ಕಿರಿಕ್ ಹುಡುಗಿ ಮಾತಡದೇ ಮೌನವಾಗಿದ್ದರು ಆ ಮೌನದಲ್ಲೇ ಏನಾದರು ಒಂದು ಸಸ್ಪೆನ್ಸ್ ಜೊತೆಗೆ ಟ್ವಿಸ್ಟ್ ಕೂಡ ಇಟ್ಟಿರ್ತಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಏನೋ ಸಮ್ಥಿಂಗ್ ಸಮ್ಥಿಂಗ್ ನಡೀತಾ ಇದೇ ಅನ್ನೋ ವಿಚಾರ ಎಲ್ಲರಿಗೂ ಗೊತ್ತೇಯಿದೆ. ನಾವಿಬ್ರೂ ಜಸ್ಟ್ ಫ್ರೆಂಡ್ಸ್ ಅಷ್ಟೇ ಬೇರೆ ಏನೂ ಇಲ್ಲ ಅಂತ ಹೇಳುತ್ತಿದ್ದ ಈ ಜೋಡಿ ಈಗ ರೋಮ್ ನ ಗಲ್ಲಿ ಗಲ್ಲಿಯಲ್ಲಿ ಮೋಜು ಮಸ್ತಿ ಮಾಡ್ತಾ 2026 ನ್ನ ವೆಲ್ ಕಂ ಮಾಡಿದ್ದಾರೆ. ಸದ್ಯ ರಶ್ಮಿಕಾ ಈ ವರ್ಷ ಮಿಸ್ ಟು ಮಿಸಸ್ ಆಗ್ತಾರಾ? ಈ ಸ್ಟೋರಿ ನೋಡಿ.
- ರೋಮ್‌ನಲ್ಲಿ ರೌಡಿ ಜೋಡಿ ಝೂಮ್..!
- 2026ರಲ್ಲಿ ರಶ್ಮಿಕಾಗೆ ಮಿಸ್ ಟು ಮಿಸೆಸ್ ಪ್ರಮೋಷನ್
- ರೋಮ್ ನಲ್ಲಿ ನಿಶ್ಚಿತಾರ್ಥ.. ಡೆಸ್ಟಿನೇಷನ್ ಎಂಗೇಜ್ಮೆಂಟ್
- ಫೆಬ್ರವರಿ 26ಕ್ಕೆ ಗೀತಗೋವಿಂದಂ ಜೋಡಿ ಕಲ್ಯಾಣ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಪ್ರೀತಿ ಬಗ್ಗೆ ಗುಸಗುಸು ಇಂದು ನಿನ್ನೆಯದ್ದಲ್ಲ. ಇವರು ಪ್ರೀತಿಯಲ್ಲಿದ್ದಾರೆ ಎಂಬುದು ಬಹು ವರ್ಷಗಳಿಂದ ಕೇಳಿಬರುತ್ತಿರುವ ಅಂತೆ-ಕಂತೆಗಳು. ಈ ಪ್ರೇಮಪಕ್ಷಿಗಳೂ ಕೂಡಾ ಆಗಾಗ್ಗ ವದಂತಿಗಳಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು.ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮತ್ತೆ ಹಿಂತಿರುಗಿ ನೋಡಿದೇ ಇಲ್ಲ ಸ್ಯಾಂಡಲ್ವುಡ್ನಿಂದ ಟಾಲಿವುಡ್ಗೆ ಹಾರಿದ ರಶ್ಮಿಕಾ ಮುಂದೆ ಪ್ಯಾನ್ ಇಂಡಿಯಾ ನಟಿಯಾಗಿ, ನ್ಯಾಷನಲ್ ಕ್ರಶ್ ಆಗಿ ಮಿಂಚಿದ್ರು.
ರಶ್ಮಿಕಾ ಮುಟ್ಟಿದೆಲ್ಲವೂ ಚಿನ್ನವೇ ಆಯ್ತು. ಗೀತಾ ಗೋವಿಂದಂ ಪುಷ್ಪ ಸರಣಿ, ವಾರಿಸು, ಅನಿಮಲ್ ಛಾವಾ, ಕುಬೇರ.. ದಿ ಗರ್ಲ್ ಫ್ರೆಂಡ್ ಹೀಗೇ ರಶ್ಮಿಕಾ ನಟನೆಯ ಎಲ್ಲಾ ಸಿನಿಮಾಗಳು ಬಾಕ್ಸ್ಆಫೀಸ್ನಲ್ಲಿ ಗೆದ್ದು ಬೀಗಿತ್ತು. ಸದ್ಯ ಭಾರತೀಯ ಚಿತ್ರರಂಗದಲ್ಲೇ ಬಹುಬೇಡಿಕೆಯ ನಟಿಯಾಗಿ ಹೊರಹೋಮ್ಮಿರುವ ರಶ್ಮಿಕಾಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬಂದಿದೆ.
ಯೆಸ್, ಕಿರಿಕ್ ಚೆಲುವೆ ಸಿನಿಮಾಗಳಿಂತಲೂ ಹೆಚ್ಚು ತಮ್ಮ ಪರ್ಸನಲ್ ಲೈಫ್ ವಿಚಾರದಲ್ಲೂ ಆಗಾಗ ಸುದ್ದಿಯಾಗುತ್ತಲೇ ಇರ್ತಾರೆ. ಸದ್ಯ ರಶ್ ಹಾಗು ರೌಡಿ ಬಾಯ್ ಕಳೆದ ವರ್ಷ 2025 ಅಕ್ಟೋಬರ್ನಲ್ಲಿ ನಿಶ್ಛಿತಾರ್ಥವನ್ನು ತೀರಾ ಗೌಪ್ಯವಾಗಿ ಮಾಡಿಕೊಂಡಿದ್ದಾರೆ ಕೇವಲ ಆಪ್ತ ಗೆಳೆಯರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ನೆರವೇರಿದೆ.
ಅಂದಹಾಗೆ ಶ್ರೀವಲ್ಲಿ ಹೊಸ ವರ್ಷವನ್ನ ಅದ್ದೂರಿಯಾಗಿಯೇ ಆಚರಿಸಿದ್ದಾರೆ. ಗೆಳೆಯ ಗೆಳತಿಯರೊಟ್ಟಿಗೆ ಸೇರಿ , ರೋಮ್ ನ ಗಲ್ಲಿ ಗಲ್ಲಿಯಲ್ಲಿ ವಿಜಯದೇವರಕೊಂಡ ಜೊತೆಗೆ ಮೋಜು ಮಸ್ತಿ ಮಾಡ್ತಾ 2026 ನ್ನ ವೆಲ್ ಕಂ ಮಾಡಿರೋ ರಶ್ಮಿಕಾ ಹಳೆಯ ವರ್ಷದ ನೆನಪಿನ ಜೊತೆಗೆ ಹೊಸ ವರ್ಷದ ನೆನಪನ್ನ ಹಂಚಿಕೊಂಡಿದ್ದಾರೆ. ಇಬ್ಬರು ಪೋಸ್ಟ್ ಮಾಡಿರೋ ಫೋಟೋಸ್ ನೋಡಿದ್ರೆ ಸೇಮ್ ಜಾಗದಲ್ಲಿ ಒಟ್ಟಿಗೆ ರೋಮ್ ನಲ್ಲಿ ಈ ಜೋಡಿ ಸಮಯ ಕಳೆದಿದ್ದಾರೆ ಎಂದು ಗೊತ್ತಾಗುತ್ತೆ.
ಮಾಲ್ಡೀವ್ಸ್, ಓಮನ್, ಶ್ರೀಲಂಕಾ, ಸ್ವಿಜರ್ ಲ್ಯಾಂಡ್ ಅಂತ ಸುತ್ತಾಡೋ ರಶ್ಮಿಕಾ ವಿಜಯ್ ಈ ಬಾರಿ ಹೊಸ ವರ್ಷವನ್ನ ರೋಮ್ ನಲ್ಲಿ ಆಚರಿಸಿದ್ದಾರೆ. ಒಟ್ಟಿಗೆ ಇದ್ದರೂ ಒನ್ಸ್ ಅಗೇನ್ ಯಾರಿಗೂ ಕಾಣದಂತೆ ಕದ್ದು ಮುಚ್ಚಿ ತೆಗೆದುಕೊಂಡಿರೋ ಪೋಟೋಗಳು ಈ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿವೆ. ಎಂಗೇಜ್ಮೆಂಟ್ ಆಯಿತು ಇನ್ನೇನಿದ್ರೂ ಮದುವೆ ಆಗೋದೊಂದೇ ಬಾಕಿ. ಇದೆ ವರ್ಷ ಫೆಬ್ರವರಿ 26ಕ್ಕೆ ರಾಜಸ್ಥಾನದ ಉದಯಪುರ ಪ್ಯಾಲೇಸ್ ನಲ್ಲಿ ರಶ್ಮಿಕಾ -ವಿಜಯ್ ಸಪ್ತಪದಿ ತುಳಿಯೋದು ಬಹುತೇಕ ಫಿಕ್ಸ್ ಎನ್ನಲಾಗ್ತಿದೆ. ಎನಿವೇ ಕದ್ದು ಮುಚ್ಚಿ ಓಡಾಗ್ತಿರೋ ಜೋಡಿ ಆದಷ್ಟು ಬೇಗ ಮಿಸ್ಟರ್ ಆಂಡ್ ಮಿಸಸ್ ಅಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





