ಅನಿಮಲ್ ಡೈರೆಕ್ಟರ್ ವಂಗಾ ಜೊತೆ ಕನ್ನಡಿಗ ವಾಸುಕಿ ವೈಭವ್

Untitled design (65)

ಕನ್ನಡದ ಖ್ಯಾತ ಗಾಯಕ ಕಮ್ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಪಕ್ಕದ ಟಾಲಿವುಡ್ ಅಂಗಳದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದೂ ಅರ್ಜುನ್ ರೆಡ್ಡಿ, ಅನಿಮಲ್ ಸಿನಿಮಾಗಳ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಜೊತೆ ಅನ್ನೋದು ಇಂಟರೆಸ್ಟಿಂಗ್. ಅದ್ಯಾವ ಸಿನಿಮಾ..? ಯಾವ ಸ್ಟಾರ್ ಜೊತೆ ಅನ್ನೋದ್ರ ರಿಪೋರ್ಟ್ ನಿಮ್ಮ ಮುಂದೆ.

ಇದು ತೆಲುಗಿನ ‘ರೋಮಾಂಚಕಂ’ ಚಿತ್ರದ ಟೀಸರ್ ಝಲಕ್. ‘8 ವಸಂತಾಲು’ ಸಿನಿಮಾ ಖ್ಯಾತಿಯ ಮಲಯಾಳಂ ಚೆಲುವೆ ಅನಂತಿಕಾ ಸಾನಿಲ್‌‌ಕುಮಾರ್ ಹಾಗೂ ಸುಮಂತ್ ಪ್ರಭಾಸ್ ಜೋಡಿಯ ಮಧುರ ಪ್ರೇಮಕಾವ್ಯ. ಇತ್ತೀಚೆಗೆ ಈ ಚಿತ್ರದ ಟೀಸರ್ ಲಾಂಚ್ ಆಗಿತ್ತು. ಇದೀಗ ಮೆಲೋಡಿ ಸಾಂಗ್‌ವೊಂದು ಬಿಡುಗಡೆ ಆಗಿದ್ದು, ಅದಕ್ಕೆ ನಮ್ಮ ಕನ್ನಡಿಗ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡೋದ್ರ ಜೊತೆಗೆ ಅವ್ರದ್ದೇ ಕಂಠದಲ್ಲಿ ಅದ್ಭುತವಾಗಿ ಹಾಡಿರೋದು ವಿಶೇಷ.

ಯೆಸ್.. ನಮ್ಮ ಕನ್ನಡ ಚಿತ್ರರಂಗದಲ್ಲಿ ನಟ, ಗಾಯಕ ಹಾಗೂ ಮ್ಯೂಸಿಕ್ ಕಂಪೋಸರ್ ಆಗಿ ಗುರ್ತಿಸಿಕೊಂಡಿರೋ ವಾಸುಕಿ ವೈಭವ್, ಪಕ್ಕದ ಟಾಲಿವುಡ್‌‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹಾಗಂತ ಇದೇ ಅವ್ರ ಮೊದಲ ತೆಲುಗು ಚಿತ್ರವಲ್ಲ. ಈ ಹಿಂದೆ ಸಂಗೀತ ಸಂಯೋಜಿಸಿದ್ರು. ಆದ್ರೀಗ ಒಂದು ದೊಡ್ಡ ಗ್ಯಾಪ್ ಬಳಿಕ ಟಾಲಿವುಡ್‌‌ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅದೂ ಅರ್ಜುನ್ ರೆಡ್ಡಿ, ಅನಿಮಲ್ ಸಿನಿಮಾಗಳ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಜೊತೆ ಅನ್ನೋದು ವಿಶೇಷ.

ಈ ಮೋಮಾಂಚಕಂ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗಾ ಸಹೋದರ ಪ್ರಣಯ್ ರೆಡ್ಡಿ ವಂಗಾ ಬಂಡವಾಳ ಹೂಡಿದ್ದು, ವೇಣು ಗೋಪಾಲ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖುದ್ದು ಸಂದೀಪ್ ರೆಡ್ಡಿ ವಂಗಾ ಇದನ್ನ ಪ್ರೆಸೆಂಟ್ ಮಾಡ್ತಿದ್ದಾರೆ. ರವಿ ಬಸ್ರೂರು ಬಳಿಕ ವಾಸುಕಿ ವೈಭವ್‌ಗೂ ಪರಭಾಷೆಗಳಲ್ಲಿ ಮ್ಯೂಸಿಕ್‌ಗೆ ಡಿಮ್ಯಾಂಡ್ ಹೆಚ್ಚಿದ್ದು, ಈ ಚಿತ್ರದ ಟೀಸರ್ ಹಾಗೂ ಸಾಂಗ್ ಸಖತ್ ಪ್ರಾಮಿಸಿಂಗ್ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version