ಕ್ಲೀನ್‌‌ಚಿಟ್ ಕೊಡದ ಹೈಕೋರ್ಟ್..ನಟ ರಣವೀರ್‌ಗೆ ಕಾದಿದೆ ಶಾಕ್

ಕಾಂತಾರ-1 ದೃಶ್ಯ ‘ಮಿಮಿಕ್ರಿ’.. ‘ಹೆಣ್ಣು ದೆವ್ವ’ ಎಂದು ಅಪಹಾಸ್ಯ

ಕಾಂತಾರ ಚಿತ್ರದ ದೃಶ್ಯವನ್ನು ಮಿಮಿಕ್ರಿ ಮಾಡೋ ಮೂಲಕ ವಿವಾದದ ಸುಳಿಗೆ ಸಿಲುಕಿರೋ ಬಾಲಿವುಡ್ ನಟ ರಣ್ವೀರ್ ಸಿಂಗ್, ಕೇಸ್ ಸ್ಕ್ವ್ಯಾಶ್‌‌‌ಗಾಗಿ ಕರ್ನಾಟಕ ಹೈ ಕೋರ್ಟ್ ಮೊರೆ ಹೋಗಿದ್ದರು. ಆದ್ರೀಗ ಕ್ಲೀನ್ ಚಿಟ್ ನೀಡದೆ ಶಾಕ್ ನೀಡಿದೆ ಹೈ ಕೋರ್ಟ್. ಇಷ್ಟಕ್ಕೂ ಕೋರ್ಟ್ ಹೇಳಿದ್ದೇನು..? ಅದು ಧುರಂಧರ್-2ಗೆ ಎಫೆಕ್ಟ್ ಆಗುತ್ತಾ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ.

ಹಾಸ್ಯಕ್ಕೂ ಅಪಹಾಸ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಸ್ಯ ಮಾಡಲು ಹೋಗಿ ಅಪಹಾಸ್ಯ ಮಾಡೋ ಮೂಲಕ ಬಹುದೊಡ್ಡ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್. ಹೌದು.. ಗೋವಾ ಇಂಟರ್‌‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌‌ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ ಎದುರು, ನಿರೂಪಣೆ ಮಾಡ್ತಿದ್ದ ರಣ್ವೀರ್, ಶೆಟ್ರನ್ನ ಹೊಗಳುವ ಭರದಲ್ಲಿ ಎಡವಟ್ ಮಾಡಿದ್ರು. ಚಾವುಂಡಿ ದೈವವನ್ನ ಹೆಣ್ಣು ದೆವ್ವ ಎಂದಿದ್ದರು. ಅಲ್ಲದೆ, ಹೀಯ್ಯಾಳಿಸುವ ಮೂಲಕ ಆ ದೈವಕ್ಕೆ ಅಪಮಾನ ಮಾಡಿದ್ರು.

ಈ ಬಗ್ಗೆ ರಣ್ವೀರ್ ಸಿಂಗ್ ಮೇಲೆ ಹೈ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ಎದುರಿಸದೇನೇ ಕರ್ನಾಟಕ ಹೈ ಕೋರ್ಟ್‌‌ನಲ್ಲಿ ತನ್ನ ಮೇಲಿದ್ದ ಆ ಕೇಸ್‌ನ ಸ್ಕ್ವ್ಯಾಶ್ ಮಾಡಿಸಲು ಮುಂದಾಗಿದ್ದರು ರಣ್ವೀರ್ ಸಿಂಗ್. ಆದ್ರೆ ಹೈ ಕೋರ್ಟ್ ಆತನಿಗೆ ಚಾಟಿ ಬೀಸಿದೆ. ಪೊಲೀಸರಿಗೆ ರಣ್ವೀರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತಿಲ್ಲ ಅಂತ ಹೇಳಿದೆ. ಆದ್ರೆ ವಿಚಾರಣೆ ನಡೆಸುವುದನ್ನ ಬಿಡುವಂತಿಲ್ಲ ಅಂತಲೂ ಹೇಳಿದೆ.

ಒಟ್ಟಾರೆ ಹೈ ಕೋರ್ಟ್‌‌ನಲ್ಲಿ ಕರ್ನಾಟಕದ ಅಳಿಮಯ್ಯ ರಣ್ವೀರ್ ಸಿಂಗ್‌ಗೆ ಹಿನ್ನಡೆಯಾಗಿದೆ. ಆದ್ರೆ ಈ ವಿವಾದ ರಣ್ವೀರ್ ಸಿಂಗ್ ಮುಂದಿನ ಸಿನಿಮಾ ಧುರಂಧರ್-2 ಚಿತ್ರದ ರಿಲೀಸ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಕನ್ನಡಿಗರು ನಂಬಿರೋ ಗುಳಿಗ ದೈವಕ್ಕೆ ಅಪಮಾನ ಎಸಗಿರೋ ರಣ್ವೀರ್ ವಿರುದ್ಧ ಕಿಡಿಕಾರಿರುವ ಕನ್ನಡಿಗರು ಧುರಂಧರ್-2ನ ನೋಡಲ್ಲ ಅಂತ ಬಾಯ್ಕಾಟ್ ಮಾಡಿದ್ರೂ ಅಚ್ಚರಿಯಿಲ್ಲ. ಅಲ್ಲದೆ, ರಣ್ವೀರ್ ನಟನೆಯ ಧುರಂಧರ್-2 ಮಾರ್ಚ್‌ 19ಕ್ಕೆ ತೆರೆಗೆ ಬರ್ತಿದ್ದು, ನಮ್ಮ ಯಶ್ ನಟನೆಯ ಟಾಕ್ಸಿಕ್ ಕೂಡ ಅದೇ ಡೇಟ್‌ಗೆ ಬರ್ತಿರೋದು ದೊಡ್ಡ ಮಟ್ಟದ ಎಫೆಕ್ಟ್ ನೀಡುವ ಸೂಚನೆಯಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version