ನಮ್ಮ ಕನ್ನಡತಿ ಶ್ರೀಲೀಲಾ ಜೊತೆ ಮಾಸ್ ಮಾತ್ರೆಗೆ ಸಜ್ಜಾಗಿದ್ದಾರೆ ಮಾಸ್ ಮಹಾರಾಜ ರವಿತೇಜಾ. ಯೆಸ್.. ಇತ್ತೀಚೆಗೆ ತಮ್ಮದೇ ಮಲ್ಟಿಪ್ಲೆಕ್ಸ್ ಮೂವೀಸ್ ಓಪನ್ ಮಾಡಿದ ರವಿತೇಜಾ, ಇದೀಗ ಮತ್ತೊಂದು ಮೆಗಾ ಮಾಸ್ ವೆಂಚರ್‌ನಿಂದ ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಡ್ತಿದ್ದಾರೆ.
- ಕ್ಯೂಟ್ ಕ್ವೀನ್ ಶ್ರೀಲೀಲಾ ಜೊತೆ ರವಿತೇಜಾ ಮಾಸ್ ಜಾತ್ರೆ
- ಮತ್ತೆ ಒಂದಾದ ಧಮಾಕ ಜೋಡಿ.. ಈ ಬಾರಿಯೂ ಮೋಡಿ
2022ರಲ್ಲಿ ಧಮಾಕ ಅನ್ನೋ ಧಮಾಕೇದಾರ್ ಸಿನಿಮಾ ನೀಡಿದ್ದ ಮಾಸ್ ಮಹಾರಾಜ ರವಿತೇಜಾ ಹಾಗೂ ನಮ್ಮ ಕನ್ನಡದ ಕ್ಯೂಟ್ ಕ್ವೀನ್ ಶ್ರೀಲೀಲಾ ಕಾಂಬೋ ಮತ್ತೊಮ್ಮೆ ಒಂದಾಗಿದೆ. ಯೆಸ್.. ಮಾಸ್ ಜಾತರ ಅನ್ನೋ ಟೈಟಲ್‌ನಲ್ಲಿ ಸಿನಿಮಾ ತಯಾರಾಗಿದ್ದು, ಅದ್ರ ಫಸ್ಟ್ ಲುಕ್ ಟೀಸರ್ ಕೂಡ ರಿಲೀಸ್ ಆಗಿದೆ. ಇದೊಂದು ದೃಶ್ಯಗುಚ್ಚ ಸಖತ್ ಪ್ರಾಮಿಸಿಂಗ್ ಆಗಿದ್ದು, ಈ ಬಾರಿ ಕೂಡ ಈ ಜೋಡಿ ಮೋಡಿ ಮಾಡೋ ಮುನ್ಸೂಚನೆ ನೀಡಿದೆ.
ರೈಲ್ವೇ ಪೊಲೀಸ್ ಆಗಿ ರವಿತೇಜಾ ಖದರ್ ಜೋರಿದ್ದು, ಶ್ರೀಲೀಲಾ ಗ್ಲಾಮರ್ ಜೊತೆ ಡ್ಯಾನ್ಸ್ ಸ್ಟೆಪ್ಸ್ ಮಜಬೂತಾಗಿವೆ. ಭಾನು ನಿರ್ದೇಶನದ ಈ ಮಾಸ್ ಜಾತರ ಸಿನಿಮಾ ಇದೇ ಆಗಸ್ಟ್ 27ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ. ರವಿತೇಜಾಗೆ ವಿಶೇಷವಾದ ಫ್ಯಾನ್ ಫಾಲೋಯಿಂಗ್ ಇದ್ದು, ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದೆ. ಇತ್ತೀಚೆಗೆ ರವಿತೇಜಾ ಆರು ಸ್ಕ್ರೀನ್‌ಗಳುಳ್ಳ ಮಲ್ಟಿಪ್ಲೆಕ್ಸ್ ಆರಂಭಿಸಿದ್ದು, ತಮ್ಮ ಮಾಸ್ ಜಾತರ ಸಿನಿಮಾನ ತಮ್ಮದೇ ಥಿಯೇಟರ್‌ನಲ್ಲಿ ಫಸ್ಟ್ ಟೈಂ ರಿಲೀಸ್ ಮಾಡೋದ್ರ ಮೂಲಕ ಸಂಭ್ರಮಿಸಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್