತಿಂಗಳುಗಳ ಕಾಲ ಶ್ರಮಪಟ್ಟು ನೈಜವಾಗಿ ಶೂಟ್ ಮಾಡಿದೆ. ‘ಕಾಂತಾರ’ ಖ್ಯಾತಿಯ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಬಿ ಲೋಕನಾಥ್ ಹಾಗೂ ಸಿ.ಆರ್. ಬಾಬಿ ಈ ಹಾಡಿಗೆ ದೈವಿಕ ಸ್ವರ ಸಂಯೋಜನೆ ಮಾಡಿದ್ದು, ವಿಶೇಷ ಅಂದರೆ ರಾಯರ ಮೇಲಿನ ಭಕ್ತಿಯಿಂದ ಇಡೀ ತಂಡ ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯದೇ ಕಂಪ್ಲೀಟ್ ಫ್ರೀಯಾಗಿ ಕೆಲಸ ಮಾಡಿದ್ದಾರೆ.
ಸುಗುಣ ರಘುಭಟ್ ನಿರ್ಮಾಣ ಹಾಗೂ ರಘು ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ, ಅಬ್ಬಿ ವಿ ಧ್ವನಿಯಾಗಿರುವ ಈ ಡಿವೈನ್ ಆಲ್ಬಂನಲ್ಲಿ ಬರೀ ಹಾಡಷ್ಟೇ ಅಲ್ಲದೆ, ಮಠದ ದೈನಂದಿನ ಪೂಜೆ, ಉತ್ಸವ ಹಾಗೂ ರಥೋತ್ಸವದ ಕಂಪ್ಲೀಟ್ ದೃಶ್ಯ ವೈಭವವಿದೆ.
