ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಸಾಹಸ ನಿರ್ದೇಶಕರಲ್ಲಿ ನಮ್ಮ ಕನ್ನಡಿಗ ರವಿವರ್ಮಾ ಕೂಡ ಒಬ್ರು. ಮಾಸ್ತಿಗುಡಿ ಇನ್ಸಿಡೆಂಟ್ ಆದ ಬಳಿಕ ಕೂಡ ಕುಗ್ಗಿಲ್ಲ ರವಿವರ್ಮಾ ವರ್ಚಸ್ಸು. ಇಂದಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋ ಮಾಸ್ಟರ್ ಸದ್ಯ ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆ ಉಸ್ತಾದ್ ಕಹಾನಿ ಇಲ್ಲಿದೆ.
- ಪವನ್ ಕಲ್ಯಾಣ್‌ಗೆ ಕನ್ನಡಿಗ ರವಿವರ್ಮಾ ಫೈಟ್ ಕಂಪೋಸ್
- ಉಸ್ತಾದ್ ಭಗತ್ ಸಿಂಗ್‌ನಲ್ಲಿ ಒಂದಲ್ಲ ಎರಡಲ್ಲ 3 ಸ್ಟಂಟ್ಸ್..!
- ಅಜ್ಞಾತವಾಸಿ, ವಕೀಲ್ ಸಾಬ್ ಬಳಿಕ ಹ್ಯಾಟ್ರಿಕ್ ಕಾಂಬೋ
- ಟಾಲಿವುಡ್ ಅಷ್ಟೇ ಅಲ್ಲ.. ಬಾಲಿವುಡ್‌ನಲ್ಲೂ ಸಖತ್ ಬ್ಯುಸಿ
ವಕೀಲ್ ಸಾಬ್, ಭೀಮ್ಲಾ ನಾಯಕ್ ಹಾಗೂ ಬ್ರೋ.. 2021ರಿಂದ 2023ರ ತನಕ ಬ್ಯಾಕ್ ಟು ಬ್ಯಾಕ್ ವರ್ಷಕ್ಕೊಂದು ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿದ್ರು ಪವರ್ ಸ್ಟಾರ್ ಪವನ್ ಕಲ್ಯಾಣ್. ನಂತ್ರ ರಾಜಕಾರಣದತ್ತ ವಾಲಿದ ಪವನ್, ಡಿಸಿಎಂ ಆಗುವ ಮೂಲಕ ರಾಜ್ಯ ರಾಜಕಾರಣದ ಗೇಮ್ ಚೇಂಜರ್ ಆದ್ರು. ಆದಾಗ್ಯೂ ಕೂಡ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳು ಸದ್ಯ ಆಂಧ್ರ ಉಪ ಮುಖ್ಯಮಂತ್ರಿ ಕೈಯಲ್ಲಿವೆ.
ಯೆಸ್.. ಡಿಸಿಎಂ ಆದ ಬಳಿಕ ಹರಿಹರ ವೀರಮಲ್ಲು ಹಾಗೂ ಓಜಿ ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಮಾಡಿರೋ ಪವನ್ ಕಲ್ಯಾಣ್, ಇದೀಗ ಉಸ್ತಾದ್ ಭಗತ್ ಸಿಂಗ್ ಕೂಡ ಮುಗಿಸಿಕೊಡ್ತಿದ್ದಾರೆ. ರಾಜಕೀಯ ಒತ್ತಡಗಳ ನಡುವೆ, ಎಷ್ಟೇ ಬ್ಯುಸಿ ಇದ್ರೂ ಸಹ ಕಮಿಟ್ ಆಗಿರೋ ಸಿನಿಮಾನ ಮುಗಿಸೋಕೆ ಮುಂದಾಗಿದ್ದಾರೆ. ಸದ್ಯ ಸಾಹಸ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗ್ತಿದ್ದು, ನಮ್ಮ ಕನ್ನಡದ ರವಿವರ್ಮಾ ಮಾಸ್ಟರ್ ಉಸ್ತಾದ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಈ ಹಿಂದೆ ಪವರ್ ನಟನೆಯ ಅಜ್ಞಾತವಾಸಿ ಹಾಗೂ ವಕೀಲ್ ಸಾಬ್ ಅನ್ನೋ ಎರಡು ಬಿಗ್ ಎಂಟರ್‌ಟೈನ್ಮೆಂಟ್ ಚಿತ್ರಗಳಿಗೆ ಎಲ್ಲಾ ಫೈಟ್ಸ್ ಕಂಪೋಸ್ ಮಾಡಿದ್ದ ರವಿವರ್ಮಾ ಮಸ್ಟರ್, ಉಸ್ತಾದ್‌ನಲ್ಲಿ ಮೂರು ಮುಖ್ಯ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡ್ತಿದ್ದಾರೆ. ಈಗಾಗ್ಲೇ ಒಂದು ಫೈಟ್ ಮುಗಿಸಿಕೊಟ್ಟಿರೋ ವರ್ಮಾ ಮಾಸ್ಟರ್, ಎರಡನೇ ಫೈಟ್ ಮಾಡ್ತಿದ್ದಾರಂತೆ. ಇವೆರಡರ ಜೊತೆ ಉಸ್ತಾದ್ ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ಕೂಡ ನಮ್ಮ ಕನ್ನಡ ಮೂಲದ ಮಾಸ್ಟರ್ ಮಾಡ್ತಿರೋದು ಇಂಟರೆಸ್ಟಿಂಗ್.
ಗಬ್ಬರ್ ಸಿಂಗ್ ಖ್ಯಾತಿಯ ಹರೀಶ್ ಶಂಕರ್ ನಿರ್ದೇಶನದ ಉಸ್ತಾದ್ ಭಗತ್ ಸಿಂಗ್‌ನಲ್ಲಿ ಪವನ್ ಖಾಕಿ ಖದರ್ ತೋರಲಿದ್ದು, ಗಬ್ಬರ್ ಸಿಂಗ್ ಗತ ವೈಭವ ಮರುಕಳಿಸಲಿದೆ. ಇದ್ರಿಂದ ಬಾಕ್ಸ್ ಆಫೀಸ್‌ನಲ್ಲಿ ಹಿಸ್ಟರಿ ಕೂಡ ರಿಪೀಟ್ ಆಗಲಿದೆ.
ಇದಲ್ಲದೆ ಬಾಲಿವುಡ್‌ನಲ್ಲಿ ಸನ್ನಿ ಡಿಯೋಲ್, ವರುಣ್ ಧವನ್ ಹಾಗೂ ಅಹಾನ್ ಶೆಟ್ಟಿ ನಟನೆಯ ಬಾರ್ಡರ್-2 ಚಿತ್ರದ ಎಲ್ಲಾ ಫೈಟ್ಸ್‌ನ ರವಿವರ್ಮಾ ಅವರೇ ಡೈರೆಕ್ಟ್ ಮಾಡ್ತಿರೋದು ಹೆಮ್ಮೆಯ ವಿಷಯ. ಸದ್ಯ ಕನ್ನಡದಲ್ಲಿ ಯುವರಾಜ್‌ಕುಮಾರ್‌ರ ಎಕ್ಕ, ಸಂಚಿತ್ ಸಂಜೀವ್ ನಟನೆಯ ಮ್ಯಾಂಗೋ ಪಚ್ಚ ಹಾಗೂ ಸುಕ್ಕಾ ಸೂರಿಯ ಹೊಚ್ಚ ಹೊಸ ಸಿನಿಮಾಗಳಿಗೆ ಸ್ಟಂಟ್ಸ್ ಮಾಡ್ತಿದ್ದಾರೆ ರವಿವರ್ಮಾ. ಅದೇನೇ ಇರಲಿ. ನಮ್ಮ ಕನ್ನಡ ಟೆಕ್ನಿಷಿಯನ್‌ಗೆ ಹೀಗೆ ಭಾರತದಾದ್ಯಂತ ಎಲ್ಲೆಡೆ ಡಿಮ್ಯಾಂಡ್ ಇರೋದು ಖುಷಿಯ ವಿಚಾರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್