ನ್ಯಾಷನಲ್ ಕ್ರಶ್ ರಶ್ಮಿಕಾ ನಟ ವಿಜಯ್ ದೇವರಕೊಂಡ ಕೈ ಹಿಡಿದ ಮೇಲೆಯೂ ಸಹ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಸುದ್ದಿ ಚಾಲ್ತಿಯಲ್ಲಿದೆ. ಇಲ್ಲಿಯವರೆಗೆ ಯಾರು ಯಾರನ್ನ ಬಿಟ್ಟು ಹೋದ್ರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಎಲ್ಲಾ ಅಂತೆ-ಕಂತೆಗಳ ಸುದ್ದಿಗಳೇ ಹರಿದಾಡಿದ್ದವು. ಆದ್ರೀಗ ರಶ್ಮಿಕಾ-ರಕ್ಷಿತ್ ಮದುವೆ ಹಾಗೂ ರಿಲೇಷನ್‌ಶಿಪ್ ಬ್ರೇಕಪ್‌ಗೆ ಅಸಲಿ ಕಾರಣವನ್ನ ಖುದ್ದು ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವ್ರೇ ರಿವೀಲ್ ಮಾಡಿದ್ದಾರೆ. ಅದ್ರ ಎಕ್ಸ್‌ಕ್ಲೂಸಿವ್ ಝಲಕ್ ಇಲ್ಲಿದೆ.
- ರಕ್ಷಿತ್-ರಶ್ಮಿಕಾ ಮದ್ವೆ ಬ್ರೇಕಪ್‌ಗೆ ರಕ್ಷಿತ್ ಶೆಟ್ಟಿಯೇ ಕಾರಣ..!
- ಗ್ಯಾರಂಟಿಯಲ್ಲಿ ರಶ್ಮಿಕಾ ತಾಯಿ ಬಿಚ್ಚಿಟ್ರು ಭಯಾನಕ ಸತ್ಯಾಂಶ
- 31 ವರ್ಷದ ಹುಡ್ಗ.. 21 ವರ್ಷದ ಹುಡ್ಗಿ.. ಹಿಡಿತಕ್ಕಾಗಿ ಯತ್ನ
- ಗೀತ ಗೋವಿಂದಂ ಹಿಟ್ ಬಳಿಕ ನಟನೆ ನಿಲ್ಲಿಸುವಂತೆ ಒತ್ತಾಯ
ಫೆಬ್ರವರಿ 26ರಂದು ಗೀತ ಗೋವಿಂದಂ ಚಿತ್ರದ ಕೋ-ಸ್ಟಾರ್ ವಿಜಯ್ ದೇವರಕೊಂಡ ಕೈ ಹಿಡಿದು, ಸಪ್ತಪದಿ ತುಳಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ. ಆದ್ರೆ ಆಕೆಯ ಮದುವೆಯ ಬಳಿಕವೂ ಸಹ ರಕ್ಷಿತ್ ಶೆಟ್ಟಿ ಜೊತೆಗಿನ ಹಳೆಯ ಲವ್, ಫ್ರೆಂಡ್ಶಿಪ್, ಎಂಗೇಜ್ಮೆಂಟ್, ಮದ್ವೆ ಬ್ರೇಕಪ್, ರಿಲೇಷನ್‌ಶಿಪ್ ಬ್ರೇಕಪ್ ಬಗ್ಗೆ ಚರ್ಚೆಗಳಾಗ್ತಿವೆ.
ಯೆಸ್.. 2017ರ ಜುಲೈ 3ರಂದು ವಿರಾಜಪೇಟೆಯ ರಶ್ಮಿಕಾ ತಂದೆ ಮದನ್ ಮಂದಣ್ಣ ಮಾಲೀಕತ್ವದ ಸೆರೆನಿಟಿ ಹಾಲ್‌ನಲ್ಲಿ ರಕ್ಷಿತ್-ರಶ್ಮಿಕಾ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು. ಅದಾದ ಬಳಿಕ ರಶ್ಮಿಕಾ ಗೀತ ಗೋವಿಂದಂ ಚಿತ್ರದ ನಟನೆಗೆ ಹೈದ್ರಾಬಾದ್ ಫ್ಲೈಟ್ ಏರಿದ್ರು. ಆಗಲೇ ಶುರುವಾಗಿತ್ತು ರಕ್ಷಿತ್-ರಶ್ಮಿಕಾ ನಡುವೆ ಬಿಕ್ಕಟ್ಟು. ಅದ್ರಲ್ಲೂ ಗೀತ ಗೋವಿಂದಂ ಚಿತ್ರದ ಕ್ಲೈಮ್ಯಾಕ್ಸ್ ಕಿಸ್ ಸೀನ್ ಇವ್ರ ಸಂಬಂಧಗಳು ಮುರಿದು ಬೀಳಲು ನಾಂದಿ ಹಾಡಿತ್ತು.
ರಶ್ಮಿಕಾ-ರಕ್ಷಿತ್ ರಿಲೇಷನ್‌ಶಿಪ್ ಮುರಿದು ಬೀಳಲು ನೇರ ಕಾರಣ ರಕ್ಷಿತ್ ಶೆಟ್ಟಿ. ಮಿಡ್ ನೈಟ್ 12 ಗಂಟೆಗೆಲ್ಲಾ ಕಾಲ್ ಮಾಡಿ, ಹೈದ್ರಾಬಾದ್‌ನಿಂದ ಕೂಡಲೇ ಬೆಂಗಳೂರಿಗೆ ಬರಬೇಕು ಅಂತಿದ್ರಂತೆ ರಕ್ಷಿತ್. ಅಲ್ಲದೆ ಸದಾ ಆಕೆಯನ್ನ ಹಿಡಿತದಲ್ಲಿ ಇಟ್ಕೊಳ್ಳೋಕೆ ಯತ್ನಿಸುತ್ತಿದ್ದರಂತೆ. ಗೀತ ಗೋವಿಂದಂ ಹಿಟ್ ಆದ ಬಳಿಕ ಅಂತೂ ಇನ್ಮೇಲೆ ಸಿನಿಮಾ ಮಾಡಲ್ಲ ಅಂತ ಟ್ವೀಟ್ ಮಾಡು ಅಂತ ರಶ್ಮಿಕಾ ಮೇಲೆ ಸಿಕ್ಕಾಪಟ್ಟೆ ಒತ್ತಡ ಹೇರಿದ್ದರಂತೆ ರಕ್ಷಿತ್. ಇದೆಲ್ಲವನ್ನ ನಾವು ಹೇಳ್ತಿರೋದಲ್ಲ. ಖುದ್ದು ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವರೇ ಹೊಸ ಹಾಕಿದ್ದಾರೆ. ಆ ಭಯಾನಕ ಸತ್ಯಾಂಶಗಳನ್ನ ನೀವೂ ಒಮ್ಮೆ ಕೇಳಿಸಿಕೊಂಡುಬಿಡಿ.
ರಶ್ಮಿಕಾ–ರಕ್ಷಿತ್ ಬ್ರೇಕಪ್‌ಗೆ ರಕ್ಷಿತ್ ಶೆಟ್ಟಿಯೇ ಕಾರಣ
ಬಹುಶಃ ಇನ್ಮೇಲೆ ಯಾರೂ ರಕ್ಷಿತ್-ರಶ್ಮಿಕಾ ಬ್ರೇಕಪ್ ಬಗ್ಗೆ ಮಾತಾಡಲ್ಲ ಅನಿಸುತ್ತೆ. ಯಾಕಂದ್ರೆ ಇಷ್ಟು ದಿನ ಗುಟ್ಟಾಗಿದ್ದ ಆ ಸತ್ಯಾಂಶಗಳೆಲ್ಲಾ ಕೊನೆ ಆಟದ ಮೂಲಕ ಬಯಲಾಗಿವೆ. ಸೋ.. ರಶ್ಮಿಕಾ ಕೂಡ ವಿಜಯ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇತ್ತ ರಕ್ಷಿತ್ ಕೂಡ ಸಿನಿಮಾ ಮಾಡೋ ಧಾವಂತದಲ್ಲಿದ್ದಾರೆ. ಇಬ್ಬರೂ ಪರಸ್ಪರ ನ್ಯೂ ಲೈಫ್ ಶುರು ಮಾಡಿ, ಮೂವ್ ಆನ್ ಆಗಿ ಬಹಳ ದಿನಗಳೇ ಆಗಿದೆ. ಹಾಗಾಗಿ ಇಬ್ಬರಿಗೂ ಶುಭ ಕೋರೋಣ, ಶುಭವಾಗಲಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





