ದಿ ವೆಯ್ಟ್ ಈಸ್ ಓವರ್.. ಇಡೀ ಭಾರತೀಯ ಚಿತ್ರರಂಗ ಬಹಳ ಕಾತರದಿಂದ ಕಾಯ್ತಿದ್ದ ಟಾಕ್ಸಿಕ್ ರಿಲೀಸ್ ಡೇಟ್ ಫೈನಲಿ ಫಿಕ್ಸ್ ಆಗಿದೆ. ಅಂದು ಸಿನಿದುನಿಯಾ ರೀ-ಡಿಫೈನ್ ಆಗಲಿದ್ದು, ರಾಕಿಭಾಯ್ ಯಶ್ ಅಷ್ಟೇ ಅಲ್ಲ, ನಟಿ ತಾರಮ್ಮ ಹೇಳಿದ ಮಾತೂ ನಿಜವಾಗಲಿದೆ. ಇಷ್ಟಕ್ಕೂ ಆಗಸ್ಟ್ 26ರಂದೇ ತೆರೆಗಪ್ಪಳಿಸುತ್ತಿರೋದ್ಯಾಕೆ ಟಾಕ್ಸಿಕ್..? ಸೊರಗಿ ಹೋಗಿರೋ ಸ್ಯಾಂಡಲ್‌ವುಡ್‌ಗೆ ಮರುಜನ್ಮ ನೀಡೋಕೆ ಬರ್ತಿರೋ ಯಶ್ ಗತ್ತು ಎಂಥದ್ದು..?
ಆಗಸ್ಟ್ 26ಕ್ಕೆ ರೀ-ಡಿಫೈನ್ ಆಗಲಿದೆ ಭಾರತೀಯ ಚಿತ್ರರಂಗ..!
ಸ್ಯಾಂಡಲ್‌ವುಡ್‌ಗೆ ಮರುಜನ್ಮ ನೀಡೋಕೆ ಯಶ್ ಕಮಿಂಗ್
ರಾಕಿಂಗ್ ಸ್ಟಾರ್ ಯಶ್.. ಇದು ಬರೀ ಹೆಸರಲ್ಲ. ಇಟ್ಸ್ ಎ ಬ್ರ್ಯಾಂಡ್ ಸಿನ್ಸ್ 2008. ವಿಷನರಿ, ವೆರಿ ಮಚ್ ಫೋಕಸ್ಡ್ ಆ್ಯಕ್ಟರ್. ಇಟ್ಟ ಗುರಿಯೆಡೆ ದಿಟ್ಟ ಹೆಜ್ಜೆ ಇಡೋ ಛಲದಂಕಮಲ್ಲ. ಸಿನಿಮಾಗಾಗಿಯೇ ಹುಟ್ಟಿ ಬಂದಂತಿರೋ ಮಾನ್‌ಸ್ಟರ್ ಕಲಾವಿದ. ಪ್ರತಿಯೊಬ್ಬ ಕನ್ನಡಿಗ ಕಾಲರ್ ಎತ್ತಿ ಬೀಗುವಂತೆ ಮಾಡ್ತಿರೋ ಹೆಮ್ಮೆಯ ಕನ್ನಡಿಗ. ಕನ್ನಡ ಚಿತ್ರರಂಗದ ದಿಕ್ಕು ದೆಸೆ ಬದಲಿಸಿ, ಅದಕ್ಕೊಂದು ಹೊಸ ಆಯಾಮ ಕೊಟ್ಟ ಗೇಮ್ ಚೇಂಜರ್. ಅವ್ರ ಬೆಳವಣಿಗೆ ಒಂಥರಾ ರೋಚಕ.. ರೋಮಾಂಚಕ. ಅದೆಷ್ಟೋ ಮಂದಿಗೆ ಸ್ಫೂರ್ತಿದಾಯಕ.
ಮನೆ ಕಟ್ಟೋಕೆ ಸಮಯ ಹಿಡಿಯುತ್ತೆ. ಅಂಥದ್ರಲ್ಲಿ ಅರಮನೆ ಕಟ್ಟೋಕೆ ಕೊಂಚ ಜಾಸ್ತಿನೇ ಸಮಯ ಬೇಕು ಅಂತಿದ್ದ ಯಶ್ ಮಾತು ಟಾಕ್ಸಿಕ್ ಸಿನಿಮಾದಲ್ಲೂ ನಿಜವಾಗ್ತಿದೆ. ಇಲ್ಲಿಯ ತನಕ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಬಾರಿ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಆದ್ರೆ ಈ ಬಾರಿ ಫಿಕ್ಸ್ ಆಗಿರೋ ಡೇಟ್ ಯಾವ ಕಾರಣಕ್ಕೂ ಪೋಸ್ಟ್‌ಪೋನ್ ಆಗಲ್ಲ. ಯಾಕಂದ್ರೆ ಭಾರತೀಯ ಚಿತ್ರರಂಗ ಟಾಕ್ಸಿಕ್ ಚಿತ್ರದಿಂದ ರೀ-ಡಿಫೈನ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು.. ಇದೇ ಆಗಸ್ಟ್ 26ಕ್ಕೆ ಟಾಕ್ಸಿಕ್ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದೆ. ಕಾಂತಾರ ಬಳಿಕ ನಮ್ಮ ಸ್ಯಾಂಡಲ್‌ವುಡ್ ಅಕ್ಷರಶಃ ಸೊರಗಿ ಹೋಗಿದೆ. ಬಿಗ್ ಸ್ಟಾರ್ಸ್ ಬಿಗ್ ಹಿಟ್ಸ್ ಇಲ್ಲದೆ ಪರಿತಪಿಸುತ್ತಿದೆ. ಒಳ್ಳೆಯ ಸಿನಿಮಾಗಳಿಲ್ಲದೆ ಥಿಯೇಟರ್‌ಗಳು ಬಿಕೋ ಅಂತಿವೆ. ಅದೆಷ್ಟೋ ಮಂದಿ ಥಿಯೇಟರ್ ಮಾಲೀಕರುಗಳು ರೀ-ರಿಲೀಸ್ ಮೊರೆ ಹೋಗಿದ್ದಾರೆ. ಪರಭಾಷಾ ಚಿತ್ರಗಳ ಅಬ್ಬರ, ಆಡಂಬರ ಸಿಕ್ಕಾಪಟ್ಟೆ ಹೆಚ್ಚಿದೆ. ಹಾಗಾಗಿಯೇ ಅವೆಲ್ಲಕ್ಕೂ ಬ್ರೇಕ್ ಹಾಕೋಕೆ ಟಾಕ್ಸಿಕ್ ಬರ್ತಿದೆ. ಇನ್‌ಫ್ಯಾಕ್ಟ್ ನಮ್ಮ ಕನ್ನಡ ಚಿತ್ರರಂಗಕ್ಕೆ ಯಶ್ ಮರುಜನ್ಮ ನೀಡಲಿದ್ದಾರೆ.
ಇಂಡಿಯನ್ ಸಿನಿದುನಿಯಾಗೆ ಯಶ್ ಕೊಡೋ ಗಿಫ್ಟ್ ಟಾಕ್ಸಿಕ್
ರಾಯ-ಟಿಕೆಟ್ ಡಬಲ್ ರೋಲ್.. ಮಲ್ಟಿ ಶೇಡ್ಸ್‌ಲಿ ರಾಕಿ ರಾಕ್ಸ್
ಸಿನಿಮಾಕಾನ್ ಅನ್ನೋ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಾಲಿವುಡ್ ಮಾಧ್ಯಮಗಳ ಜೊತೆ ಮಾತಾಡ್ತಾ ನಮ್ಮ ರಾಕಿಂಗ್ ಸ್ಟಾರ್ ಯಶ್ ಒಂದು ಮಾತು ಹೇಳಿದ್ರು. ಅದೇನಪ್ಪಾ ಅಂದ್ರೆ.. ಟಾಕ್ಸಿಕ್ ನಾನು ಭಾರತೀಯ ಚಿತ್ರರಂಗಕ್ಕೆ ಕೊಡ್ತಿರೋ ಒಂದು ಬೆಸ್ಟ್ ಗಿಫ್ಟ್ ಅಂತ. ಅದು ನಿಜವೂ ಹೌದು. ಯಶ್ ಸ್ಟೇಟ್ಮೆಂಟ್ ಇಲ್ಲಿಯ ತನಕ ಹುಸಿಯಾಗಿರೋ ನಿದರ್ಶನವೇ ಇಲ್ಲ. ಮಾಡೋದನ್ನೇ ಹೇಳ್ತಾರೆ. ಹೇಳಿದ್ದನ್ನೇ ಮಾಡಿ ತೋರಿಸಿದ್ದಾರೆ. ಟಾಕ್ಸಿಕ್ ವಿಚಾರದಲ್ಲೂ ಅವರು ನುಡಿದಂತೆ ನಡೆಯಲಿದೆ ಅನ್ನೋ ಭರವಸೆಯಿದೆ.
ಎಲ್ಲಕ್ಕಿಂತ ಮಿಗಿಲಾಗಿ ಇದು ಕನ್ನಡದಿಂದಲೇ ತಯಾರಾಗ್ತಿರೋ ಹಾಲಿವುಡ್ ಸಿನಿಮಾ ಅಂದ್ರೆ ತಪ್ಪಾಗಲ್ಲ. ಅದಕ್ಕಾಗಿ ಸಿಕ್ಕಾಪಟ್ಟೆ ಬೆವರು ಹಾಗೂ ರಕ್ತ ಸುರಿಸಿದ್ದಾರೆ ಯಶ್. ಇಲ್ಲಿ ರಾಯ ಹಾಗೂ ಟಿಕೆಟ್ ಅನ್ನೋ ಡಬಲ್ ರೋಲ್‌ನಲ್ಲಿ ನಾಲ್ಕೈದು ಶೇಡ್‌ಗಳಲ್ಲಿ ಸ್ವತಂತ್ರ ನಂತರ ಪೋರ್ಚುಗೀಸರ ಅಧೀನದಲ್ಲಿದ್ದ ಗೋವಾ ಹಾಗೂ ಅಲ್ಲಿನ ಡ್ರಗ್ ಮಾಫಿಯಾ ಕುರಿತ ಕಥಾನಕ ಇದು ಹೊಂದಿರಲಿದೆ. ಹಾಲಿವುಡ್ ಮಂದಿಗೆ ಈಗಾಗ್ಲೇ 9 ನಿಮಿಷಗಳ ಟಾಕ್ಸಿಕ್ ಪ್ರಿವ್ಯೂವ್ ವಿಡಿಯೋನ ಸಿನಿಮಾಕಾನ್ ವೇದಿಕೆಯಲ್ಲಿ ತೋರಿಸೋ ಮೂಲಕ ಅವ್ರ ಬಾಯಿಂದಲೇ ವ್ಹಾವ್ ಫೀಲ್ ತರಿಸಿದ್ದಾರೆ ಯಶ್.
ರಾಕಿಭಾಯ್ ಸ್ಟೇಟ್ಮೆಂಟ್ ಜೊತೆ ನಿಜವಾಗಲಿದೆ ತಾರಾ ಮಾತು
ಶ್ರಾವಣದಲ್ಲೇ ಟಾಕ್ಸಿಕ್ ತೆರೆಗೆ.. ಟಾಪ್‌ನಲ್ಲಿ ಬರೋದು ಗ್ಯಾರಂಟಿ
ಭಾರತೀಯ ಚಿತ್ರರಂಗ ಗಿಫ್ಟ್ ನೀಡ್ತೀನಿ ಅಂದಿರೋ ಯಶ್ ಸ್ಟೇಟ್ಮೆಂಟ್ ಅಷ್ಟೇ ಅಲ್ಲ. ಕಿರಾತಕ ಮೂವಿಯಲ್ಲಿ ಹಿರಿಯನಟಿ ಡಾ. ತಾರಾನುರಾಧ ಹೇಳಿದ್ದ ಆ ಮಾತು ಕೂಡ ನಿಜವಾಗೋ ಸಮಯ ಸನಿಹವಾಗ್ತಿದೆ. ಇವನಿಗೆ ಗ್ರಹಗತಿ ಸಂದಾಕಿಲ್ವಂತೆ.. ಈ ಜೇಷ್ಠ ಹೋಗಿ, ಆಷಾಢ ಹೋಗಿ ಶ್ರಾವಣ ಬಂದ್ರೆ.. ಅವನು ಟಾಪ್ ಆಗಿ ಬರ್ತಾನೆ ಅಂತ ಸಿದ್ದಿಬುದ್ದಿ ಜೋಶಿ ಹೇಳವ್ರ. ಬೇಕಾದ್ರೆ ನೋಡ್ತಾ ಇರಿ.. ಅವನು ಟಾಪ್ ಆಗಿ ಬರ್ತಾನೆ ಅನ್ನೋ ತಾರಮ್ಮನ ಆ ಮಾತು ಈಗ ಸಖತ್ ವೈರಲ್ ಆಗ್ತಿದೆ.
ಇದು ಕಿರಾತಕ ಮೂವಿಯ ಡೈಲಾಗ್ ಇರಬಹುದು. ಆದ್ರೆ ಆಗಸ್ಟ್‌ನಲ್ಲಿ ಟಾಕ್ಸಿಕ್ ಬರ್ತಿರೋದಕ್ಕೂ ತಾರಮ್ಮ ಅಂದು ಶ್ರಾವಣದಲ್ಲಿ ಮಗ ಟಾಪ್ ಆಗಿ ಬರ್ತಾನೆ ಅಂತ ಹೇಳಿದ್ದಕ್ಕೂ ಬಹಳ ಚೆನ್ನಾಗಿ ಸಿಂಕ್ ಆಗಿದೆ. ಈಗಾಗ್ಲೇ ಯಶ್ ಟಾಪ್‌ನಲ್ಲಿ ಇರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಟಾಕ್ಸಿಕ್ ಚಿತ್ರ ಪದೇ ಪದೆ ರಿಲೀಸ್ ಮುಂದೂಡಿ ಶ್ರಾವಣ ಮಾಸದಲ್ಲಿ ಬರ್ತಿರೋದು ಶುಭದ ಸೂಚನೆ ಅನ್ನಬಹುದು. ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸುಂಟರಗಾಳಿ ಎಬ್ಬಿಸೋದ್ರಲ್ಲಿ ಅನುಮಾನವೇ ಇಲ್ಲ.
8 ಬರೀ ನಂಬರ್ ಅಲ್ಲ.. ಗೇಮ್ ಚೇಂಜರ್ ಅದೃಷ್ಠದ ಸಂಕೇತ
26-08-26.. ಯಶ್‌ಗೆ 8ರ ನಂಟು.. ಇದ್ರ ಸೀಕ್ರೆಟ್ ಗೊತ್ತಾ..?!
ಆಗಸ್ಟ್ ತಿಂಗಳಲ್ಲಿ ತೆರೆಗೆ ಬರ್ತಿರೋ ಟಾಕ್ಸಿಕ್ ರಿಲೀಸ್ ಡೇಟ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಅದಕ್ಕೆ ಕಾರಣ ಆಗಿರೋದು ಆ ಪರ್ಟಿಕ್ಯುಲರ್ ಡೇಟ್. ಹೌದು.. 26-08-26ರಂದೇ ಸಿನಿಮಾ ಬೆಳ್ಳಿಪರದೆ ಬೆಳಗಲಿದೆ. ಅಂದ್ರೆ 8-8-8. ಯಾವ ಕಡೆ ಇಂದ ಲೆಕ್ಕ ಹಾಕಿದ್ರೂ 8 ಸಂಖ್ಯೆ ಬರಲಿದೆ. ಇದು ಬರೀ ನಂಬರ್ ಅಷ್ಟೇ ಅಲ್ಲ. ರಾಕಿಭಾಯ್ ಯಶ್ ಅವರ ಅದೃಷ್ಠದ ನಂಬರ್ ಕೂಡ ಹೌದು.
ವಿರಾಟ್ ಕೊಹ್ಲಿಗೆ 18 ಹೇಗೋ.. ನಮ್ಮ ಯಶ್ ಅವ್ರಿಗೆ 8 ಕೂಡ ಹಾಗೆಯೇ. ಜನವರಿ 8ನೇ ತಾರೀಖು ಜನಿಸಿರೋ ರಾಕಿಂಗ್ ಸ್ಟಾರ್‌ಗೆ 8 ಅದೃಷ್ಠದ ಸಂಖ್ಯೆ. ಆ ದಿನ ಅವ್ರ ಕಾರ್ಯಗಳು ದೊಡ್ಡ ಮಟ್ಟಕ್ಕೆ ಫಲಿಸಲಿವೆ. ಹಾಗಾಗಿಯೇ ಆಗಸ್ಟ್ 26ನೇ ತಾರೀಖು ಫಿಕ್ಸ್ ಆಗಿದೆ ಅನ್ನೋ ಮಾತುಗಳು ಕೇಳಿಬರ್ತಿರೋದು ಇಂಟರೆಸ್ಟಿಂಗ್.
ಎರಡು ವರ್ಷನ್‌ಗಳಲ್ಲಿ ರಿಲೀಸ್ ಆಗುತ್ತಾ ಟಾಕ್ಸಿಕ್ ಚಿತ್ರ..?
ಸೆನ್ಸಾರ್ ರೀಸನ್.. ಫಾರಿನ್ ರಿಲೀಸ್‌ಗೆ ಬೇರೆ ವರ್ಷನ್..?!
ಕೆಜಿಎಫ್ ಸಿನಿಮಾದಿಂದಾಗಿ ಯಶ್ ಗತ್ತು, ಗೈರತ್ತು ಎಂಥದ್ದು ಅನ್ನೋದು ವಿಶ್ವದ ಮೂಲೆ ಮೂಲೆಗೆ ತಲುಪಿದೆ. ಹಾಗಾಗಿ ಟಾಕ್ಸಿಕ್ ಮೇಲೆ ಸಹಜವಾಗಿಯೇ ಎಲ್ಲರಿಗೂ ಅತೀವ ನಿರೀಕ್ಷೆ ಹಾಗೂ ಕುತೂಹಲವಿದೆ. ಬಹಳ ಕಾತರದಿಂದ ಎಲ್ರೂ ಸಿನಿಮಾಗಾಗಿ ಕಾಯ್ತಿದ್ದಾರೆ. ಪ್ಯಾನ್ ವರ್ಲ್ಡ್ ಫ್ಯಾನ್ ಫಾಲೋಯಿಂಗ್ ಇರೋ ಯಶ್ ಅವ್ರ ಈ ಟಾಕ್ಸಿಕ್ ಈಗಾಗ್ಲೇ ಟೀಸರ್ ಹಾಗೂ ಮೇಕಿಂಗ್ ಸ್ಟಿಲ್ಸ್ ಸ್ಯಾಂಪಲ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.
ಸೋ.. ವಿಶ್ವದಾದ್ಯಂತ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ರಿಲೀಸ್ ಪ್ಲ್ಯಾನ್ ನಡೀತಿದೆ. ಧುರಂಧರ್ ಸಿನಿಮಾ ರೀತಿ ವರ್ಲ್ಡ್‌ವೈಡ್ ಸಾವಿರಾರು ಸ್ಕ್ರೀನ್ಸ್‌ನಲ್ಲಿ ರಿಲೀಸ್ ಆಗಲಿದೆ ಟಾಕ್ಸಿಕ್. ಅದ್ರಲ್ಲೂ ಸೆನ್ಸಾರ್ ಕಾರಣದಿಂದಾಗಿ ಟಾಕ್ಸಿಕ್ ಒಂದಲ್ಲ ಎರಡೆರಡು ವರ್ಷನ್‌ಗಳಲ್ಲಿ ಬಿಗ್‌ಸ್ಕ್ರೀನ್‌ಗೆ ಬರಲಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ಹೌದು.. ಇಂಡಿಯಾಗೆ ಒಂದು ವರ್ಷನ್ ಆದ್ರೆ, ಫಾರಿನ್ ರಿಲೀಸ್‌ಗೆ ಬೇರೆಯದ್ದೇ ವರ್ಷನ್ ಇರಲಿದೆ ಎನ್ನಲಾಗ್ತಿದೆ. ಇದು ಮತ್ತಷ್ಟು ಕೌತುಕತೆ ಹೆಚ್ಚಿಸಿದೆ. ಈ ಬಗ್ಗೆ ಚಿತ್ರತಂಡವೇ ಸ್ಪಷ್ಟನೆ ನೀಡಲಿದ್ದು, ಸದ್ಯ ಆಗಸ್ಟ್ 26ಕ್ಕೆ ನಮ್ಮ ರಾಕಿಂಗ್ ರಾಯ ಚಿತ್ರರಂಗ ಕಾಯೋಕೆ ಬರ್ತಿದ್ದಾರೆ ಅನ್ನೋದು ಮಾತ್ರ ಎಲ್ಲಿಲ್ಲದ ಖುಷಿ ಕೊಟ್ಟಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
