ರಶ್ಮಿಕಾ ಹೇಳಿಕೆ ವಿವಾದ: “ಗೊತ್ತಿಲ್ಲದೇ ತಪ್ಪಾಗಿ ಹೇಳಿರಬೇಕು, ಕ್ಷಮಿಸೋಣ”, ಹರ್ಷಿಕಾ ಪೂಣಚ್ಚ

1 (18)

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಆದರೆ, ಇದನ್ನು ವಿವಾದ ಎಂದು ಕರೆಯಲು ಬಾರದು, ರಶ್ಮಿಕಾ ಗೊತ್ತಿಲ್ಲದೆ ತಪ್ಪಾಗಿ ಹೇಳಿರಬೇಕು, ಅವರನ್ನು ಕ್ಷಮಿಸಬೇಕು ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

ರಶ್ಮಿಕಾ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ, “ಕೊಡವ ಸಮುದಾಯದಿಂದ ಇದುವರೆಗೆ ಯಾರೂ ಸಿನಿಮಾ ರಂಗಕ್ಕೆ ಬಂದಿಲ್ಲ, ನಾನೇ ಮೊದಲಿಗೆ ಎನಿಸುತ್ತೆ” ಎಂದು ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಡವ ಸಮುದಾಯದಿಂದ ಈಗಾಗಲೇ ಹಲವರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವುದರಿಂದ ಆಕ್ರೋಶಕ್ಕೆ ಕಾರಣವಾಯಿತು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹರ್ಷಿಕಾ ಪೂಣಚ್ಚ, “ರಶ್ಮಿಕಾ ಗೊತ್ತಿಲ್ಲದೆ ತಪ್ಪಾಗಿ ಹೇಳಿರಬೇಕು. ಅವರು ತೆಲುಗು, ತಮಿಳು, ಬಾಲಿವುಡ್‌ನಲ್ಲಿ ಮೊದಲ ಕೊಡವ ನಟಿ ಎಂದು ಹೇಳಲು ಬಯಸಿರಬಹುದು. ರಶ್ಮಿಕಾ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಸರಿಯಲ್ಲ. ಅವರಿಗೆ ನನ್ನ ಗೌರವವಿದೆ, ಏಕೆಂದರೆ ಅವರು ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ, ಬಾಲಿವುಡ್‌ನಲ್ಲೂ ಅವರೇ ಮೊದಲಿಗರಲ್ಲ” ಎಂದಿದ್ದಾರೆ.

ಹರ್ಷಿಕಾ ಮಾತನಾಡುತ್ತ, “ನಮ್ಮ ಕೊಡವ ಸಮುದಾಯ ಸಣ್ಣವಾದರೂ, ಸಿನಿಮಾ, ಸೈನ್ಯ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೊಡವರು ಗುರುತಿಸಿಕೊಂಡಿದ್ದಾರೆ. ಕೊಡವ ಸಮುದಾಯದಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ, ಎಲ್ಲರೂ ಸಮಾನರು” ಎಂದು ತಿಳಿಸಿದ್ದಾರೆ.

ಕೊಡವ ಸಮುದಾಯದಿಂದ ಈಗಾಗಲೇ ಹಲವು ನಟಿಯರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ನಟಿ ಪ್ರೇಮ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿದಂತೆ ಇತರರು ಕನ್ನಡ ಮತ್ತು ಇತರ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

Exit mobile version