ಅಯೋಗ್ಯ-2.. ತೆರೆಕಂಡ ಒಂದೇ ವಾರದಲ್ಲಿ 10 ಕೋಟಿ ಕ್ಲಬ್‌ನತ್ತ ನಾಗಾಲೋಟ ಮುಂದುವರೆಸಿರೋ ಸಿನಿಮಾ. ಫ್ಯಾಮಿಲಿ ಬ್ಲಾಕ್‌ಬಸ್ಟರ್ ಅಯೋಗ್ಯ ಸೀಕ್ವೆಲ್‌ಗೆ ರಿಪೀಟೆಡ್ ಆಡಿಯೆನ್ಸ್ ನುಗ್ಗುತ್ತಿದ್ದು, ಚಿತ್ರಪ್ರೇಮಿಗಳ ಜೊತೆ ಚಿತ್ರರಂಗದ ತಾರೆಯರು ಕೂಡ ಶಹಬ್ಬಾಸ್ ಅಂದಿದ್ದಾರೆ. ಇತ್ತೀಚೆಗೆ ನಡೆದ ಸೆಲೆಬ್ರಿಟಿ ಶೋನಲ್ಲಿ ಯಾರೆಲ್ಲಾ ಭಾಗಿಯಾಗಿದ್ರು..?ಸಿನಿಮಾ ನೋಡಿ ಅವ್ರು ಕೊಟ್ಟ ಮಾರ್ಕ್ಸ್ ಎಷ್ಟು ಅನ್ನೋದನ್ನ ನೀವೇ ನೋಡಿ..
- ಸಕ್ಸಸ್ ಅಲೆಯಲ್ಲಿ ಅಯೋಗ್ಯ-2.. ಸೆಲೆಬ್ರಿಟೀಸ್ ಬೆಂಬಲ
- ಶರಣ್, ಅಜಯ್, ರಂಗಾಯಣ ರಘು & ರೀಷ್ಮಾ ಜೈಕಾರ
- ಮಂಡ್ಯ ಜಾತ್ರೆ ನೆನಪಿಸಿಕೊಂಡ ಅಮೂಲ್ಯ, ರಚ್ಚುಗೆ ತಾರೀಫ್
- ಅಪ್ಪನ ಸರ್ಪ್ರೈಸ್ ಕಂಡು ಮನೋರಂಜನ್ ದಿಲ್ಖುಷ್..!
ಬಾಕ್ಸ್ ಆಫೀಸ್‌ನಲ್ಲಿ ಈಗ ಸಿಂಗಲ್ ಸ್ಕ್ರೀನ್‌ನಿಂದ ಮಲ್ಟಿಪ್ಲೆಕ್ಸ್‌ವರೆಗೆ ಎಲ್ಲಿ ನೋಡಿದ್ರೂ ಅಯೋಗ್ಯ-2 ಹವಾ. ನೀನಾಸಂ ಸತೀಶ್ -ರಚಿತಾ ರಾಮ್ ಅಭಿನಯದ ಈ ಚಿತ್ರ ಪಂಚಾಯಿತಿ ಪಾಲಿಟಿಕ್ಸ್‌ನಿಂದ ಹಿಡಿದು ಸ್ಟೇಟ್ ಲೆವೆಲ್ ಹೈ-ಡ್ರಾಮಾವರೆಗೆ ಮಾಸ್ ಜೊತೆ ಕಾಮಿಡಿ ಮಿಕ್ಸ್ ಮಾಡಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಎಳೆದು ತಂದಿದೆ ಈ ಚಿತ್ರ. ಬಿಡುಗಡೆ ಆಗಿ 7ನೇ ದಿನಕ್ಕೆ ಕಾಲಿಟ್ಟ ಅಯೋಗ್ಯ 2ಕೋಟ್ಯಂತರ ಕಲೆಕ್ಷನ್ ಮಾಡಿ, 10 ಕೋಟಿ ಕ್ಲಬ್‌ನತ್ತ ಸಾಗುತ್ತಿರೋ ಈ ಸಿನಿಮಾ, ಪ್ರದರ್ಶನ ಹೆಚ್ಚಿಸಿಕೊಂಡು ಹೌಸ್‌ಫುಲ್ ಬೋರ್ಡ್‌ನೊಂದಿಗೆ ಗೆಲುವಿನ ವಿಜಯಯಾತ್ರೆ ಮುಂದುವರಿಸಿದೆ. ಪ್ರಜ್ಞಾ ಹಾಡಿನ ಕಮ್‌ಬ್ಯಾಕ್ ಪಂಚ್ ಮತ್ತು ಅರ್ಜುನ್ ಜನ್ಯ ಸಂಗೀತದ ಸಾಥ್ ಚಿತ್ರದ ಜೋಶ್ ಹೆಚ್ಚಿಸಿದೆ.
ಇನ್ನು ಸಕ್ಸಸ್ ಸೆಲೆಬ್ರಿಟಿ ಶೋಗೆ ಬಂದಿದ್ದ ನಟ ಶರಣ್, ಅಮೂಲ್ಯ, ಅಶ್ವಿನಿ, ಅಜೇಯ್ ರಾವ್, ಮನೋರಂಜನ್, ರೀಷ್ಮಾ ನಾಣಯ್ಯ, ಕಾರುಣ್ಯ ರಾಮ್, ವಿಕ್ಕಿ ವರುಣ್, ಬೃಂದಾ ಆಚಾರ್ಯ ಸೇರಿದಂತೆ ದೊಡ್ಡ ಬಳಗವೇ ಚಿತ್ರತಂಡವನ್ನು ಕೊಂಡಾಡಿದೆ. ಚಿತ್ರ ನೋಡುತ್ತಿದ್ದರೆ ಮಂಡ್ಯ ಜಾತ್ರೆಗೆ ಹೋಗಿ ಬಂದ ಅನುಭವವಾಯ್ತು, ರಚ್ಚು ಕಣ್ಣಿನಲ್ಲೇ ಆಕ್ಟ್ ಮಾಡಿ ಕಣ್ಣೀರು ತರಿಸಿದ್ದಾರೆ ಎಂದು ನಟಿ ಅಮೂಲ್ಯ ಹೇಳಿದ್ರೆ, ನಮ್ಮ ತಂದೆಯನ್ನು ಸ್ಕ್ರೀನ್ ಮೇಲೆ ಸರ್ಪ್ರೈಸ್ ಆಗಿ ನೋಡಿ ತುಂಬಾ ಖುಷಿಯಾಯ್ತು, ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಎಂದು ಮನೋರಂಜನ್ ಅಯೋಗ್ಯ 2ಗೆ ಜೈ ಅಂದಿದ್ದಾರೆ.
ಸ್ಕ್ರೀನ್ ಮೇಲೆ ರವಿಶಂಕರ್ ಮತ್ತು ಸತೀಶ್ ಜುಗಲ್ಬಂದಿ ಕಿಕ್ ಕೊಟ್ಟಿದೆ. ಹಾಗೆ ನಿರ್ದೇಶಕ ಮಹೇಶ್ ಕುಮಾರ್ ಮತ್ತು ನಿರ್ಮಾಪಕ ಎಂ. ಮುನೇಗೌಡ ಜೋಡಿಯ ಪಕ್ಕಾ ಲೋಕಲ್ ಎಂಟರ್‌ಟೈನರ್ ಆಗಿ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಹವಾ ಸೃಷ್ಟಿಸಿ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಇನ್ನು ಸಾಧು ಕೋಕಿಲ, ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ ಹಾಗೂ ಗಿರಿ ಶಿವಣ್ಣ ಕಾಮಿಡಿ ಟೈಮಿಂಗ್‌ಗೆ ಫ್ಯಾನ್ಸ್ ಕಂಪ್ಲೀಟ್ ಆಗಿ ಫಿದಾ ಆಗಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
