ನಮ್ಮ ಶ್ರೀಲೀಲಾಗೆ ನ್ಯಾಷನಲ್ ಲೆವೆಲ್‌‌‌ನಲ್ಲಿ ಅವಮಾನ..?!

ತಾಯಿ-ಮಗಳು ಫೋಟೋ ಪೋಸ್.. ಕನ್ನಡತಿ ಸೈಡ್‌ಲೈನ್

Untitled design 2026 06 24T175856.508

ಕಿಸಿಕ್ ಬ್ಯೂಟಿ ಶ್ರೀಲೀಲಾಗೆ ಪ್ಯಾನ್ ಇಂಡಿಯಾ ವೇದಿಕೆಯಲ್ಲೇ ಘೋರ ಅವಮಾನ ಆಗಿದೆ. ಅಷ್ಟಕ್ಕೂ ಆ ರಾಷ್ಟ್ರೀಯ ವೇದಿಕೆಯಲ್ಲಿ ಸೋಷಿಯಲ್ ಮೀಡಿಯಾ ಉರಿದುರಿದು ಬೀಳುವಂಥದ್ದೇನಾಯ್ತು..? ಮಹಾರಾಷ್ಟ್ರ ಸಿಎಂ ಪತ್ನಿಯ ಆ ಒಂದು ಶಾಕಿಂಗ್ ನಡವಳಿಕೆಗೆ ಇಡೀ ಸೌತ್ ಇಂಡಸ್ಟ್ರಿ ಕೆರಳಿ ಕೆಂಡವಾಗ್ತಿರೋದಾದ್ರೂ ಏಕೆ..? ವೈರಲ್ ಆಗ್ತಿರೋ ಆ ವೀಡಿಯೋದ ಅಸಲಿ ಕಥೆ ಏನು..? ಇಲ್ಲಿದೆ ಉತ್ತರ.

ಸ್ಯಾಂಡಲ್‌ವುಡ್‌ನಿಂದ ಹೋಗಿ ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಬೆಂಗಳೂರು ಬೆಡಗಿ ಶ್ರೀಲೀಲಾಗೆ ಮುಂಬೈನಲ್ಲಿ ಭಾರೀ ಅವಮಾನವಾಗಿದೆ ಎನ್ನಲಾದ ವೀಡಿಯೋ ಒಂದು ಈಗ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಜೂನ್ 21ರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಲೀಲಾಗೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಸಾರ್ವಜನಿಕವಾಗಿ ಪಕ್ಕಕ್ಕೆ ಸರಿಯುವಂತೆ ಸನ್ನೆ ಮಾಡಿರುವುದು ಶ್ರೀಲೀಲಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಯೋಗಾಸನಗಳ ನಂತರ ನಟ ಶಾಹಿದ್ ಕಪೂರ್ ಸೇರಿದಂತೆ ಗಣ್ಯರೆಲ್ಲಾ ಮಾಧ್ಯಮಗಳಿಗೆ ಫೋಟೋ ಪೋಸ್ ನೀಡುತ್ತಿದ್ದರು. ಈ ವೇಳೆ ಅಮೃತಾ ಫಡ್ನವೀಸ್, ಅವರ ಮಗಳು ದಿವಿಜಾ ಹಾಗೂ ಶ್ರೀಲೀಲಾ ಒಟ್ಟಿಗೆ ನಿಂತಿದ್ದರು. ಆದರೆ ಅಲ್ಲಿದ್ದ ಫೋಟೋಗ್ರಾಫರ್‌ಗಳು ಅಮೃತಾ ಹಾಗೂ ಅವರ ಮಗಳ ಪ್ರತ್ಯೇಕ ಫೋಟೋ ಕೇಳಿದಾಗ, ಅಮೃತಾ ಅವರು ಶ್ರೀಲೀಲಾಗೆ ಯಾವುದೇ ಗೌರವ ನೀಡದೆ, ಬೆರಳುಗಳಿಂದ ಸನ್ನೆ ಮಾಡಿ ‘ಆ ಕಡೆ ಹೋಗಮ್ಮ’ ಎಂದು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಶ್ರೀಲೀಲಾ ಮುಖ ಸಣ್ಣಗೆ ಮಾಡಿಕೊಂಡು ಸದ್ದಿಲ್ಲದೆ ಪಕ್ಕಕ್ಕೆ ಸರಿದಿದ್ದಾರೆ.

ಸದ್ಯ ಈ ವೀಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಹಾಗೂ ಶ್ರೀಲೀಲಾ ಫ್ಯಾನ್ಸ್ ಧಗಧಗನೆ ಉರಿದು ಬಿದ್ದಿದ್ದಾರೆ. ಸಿಎಂ ಪತ್ನಿಯಾದರೆ ಇಷ್ಟೊಂದು ದುರಹಂಕಾರವೇ? ಒಬ್ಬ ಸ್ಟಾರ್ ನಟಿಗೆ ನಡೆಸಿಕೊಳ್ಳುವ ರೀತಿ ಇದೇನಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಕೆಲವರು ಮಾತ್ರ,ಅಲ್ಲಿ ಫೋಟೋಗ್ರಾಫರ್ಸ್ ತಾಯಿ-ಮಗಳ ಫೋಟೋ ಕೇಳಿದ್ದಕ್ಕೆ ಅವರು ಪಕ್ಕಕ್ಕೆ ನಿಲ್ಲಲು ಹೇಳಿದರು, ಇದರಲ್ಲಿ ತಪ್ಪೇನಿದೆ..? ಎಂದು ಸಮರ್ಥಿಸಿಕೊಳ್ಳುತ್ತಿದ್ದು, ಸದ್ಯ ಈ ಕಾಂಟ್ರವರ್ಸಿ ಬಾಲಿವುಡ್‌ ಹಾಗೂ ಸೌತ್‌ ಇಂಡಸ್ಟ್ರಿಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version