ರಶ್ಮಿಕಾ ಈಗ ಇಂಟರ್‌‌ ನ್ಯಾಷನಲ್..ಚಿರಂಜೀವಿ, ನಾಗಾರ್ಜನ್‌ಗೂ ಕ್ರಶ್

ರಕ್ಷಿತ್ ಟು ಬಿಗ್‌ಬಿ, ಸಲ್ಮಾನ್ ಖಾನ್..ಎಲ್ರಿಗೂ ಫೇವರಿಟ್

Untitled design 2025 06 24t132703.349

ಕೂರ್ಗ್ ಚೆಲುವೆ, ಕಿರಿಕ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು ದಶಕ ಆಗಿಲ್ಲ. ಆಗಲೇ ನ್ಯಾಷನಲ್ ಕ್ರಶ್ ಪಟ್ಟ ಗಿಟ್ಟಿಸಿ ಆಗಿದೆ. ಚಿರಂಜೀವಿ, ನಾಗಾರ್ಜನ್‌ಗೂ ಕ್ರಶ್ ಆಗಿರೋ ಈಕೆ, ಸದ್ಯ ಸಾಲು ಸಾಲು ಸಕ್ಸಸ್‌‌ಫುಲ್ ಸಿನಿಮಾಗಳಿಂದ ಇಂಟರ್‌‌ನ್ಯಾಷನಲ್ ಕ್ರಶ್. ಅದನ್ನ ಮೆಗಾಸ್ಟಾರ್ ಬಾಯಿಂದಲೇ ಒಮ್ಮೆ ಕೇಳಿ.

ಅಬ್ಬಬ್ಬಾ.. ಕಿರಿಕ್ ಪಾರ್ಟಿ ಸಿನಿಮಾದಿಂದ ಗ್ಲಾಮರ್ ಜರ್ನಿ ಶುರುವಿಟ್ಟ ರಶ್ಮಿಕಾ ಮಂದಣ್ಣ, ಇಂದಿನ ಹೀರೋಯಿನ್ಸ್‌ಗೆ ರೋಲ್ ಮಾಡೆಲ್. ಸಾಧಿಸಬೇಕು ಅನ್ನೋ ಛಲ, ಅದಕ್ಕೊಂದು ನಿರ್ಧಿಷ್ಠ ಗುರಿ ಇಟ್ಕೊಂಡು ಮುನ್ನುಗ್ಗಿದ್ರೆ ಏನೆಲ್ಲಾ ಮಾಡೋಕೆ ಸಾಧ್ಯ ಅನ್ನೋದಕ್ಕೆ ರಶ್ಮಿಕಾ ಜ್ವಲಂತ ನಿದರ್ಶನ. ಅಣ್ತಮ್ಮಾ.. ಕಾಲೆಳೆಯೋರೆಲ್ಲಾ ಕಾಲ ಕೆಳಗೇ ಇರ್ತಾರೆ ಅನ್ನೋ ಯಶ್ ಡೈಲಾಗ್‌ನಂತೆ ರಶ್ಮಿಕಾನ ಆಡಿಕೊಂಡವ್ರು ಕೂಡ ಹುಬ್ಬೇರಿಸಿ, ಮೂಗಿನ ಮೇಲೆ ಬೆರಳಿಡುವ ರೇಂಜ್‌ಗೆ ಬೆಳೆದು ತೋರಿಸಿದ್ದಾರೆ.

ADVERTISEMENT
ADVERTISEMENT

ಯೆಸ್.. ರಶ್ಮಿಕಾ ಬರೀ ನ್ಯಾಷನಲ್ ಕ್ರಶ್ ಅಲ್ಲ, ಇಂಟರ್ ನ್ಯಾಷನಲ್ ಕ್ರಶ್. ಇದನ್ನ ನಾವು ನೀವು ಹೇಳ್ತಿರೋದಲ್ಲ. ಸ್ವತಃ ಪದ್ಮ ವಿಭೂಷಣ ಮೆಗಾಸ್ಟಾರ್ ಚಿರಂಜೀವಿ ಅಂತಹ ಲೆಜೆಂಡ್ ಹೇಳಿದ್ದಾರೆ. ಅಷ್ಟೇ ಅಲ್ಲ, ಈಕೆ ಕಿಂಗ್ ನಾಗಾರ್ಜುನ್ ಹಾಗೂ ಚಿರಂಜೀವಿಗೂ ಕ್ರಶ್ ಆಗುವ ಮಟ್ಟಕ್ಕೆ ಸಾಧನೆಯ ಶಿಖರವೇರಿ ಕೂತಿರೋದು ನಿಜಕ್ಕೂ ಸಾಮಾನ್ಯದ ಮಾತಲ್ಲ.

ಇದು ರಶ್ಮಿಕಾ ನಿಜವಾದ ಸಕ್ಸಸ್. ಅಂದು ಸಿನಿಮಾದಲ್ಲಿ ಆಫರ್ ನೀಡಿದ ಗುರು ಸಮಾನ ರಕ್ಷಿತ್ ಶೆಟ್ಟಿ ಜೊತೆಗಿನ ಎಂಗೇಜ್‌‌ಮೆಂಟ್ ಸಂಬಂಧ ಕಡಿದುಕೊಂಡು, ಸ್ಯಾಂಡಲ್‌ವುಡ್‌‌ನಿಂದ ಪಕ್ಕದ ತೆಲುಗು ಚಿತ್ರರಂಗಕ್ಕೆ ಹಾರಿದ ರಶ್ಮಿಕಾನ ತುಂಬಾ ಜನ ಶಪಿಸಿದ್ದರು. ಆ ಶಾಪಗಳನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡ ರಶ್ಮಿಕಾ, ತಮಿಳು, ಬಾಲಿವುಡ್ ಸೇರಿದಂತೆ ಇಂಡಿಯನ್ ಸಿನಿದುನಿಯಾದ ಮೋಸ್ಟ್ ಡಿಮ್ಯಾಂಡಿಂಗ್ ಪ್ಯಾನ್ ಇಂಡಿಯಾ ಅಭಿನೇತ್ರಿಯಾಗಿ ಮಿಂಚು ಹರಿಸಿದ್ದಾರೆ.

ಪುಷ್ಪ ಚಿತ್ರದ ಬಹುದೊಡ್ಡ ಸಕ್ಸಸ್, ಅನಿಮಲ್‌ ಸಿನಿಮಾದಿಂದ ಸಿಕ್ಕ ಬಾಲಿವುಡ್ ಫೇಮ್, ಛಾವಾ ಗೆಲುವು, ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಶೇರ್, ಅಮಿತಾಬ್ ಬಚ್ಚನ್ ಪ್ರೀತಿ.. ಇವೆಲ್ಲವೂ ರಶ್ಮಿಕಾ ಲೈಫ್‌ನ ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ ಕುಬೇರ ಸಿನಿಮಾದಲ್ಲಿನ ಆಕೆಯ ನಟನೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಸದ್ಯ ತೆಲುಗಿನಲ್ಲಿ ಒಂದು, ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ರಶ್ಮಿಕಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version