ಕಪೂರ್ ಕುಟುಂಬದ ಕುಡಿ.. ಬಾಲಿವುಡ್ನ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಇದ್ದಕ್ಕಿದ್ದಂತೆ ನಟನೆಗೆ ಗುಡ್ ಬೈ ಹೇಳುವ ವಿಚಾರವನ್ನ ಸ್ವತಃ ತಮ್ಮ ಬಾಯಿಂದ ತಾವೇ ಹೊರಹಾಕಿದ್ದಾರೆ. ಆ ಶಾಕಿಂಗ್ ಸ್ಟೇಟ್ಮೆಂಟ್ ಈಗ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದ್ದು.. ಸಕ್ಸಸ್ನ ಉತ್ತುಂಗದಲ್ಲಿದ್ದಾಗಲೇ ಇಂತಹ ಕಟು ನಿರ್ಧಾರವೇಕೆ ಅಂತ ಹುಬ್ಬೇರಿಸ್ತಿದ್ದಾರೆ ಚಿತ್ರಪ್ರೇಮಿಗಳು. ಆ ಕುರಿತ ಒಂದು ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- ನಟನೆಗೆ ಗುಡ್ಬೈ.. ರಣ್ಬೀರ್ ಶಾಕಿಂಗ್ ಸ್ಟೇಟ್ಮೆಂಟ್ ಸೆನ್ಸೇಷನ್..!
- ಸಕ್ಸಸ್ನ ಉತ್ತುಂಗದಲ್ಲಿದ್ದಾಗ್ಲೇ ನಟನೆಗೆ ನಿವೃತ್ತಿ ಘೋಷಿಸಿದ್ಯಾಕೆ?
- 19+4.. 23 ವರ್ಷಕ್ಕೆ ಅಭಿನಯ ಸಾಕೆನಿಸಿದ್ಯಾಕೆ? ವಾಟ್ ನೆಕ್ಸ್ಟ್?
- ಮತ್ತೆ ಆರಂಭದ ದಿನಗಳತ್ತ ರಣ್ಬೀರ್.. ಡೈರೆಕ್ಷನ್ಗೆ ಕಂಬ್ಯಾಕ್..!!
ರಣ್ಬೀರ್ ಕಪೂರ್.. ಭಾರತೀಯ ಚಿತ್ರರಂಗದ ಒನ್ ಆಫ್ ದಿ ಫೈನೆಸ್ಟ್ ಆ್ಯಕ್ಟರ್. ಕಪೂರ್ ಕುಟುಂಬದ ಕುಡಿ ಆಗಿರೋದ್ರಿಂದ ನಟನೆ ಅವರಿಗೆ ರಕ್ತಗತವಾಗಿಯೇ ಬಂದಿದೆ. ಬಾರ್ನ್ ವಿತ್ ಗೋಲ್ಡ್ ಸ್ಪೂನ್ ಆಗಿರೋ ರಣ್ಬೀರ್.. ಸದ್ಯ ಬಾಲಿವುಡ್ನ ಸೆನ್ಸೇಷನಲ್ ಸೂಪರ್ ಸ್ಟಾರ್ ಆಗಿ ಛಾಪು ಮೂಡಿಸುತ್ತಿದ್ದಾರೆ. ಅದರಲ್ಲೂ ಸಂಜು, ಅನಿಮಲ್ ಸಿನಿಮಾಗಳ ಮೂಲಕ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಳ್ಳೋದ್ರ ಜೊತೆಗೆ ಎಲ್ರೂ ಇವರ ನಟನೆಗೆ ಫಿದಾ ಆಗುವಂತೆ ಮಾಡಿದವರು.
ಸದ್ಯ ರಣ್ಬೀರ್ ಶ್ರೀರಾಮನಾಗಿ ನಟಿಸಿರೋ ರಾಮಾಯಣ ಸಿನಿಮಾ ವಿಶ್ವದ ಮೂಲೆ ಮೂಲೆಗಳಲ್ಲಿ ನಮ್ಮ ನಂಬಿಕೆ ಹಾಗೂ ಸತ್ಯದ, ಸಾಂಸ್ಕೃತಿಕ ರಾಯಭಾರಿಯಾಗಿ ವಿಜೃಂಭಿಸುತ್ತಿದೆ. ಅದಕ್ಕೆ ಬಾಕ್ಸ್ ಆಫೀಸ್ ಗಳಿಕೆ, ಜನ ಮೆಚ್ಚುಗೆಯೇ ಸಾಕ್ಷಿ. ಹೀಗೆ ಸಕ್ಸಸ್ನ ಉತ್ತುಂಗದಲ್ಲಿರೋ ರಣ್ಬೀರ್ ಸಂದರ್ಶನದ ವೇಳೆ ಒಂದು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಬಹುಶಃ ನಟನಾಗಿ ಇದೇ ನನ್ನ ಕಟ್ಟ ಕಡೆಯ ದಶಕ ಆಗಲಿದೆ ಅನಿಸ್ತಿದೆ ಅಂದಿದ್ದಾರೆ. ಅದರ ಅರ್ಥ ನಾನು 2030ರ ನಂತರ ನಟಿಸಲ್ಲ ಅನ್ನೋದು.
ಯೆಸ್.. ಸಾಯಿ ಪಲ್ಲವಿ ಜೊತೆ ಕೂತು ರಾಮಾಯಣ ಸಿನಿಮಾದ ಸಂದರ್ಶನ ನೀಡುವ ವೇಳೆ ಇಂಥದ್ದೊಂದು ಮಹತ್ವದ ನಿರ್ಧಾರವನ್ನ ಏಕ್ದಮ್ ಹೊರಹಾಕುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಫ್ಯಾನ್ಸ್ಗೆ ಬಿಗ್ ಶಾಕ್ ನೀಡಿದ್ದಾರೆ ರಣ್ಬೀರ್ ಕಪೂರ್. ಅರೇ.. ಇಂತಹ ನಿರ್ಣಯವಾದ್ರೂ ಏಕೆ..? ಅಂಥದ್ದೇನಾಯ್ತು ಅಂತ ನೀವೆಲ್ಲಾ ಜಾಸ್ತಿ ತಲೆ ಕೆಡಿಸಿಕೊಳ್ಳುವಂತಿಲ್ಲ. ಯಾಕಂದ್ರೆ ಶ್ರೀಮಂತಿಕೆ, ಹಣ, ಆಸ್ತಿ, ಸಕ್ಸಸ್, ಸ್ಟಾರ್ಡಮ್.. ಹೀಗೆ ಎಲ್ಲವನ್ನ ನೋಡಿರೋ ರಣ್ಬೀರ್ ಮತ್ತೆ ತಮ್ಮ ಮೊದಲಿನ ದಿನಗಳಿಗೆ ಮರಳುವ ಸೂಚನೆ ನೀಡಿದ್ದಾರೆ.
2007ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಾವರಿಯಾ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗೋಕೆ ಮೊದಲು ರಣ್ಬೀರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಾಲಿವುಡ್ ಅಂಗಳದಲ್ಲಿ ಸಿನಿಮಾನ ಅರಿತವರು. ಹೌದು.. ರಿಷಿ ಕಪೂರ್ ಹಾಗೂ ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಆಫ್ ಸ್ಕ್ರೀನ್ ಸಿನಿಮಾ ಕಲಿತ ರಣ್ಬೀರ್.. ಅದಾದ ಬಳಿಕ ಬಣ್ಣ ಹಚ್ಚಿ ಹೀರೋ ಆಗಿದ್ರು. ಹಾಗಾಗಿ ಇದೀಗ 90ರ ದಶಕದ ತಮ್ಮ ನಿರ್ದೇಶಕನ ಕಾಯಕಕ್ಕೆ ವಾಪಸ್ ಆಗುವ ಮನಸ್ಸು ಮಾಡಿದ್ದಾರಂತೆ.
ಫ್ಯಾಮಿಲಿ ಆಡಿಯೆನ್ಸ್ ಮೆಚ್ಚುವಂತಹ ಒಳ್ಳೆಯ ಸದಭಿರುಚಿ ಕೌಟುಂಬಿಕ ಚಿತ್ರಗಳನ್ನ ನಿರ್ದೇಶಿಸುವ ಮೂಲಕ ಫಿಲ್ಮ್ ಮೇಕಿಂಗ್ ಮೇಲೆ ಒಲವು ತೋರಿದ್ದಾರೆ ರಣ್ಬೀರ್ ಕಪೂರ್. ನಟನಾಗಿ ಸದ್ಯ 19 ವರ್ಷ ಪೂರೈಸಿರೋ ರಣ್ಬೀರ್.. ಈ ದಶಕ ಅಂದ್ರೆ 2030ರ ತನಕ ಇನ್ನೂ 4 ವರ್ಷಗಳಷ್ಟೇ ನಟಿಸ್ತಾರೆ. ಅಲ್ಲಿಗೆ ತಮ್ಮ 23 ವರ್ಷಗಳ ನಟನಾ ಕರಿಯರ್ನಲ್ಲಿ ಸಾಕಷ್ಟು ಎಕ್ಸ್ಪೆರಿಮೆಂಟಲ್ ರೋಲ್ಸ್ ಮಾಡ್ತಿರೋ ರಣ್ಬೀರ್.. ತಮ್ಮನ್ನ ತಾವು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಬರ್ಫಿ, ಅನಿಮಲ್, ರಾಮಾಯಣ, ಸಂಜು.. ಹೀಗೆ ಎಲ್ಲವೂ ಒಂದಕ್ಕಿಂರ ಒಂದು ವಿಭಿನ್ನ ಹಾಗೂ ವಿಶಿಷ್ಟ ಮಾಸ್ಟರ್ಪೀಸ್ ಸಿನಿಮಾಗಳು ಅನ್ನೋದನ್ನ ಮರೆಯೋ ಹಾಗಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
