ಆಂಧ್ರ DCM ಶಾಕ್.. ಪವರ್‌‌ ಸ್ಟಾರ್ ಇನ್ಮೇಲೆ ಡಿವೋರ್ಸ್ ಸ್ಟಾರ್

Untitled design (16)

ದೀಪಾವಳಿ ಸಂಭ್ರಮದಲ್ಲಿದ್ದ ಅಸಂಖ್ಯಾತ ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌‌ಗೆ ಆಂಧ್ರ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಬಹುದೊಡ್ಡ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಪಿಎಸ್‌‌ಪಿಕೆ ಹಾಗೂ ಅನ್ನಾ ಲೆಜ್ನೆವಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು.. 13 ವರ್ಷಗಳ ಸಹ ಜೀವನಕ್ಕೆ ಫುಲ್‌‌‌ಸ್ಟಾಪ್ ಇಟ್ಟು ವಿಚ್ಚೇದನ ಕೂಡ ಪಡೆಯುತ್ತಿದ್ದಾರೆ. ಇದು ಟಾಕ್ ಆಫ್ ದಿ ಟೌನ್ ಆಗಿದ್ದು, ಇಷ್ಟಕ್ಕೂ ಇವ್ರ ಮಧ್ಯೆ ಏನಾಯ್ತು..? ರಷ್ಯಾ ಮೂಲದ ಅನ್ನಾ ಎಂಥಾ ತ್ಯಾಗಮಯಿ ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರೋ ಆಂಧ್ರದ ಸೂಪರ್ ಸ್ಟಾರ್.. ಮೆಗಾಸ್ಟಾರ್ ಚಿರಂಜೀವಿ ಮುದ್ದಿನ ಸಹೋದರ.. ಜನಸೇನಾ ಸಂಸ್ಥಾಪಕ.. ಪವರ್ ಸ್ಟಾರ್ ಪವನ್ ಕಲ್ಯಾಣ್ ಸದಾ ಸುದ್ದಿಯಲ್ಲಿರ್ತಾರೆ. ಸದ್ಯ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೊಡಗಿರೋ ಅವ್ರ ಬಹುದೊಡ್ಡ ಅಭಿಮಾನಿ ಬಳಗ ಹಾಗೂ ಅನುಯಾಯಿಗಳಿಗೆ ಬಿಗ್ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ನಾನು ಮತ್ತೆ ಅನ್ನಾ ಲೆಜ್ನೆವಾ ಸಹ ಜೀವನವನ್ನ ಮುಗಿಸ್ತಿದ್ದೀವಿ. ನಾವಿಬ್ಬರೂ ಪರಸ್ಪರ ದೂರ ಆಗ್ತಿದ್ದೀವಿ. ನಮ್ಮ ಖಾಸಗಿ ಜೀವನವನ್ನ ಗೌರವಿಸಿ ಅಂತ ಜಂಟಿ ಸ್ಟೇಟ್ಮೆಂಟ್ ಲೆಟರ್‌‌ನ ರಿವೀಲ್ ಮಾಡಿದ್ದಾರೆ.

ಓ ಮೈ ಗಾಡ್.. ಪವನ್ ಕಲ್ಯಾಣ್ ತನ್ನ ಮೂರನೇ ಪತ್ನಿಗೂ ಡಿವೋರ್ಸ್ ನೀಡ್ತಿದ್ದು.. ದೀಪಾವಳಿ ಹಬ್ಬದಂದೇ ಗೇಟ್‌ಪಾಸ್ ನೀಡಿರೋದು ಸಂಚನಲ ಮೂಡಿಸ್ತಿದೆ. ಈ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದ್ದು, ಪಟಾಕಿ ಹೊಡೆದು ಸಂಭ್ರಮಿಸ್ತಿದ್ದ ಫ್ಯಾನ್ಸ್‌ ಹಾಗೂ ಫಾಲೋವರ್ಸ್‌ಗೆ ಇದು ಆಟಂ ಬಾಂಬ್ ಬಿದ್ದಂತಾಗಿದೆ. ಅಂದಹಾಗೆ ಪತ್ನಿ ಅನ್ನಾ ಲೆಜ್ನೆವಾಗೂ ಪವನ್ ವಿಚ್ಚೇದನ ನೀಡ್ತಾರೆ ಅನ್ನೋದನ್ನ ಯಾರೂ ನಿರೀಕ್ಷಿಸಿರಲಿಲ್ಲ. ಆದ್ರೀಗ ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌‌ಪೆಕ್ಟ್ ಅನ್ನುವಂತಾಗಿದೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಇನ್ಮೇಲೆ ಡಿವೋರ್ಸ್ ಸ್ಟಾರ್ ಅಂತ ಹೆಸರು ಬದಲಿಸಿಕೊಳ್ಳಬೇಕಿದೆ. ಯಾಕಂದ್ರೆ ಆತನ ಲೈಫ್‌‌ನಲ್ಲಿ ಆಗ್ತಿರೋ ಮೊದಲ ಡಿವೋರ್ಸ್ ಇದಲ್ಲ. ಈ ಹಿಂದೆ ಎರಡು ಮದ್ವೆ ಆಗಿ ಇಬ್ಬರು ಹೆಂಡ್ತಿಯರಿಗೆ ವಿಚ್ಚೇದನ ನೀಡಿದ್ದ ಪವನ್, ಇದೀಗ ಮೂರನೇ ದಾಂಪತ್ಯ ಜೀವನ ಕೂಡ ಮುರಿದುಕೊಂಡಿದ್ದಾರೆ. ಇದನ್ನ ಕಂಡು.. ಅರೇ ಮೆಗಾಸ್ಟಾರ್ ಚಿರಂಜೀವಿ ಸರ್.. ಇದೇನಿದು ನಿಮ್ ಬ್ರದರ್ ಕಥೆ..? ಇದೇನಾ ನೀವು ಕಲಿಸಿರೋ ಸಂಸ್ಕಾರ ಅಂತೆಲ್ಲಾ ನೆಟ್ಟಿಗರು ಗೌರವಾನ್ವಿತ ಪದ್ಮ ವಿಭೂಷಣ ಚಿರಂಜೀವಿಯವ್ರನ್ನ ಪ್ರಶ್ನಿಸುವಂತಾಗಿದೆ.

ಬಟ್ಟೆ ಬದಲಿಸಿದಂತೆ ಪತ್ನಿಯರನ್ನ ಬದಲಿಸ್ತಿರೋ ಹೆಣ್ಣುಬಾಕ ಡಿಸಿಎಂ ಪವನ್ ಕಲ್ಯಾಣ್.. ಇದೀಗ ಒನ್ಸ್ ಅಗೈನ್ ಆಡಿಕೊಳ್ಳೋರ ಬಾಯಿಗೆ ಆಹಾರ ಆಗಿಬಿಟ್ಟಿದ್ದಾರೆ. ಊರಿಗೆ ಉಪಕಾರಿಯಾಗಿ ಸಮಾಜದಲ್ಲಿ ಬಹುದೊಡ್ಡ ನೇಮು, ಫೇಮು ಮಾಡಿ, ಸಿಎಂ ಸ್ಥಾನಕ್ಕೆ ಏರೋಕೆ ಸಜ್ಜಾಗ್ತಿರೋ ಪವನ್.. ಮನೆಗೆ ಮಾತ್ರ ಮಾರಿ ಆಗಿಬಿಟ್ಟಂತಿದೆ. ಟಿಡಿಪಿ ಚಂದ್ರಬಾಬು ನಾಯ್ಡು ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿ, ಹೊಂದಿಕೊಂಡು ರಾಜಕೀಯ ನಡೆಸ್ತಿರೋ ಪವನ್ ಕಲ್ಯಾಣ್.. ಅದೇ ರೀತಿ ಪತ್ನಿಯರ ಜೊತೆ ಹೊಂದಿಕೊಂಡು ಜೀವನ ನಡೆಸುವುದನ್ನೇ ಮರೆತಿದ್ದಾರೆ. ಇದ್ರಿಂದ ಸಮಾಜಕ್ಕೇನು ಸಂದೇಶ ನೀಡ್ತಿದ್ದಾರೋ ಆ ದೇವರೇ ಬಲ್ಲ.

ಪವನ್ ಕಲ್ಯಾಣ್‌ ವಿಚ್ಚೇದನ ನೀಡ್ತಿರೋ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಹಿನ್ನೆಲೆ ಗೊತ್ತಾದ್ರೆ ಶಾಕ್ ಆಗ್ತೀರಾ. ಯೆಸ್.. ಈಕೆ ರಷ್ಯಾ ಮೂಲದ ಮಾಡೆಲ್ ಕಮ್ ನಟಿಮಣಿ. ಅಂದಹಾಗೆ 2011ರಲ್ಲಿ ಪವನ್ ಕಲ್ಯಾಣ್ ನಟನೆಯ ತೀನ್‌ಮಾರ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ರು ಈ ರಷ್ಯನ್ ಚೆಲುವೆ. ಅಂದಹಾಗೆ ಆಗ 2ನೇ ಪತ್ನಿ ರೇಣು ದೇಸಾಯಿಗೆ ಇನ್ನೂ ಡಿವೋರ್ಸ್ ನೀಡಿರಲಿಲ್ಲ ಪವನ್. ಆದ್ರೂ ಸಹ ಅನ್ನಾ ಜೊತೆ ಲವ್ವಿ ಡವ್ವಿ ನಡೆಸ್ತಿದ್ರು.

ಆಕೆಯನ್ನ ಪ್ರೀತಿಸಿ, ಮದ್ವೆ ಆಗೋದಾಗಿ ನಂಬಿಸಿ ವಿಶ್ವಾಸ ಗಳಿಸಿಕೊಂಡಿದ್ರು. ಅದಕ್ಕೆ ಪ್ರಮುಖ ಕಾರಣ ಅನ್ನಾ ಲೆಜ್ನೆವಾ ಬಳಿ ಇದ್ದ ಹಣ, ಆಸ್ತಿ, ಅಂತಸ್ತು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು.. ರಷ್ಯಾ ಹಾಗೂ ಸಿಂಗಾಪುರ್‌‌ನಲ್ಲಿ ಹೆಲ್ತ್ ಸೆಕ್ಟರ್‌‌‌‌ನಲ್ಲಿ ಬಹುದೊಡ್ಡ ಹೆಸರು ಮಾಡಿರೋ ಅನ್ನಾ ಲೆಜ್ನೆವಾ.. ಐಷಾರಾಮಿ ಹೋಟೆಲ್‌‌ಗಳನ್ನ ಕೂಡ ಹೊಂದಿದ್ದಾರೆ. ಈಕೆಯ ನೆಟ್‌‌ವರ್ತ್ ಸುಮಾರು 1800 ಕೋಟಿ ರೂಪಾಯಿಗೂ ಅಧಿಕ ಅನ್ನೋದು ಅಚ್ಚರಿಯ ಸಂಗತಿ. ಅಂದ್ರೆ ಪವನ್ ಕಲ್ಯಾಣ್‌‌‌ಗಿಂತ ಹತ್ತು ಪಟ್ಟು ಶ್ರೀಮಂತ ಮನೆತನದ ಹೆಣ್ಣು ಅನ್ನಾ ಲೆಜ್ನೆವಾ. ಹಾಗಾಗಿಯೇ ಹಣಕ್ಕಾಗಿ ಆಕೆಯನ್ನ ಬುಟ್ಟಿಗೆ ಹಾಕಿಕೊಂಡಂತಿದೆ ಪವನ್ ಕಲ್ಯಾಣ್.

ಅನ್ನಾ ಲೆಜ್ನೆವಾ ರಷ್ಯಾ ಮೂಲದವರಾದ್ರೂ ಸಹ ಪವನ್ ಕಲ್ಯಾಣ್‌‌ ಕೈ ಹಿಡಿದ ಬಳಿಕ ಕಂಪ್ಲೀಟ್ ಆಗಿ ಭಾರತದ ಸನಾತನಿಯಾಗಿ ಬದಲಾಗ್ತಾರೆ. ರಷ್ಯಾದಿಂದ ಬಂದ್ರೂ ಸಹ ಹೈದ್ರಾಬಾದ್‌‌‌ನ ಕೊನಿಡೇಲಾ ಫ್ಯಾಮಿಲಿ ಸದಸ್ಯೆಯಾಗಿ ಇಲ್ಲಿನ ಕಟ್ಟುಪಾಡುಗಳಿಗೆ ಹೊಂದಿಕೊಂಡು, ಕಾಸ್ಟೂಮ್‌‌‌‌‌ನಿಂದ ಆಚಾರ, ವಿಚಾರಗಳ ತನಕ ಬದಲಿಸಿಕೊಳ್ತಾರೆ. ಮಹಾಕುಂಭಮೇಳದಲ್ಲಿ ಪತಿ ಪವನ್‌ಗೆ ಸಾಥ್ ಕೂಡ ನೀಡ್ತಾರೆ.

ತಿರುಪತಿ ತಿಮ್ಮಪ್ಪನ ಬೆಟ್ಟ ಹತ್ತುವ ಮೂಲಕ ವಿಶೇಷ ಪೂಜೆ ಸಲ್ಲಿಸಿ, ಪವನ್ ಫ್ಯಾನ್ಸ್ ಜೊತೆ ಆಂಧ್ರ- ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ ಜನರ ಪ್ರೀತಿಗೂ ಕಾರಣವಾಗ್ತಾರೆ. ಅದರಲ್ಲೂ ಮಗ ಮಾರ್ಕ್ ಶಂಕರ್‌‌ ಒಮ್ಮೆ ಶಾಲೆಯಲ್ಲಿ ಅಗ್ನಿ ಅವಘಡಕ್ಕರೆ ಈಡಾದಾಗ.. ಆತನ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅಂತ ತಿಮ್ಮಪ್ಪನಿಗೆ ಹರಕೆ ಹೊತ್ತಿರುತ್ತಾರೆ. ಅದ್ರಂತೆ ಮಾರ್ಕ್ ಶಂಕರ್‌‌ಗಾಗಿ ತಿಮ್ಮಪ್ಪನಿಗೆ ಮುಡಿ ಕೂಡ ಕೊಡೋ ಮೂಲಕ ತಲೆಯನ್ನ ಕ್ಲೀನ್ ಶೇವ್ ಮಾಡಿಸ್ತಾರೆ.

ಅಷ್ಟೇ ಅಲ್ಲ.. ತಿಮ್ಮಪ್ಪನಿಗೆ 17 ಲಕ್ಷ ರೂಪಾಯಿ ಚೆಕ್‌‌ ಅನ್ನು ದೇಣಿಗೆ ನೀಡಿ.. ತಾವೇ ಸ್ವತಃ ಅನ್ನ ಬಡಿಸೋ ಮೂಲಕ ಭಕ್ತಾದಿಗಳ ಹೃದಯ ಗೆಲ್ಲುತ್ತಾರೆ ಅನ್ನಾ ಲೆಜ್ನೆವಾ. ಅಂದ್ರೆ ಪವನ್ ಕಲ್ಯಾಣ್ ಸಿನಿಮಾ, ರಾಜಕೀಯ ಹಾಗೂ ವೈಯಕ್ತಿಕ ಬದುಕಿನ ಪ್ರತಿ ಹೆಜ್ಜೆಯಲ್ಲೂ ಈಕೆ ಮಹತ್ವದ ಪಾತ್ರ ವಹಿಸ್ತಾರೆ. ಬೆನ್ನೆಲುಬಾಗಿ ನಿಂತು ಎಲ್ಲಾ ಕಾರ್ಯಗಳಿಗೆ ಮಾರಲ್ ಸಪೋರ್ಟ್ ನೀಡ್ತಾರೆ. ಇಷ್ಟೆಲ್ಲಾ ತ್ಯಾಗ ಮಾಡಿದ ತ್ಯಾಗಮಯಿ ಅನ್ನಾಗೆ ಪತಿ ಪವನ್ ಕೊಡ್ತಿರೋದಾದ್ರೂ ಏನು..? ವಿಚ್ಚೇದನದ ಹೊರತು ಬೇರೇನೂ ಇಲ್ಲ.

ಇವರ ಪ್ರೀತಿ, ಪ್ರೇಮ ಹಾಗೂ ದಾಂಪತ್ಯಕ್ಕೆ ಒಂದು ಹೆಣ್ಣು ಹಾಗೂ ಗಂಡು ಮಗು ಸಾಕ್ಷಿಯಾಗಿದ್ದಾರೆ. ಇಬ್ಬರು ಮಕ್ಕಳ ತಾಯಿ ಆಗಿರೋ ಅನ್ನಾನ ಹೀಗೆ ನಡುದಾರಿಯಲ್ಲಿ ಕೈ ಬಿಡ್ತಿರೋ ಜನನಾಯಕ, ಗೇಮ್ ಚೇಂಜರ್ ಅಂತೆಲ್ಲಾ ಕರೆಸಿಕೊಳ್ಳೋ ಪವನ್ ನಡೆ ನಿಜ್ಕಕೂ ನಾಚಿಕೆಗೇಡಿತನದಿಂದ ಕೂಡಿದೆ. ಸಿನಿಮಾಗಳಲ್ಲಿ ಹೀರೋ ಆಗಿ ಹಾಗೂ ರಾಜಕೀಯ ವೇದಿಕೆಗಳಲ್ಲಿ ದೊಡ್ಡ ದೊಡ್ಡ ನೀತಿಪಾಠಗಳನ್ನ ಮಾಡೋ ಈತ.. ನಿಜ ಜೀವನದಲ್ಲಿ ಮಾಡ್ತಿರೋದಾದ್ರೂ ಏನು..? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತನ್ನನ್ನ ತಾನು ಪರಾಮರ್ಶಿಸಿಕೊಳ್ಳಬೇಕಿದೆ.

Exit mobile version