ರಜನಿಕಾಂತ್-ಕಮಲ್ ಹಾಸನ್ 173..ಧರ್ಮನ್ ಟೈಟಲ್ ಫೈನಲ್

ರಜನಿ ಕರಿಯರ್‌ನ ಮೊಟ್ಟ ಮೊದಲ ಡೆಡ್ಲಿ ಡಾಕ್ಟರ್ ರೋಲ್..!

Untitled design 2026 06 24T193245.289

ಈ ಬಾರಿ ತಲೈವಾ ಇತಿಹಾಸದಲ್ಲೇ ಮಾಡಿರದಂತಹ ಯಾವ ಡೆಡ್ಲಿ ರೋಲ್‌ನಲ್ಲಿ ಎಂಟ್ರಿ ಕೊಡ್ತಿದ್ದಾರೆ ಗೊತ್ತಾ..? ರಜನಿಕಾಂತ್ ಅವರ ಎವರ್‌ಗ್ರೀನ್ ಪಡೆಯಪ್ಪ ಹಾಗೂ ಕಮಲ್ ಹಾಸನ್ ಅವರ ವೆಟ್ಟೈಯಾಡು ವಿಲೈಯಾಡು ಚಿತ್ರಗಳ ಮಿಕ್ಸ್ಚರ್ ಈ ಸಿನಿಮಾದಲ್ಲಿದೆಯಾ..? ನಿರ್ದೇಶಕರು ಬಿಟ್ಟುಕೊಟ್ಟ ಆ ಒಂದು ಸೀಕ್ರೆಟ್ ಏನು? ಆ ಹೊಸ ಟೈಟಲ್‌ನ ರಹಸ್ಯ ಏನು..?  ಇಲ್ಲಿದೆ ಫುಲ್‌ ಡೆಟೇಲ್ಸ್‌…

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ ಜೈಲರ್ ಹಾಗೂ ಕೂಲಿ ಚಿತ್ರಗಳ ಸಕ್ಸಸ್ ಬೆನ್ನಲ್ಲೇ, ರಜನಿಕಾಂತ್ ಅಭಿಮಾನಿಗಳಿಗೆ ಚಿತ್ರತಂಡ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಸೂಪರ್‌ಸ್ಟಾರ್ ಅವರ 173ನೇ ಸಿನಿಮಾದ ಅಧಿಕೃತ ಟೈಟಲ್ ಅನೌನ್ಸ್ ಆಗಿದ್ದು, ಚಿತ್ರಕ್ಕೆ ಧರ್ಮನ್ ಎಂದು ಹೆಸರಿಡಲಾಗಿದೆ. ಕಮಲ್ ಹಾಸನ್ ಅವರ ಪ್ರತಿಷ್ಠಿತ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿದ್ದು, ಚೆನ್ನೈನಲ್ಲಿ ಇಂದು ಅದ್ಧೂರಿಯಾಗಿ ಚಿತ್ರದ ಪೂಜಾ ಸಮಾರಂಭ ನೆರವೇರಿದೆ.

ಈ ಚಿತ್ರದ ನಿರ್ದೇಶಕ ಅಶ್ವಥ್ ಮಾರಿಮುತ್ತು ಸಿನಿಮಾದ ಬಗ್ಗೆ ಒಂದು ರೋಮಾಂಚಕ ಇನ್‌ಸೈಡ್ ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ. ಅದು ಏನು ಅಂತೀರಾ ನೀವೇ ನೋಡಿ.

ನಿರ್ದೇಶಕರ ಪ್ರಕಾರ, ಈ ಚಿತ್ರವು ರಜನಿಕಾಂತ್ ಅವರ ಮಾಸ್ ಸಿನಿಮಾ ಪಡೆಯಪ್ಪ ಹಾಗೂ ಕಮಲ್ ಹಾಸನ್ ಅವರ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ವೆಟ್ಟೈಯಾಡು ವಿಲೈಯಾಡು ಚಿತ್ರಗಳ ರಗಡ್ ಕಾಂಬಿನೇಷನ್ ಆಗಿರಲಿದೆಯಂತೆ. ಇಂದಿನಿಂದಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗುತ್ತಿದೆ. ಐದು ದಶಕಗಳ ಸಿನಿಮಾ ಜರ್ನಿಯಲ್ಲಿ ರಜನಿಕಾಂತ್ ಅವರು ಮಾಡದ ರೋಲ್ ಇಲ್ಲ. ಸ್ಟೈಲಿಷ್ ಗ್ಯಾಂಗ್‌ಸ್ಟರ್, ಖಡಕ್ ಪೊಲೀಸ್ ಆಫೀಸರ್, ರೋಬೋಟ್, ಕಿಂಗ್ ಮೇಕರ್ ಆಗಿ ಅಬ್ಬರಿಸಿದ್ದ ಸೂಪರ್‌ಸ್ಟಾರ್, ತಮ್ಮ ಇಡೀ ಕರಿಯರ್‌ನಲ್ಲಿ ಇದುವರೆಗೂ ಒಂದೇ ಒಂದು ಬಾರಿಯೂ ಪೂರ್ಣ ಪ್ರಮಾಣದ ಡಾಕ್ಟರ್ ಪಾತ್ರ ಮಾಡಿಲ್ಲ.

ಹೌದು, ಈಗ ಧರ್ಮನ್ ಸಿನಿಮಾ ಮೂಲಕ ತಲೈವಾ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಟೆತಸ್ಕೋಪ್ ಹಿಡಿದು ವೈದ್ಯನಾಗಿ ಎಂಟ್ರಿ ಕೊಡ್ತಿದ್ದಾರೆ.ಆದರೆ ಇದು ಸಾಧಾರಣ ಡಾಕ್ಟರ್ ಕಥೆಯಲ್ಲ, ಕೈಯಲ್ಲಿ ರಕ್ತಸಿಕ್ತ ಬ್ಯಾಂಡೇಜ್ ಹಿಡಿದು ನಿಂತಿರೋ ರಜನಿಕಾಂತ್ ಲುಕ್ ನೋಡಿದ್ರೆ, ಈ ಡೆಡ್ಲಿ ಡಾಕ್ಟರ್ ಬಾಕ್ಸ್ ಆಫೀಸ್‌ನಲ್ಲಿ ರಕ್ತಪಾತ ಸೃಷ್ಟಿಸೋದು ಗ್ಯಾರಂಟಿ ಅಂತ ಫ್ಯಾನ್ಸ್ ಈಗಲೇ ಫುಲ್ ಖುಷಿಯಾಗಿದ್ದಾರೆ.

ತಮಿಳಿನಲ್ಲಿ ಧರ್ಮೇ ವೆಲ್ಲಂ ಅಂದರೆ ನ್ಯಾಯವೇ ಗೆಲ್ಲುತ್ತದೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ಚಿತ್ರ ಬಿಡುಗಡೆಯಾಗುತ್ತಿದ್ದು,ನಟಿ ರಾಶಿ ಖನ್ನಾ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಈ ಸಿನಿಮಾ ಘೋಷಣೆಯಾದಾಗಿನಿಂದ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಮೊದಲು ಸುಂದರ್ ಸಿ, ಆನಂತರ ಸಿಬಿ ಚಕ್ರವರ್ತಿ ಈ ಚಿತ್ರವನ್ನು ನಿರ್ದೇಶಿಸಬೇಕಿತ್ತಾದರೂ, ಅನಿವಾರ್ಯ ಕಾರಣಗಳಿಂದ ಅವರಿಬ್ಬರೂ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದರು. ಕೊನೆಗೆ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ಅಶ್ವಥ್ ಮಾರಿಮುತ್ತು ಈಗ ತಲೈವಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಇದ್ದು, ಈ ಬಾರಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version